Hebrews · chapter 11 · verse 25
Hebrews 11:25 in Kannada
ಸ್ವಲ್ಪ ಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವಜನರೊಂದಿಗೆ ಕಷ್ಟವನ್ನನುಭವಿಸುವದನ್ನೇ ಆರಿಸಿ ಕೊಂಡನು.
Svalpa kaala paapabhogagalannanubhavisuvadakkinta devajanarondige kashtavannanubhavisuvadanne aarisi kondanu.
Hebrews 11:25 in English
- King James Version (KJV)
- Choosing rather to suffer affliction with the people of God, than to enjoy the pleasures of sin for a season;
- World English Bible (WEB)
- choosing rather to share ill treatment with God’s people than to enjoy the pleasures of sin for a time,
- American Standard Version (ASV)
- choosing rather to share ill treatment with the people of God, than to enjoy the pleasures of sin for a season;
- Bible in Basic English (BBE)
- Feeling that it was better to undergo pain with the people of God, than for a short time to have a taste of the pleasures of sin;
- Darby Translation (DBY)
- choosing rather to suffer affliction along with the people of God than to have [the] temporary pleasure of sin;
- Webster's Bible (WBS)
- Choosing rather to suffer affliction with the people of God, than to enjoy the pleasures of sin for a season;
- Young's Literal Translation (YLT)
- having chosen rather to be afflicted with the people of God, than to have sin's pleasure for a season,
Read in context
- 23ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರು ವದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
- 24ಮೋಶೆಯು ದೊಡ್ಡವ ನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿ ಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ.
- 25ಸ್ವಲ್ಪ ಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವಜನರೊಂದಿಗೆ ಕಷ್ಟವನ್ನನುಭವಿಸುವದನ್ನೇ ಆರಿಸಿ ಕೊಂಡನು.
- 26ಐಗುಪ್ತದಲ್ಲಿನ ಐಶ್ವರ್ಯಗಳಿಗಿಂತಲೂ ಕ್ರಿಸ್ತನ ವಿಷಯವಾದ ನಿಂದೆಯು ಅಧಿಕ ಐಶ್ವರ್ಯ ವೆಂದೆಣಿಸಿಕೊಂಡನು; ಯಾಕಂದರೆ ಪ್ರತಿಫಲದ ಬಹು ಮಾನವನ್ನು ಅವನು ಗೌರವಿಸಿದನು.
- 27ನಂಬಿಕೆ ಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತ ದೇಶವನ್ನು ತೊರೆದುಬಿಟ್ಟನು. ಯಾಕಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.
Cross references
- Psalm 84:10 ಕೀರ್ತನೆಗಳು 84:10ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು.
- 2 Timothy 2:3–10 2 ತಿಮೊಥೆಯನಿಗೆ 2:3–10ಆದದರಿಂದ ನೀನು ಯೇಸು ಕ್ರಿಸ್ತನ ಒಳ್ಳೇ ಸೈನಿಕನಂತೆ ಶ್ರಮೆಯನ್ನ ನುಭವಿಸು. ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡು ತ್ತಾನೆ. ಇದಲ್ಲದೆ ಯಾವನಾದರೂ ಪ್ರವೀಣತೆಗಾಗಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡ ದಿದ್ದರೆ ಅವನಿಗೆ ಕಿರೀಟ ದೊರೆಯುವದಿಲ್ಲ. ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯ ದಾಗಿ ಪಾಲುಗಾರನಾಗಿರತಕ್ಕದ್ದು. ನಾನು ಹೇಳುವ ದನ್ನು ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು ದಯಾಪಾಲಿಸಲಿ. ನನ್ನ ಸುವಾರ್ತೆಗನು ಸಾರವಾಗಿ ದಾವೀದನ ವಂಶದವನಾಗಿರುವ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂದು ಜ್ಞಾಪಕ ಮಾಡಿಕೋ. ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. ಆದ ಕಾರಣ (ದೇವರು) ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ.
- Job 36:21 ಯೋಬನು 36:21ದುಷ್ಟತನಕ್ಕೆ ತಿರುಗದ ಹಾಗೆ ಎಚ್ಚರವಾಗಿರು. ಕಷ್ಟಕ್ಕಿಂತ ಇದನ್ನೇ ನೀನು ಆದುಕೊಂಡಿ.
- 1 Peter 4:12–16 1 ಪೇತ್ರನು 4:12–16ಪ್ರಿಯರೇ, ನಿಮ್ಮನ್ನು ಶೋಧಿಸುವದಕ್ಕೆ ಅಗ್ನಿ ಯಂತಿರುವ ಪರಿಶೋಧನೆಗಾಗಿ ನೀವು ಆಶ್ಚರ್ಯಪಡ ಬೇಡಿರಿ; ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿ ತೆಂದು ಯೋಚಿಸಬೇಡಿರಿ. ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ. ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಸಂತೋಷಪಡಿರಿ; ಯಾಕಂದರೆ ಮಹಿಮೆ ಯುಳ್ಳ ದೇವರ ಆತ್ಮನು ನಿಮ್ಮ ಮೇಲೆ ನೆಲೆಗೊಂಡಿ ದ್ದಾನಲ್ಲಾ. ಅವರ ವಿಷಯದಲ್ಲಿ ಆತನು ದೂಷಿಸ ಲ್ಪಡುತ್ತಾನೆ; ಆದರೆ ನಿಮ್ಮ ವಿಷಯದಲ್ಲಿ ಆತನು ಮಹಿಮೆ ಹೊಂದುತ್ತಾನೆ. ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನನುಭವಿಸ ಬಾರದು. ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.
- 2 Corinthians 5:17 2 ಕೊರಿಂಥದವರಿಗೆ 5:17ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು.
- Job 20:5 ಯೋಬನು 20:5ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
- 1 Peter 1:6–7 1 ಪೇತ್ರನು 1:6–7ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವ ರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ. ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
- 2 Thessalonians 1:3–6 2 ಥೆಸಲೊನೀಕದವರಿಗೆ 1:3–6ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ. ಹೀಗಿರುವದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ದೇವರ ಸಭೆಗಳಲ್ಲಿ ನಾವೇ ಹೆಚ್ಚಳಪಡುತ್ತೇವೆ. ನೀವು ಯಾವದಕ್ಕಾಗಿ ಶ್ರಮೆಪಡುತ್ತೀರೋ ದೇವರ ಆ ರಾಜ್ಯಕ್ಕೆ ನೀವು ಯೋಗ್ಯರೆಂದು ಎಣಿಸಲ್ಪಡುವಂತೆ ದೇವರ ನೀತಿಯುಳ್ಳ ತೀರ್ಪಿಗೆ ಅದು ಸ್ಪಷ್ಟವಾದ ನಿದರ್ಶನವಾಗಿದೆ. ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟಪಡಿಸುವದೂ
- 1 Peter 2:10 1 ಪೇತ್ರನು 2:10ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆ ಯಾಗಿದ್ದೀರಿ; ಮೊದಲು ಕರುಣೆ ಹೊಂದಿರಲಿಲ್ಲ, ಈಗ ಕರುಣೆ ಹೊಂದಿದವರಾಗಿದ್ದೀರಿ.
- Revelation 18:7 ಪ್ರಕಟನೆ 18:7ಅವಳು ಎಷ್ಟರಮಟ್ಟಿಗೆ ತನ್ನನ್ನು ಘನಪಡಿಸಿ ಕೊಂಡು ವೈಭವದಲ್ಲಿ ಜೀವಿಸಿದ್ದಳೋ ಅಷ್ಟರಮಟ್ಟಿಗೆ ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ; ಯಾಕಂದರೆ ಅವಳು ತನ್ನ ಹೃದಯದಲ್ಲಿ--ನಾನು ರಾಣಿ ಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳು
- Psalm 73:18–20 ಕೀರ್ತನೆಗಳು 73:18–20ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ. ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ. ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.
- Acts 7:24–25 ಅಪೊಸ್ತಲರ ಕೃತ್ಯಗಳು 7:24–25ಅವರಲ್ಲಿ ಒಬ್ಬನಿಗೆ ಅನ್ಯಾಯ ವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯ ಕೊಟ್ಟು ಐಗುಪ್ತ್ಯನನ್ನು ಹೊಡೆದು ಹಾಕಿ ಪೀಡಿಸಲ್ಪಡು ತ್ತಿದ್ದವನಿಗಾಗಿ ಮುಯ್ಯಿ ತೀರಿಸಿದನು. ಯಾಕಂದರೆ ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಮಾಡುತ್ತಾ ನೆಂಬದು ತನ್ನ ಸಹೋದರರಿಗೆ ತಿಳಿದು ಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ.