Psalms · chapter 135 · verse 15
Psalm 135:15 in Kannada
ಅನ್ಯಜನಾಂಗಗಳ ವಿಗ್ರಹಗಳು ಬೆಳ್ಳಿ ಬಂಗಾರ ದಿಂದ ಮಾಡಿದ ಮನುಷ್ಯನ ಕೈ ಕೆಲಸವಾಗಿವೆ.
Anyajanaangagala vigrahagalu belli bangaara dinda maadida manushyana kai kelasavaagive.
Psalm 135:15 in English
- King James Version (KJV)
- The idols of the heathen [are] silver and gold, the work of men’s hands.
- World English Bible (WEB)
- The idols of the nations are silver and gold, the work of men’s hands.
- American Standard Version (ASV)
- The idols of the nations are silver and gold, The work of men’s hands.
- Bible in Basic English (BBE)
- The images of the nations are silver and gold, the work of men's hands.
- Darby Translation (DBY)
- The idols of the nations are silver and gold, the work of men's hands:
- Webster's Bible (WBS)
- The idols of the heathen [are] silver and gold, the work of men's hands.
- Young's Literal Translation (YLT)
- The idols of the nations [are] silver and gold, Work of the hands of man.
Read in context
- 13ಓ ಕರ್ತನೇ, ನಿನ್ನ ಹೆಸರು ಶಾಶ್ವತವಾದದ್ದು, ಓ ಕರ್ತನೇ, ನಿನ್ನ ಜ್ಞಾಪಕವು ತಲತಲಾಂತರಕ್ಕೂ ಇರುವದು.
- 14ಕರ್ತನು ತನ್ನ ಜನರಿಗೆ ನ್ಯಾಯತೀರಿಸಿ ತನ್ನ ಸೇವಕರನ್ನು ಕನಿಕರಿಸುವನು.
- 15ಅನ್ಯಜನಾಂಗಗಳ ವಿಗ್ರಹಗಳು ಬೆಳ್ಳಿ ಬಂಗಾರ ದಿಂದ ಮಾಡಿದ ಮನುಷ್ಯನ ಕೈ ಕೆಲಸವಾಗಿವೆ.
- 16ಅವು ಗಳಿಗೆ ಬಾಯಿ ಉಂಟು, ಮಾತನಾಡುವದಿಲ್ಲ. ಕಣ್ಣುಗ ಳುಂಟು, ನೋಡುವುದಿಲ್ಲ.
- 17ಕಿವಿಗಳುಂಟು, ಕೇಳುವ ದಿಲ್ಲ. ಅವುಗಳ ಬಾಯಿಯಲ್ಲಿ ಶ್ವಾಸವೇನೂ ಇಲ್ಲ.
Cross references
- Psalm 115:4–8 ಕೀರ್ತನೆಗಳು 115:4–8ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ. ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ. ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ. ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ, ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Habakkuk 2:18–19 ಹಬಕ್ಕೂಕ 2:18–19ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- Acts 17:29 ಅಪೊಸ್ತಲರ ಕೃತ್ಯಗಳು 17:29ನಾವು ದೇವರ ಸಂತಾನದವ ರಾಗಿದ್ದ ಮೇಲೆ ದೈವತ್ವವು ಮನುಷ್ಯನ ಶಿಲ್ಪ ವಿದ್ಯೆ ಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲಿಗೆ ಸಮಾನವೆಂದು ನಾವು ಭಾವಿಸಲೇಬಾರದು.
- Jeremiah 10:3–11 ಯೆರೆಮೀಯ 10:3–11ಜನಗಳ ಪದ್ಧತಿಗಳು ವ್ಯರ್ಥ ವಾಗಿವೆ. ಹೇಗಂದರೆ ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ; ಅದು ಕೊಡಲಿಯಿಂದ ಬಡಿಗೆಯವನ ಕೈ ಕೆಲಸವೇ ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ; ಮೊಳೆಗಳಿಂದಲೂ ಸುತ್ತಿಗೆ ಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ. ಅವು ಖರ್ಜೂರ ಮರದಂತೆ ನೆಟ್ಟಗೆ ಇವೆ. ಅವು ಮಾತನಾಡುವದಿಲ್ಲ; ಅವುಗಳನ್ನು ಹೊತ್ತುಕೊಳ್ಳ ತಕ್ಕದ್ದು, ಅವು ನಡೆಯಲಾರವು. ಅವುಗಳಿಗೆ ಭಯ ಪಡಬೇಡಿರಿ. ಅವು ಕೆಟ್ಟದ್ದನ್ನು ಮಾಡಲಾರವು ಇಲ್ಲವೆ ಒಳ್ಳೇದು ಮಾಡುವದು ಸಹ ಅವುಗಳಲ್ಲಿಲ್ಲ. ಓ ಕರ್ತನೇ, ನಿನ್ನ ಹಾಗೆ ಯಾರೂ ಇಲ್ಲ; ನೀನು ಮಹೋ ತ್ತಮನು, ನಿನ್ನ ಹೆಸರು ಪರಾಕ್ರಮದಲ್ಲಿ ದೊಡ್ಡದು. ಓ ಜನಾಂಗಗಳ ಅರಸನೇ, ನಿನಗೆ ಭಯಪಡದವ ನಾರು? ಅದು ನಿನಗೆ ಸಲ್ಲತಕ್ಕದ್ದು; ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ ಅವುಗಳ ಎಲ್ಲಾ ರಾಜ್ಯಗ ಳಲ್ಲಿಯೂ ನಿನ್ನ ಹಾಗೆ ಯಾರೂ ಇಲ್ಲ. ಅವರು ಒಟ್ಟಾರೆ ಕ್ರೂರಿಗಳೂ ಮೂರ್ಖರೂ ಆಗಿದ್ದಾರೆ; ಮರವು ವ್ಯರ್ಥವಾದ ಬೋಧನೆಯಾಗಿವೆ. ಬೆಳ್ಳಿಯ ತಗಡುಗಳನ್ನು ತಾರ್ಷೀಷಿನಿಂದಲೂ ಬಂಗಾರವನ್ನು ಊಫಜಿನಿಂದಲೂ ತರುತ್ತಾರೆ; ಅದು ಕೆತ್ತನೆಯವನ ಕೆಲಸ, ಎರಕ ಹೊಯ್ಯುವವನ ಕೈಯಿಂದ ಉಂಟಾ ದದ್ದು. ನೀಲಿಯೂ ಧೂಮ್ರ ವರ್ಣವೂ ಅವುಗಳ ವಸ್ತ್ರವಾಗಿದೆ; ಅವುಗಳೆಲ್ಲಾ ಕೌಶಲ್ಯಗಾರರ ಕೆಲಸವೇ. ಆದರೆ ಕರ್ತನು ನಿಜವಾದ ದೇವರಾಗಿದ್ದಾನೆ, ಆತನು ಜೀವವುಳ್ಳ ದೇವರೂ ನಿತ್ಯವಾದ ಅರಸನೂ ಆಗಿದ್ದಾನೆ; ಆತನ ರೌದ್ರದಿಂದ ಭೂಮಿ ಕಂಪಿಸುವದು ಆತನ ಉಗ್ರತೆಯನ್ನು ಜನಾಂಗಗಳು ತಾಳಲಾರವು. ನೀವು ಅವರಿಗೆ ಹೀಗೆ ಹೇಳಬೇಕು--ಆಕಾಶ ಗಳನ್ನೂ ಭೂಮಿಯನ್ನೂ ಸೃಷ್ಟಿಸದ ದೇವರುಗಳು ಭೂಮಿಯ ಮೇಲಿನಿಂದಲೂ ಈ ಆಕಾಶಗಳ ಕೆಳಗಿ ನಿಂದಲೂ ನಾಶವಾಗುವವು.
- Isaiah 37:19 ಯೆಶಾಯ 37:19ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು.
- Isaiah 44:9–20 ಯೆಶಾಯ 44:9–20ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು? ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
- Isaiah 46:6–7 ಯೆಶಾಯ 46:6–7ಚೀಲದಿಂದ ಚಿನ್ನವನ್ನು ಸುರಿದು ತ್ರಾಸಿ ನಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೂಲಿ ಕೊಟ್ಟಾಗ, ಅವನು ಅದನ್ನು ದೇವರನ್ನಾಗಿ ಮಾಡಲು ಅವರು ಅದಕ್ಕೆ ಎರಗಿ ಪೂಜೆ ಮಾಡುವರು. ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಅದರ ಸ್ಥಳದಲ್ಲಿ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿ ಕೊಂಡರೂ ಅದು ಅವನಿಗೆ ಉತ್ತರಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು.
- Deuteronomy 4:28 ಧರ್ಮೋಪದೇಶಕಾಂಡ 4:28ಅಲ್ಲಿ ನೀವು ಮನುಷ್ಯರ ಕೈಕೆಲಸವಾದ ಅಂದರೆ ನೋಡದೆಯೂ ಕೇಳದೆಯೂ ಉಣ್ಣದೆಯೂ ಮೂಸಿ ನೋಡದೆಯೂ ಇರುವಂಥ ಮರ ಕಲ್ಲುಗಳಾದ ದೇವರುಗಳನ್ನು ಸೇವಿಸುವಿರಿ.
- Isaiah 40:19–20 ಯೆಶಾಯ 40:19–20ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ; ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ; ಬೆಳ್ಳಿಯ ಸರಪಣಿಗಳನ್ನು ಹಾಕುವನು. ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳ ಲಾರದ ಬಡವನು ಹುಳುತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ತಯಾರಿಸುವದಕ್ಕೆ ಕುಯುಕ್ತಿಯ ಕೆಲಸಗಾರರನ್ನು ವಿಚಾರಿಸಿಕೊಳ್ಳುವನು.