Haggai · chapter 1 · verse 10
Haggai 1:10 in Kannada
ಆದದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ.
Aadadarinda nimma nimittave aakaashavu manjannu tadeyuttade; bhoomiyu tanna huttuvaliyannu tadedubittide.
Haggai 1:10 in English
- King James Version (KJV)
- Therefore the heaven over you is stayed from dew, and the earth is stayed [from] her fruit.
- World English Bible (WEB)
- Therefore for your sake the heavens withhold the dew, and the earth withholds its fruit.
- American Standard Version (ASV)
- Therefore for your sake the heavens withhold the dew, and the earth withholdeth its fruit.
- Bible in Basic English (BBE)
- For this cause the heaven over you is kept from giving dew, and the earth from giving her fruit.
- Darby Translation (DBY)
- Therefore over you the heavens withhold their dew, and the earth withholdeth its fruit.
- Webster's Bible (WBS)
- Therefore the heaven over you is stayed from dew, and the earth is stayed [from] her fruit.
- Young's Literal Translation (YLT)
- Therefore, over you refrained have the heavens from dew, And the land hath refrained its increase.
Read in context
- 8ಬೆಟ್ಟಕ್ಕೆ ಹೋಗಿ ಮರವನ್ನು ತಂದು ಮನೆಯನ್ನು ಕಟ್ಟಿರಿ; ಆಗ ನಾನು ಅದಕ್ಕೆ ಮೆಚ್ಚಿ ಮಹಿಮೆಯನ್ನು ಹೊಂದುವೆನೆಂದು ಕರ್ತನು ಹೇಳುತ್ತಾನೆ.
- 9ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ?
- 10ಆದದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ.
- 11ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆ ಯೂ ಎಣ್ಣೆಯ ಮೇಲೆಯೂ ಭೂಮಿ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ದನಗಳ ಮೇಲೆಯೂ ಕೈ ಕಷ್ಟಗಳೆಲ್ಲಾದರ ಮೇಲೆಯೂ ಕ್ಷಾಮ ವನ್ನು ಕರೆದೆನು.
- 12ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾ ಬೆಲನೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನೂ ಜನರಲ್ಲಿ ಉಳಿದವರೆ ಲ್ಲರೂ ತಮ್ಮ ದೇವರಾದ ಕರ್ತನ ಶಬ್ದವನ್ನೂ ತಮ್ಮ ದೇವರಾದ ಕರ್ತನು ಕಳುಹಿಸಿದ ಪ್ರವಾದಿಯಾದ ಹಗ್ಗಾಯನ ಮಾತುಗಳನ್ನೂ ಕೇಳಿದರು; ಜನರು ಕರ್ತ ನಿಗೆ ಭಯಪಟ್ಟರು.
Cross references
- 1 Kings 8:35 1 ಅರಸುಗಳು 8:35ಅವರು ನಿನಗೆ ವಿರೋಧವಾಗಿ ಪಾಪವನ್ನು ಮಾಡಿದ ಕಾರಣ ಆಕಾಶವು ಮುಚ್ಚಲ್ಪಟ್ಟು ಮಳೆ ಇಲ್ಲದಿರುವಾಗ ನೀನು ಅವರನ್ನು ಕುಂದಿಸಿದ್ದರಿಂದ ಅವರು ಈ ಸ್ಥಳದ ಕಡೆಗೆ ಪ್ರಾರ್ಥನೆಮಾಡಿ ನಿನ್ನ ನಾಮವನ್ನು ಅರಿಕೆಮಾಡಿ ತಮ್ಮ ಪಾಪದಿಂದ ತಿರುಗಿ ಕೊಂಡರೆ
- Leviticus 26:19 ಯಾಜಕಕಾಂಡ 26:19ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು.
- 1 Kings 17:1 1 ಅರಸುಗಳು 17:1ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.
- Deuteronomy 28:23–24 ಧರ್ಮೋಪದೇಶಕಾಂಡ 28:23–24ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು. ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು.
- Joel 1:18–20 ಯೋವೇಲ 1:18–20ಪಶುಗಳು ಎಷ್ಟೋ ಮುಲುಗುತ್ತವೆ; ದನದ ಹಿಂಡುಗಳು ಕಳವಳಗೊಂಡಿವೆ; ಅವಕ್ಕೆ ಮೇವು ಇಲ್ಲ; ಕುರಿಮಂದೆಗಳು ಸಹ ನಾಶ ವಾಗುತ್ತವೆ. ಓ ಕರ್ತನೇ, ನಿನಗೆ ನಾನು ಮೊರೆಯಿಡುತ್ತೇನೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ನುಂಗಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿದೆ.ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ. ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ.
- Hosea 2:9 ಹೋಶೇಯ 2:9ಆದ್ದರಿಂದ ನಾನು ತಿರುಗಿ ಕೊಂಡು ನನ್ನ ಧಾನ್ಯವನ್ನು ಅದರ ಕಾಲದಲ್ಲಿಯೂ ನನ್ನ ದ್ರಾಕ್ಷಾರಸವನ್ನು ಅದರ ಸಮಯದಲ್ಲಿಯೂ ತೆಗೆದಹಾಗೆ ಅವಳ ಬೆತ್ತಲೆತನವನ್ನು ಮುಚ್ಚುವದ ಕ್ಕಿದ್ದ ನನ್ನ ಉಣ್ಣೆಯನ್ನೂ ನನ್ನ ನಾರು ಬಟ್ಟೆಯನ್ನೂ ತೆಗೆದುಕೊಳ್ಳುವೆನು.
- Jeremiah 14:1–6 ಯೆರೆಮೀಯ 14:1–6ಕ್ಷಾಮವನ್ನು ಕುರಿತು ಯೆರೆವಿಾಯನಿಗೆ ಉಂಟಾದ ಕರ್ತನ ವಾಕ್ಯವು. ಯೆಹೂ ದವು ದುಃಖಪಡುತ್ತದೆ, ಅದರ ಬಾಗಿಲುಗಳು ಕುಂದಿ ಹೋಗುತ್ತವೆ, ನೆಲದ ವರೆಗೆ ಕಪ್ಪಾಗಿವೆ; ಯೆರೂಸಲೇ ಮಿನ ಕೂಗು ಏರಿ ಬಂತು. ಅವರ ಶ್ರೇಷ್ಠರು ತಮ್ಮ ಚಿಕ್ಕವರನ್ನು ನೀರಿಗೆ ಕಳುಹಿಸುತ್ತಾರೆ; ಇವರು ಬಾವಿಗಳಿಗೆ ಬರುತ್ತಾರೆ; ಆದರೆ ನೀರು ಸಿಕ್ಕಲಿಲ್ಲ; ಬರೀ ಪಾತ್ರೆಗಳುಳ್ಳ ವರಾಗಿ ತಿರುಗಿಕೊಳ್ಳುತ್ತಾರೆ; ಅವರು ನಾಚಿಕೆಪಟ್ಟು ದಿಗ್ಭ್ರಮೆಗೊಂಡವರಾಗಿ ತಮ್ಮ ತಲೆಗಳನ್ನು ಮುಚ್ಚಿ ಕೊಂಡರು. ದೇಶದಲ್ಲಿ ಮಳೆ ಇಲ್ಲದ ಕಾರಣ ಭೂಮಿಯು ಬಿರುಕುಬಿಟ್ಟಿದೆ. ಒಕ್ಕಲಿಗರು ನಾಚಿಕೆ ಯಿಂದ ತಮ್ಮ ತಲೆಗಳನ್ನು ಮುಚ್ಚಿಕೊಂಡರು. ಹೌದು, ಜಿಂಕೆಯು ಸಹ ಹೊಲದಲ್ಲಿ ಈದು ಹುಲ್ಲು ಇಲ್ಲದ ಕಾರಣ ಅದನ್ನು ಬಿಟ್ಟುಬಿಡುತ್ತದೆ; ಕಾಡು ಕತ್ತೆಗಳು ಉನ್ನತ ಸ್ಥಳಗಳಲ್ಲಿ ನಿಂತು ನರಿಗಳ ಹಾಗೆ ಗಾಳಿಯನ್ನು ಹೀರಿಕೊಳ್ಳುತ್ತವೆ; ಹುಲ್ಲು ಇಲ್ಲದ ಕಾರಣ ಅವುಗಳ ಕಣ್ಣುಗಳು ಕ್ಷೀಣವಾಗುತ್ತವೆ.