Psalms · chapter 7 · verse 12
Psalm 7:12 in Kannada
ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ.
Avanu tirigikolladiddare aatanu tanna katti maseyuvanu: tanna billu baggisi adannu siddhamaadiddaane.
Psalm 7:12 in English
- King James Version (KJV)
- If he turn not, he will whet his sword; he hath bent his bow, and made it ready.
- World English Bible (WEB)
- If a man doesn’t repent, he will sharpen his sword; he has bent and strung his bow.
- American Standard Version (ASV)
- If a man turn not, he will whet his sword; He hath bent his bow, and made it ready;
- Bible in Basic English (BBE)
- If a man is not turned from his evil, he will make his sword sharp; his bow is bent and ready.
- Darby Translation (DBY)
- If one turn not, he will sharpen his sword; he hath bent his bow and made it ready,
- Webster's Bible (WBS)
- If he turn not, he will whet his sword; he hath bent his bow, and made it ready.
- Young's Literal Translation (YLT)
- If [one] turn not, His sword he sharpeneth, His bow he hath trodden — He prepareth it,
Read in context
- 10ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು.
- 11ದೇವರು ನೀತಿವಂತರಿಗೆ ನ್ಯಾಯತೀರಿಸುತ್ತಾನೆ. ದೇವರು ಪ್ರತಿದಿನ ದುಷ್ಟರ ಮೇಲೆ ರೋಷವುಳ್ಳ ವನಾಗಿದ್ದಾನೆ.
- 12ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ.
- 13ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ, ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ.
- 14ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು.
Cross references
- Acts 3:19 ಅಪೊಸ್ತಲರ ಕೃತ್ಯಗಳು 3:19ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.
- Matthew 3:10 ಮತ್ತಾಯನು 3:10ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು.
- Isaiah 55:6–7 ಯೆಶಾಯ 55:6–7ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
- Deuteronomy 32:41 ಧರ್ಮೋಪದೇಶಕಾಂಡ 32:41ನಾನು ಮಿಂಚುವ ಕತ್ತಿಯನ್ನು ಹದಮಾಡುವಾಗ, ನನ್ನ ಕೈ ನ್ಯಾಯವನ್ನು ಹಿಡುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ ನನ್ನನ್ನು ಹಗೆಮಾಡುವವರಿಗೆ ಮುಯ್ಯಿ ತೀರಿಸುವೆನು.
- Psalm 85:4 ಕೀರ್ತನೆಗಳು 85:4ನಮ್ಮ ರಕ್ಷಣೆಯ ಓ ದೇವರೇ, ನಮ್ಮ ಕಡೆಗೆ ತಿರುಗು; ನಮ್ಮ ಮೇಲಿರುವ ನಿನ್ನ ಕೋಪವನ್ನು ತೊಲ ಗಿಸು.
- Ezekiel 18:30 ಯೆಹೆಜ್ಕೇಲನು 18:30ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ.
- Isaiah 27:1 ಯೆಶಾಯ 27:1ಆ ದಿನದಲ್ಲಿ ಕರ್ತನು, ತನ್ನ ಉಗ್ರದೊಂದಿಗೆ ದೊಡ್ಡ ಬಲವಾದ ಕತ್ತಿಯಿಂ ದ(ಖಡ್ಗದಿಂದ) ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ ದಂಡಿಸಿ ಸಮುದ್ರದಲ್ಲಿರುವ ಘಟಸರ್ಪ ವನ್ನೂ ಕೊಂದುಹಾಕುವನು.
- Ezekiel 21:9–11 ಯೆಹೆಜ್ಕೇಲನು 21:9–11ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು--ಕರ್ತನು ಹೀಗೆ ಹೇಳುವನೆಂದು ಹೇಳು--ಕತ್ತಿಯು, ಆ ಒಂದು ಕತ್ತಿಯು ಹದಮಾಡ ಲ್ಪಟ್ಟಿದೆ; ಮೆರುಗು ಸಹ ಮಾಡಲ್ಪಟ್ಟಿದೆ; ಅದು ಕೊಂದೇ ಕೊಲ್ಲುವ ಹಾಗೆ ಹದಮಾಡಲ್ಪಟ್ಟಿದೆ; ಥಳಥಳಿಸುವ ಹಾಗೆ ಮಸೆಯಲ್ಪಟ್ಟಿದೆ; ಹಾಗಾದರೆ ನಾವು ಸಂತೋಷಪಡಬಹುದೋ? ನನ್ನ ಮಗನ ಕೋಲು ಪ್ರತಿಯೊಂದು ಮರವನ್ನು ತಿರಸ್ಕಾರ ಮಾಡು ತ್ತದೆ. ಕೈಗೆ ಸಿದ್ದವಾಗುವಂತೆ ಅವನು ಅದನ್ನು ಮಸೆಯುವದಕ್ಕೆ ಕೊಟ್ಟಿದ್ದಾನೆ; ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಕತ್ತಿಗೆ ಹದವನ್ನೂ ಸಾಣೆಯನ್ನೂ ಮಾಡಲಾಗಿದೆ.
- Jeremiah 31:18–19 ಯೆರೆಮೀಯ 31:18–19ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ. ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.
- Isaiah 34:5 ಯೆಶಾಯ 34:5ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು.
- Ezekiel 33:11 ಯೆಹೆಜ್ಕೇಲನು 33:11ಅವರಿಗೆ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ --ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷ ಸಿಗುವದಿಲ್ಲ; ಆದರೆ ಆ ದುಷ್ಟನು ದುರ್ಮಾ ರ್ಗದಿಂದ ತಿರುಗಿಕೊಂಡು ಜೀವಿಸುವದಾದರೆ ಅದರಲ್ಲಿಯೇ ನನಗೆ ಸಂತೋಷಸಿಗುವದು; ಇಸ್ರಾ ಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿರಿ, ನೀವು ತಿರುಗಿ ಕೊಳ್ಳಿರಿ. ನೀವು ಸಾಯುವದು ಯಾಕೆ?
- Ezekiel 21:23 ಯೆಹೆಜ್ಕೇಲನು 21:23ಅದು ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವದು; ಆಣೆಯಿಟ್ಟು ಮಾಡಿದ ಪ್ರಮಾಣಗಳು ಅವರ ಮೇಲೆ ಉಂಟಾಗು ವವು; ಆದರೆ ಅವರು ಹಿಡಿಯಲ್ಪಡುವ ಹಾಗೆ ಅಕ್ರಮವನ್ನು ಜ್ಞಾಪಕಪಡಿಸುವರು.