Habakkuk · chapter 3 · verse 9
Habakkuk 3:9 in Kannada
ನೀನು ಗೋತ್ರಗಳಿಗೆ ಆಣೆ ಯಿಟ್ಟ ವಾಕ್ಯದ ಪ್ರಕಾರ ನಿನ್ನ ಬಿಲ್ಲು ಪೂರ್ಣ ಬರಿದಾ ಯಿತು. ಸೆಲಾ. ಭೂಮಿಯನ್ನು ನದಿಗಳಿಂದ ಸೀಳಿದಿ.
Neenu gotragalige aane yitta vaakyada prakaara ninna billu poorna baridaa yitu. Selaa. Bhoomiyannu nadigalinda seelidi.
Habakkuk 3:9 in English
- King James Version (KJV)
- Thy bow was made quite naked, [according] to the oaths of the tribes, [even thy] word. Selah. Thou didst cleave the earth with rivers.
- World English Bible (WEB)
- You uncovered your bow. You called for your sworn arrows. Selah. You split the earth with rivers.
- American Standard Version (ASV)
- Thy bow was made quite bare; The oaths to the tribes were a [sure] word. [Selah Thou didst cleave the earth with rivers.
- Bible in Basic English (BBE)
- Your bow was quite uncovered. Selah. By you the earth was cut through with rivers.
- Darby Translation (DBY)
- Thy bow was made naked, The rods [of discipline] sworn according to [thy] word. Selah. Thou didst cleave the earth with rivers.
- Webster's Bible (WBS)
- Thy bow was made quite naked, [according] to the oaths of the tribes, [even thy] word. Selah. Thou didst cleave the earth with rivers.
- Young's Literal Translation (YLT)
- Utterly naked Thou dost make Thy bow, Sworn are the tribes — saying, 'Pause!' [With] rivers Thou dost cleave the earth.
Read in context
- 7ಕೂಷಾನಿನ ಡೇರೆಗಳನ್ನು ಕಷ್ಟದೊಳಗೆ ನೋಡಿ ದೆನು; ಮಿದ್ಯಾನಿನ ದೇಶದ ತೆರೆಗಳು ನಡುಗಿದವು.
- 8ಕರ್ತನು ನದಿಗಳ ಮೇಲೆ ಉರಿಗೊಂಡನೋ? ನದಿಗಳ ಮೇಲೆ ನಿನ್ನ ಕೋಪವಿತ್ತೋ? ಸಮುದ್ರದ ಮೇಲೆ ನಿನ್ನ ರೌದ್ರ ವಿತ್ತೋ? ಇದಕ್ಕಾಗಿ ನಿನ್ನ ಕುದುರೆ ಗಳ ಮೇಲೆ ಸವಾರಿ ಮಾಡಿ ನಿನ್ನ ರಕ್ಷಣೆಯ ರಥಗ ಳಲ್ಲಿ ಹತ್ತಿದಿಯೋ?
- 9ನೀನು ಗೋತ್ರಗಳಿಗೆ ಆಣೆ ಯಿಟ್ಟ ವಾಕ್ಯದ ಪ್ರಕಾರ ನಿನ್ನ ಬಿಲ್ಲು ಪೂರ್ಣ ಬರಿದಾ ಯಿತು. ಸೆಲಾ. ಭೂಮಿಯನ್ನು ನದಿಗಳಿಂದ ಸೀಳಿದಿ.
- 10ಬೆಟ್ಟಗಳು ನಿನ್ನನ್ನು ನೋಡಿ ನಡುಗಿದವು; ಜಲ ಪ್ರವಾಹವು ಹಾದು ಹೋಯಿತು; ಅಗಾಧವು ತನ್ನ ಶಬ್ದವನ್ನು ಕೊಟ್ಟಿತು; ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ಕೊಂಡಿತು.
- 11ಸೂರ್ಯ ಚಂದ್ರಗಳು ತಮ್ಮ ನಿವಾಸ ದಲ್ಲಿ ಕದಲದೆ ನಿಂತುಬಿಟ್ಟವು. ನಿನ್ನ ಬಾಣಗಳು ಬೆಳಕಿ ನಿಂದಲೂ ನಿನ್ನ ಈಟಿಯು ಮಿಂಚುವ ಪ್ರಕಾಶದಿಂದಲೂ ಹೊರಟವು.
Cross references
- Psalm 7:12–13 ಕೀರ್ತನೆಗಳು 7:12–13ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ. ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ, ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ.
- Psalm 105:41 ಕೀರ್ತನೆಗಳು 105:41ಆತನು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಒಣಗಿದ ಸ್ಥಳಗಳಲ್ಲಿ ನದಿಯಾಗಿ ಹರಿಯಿತು.
- Psalm 78:15–16 ಕೀರ್ತನೆಗಳು 78:15–16ಅರಣ್ಯ ದಲ್ಲಿ ಆತನು ಬಂಡೆಗಳನ್ನು ಸೀಳಿ ಅವರಿಗೆ ಮಹಾ ಜಲಾಗಾಧಗಳ ಹಾಗೆ ನೀರು ಕುಡಿಯಲು ಕೊಟ್ಟನು. ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು ನದಿಗಳಂತೆ ನೀರನ್ನು ಹರಿಯಮಾಡಿದನು.
- Luke 1:72–75 ಲೂಕನು 1:72–75ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಕರುಣೆಯನು ನೆರವೇರಿಸಲು ತನ್ನ ಪರಿಶುದ್ಧ ಒಡಂಬಡಿಕೆಯನ್ನು ನೆನಪಿಗೆ ತಂದು ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆ ನಾವು ನಮ್ಮ ಶತ್ರುಗಳ ಕೈಯಿಂದ ಬಿಡಿಸಲ್ಪಟ್ಟು ಭಯವಿಲ್ಲದವರಾಗಿ ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ಆತನ ಮುಂದೆ ಪರಿಶುದ್ಧತೆಯಿಂದಲೂ ನೀತಿಯಿಂದಲೂ ಆತನನ್ನು ಸೇವಿಸುವವರಾಗುವದಕ್ಕೆ ಆತನು ಅನುಗ್ರಹಿ ಸುವನು.
- Isaiah 51:9–10 ಯೆಶಾಯ 51:9–10ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ? ಸಮುದ್ರವನ್ನೂ ದೊಡ್ಡ ಅಗಾಧದ ನೀರನ್ನು ಬತ್ತಿಸಿ, ವಿಮುಕ್ತರಾದವರು ಹಾದು ಹೋಗುವದಕ್ಕೆ ಸಮು ದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
- 1 Corinthians 10:4 1 ಕೊರಿಂಥದವರಿಗೆ 10:4ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ.
- Hebrews 6:13–18 ಇಬ್ರಿಯರಿಗೆ 6:13–18ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದ್ದದ್ದರಿಂದ ತನ್ನಾ ಣೆಯಿಟ್ಟು-- ಖಂಡಿತವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೇನು. ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂದು ಹೇಳಿದನಷ್ಟೆ. ಹೀಗೆ ಅವನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಹೊಂದಿದನು. ಮನುಷ್ಯರು ನಿಜವಾಗಿಯೂ ತಮಗಿಂತ ಹೆಚ್ಚಿನವನ ಆಣೆಯಿಡು ತ್ತಾರಷ್ಟೆ; ಆಣೆಯನ್ನು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ. ಅದರಲ್ಲಿ ದೇವರು ತನ್ನ ಸಂಕಲ್ಪವು ನಿಶ್ಚಲವಾದದ್ದೆಂಬದನ್ನು ವಾಗ್ದಾನಕ್ಕೆ ಬಾಧ್ಯರಾಗುವವರಿಗೆ ಬಹು ಸ್ಪಷ್ಟವಾಗಿ ತೋರಿಸ ಬೇಕೆಂದು ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು. ಆಶ್ರಯವನ್ನು ಹೊಂದುವದಕ್ಕೆ ಓಡಿ ಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಸುಳ್ಳಾಡದ ದೇವರ ಎರಡು ನಿಶ್ಚಲವಾದ ಆಧಾರಗಳಲ್ಲಿ ನಮಗೆ ಬಲವಾದ ಆದರಣೆ ಉಂಟಾ ಯಿತು.
- Numbers 20:11 ಅರಣ್ಯಕಾಂಡ 20:11ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
- Psalm 105:8–11 ಕೀರ್ತನೆಗಳು 105:8–11ತನ್ನ ಒಡಂಬಡಿಕೆಯನ್ನೂ ಸಾವಿರ ತಲಾಂತರಗ ಳಿಗೆ ಆಜ್ಞಾಪಿಸಿದ ತನ್ನ ಮಾತನ್ನೂ ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ. ಅದನ್ನು ಯಾಕೋಬನಿಗೆ ದೃಢ ಮಾಡಿದನು ಮತ್ತು ಇಸ್ರಾಯೇಲಗೆ ನಿತ್ಯ ಒಡಂಬಡಿಕೆ ಯಾಗಿ ಸ್ಥಾಪಿಸಿ ಹೇಳಿದ್ದೇನಂದರೆ-- ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.
- Lamentations 2:4 ಪ್ರಲಾಪಗಳು 2:4ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ.
- Isaiah 52:10 ಯೆಶಾಯ 52:10ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
- Deuteronomy 32:23 ಧರ್ಮೋಪದೇಶಕಾಂಡ 32:23ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿ ಡುವೆನು; ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.