Job · chapter 20 · verse 5
Job 20:5 in Kannada
ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
Enandare, dushtara jayavu svalpa kaaladdoo kapatigala santoshavu kshana maatraddoo.
Job 20:5 in English
- King James Version (KJV)
- That the triumphing of the wicked [is] short, and the joy of the hypocrite [but] for a moment?
- World English Bible (WEB)
- that the triumphing of the wicked is short, the joy of the godless but for a moment?
- American Standard Version (ASV)
- That the triumphing of the wicked is short, And the joy of the godless but for a moment?
- Bible in Basic English (BBE)
- That the pride of the sinner is short, and the joy of the evil-doer but for a minute?
- Darby Translation (DBY)
- The exultation of the wicked is short, and the joy of the ungodly man but for a moment?
- Webster's Bible (WBS)
- That the triumphing of the wicked [is] short, and the joy of the hypocrite [but] for a moment?
- Young's Literal Translation (YLT)
- That the singing of the wicked [is] short, And the joy of the profane for a moment,
Read in context
- 3ನನ್ನನ್ನು ನಿಂದಿಸುವ ಶಿಕ್ಷೆಯನ್ನು ಕೇಳಿದ್ದೇನೆ; ಆದರೆ ನನ್ನ ಆತ್ಮವು ನನ್ನ ಗ್ರಹಿಕೆಯ ಪ್ರಕಾರ ನನಗೆ ಉತ್ತರ ಕೊಡುವದು.
- 4ಇದನ್ನು ಆದಿಯಿಂದಲೂ ಅಂದರೆ ಮನುಷ್ಯನನ್ನು ಭೂಮಿಯ ಮೇಲೆ ಇಟ್ಟಂದಿನಿಂದಲೂ ನೀನು ತಿಳಿಯಲಿಲ್ಲವೋ?
- 5ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.
- 6ಅವನ ಮಹತ್ತು ಆಕಾಶಕ್ಕೆ ಏರಿದರೂ ಅವನ ತಲೆ ಮೇಘಕ್ಕೆ ಮುಟ್ಟಿದರೂ
- 7ತನ್ನ ಅಮೇಧ್ಯದ ಹಾಗೆ ನಿತ್ಯವಾಗಿ ನಾಶವಾಗುವನು; ಅವನನ್ನು ನೋಡಿದ ವರು-- ಅವನು ಎಲ್ಲಿ ಅನ್ನುವರು.
Cross references
- Psalm 37:35–36 ಕೀರ್ತನೆಗಳು 37:35–36ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು. ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.
- Job 18:5–6 ಯೋಬನು 18:5–6ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು. ಬೆಳಕು ಅವನ ಗುಡಾರದಲ್ಲಿ ಕತ್ತಲಾಗುವದು; ಅವನ ದೀಪವು ಅವನ ಕೂಡ ಆರಿ ಹೋಗುವದು
- Matthew 13:20–21 ಮತ್ತಾಯನು 13:20–21ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ; ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.
- Psalm 73:18–20 ಕೀರ್ತನೆಗಳು 73:18–20ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ. ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ. ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.
- Job 27:8 ಯೋಬನು 27:8ದೇವರು ಕಪಟಿಯ ಪ್ರಾಣವನ್ನು ತಕ್ಕೊಂಡರೆ ಅವನು ಲಾಭ ಮಾಡುವದರಲ್ಲಿ ನಿರೀಕ್ಷೆ ಏನು?
- Job 8:12–13 ಯೋಬನು 8:12–13ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಬಾಡುವದು. ದೇವರನ್ನು ಮರೆಯುವ ವರೆಲ್ಲರ ಹಾದಿಗಳು ಹಾಗೆಯೇ; ಕಪಟಿಯ ನಿರೀಕ್ಷೆಯು ನಾಶವಾಗುವದು.
- Job 5:3 ಯೋಬನು 5:3ಮೂಢನು ಬೇರೂರುವದನ್ನು ನಾನು ನೋಡಿದೆನು; ಸಂಗಡಲೇ ಅವನ ಸ್ಥಾನವನ್ನು ನಾನು ಶಪಿಸಿದೆನು.
- Acts 12:22–23 ಅಪೊಸ್ತಲರ ಕೃತ್ಯಗಳು 12:22–23ಆಗ ಜನರು--ಇದು ಮನುಷ್ಯನ ಸ್ವರವಲ್ಲ, ದೇವರ ಸ್ವರವೇ ಎಂದು ಅರ್ಭಟಿಸಿದರು. ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
- James 4:16 ಯಾಕೋಬನು 4:16ಆದರೆ ನೀವು ನಿಮ್ಮ ಹೊಗಳಿಕೆಗಳಲ್ಲಿ ಸಂತೋಷಪಡುತ್ತೀರಿ. ಅಂಥ ಸಂತೋಷವೆಲ್ಲಾ ಕೆಟ್ಟದ್ದೇ.ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.
- Job 27:13–23 ಯೋಬನು 27:13–23ಇದು ದುಷ್ಟ ಮನುಷ್ಯನಿಗೆ ದೇವರಿಂದ ಬಂದ ಪಾಲಾಗಿದೆ; ಬಲಾತ್ಕಾರಿಗಳು ಸರ್ವ ಶಕ್ತನಿಂದ ಹೊಂದುವ ಬಾಧ್ಯತೆ ಇದೇ. ಅವನ ಮಕ್ಕಳು ಹೆಚ್ಚಿದರೆ ಖಡ್ಗಕ್ಕೆ ಗುರಿಯಾಗುವರು; ಅವನ ಸಂತ ತಿಯವರು ರೊಟ್ಟಿಯಿಂದ ತೃಪ್ತಿಹೊಂದರು. ಅವ ನಿಗೆ ಉಳಿದವರು ಮರಣದಲ್ಲಿ ಹೂಣಲ್ಪಡುವರು; ಅವನ ವಿಧವೆಗಳು ಅಳದೆ ಇರುವರು. ಅವನು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟು ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿ ಕೊಂಡಾಗ್ಯೂ ಸಿದ್ಧ ಮಾಡಿಕೊಳ್ಳುತ್ತಾನಷ್ಟೇ; ನೀತಿವಂತನು ಉಟ್ಟುಕೊಳ್ಳು ತ್ತಾನೆ; ಬೆಳ್ಳಿಯನ್ನು ನಿರಪರಾಧಿಯು ಪಾಲಿಡುತ್ತಾನೆ. ಹುಳದ ಹಾಗೆ ಮನೆಯನ್ನೂ ಕಾವಲುಗಾರನು ಮಾಡಿದ್ದರ ಹಾಗೆ ತನ್ನ ಗುಡಿಸಲನ್ನೂ ಕಟ್ಟಿದ್ದಾನೆ. ಐಶ್ವರ್ಯವಂತನು ಮಲಗುತ್ತಾನೆ; ಕೂಡಿಸಲ್ಪಡು ವದಿಲ್ಲ; ಕಣ್ಣು ತೆರೆದರೆ ಅವನು ಇಲ್ಲ. ದಿಗಿಲು ಗಳು ನೀರಿನಂತೆ ಅವನನ್ನು ಹಿಡಿಯುತ್ತವೆ. ರಾತ್ರಿ ಯಲ್ಲಿ ಬಿರುಗಾಳಿ ಅವನನ್ನು ಸುಲುಕೊಳ್ಳುತ್ತದೆ. ಮೂಡಣಗಾಳಿ ಅವನನ್ನು ಎತ್ತಿಕೊಂಡು ಹೋಗು ತ್ತದೆ; ಅವನು ಹೋಗಿಬಿಡುತ್ತಾನೆ; ಬಿರುಗಾಳಿ ಅವನನ್ನು ಅವನ ಸ್ಥಳದಿಂದ ಹಾರಿಸಿ ಬಿಡುತ್ತದೆ. ಆತನು ಕರುಣೆ ಇಲ್ಲದೆ ಅವನ ಮೇಲೆ ಹಾಕು ತ್ತಾನೆ. ಆತನ ಕೈಯಲ್ಲಿಂದ ಅವನು ಓಡಿಯೇ ಓಡುತ್ತಾನೆ.ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ. ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
- Job 15:29–34 ಯೋಬನು 15:29–34ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ. ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ. ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು. ಅವನ ಸಮಯಕ್ಕೆ ಮುಂಚೆಯೇ ಅದು ತೀರುವದು; ಅವನ ಕೊಂಬೆಯು ಹಸಿರಾಗುವದಿಲ್ಲ. ಹಣ್ಣಾಗದ ದ್ರಾಕ್ಷೆಯ ಗಿಡದಂತೆ ತನ್ನ ಕಾಯಿ ಉದುರಿಸಿ ಎಣ್ಣೆಯ ಮರದಂತೆ ತನ್ನ ಹೂವನ್ನು ಚದರಿಸುವನು. ಕಪಟಿಗಳ ಸಭೆಯು ಹಾಳಾಗುವದು; ಲಂಚದ ಗುಡಾರಗಳನ್ನು ಬೆಂಕಿಯು ಸುಡುವದು.ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು.
- Galatians 6:4 ಗಲಾತ್ಯದವರಿಗೆ 6:4ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರಿಶೋಧಿ ಸಲಿ; ಆಗ ಅವನು ತನ್ನಲ್ಲಿಯೇ ಸಂತೋಷಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬನಲ್ಲಿ ಅಲ್ಲ;