Hebrews · chapter 12 · verse 17
Hebrews 12:17 in Kannada
ತರುವಾಯ ಅವನು (ತನ್ನ ತಂದೆಯ) ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲಿರಿ.
Taruvaaya avanu (tanna tandeya) aasheervaadavannu baadhyavaagi hondabekendu kanneeru surisuttaa bedikondaroo pashchaattaapakke maargavillade niraakarisalpattanendu neevu balliri.
Hebrews 12:17 in English
- King James Version (KJV)
- For ye know how that afterward, when he would have inherited the blessing, he was rejected: for he found no place of repentance, though he sought it carefully with tears.
- World English Bible (WEB)
- For you know that even when he afterward desired to inherit the blessing, he was rejected, for he found no place for a change of mind though he sought it diligently with tears.
- American Standard Version (ASV)
- For ye know that even when he afterward desired to inherit the blessing, he was rejected; for he found no place for a change of mind [in his father], though he sought it diligently with tears.
- Bible in Basic English (BBE)
- For you have knowledge that even long after, when he was desiring the blessing for his heritage, he was turned away, though he made his request frequently and with weeping; because the past might not be changed.
- Darby Translation (DBY)
- for ye know that also afterwards, desiring to inherit the blessing, he was rejected, (for he found no place for repentance) although he sought it earnestly with tears.
- Webster's Bible (WBS)
- For ye know that afterward, when he would have inherited the blessing, he was rejected: for he found no place of repentance, though he sought it carefully with tears.
- Young's Literal Translation (YLT)
- for ye know that also afterwards, wishing to inherit the blessing, he was disapproved of, for a place of reformation he found not, though with tears having sought it.
Read in context
- 15ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ
- 16ಯಾವ ಜಾರನಾಗಲಿ--ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆ ಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದು ತುತ್ತನ್ನಕ್ಕಾಗಿ ತನ್ನ ಚೊಚ್ಚಲತನದ ಹಕ್ಕನ್ನು ಮಾರಿ ಬಿಟ್ಟನು;
- 17ತರುವಾಯ ಅವನು (ತನ್ನ ತಂದೆಯ) ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲಿರಿ.
- 18ಮುಟ್ಟಬಹುದಾದ ಮತ್ತು ಬೆಂಕಿ ಹತ್ತಿದಂಥ ಬೆಟ್ಟಕ್ಕೂ ಮೊಬ್ಬಿಗೂ ಕತ್ತಲೆಗೂ ಬಿರುಗಾಳಿಗೂ
- 19ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. ಆ ಶಬ್ದವನ್ನು ಕೇಳಿದವರು ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು;
Cross references
- Proverbs 1:24–31 ಜ್ಞಾನೋಕ್ತಿಗಳು 1:24–31ನಾನು ಕರೆದಾಗ ನೀವು ತಿರಸ್ಕರಿಸಿದ್ದಕ್ಕಾಗಿಯೂ ನಾನು ನನ್ನ ಕೈಚಾಚಿದಾಗ ಯಾವ ಮನುಷ್ಯನು ಗಮನಿಸದೆ ಇದ್ದದ್ದಕ್ಕಾಗಿಯೂ ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ ನನ್ನ ಗದರಿಕೆ ಯನ್ನು ನೀವು ಬೇಡವೆಂದು ತಳ್ಳಿಬಿಟ್ಟದ್ದರಿಂದಲೂ ನಿಮ್ಮ ಆಪತ್ತಿನಲ್ಲಿ ನಿಮಗೆ ಹೆದರಿಕೆ ಬರುವಾಗ ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು. ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ ನನ್ನ ಆಲೋಚನೆಯನ್ನು ಗಮನಿಸದೆ ಇದ್ದದಕ್ಕಾಗಿಯೂ ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದ್ದಕ್ಕಾಗಿಯೂ ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು.
- Matthew 25:11–12 ಮತ್ತಾಯನು 25:11–12ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು--ಕರ್ತನೇ, ಕರ್ತನೇ, ನಮಗೆ ಬಾಗಲನ್ನು ತೆರೆ ಅಂದರು. ಆದರೆ ಅವನು ಪ್ರತ್ಯುತ್ತರವಾಗಿ--ನಿಮ್ಮನ್ನು ಅರಿ ಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Matthew 7:23 ಮತ್ತಾಯನು 7:23ಆಗ ನಾನು ಅವರಿಗೆ--ನಾನು ನಿಮ್ಮನ್ನು ಎಂದಿಗೂ ಅರಿಯೆನು; ದುಷ್ಟತನ ಮಾಡುವ ನೀವು ನನ್ನಿಂದ ತೊಲಗಿ ಹೋಗಿರಿ ಎಂದು ಹೇಳಿಬಿಡುವೆನು.
- Hebrews 6:8 ಇಬ್ರಿಯರಿಗೆ 6:8ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ತಿರಸ್ಕರಿಸಲ್ಪಟ್ಟು ಶಾಪಕ್ಕೆ ಗುರಿಯಾಗುತ್ತದೆ. ಅದರ ಅಂತ್ಯವು ಸುಡಲ್ಪಡುವದೇ.
- Hebrews 10:26–29 ಇಬ್ರಿಯರಿಗೆ 10:26–29ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ. ಆದರೆ ಭಯದಿಂದ ಖಂಡಿತವಾಗಿ ಎದುರು ನೋಡತಕ್ಕ ತೀರ್ಪು ವಿರೋಧಿ ಗಳನ್ನು ದಹಿಸುವ ಕೋಪಾಗ್ನಿಯೂ ಇರುವವು. ಮೋಶೆಯ ನ್ಯಾಯಪ್ರಮಾಣವನ್ನು ಅಸಡ್ಡೆ ಮಾಡಿ ದವನನ್ನು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕನಿಕರವಿಲ್ಲದೆ ಕೊಲ್ಲುತ್ತಿದ್ದರು. ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
- Jeremiah 6:30 ಯೆರೆಮೀಯ 6:30ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ.
- Hebrews 6:4–6 ಇಬ್ರಿಯರಿಗೆ 6:4–6ಒಂದು ಸಾರಿ ಬೆಳಕನ್ನು ಹೊಂದಿ ಪರಲೋಕ ದಿಂದಾದ ದಾನದ ರುಚಿಯನ್ನು ನೋಡಿ ಪವಿತ್ರಾತ್ಮನಲ್ಲಿ ಪಾಲುಗಾರರಾಗಿ ಶ್ರೇಷ್ಠವಾದ ದೇವರ ವಾಕ್ಯವನ್ನೂ ಬರುವ ಲೋಕದ ಮಹತ್ವವನ್ನೂ ರುಚಿನೋಡಿ ದವರು ಬಿದ್ದು ಹೋಗುವದಾದರೆ ಅವರಲ್ಲಿ ತಿರಿಗಿ ಮಾನಸಾಂತರವನ್ನು ಹುಟ್ಟಿಸುವದು ಅಸಾಧ್ಯ; ಯಾಕಂದರೆ ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗ ವಾಗಿ ಅವಮಾನಪಡಿಸುವವರೂ ಆಗಿದ್ದಾರೆ.
- Genesis 27:30–41 ಆದಿಕಾಂಡ 27:30–41ಇಸಾ ಕನು ಯಾಕೋಬನನ್ನು ಆಶೀರ್ವದಿಸಿದ ತರುವಾಯ ಯಾಕೋಬನು ತನ್ನ ತಂದೆಯಾದ ಇಸಾಕನ ಸಮ್ಮುಖದಿಂದ ಹೊರಟಾಗ ಅವನ ಸಹೋದರನಾದ ಏಸಾವನು ಬೇಟೆಯಿಂದ ಬಂದನು. ಅವನು ಸಹ ರುಚಿಯಾದ ಊಟವನ್ನು ಸಿದ್ಧಮಾಡಿ ತನ್ನ ತಂದೆಯ ಬಳಿಗೆ ತಂದು--ನನ್ನ ತಂದೆಯು ಎದ್ದು ನಿನ್ನ ಪ್ರಾಣವು ನನ್ನನ್ನು ಆಶೀರ್ವದಿಸುವಂತೆ ತನ್ನ ಮಗನ ಬೇಟೆಯ ಮಾಂಸವನ್ನು ಊಟಮಾಡಲಿ ಅಂದನು. ಅವನ ತಂದೆಯಾದ ಇಸಾಕನು ಅವನಿಗೆ--ನೀನು ಯಾರು ಅಂದಾಗ ಅವನು--ನಾನು ನಿನ್ನ ಚೊಚ್ಚಲ ಮಗನಾದ ಏಸಾವನು ಅಂದನು. ಆಗ ಇಸಾಕನು ಬಹಳವಾಗಿ ನಡುಗುತ್ತಾ ಹೇಳಿದ್ದೇನಂದರೆ--ನೀನು ಬರುವದಕ್ಕಿಂತ ಮೊದಲು ಬೇಟೆಯಾಡಿ ನನಗೆ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವ ದಿಸಿದೆನು. ಹೌದು, ಅವನು ಆಶೀರ್ವದಿಸಲ್ಪಟ್ಟಿರಲಿ ಅಂದನು. ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ ಅವನು ಅತಿ ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ--ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು ಅಂದನು. ಅವನು --ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತಕ್ಕೊಂಡಿದ್ದಾನೆ ಅಂದನು. ಅದಕ್ಕೆ ಅವನು--ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ. ಈ ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ; ಅವನು ನನ್ನ ಚೊಚ್ಚಲತನ ವನ್ನು ತಕ್ಕೊಂಡಿದ್ದಾನೆ; ಇಗೋ, ಈಗ ನನ್ನ ಆಶೀರ್ವಾದವನ್ನೂ ತಕ್ಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸ ಲಿಲ್ಲವೋ ಅಂದನು. ಇಸಾಕನು ಪ್ರತ್ಯುತ್ತರವಾಗಿ ಏಸಾವನಿಗೆ--ಇಗೋ, ಅವನನ್ನು ನಿನಗೆ ದೊರೆಯಾಗಿ ಇಟ್ಟು ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕ ರನ್ನಾಗಿ ಕೊಟ್ಟು ಧಾನ್ಯದಿಂದಲೂ ದ್ರಾಕ್ಷಾರಸ ದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ ಅಂದನು. ಏಸಾವನು ತನ್ನ ತಂದೆಗೆ--ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಹೌದು, ನನ್ನನ್ನೂ ಆಶೀರ್ವದಿಸು ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು. ಆಗ ಅವನ ತಂದೆಯಾದ ಇಸಾಕನು ಪ್ರತ್ಯುತ್ತರವಾಗಿ ಅವನಿಗೆ--ಇಗೋ, ನಿನ್ನ ನಿವಾಸವು ಭೂಮಿಯಸಾರ ದಿಂದಲೂ ಆಕಾಶದ ಮಂಜಿನಿಂದಲೂ ಇರುವದು. ನಿನ್ನ ಕತ್ತಿಯಿಂದಲೇ ನೀನು ಬದುಕುವಿ, ನಿನ್ನ ಸಹೋದರನನ್ನು ಸೇವಿಸುವಿ; ಆದರೆ ನಿನಗೆ ಪ್ರಭುತ್ವವು ಬಂದಾಗ ಆಗುವದೇನಂದರೆ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದು ಹಾಕುವಿ. ತಂದೆಯು ಯಾಕೋಬನಿಗೆ ಕೊಟ್ಟ ಆಶೀರ್ವಾದ ಕ್ಕೋಸ್ಕರ ಏಸಾವನು ಅವನನ್ನು ಹಗೆಮಾಡಿ--ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸವಿಾಪ ವಾಗಿವೆ, ತರುವಾಯ ನಾನು ನನ್ನ ಸಹೋದರ ನಾದ ಯಾಕೋಬನನ್ನು ಕೊಲ್ಲುವೆನು ಎಂದು ಹೃದಯದಲ್ಲಿ ಅಂದುಕೊಂಡನು.
- Luke 13:24–27 ಲೂಕನು 13:24–27ಇಕ್ಕಟ್ಟಾದ ಬಾಗಲಿನಿಂದ ಒಳಗೆ ಪ್ರವೇಶಿಸುವದಕ್ಕೆ ಪ್ರಯಾಸಪಡಿರಿ; ಯಾಕಂ ದರೆ ಅನೇಕರು ಒಳಗೆ ಪ್ರವೇಶಿಸುವದಕ್ಕೆ ಪ್ರಯತ್ನಿಸಿ ದರೂ ಆಗುವದಿಲ್ಲ ಎಂದು ನಾನು ನಿಮಗೆ ಹೇಳು ತ್ತೇನೆ. ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು. ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ. ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
Original words (Greek)
- For · G1063γάρ gár
- know · G2467ἴσημι ísēmi
- that · G3754ὅτι hóti
- afterward · G3347μετέπειτα metépeita
- have · G2309θέλω thélō
- inherited · G2816κληρονομέω klēronoméō
- blessing · G2129εὐλογία eulogía
- rejected · G593ἀποδοκιμάζω apodokimázō
- for · G1063γάρ gár
- found · G2147εὑρίσκω heurískō
- no · G3756οὐ ou
- place · G5117τόπος tópos
- repentance · G3341μετάνοια metánoia
- though · G2539καίπερ kaíper
- sought · G1567ἐκζητέω ekzētéō
- it · G846αὐτός autós
- carefully · G1567ἐκζητέω ekzētéō
- with · G3326μετά metá
- tears · G1144δάκρυ dákry