Haggai · chapter 1 · verse 9
Haggai 1:9 in Kannada
ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ?
Bahala aagabekendu nireekshi sidiri. Aadare igo, konchave aayitu; neevu adannu manege tandaaga naanu adara mele oodibittenu. Yaatakke endu sainyagala kartanu annuttaane. Nanna aalayavu haalaagi ruvadarinda neevu nimma nimma svanta manegalige odi hogutteerallaa?
Haggai 1:9 in English
- King James Version (KJV)
- Ye looked for much, and, lo, [it came] to little; and when ye brought [it] home, I did blow upon it. Why? saith the LORD of hosts. Because of mine house that [is] waste, and ye run every man unto his own house.
- World English Bible (WEB)
- “You looked for much, and, behold, it came to little; and when you brought it home, I blew it away. Why?” says the LORD of Armies, “Because of my house that lies waste, while each of you is busy with his own house.
- American Standard Version (ASV)
- Ye looked for much, and, lo, it came to little; and when ye brought it home, I did blow upon it. Why? saith Jehovah of hosts. Because of my house that lieth waste, while ye run every man to his own house.
- Bible in Basic English (BBE)
- You were looking for much, and it came to little; and when you got it into your house, I took it away with a breath. Why? says the Lord of armies. Because of my house which is a waste, while every man takes care of the house which is his.
- Darby Translation (DBY)
- Ye looked for much, and behold it was little; and when ye brought it home, I blew upon it. Wherefore? saith Jehovah of hosts. Because of my house that lieth waste, whilst ye run every man to his own house.
- Webster's Bible (WBS)
- Ye looked for much, and lo, [it came] to little; and when ye brought [it] home, I did blow upon it. Why? saith the LORD of hosts. Because of my house that [is] waste, and ye run every man to his own house.
- Young's Literal Translation (YLT)
- Looking for much, and lo, little, And ye brought [it] home, and I blew on it, Wherefore? — an affirmation of Jehovah of Hosts, Because of My house that is waste, And ye are running — each to his house,
Read in context
- 7ಸೈನ್ಯಗಳ ಕರ್ತನು ಹೇಳುವದೇನಂದರೆ -- ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ.
- 8ಬೆಟ್ಟಕ್ಕೆ ಹೋಗಿ ಮರವನ್ನು ತಂದು ಮನೆಯನ್ನು ಕಟ್ಟಿರಿ; ಆಗ ನಾನು ಅದಕ್ಕೆ ಮೆಚ್ಚಿ ಮಹಿಮೆಯನ್ನು ಹೊಂದುವೆನೆಂದು ಕರ್ತನು ಹೇಳುತ್ತಾನೆ.
- 9ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ?
- 10ಆದದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ.
- 11ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆ ಯೂ ಎಣ್ಣೆಯ ಮೇಲೆಯೂ ಭೂಮಿ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ದನಗಳ ಮೇಲೆಯೂ ಕೈ ಕಷ್ಟಗಳೆಲ್ಲಾದರ ಮೇಲೆಯೂ ಕ್ಷಾಮ ವನ್ನು ಕರೆದೆನು.
Cross references
- Haggai 1:4 ಹಗ್ಗಾಯ 1:4ಈ ಮನೆ ಹಾಳಾಗಿರಲಾಗಿ ನೀವು ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವದಕ್ಕೆ ಇದು ನಿಮಗೆ ಸಮಯವೋ?
- Malachi 2:2 ಮಲಾಕಿಯ 2:2ಸೈನ್ಯಗಳ ಕರ್ತನು ಹೇಳುವದೇ ನಂದರೆ ನೀವು ಕೇಳದೆ, ಹೃದಯದಲ್ಲಿ ಇಟ್ಟುಕೊಳ್ಳದೆ, ನನ್ನ ಹೆಸರಿಗೆ ಮಹಿಮೆಯನ್ನು ಕೊಡದೆ ಹೋದರೆ ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು, ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು; ಹೌದು, ಅವು ಗಳನ್ನು ಆಗಲೇ ಶಪಿಸಿದ್ದಾಯಿತು; ನೀವು ಅವುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳುವದಿಲ್ಲ.
- Haggai 2:16–17 ಹಗ್ಗಾಯ 2:16–17ಆ ದಿವಸಗಳು ಇದ್ದದ್ದು ಮೊದಲುಗೊಂಡು ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಮಾತ್ರವಾಗಿತ್ತು; ಒಬ್ಬನು ಐವತ್ತು ಪಾತ್ರೆಗಳನ್ನು ತುಂಬಿ ಸುವದಕ್ಕೆ ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆ ಯುತ್ತಿತ್ತಷ್ಟೆ. ನಾನು ನಿಮ್ಮನ್ನು ಸಸ್ಯ ನಾಶದಿಂದಲೂ ಬಿರುಗಾಳಿಯಿಂದಲೂ ಕಲ್ಮಳೆಯಿಂದಲೂ ನಿಮ್ಮ ಕೈ ದುಡಿತಗಳನ್ನೆಲ್ಲಾ ಹೊಡೆದೆನು; ಅದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಕರ್ತನು ಅನ್ನುತ್ತಾನೆ.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Haggai 1:6 ಹಗ್ಗಾಯ 1:6ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.
- Isaiah 40:7 ಯೆಶಾಯ 40:7ಹುಲ್ಲು ಒಣಗಿ ಹೋಗು ವದು ಹೂವು ಬಾಡಿಹೋಗುವದು. ಕರ್ತನ ಆತ್ಮ ಅವುಗಳ ಮೇಲೆ ಊದುವನು; ನಿಶ್ಚಯವಾಗಿ ಜನರು ಹುಲ್ಲೇ.
- Psalm 77:5–10 ಕೀರ್ತನೆಗಳು 77:5–10ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು. ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕ ಮಾಡಿಕೊಳ್ಳುತ್ತೇನೆ; ನನ್ನ ಹೃದಯದ ಸಂಗಡ ಮಾತಾ ಡುತ್ತೇನೆ; ನನ್ನ ಆತ್ಮವು ಪರಿಶೋಧನೆ ಮಾಡಿತು. ನಿರಂತರವಾಗಿ ಕರ್ತನು ತಳ್ಳಿಬಿಡುವನೋ? ಇನ್ನು ದಯೆತೋರದೆ ಇರುವನೋ? ಆತನ ಕೃಪೆಯು ಸದಾಕಾಲಕ್ಕೆ ನಿಂತು ಹೋಗುತ್ತದೋ? ನಿರಂತರಕ್ಕೂ ವಾಗ್ದಾನ ತಪ್ಪಿಹೋಗುತ್ತದೋ? ದೇವರು ಕರು ಣಿಸುವದನ್ನು ಮರೆತು ಬಿಟ್ಟಿದ್ದಾನೋ? ತನ್ನ ಅಂತಃ ಕರಣಗಳನ್ನು ಕೋಪದಿಂದ ಮುಚ್ಚಿಕೊಂಡಿದ್ದಾನೋ? ಸೆಲಾ. ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
- Matthew 10:37–38 ಮತ್ತಾಯನು 10:37–38ನನಗಿಂತ ಹೆಚ್ಚಾಗಿ ತಂದೆಯನ್ನಾಗಲೀ ತಾಯಿಯನ್ನಾಗಲೀ ಪ್ರೀತಿ ಮಾಡುವವನು ನನಗೆ ಯೋಗ್ಯನಲ್ಲ; ಮತ್ತು ಮಗನ ನ್ನಾಗಲೀ ಮಗಳನ್ನಾಗಲೀ ನನಗಿಂತ ಹೆಚ್ಚಾಗಿ ಪ್ರೀತಿ ಮಾಡುವವನು ನನಗೆ ಯೋಗ್ಯನಲ್ಲ. ತನ್ನ ಶಿಲುಬೆ ಯನ್ನು ತೆಗೆದುಕೊಳ್ಳದೆ ನನ್ನನ್ನು ಹಿಂಬಾಲಿಸುವವನು ನನಗೆ ಯೋಗ್ಯನಲ್ಲ.
- Joshua 7:10–15 ಯೆಹೋಶುವ 7:10–15ಆಗ ಕರ್ತನು ಯೆಹೋಶುವನಿಗೆ--ನೀನು ಎದ್ದೇಳು; ನೀನು ಈ ಪ್ರಕಾರ ಬೋರಲು ಬಿದ್ದಿರುವ ದೇನು? ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದದ ರಿಂದ ಇಸ್ರಾಯೇಲ್ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ. ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್ ಕರ್ತನಾದ ದೇವರು ಹೇಳುತ್ತಾನೆ. ಆದದರಿಂದ ಹೊತ್ತಾರೆಯಲ್ಲಿ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಕರ್ತನು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರ ವಾಗಿಯೂ ಕರ್ತನು ಹಿಡಿಯುವ ಕುಟುಂಬವು ಮನೆ ಮನೆಯಾಗಿಯೂ ಕರ್ತನು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ. ಆಗ ಶಾಪಕ್ಕೀಡಾದ ದ್ದನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುವವನು ಕರ್ತನ ಒಡಂಬಡಿಕೆಯನ್ನು ವಿಾರಿ ಇಸ್ರಾಯೇಲಿ ನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲ್ಪಡಬೇಕು ಅಂದನು.
- 2 Kings 19:7 2 ಅರಸುಗಳು 19:7ಇಗೋ, ನಾನು ಅವನ ಮೇಲೆ ಗಾಳಿಯನ್ನು ಕಳುಹಿಸುವೆನು. ಅವನು ಒಂದು ಸುದ್ದಿ ಯನ್ನು ಕೇಳಿ ತನ್ನ ದೇಶಕ್ಕೆ ಹಿಂತಿರುಗುವನು. ಇದಲ್ಲದೆ ತನ್ನ ದೇಶದಲ್ಲಿ ಕತ್ತಿಯಿಂದ ಅವನನ್ನು ಬೀಳಮಾಡು ವೆನು ಎಂದು ಕರ್ತನು ಹೇಳುತ್ತಾನೆ ಅಂದನು.
- Malachi 3:8–11 ಮಲಾಕಿಯ 3:8–11ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ. ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ. ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 1 Corinthians 11:30–32 1 ಕೊರಿಂಥದವರಿಗೆ 11:30–32ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ. ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ. ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
Original words (Hebrew)
- looked · H6437פָּנָה pânâh
- much · H7235רָבָה râbâh
- little · H4592מְעַט mᵉʻaṭ
- brought · H935בּוֹא bôwʼ
- home · H1004בַּיִת bayith
- blow · H5301נָפַח nâphach
- saith · H5002נְאֻם nᵉʼum
- hosts · H6635צָבָא tsâbâʼ
- Because · H3282יַעַן yaʻan
- house · H1004בַּיִת bayith
- waste · H2720חָרֵב chârêb
- run · H7323רוּץ rûwts
- man · H376אִישׁ ʼîysh
- house · H1004בַּיִת bayith