Hebrews · chapter 13 · verse 12
Hebrews 13:12 in Kannada
ಅದರಂತೆ ಯೇಸು ಕೂಡ ತನ್ನ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಊರ ಬಾಗಿಲ ಹೊರಗೆ ಶ್ರಮೆಪಟ್ಟನು.
Adarante yesu kooda tanna svanta raktadinda janarannu pavitrapadisuvadakkoskara oora baagila horage shramepattanu.
Hebrews 13:12 in English
- King James Version (KJV)
- Wherefore Jesus also, that he might sanctify the people with his own blood, suffered without the gate.
- World English Bible (WEB)
- Therefore Jesus also, that he might sanctify the people through his own blood, suffered outside of the gate.
- American Standard Version (ASV)
- Wherefore Jesus also, that he might sanctify the people through his own blood, suffered without the gate.
- Bible in Basic English (BBE)
- For this reason Jesus was put to death outside the walls, so that he might make the people holy by his blood.
- Darby Translation (DBY)
- Wherefore also Jesus, that he might sanctify the people by his own blood, suffered without the gate:
- Webster's Bible (WBS)
- Wherefore Jesus also, that he might sanctify the people with his own blood, suffered without the gate.
- Young's Literal Translation (YLT)
- Wherefore, also Jesus — that he might sanctify through [his] own blood the people — without the gate did suffer;
Read in context
- 10ನಮಗೊಂದು ಯಜ್ಞವೇದಿ ಉಂಟು, ಅದರ ಪದಾರ್ಥವನ್ನು ತಿನ್ನುವದಕ್ಕೆ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.
- 11ಮಹಾಯಾಜಕನು ಪಾಪದ ನಿಮಿತ್ತವಾಗಿ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗಲು ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲಾ;
- 12ಅದರಂತೆ ಯೇಸು ಕೂಡ ತನ್ನ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಊರ ಬಾಗಿಲ ಹೊರಗೆ ಶ್ರಮೆಪಟ್ಟನು.
- 13ಆದದರಿಂದ ನಾವು ಆತನ ನಿಮಿತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ ಪಾಳೆಯದ ಆಚೆ ಆತನ ಬಳಿಗೆ ಹೊರಟು ಹೋಗೋಣ.
- 14ಯಾಕಂದರೆ ಶಾಶ್ವತವಾದ ಪಟ್ಟಣವು ಇಲ್ಲಿ ನಮ್ಮಗಿಲ್ಲ; ಮುಂದೆ ಬರುವ ಪಟ್ಟಣವನ್ನು ಹುಡು ಕುತ್ತಾ ಇದ್ದೇವೆ.
Cross references
- Hebrews 9:12–14 ಇಬ್ರಿಯರಿಗೆ 9:12–14ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು. ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ.
- John 19:17–18 ಯೋಹಾನನು 19:17–18ಆತನು ತನ್ನ ಶಿಲುಬೆಯನ್ನು ಹೊತ್ತುಕೊಂಡು ಕಪಾಲವೆಂದು ಕರೆಯಲ್ಪಟ್ಟ ಸ್ಥಳಕ್ಕೆ ಹೋದನು. ಅದು ಇಬ್ರಿಯ ಭಾಷೆಯಲ್ಲಿ ಗೊಲ್ಗೊಥಾ (ಬುರುಡೆಗಳ ಸ್ಥಳ) ಎಂದು ಕರೆಯಲ್ಪಡುತ್ತದೆ. ಅಲ್ಲಿ ಇಬ್ಬರು ಅಂದರೆ ಆ ಕಡೆಗೊಬ್ಬನನ್ನೂ ಈ ಕಡೆಗೊಬ್ಬನನ್ನು ಮಧ್ಯೆ ಯೇಸುವನ್ನೂ ಇರಿಸಿ ಆತನೊಂದಿಗೆ ಶಿಲುಬೆಗೆ ಹಾಕಿದರು.
- Mark 15:20–24 ಮಾರ್ಕನು 15:20–24ಹೀಗೆ ಅವರು ಆತನನ್ನು ಪರಿ ಹಾಸ್ಯಮಾಡಿದ ಮೇಲೆ ಊದಾ ಬಣ್ಣದ ಬಟ್ಟೆಯನ್ನು ಆತನಿಂದ ತೆಗೆದುಹಾಕಿ ಆತನ ಸ್ವಂತ ಬಟ್ಟೆಗಳನ್ನು ಆತನ ಮೇಲೆ ಹೊದಿಸಿ ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡುಹೋದರು. ಅಲೆಕ್ಸಾಂದ್ರ ಮತ್ತು ರೂಫ ಎಂಬವರ ತಂದೆಯಾದ ಕುರೇನ್ಯದ ಸೀಮೋನ ಎಂಬವನು ಗ್ರಾಮದಿಂದ ಬಂದು ಹಾದುಹೋಗುತ್ತಿರುವಾಗ ಆತನ ಶಿಲುಬೆಯನ್ನು ಹೊರುವಂತೆ ಅವರು ಅವನನ್ನು ಬಲವಂತ ಮಾಡಿದರು. ಕಪಾಲ ಸ್ಥಳ ಎಂದರ್ಥವುಳ್ಳ ಗೊಲ್ಗೊಥಾ ಎಂಬ ಸ್ಥಳಕ್ಕೆ ಅವರು ಆತನನ್ನು ತೆಗೆದು ಕೊಂಡು ಬಂದರು. ಅವರು ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕುಡಿಯಲುಕೊಟ್ಟರು. ಆದರೆ ಆತನು ಅದನ್ನು ತೆಗೆದುಕೊಳ್ಳಲಿಲ್ಲ. ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿ ಗಾಗಿ ಚೀಟು ಹಾಕಿ ಪ್ರತಿಯೊಬ್ಬನು ಏನು ತಕ್ಕೊಳ್ಳ ಬೇಕೆಂದು ಅವುಗಳನ್ನು ಪಾಲುಮಾಡಿಕೊಂಡರು.
- Acts 7:58 ಅಪೊಸ್ತಲರ ಕೃತ್ಯಗಳು 7:58ಅವನನ್ನು ಊರಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು.
- 1 Corinthians 6:11 1 ಕೊರಿಂಥದವರಿಗೆ 6:11ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
- John 19:34 ಯೋಹಾನನು 19:34ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು.
- Ephesians 5:26 ಎಫೆಸದವರಿಗೆ 5:26ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ
- Leviticus 24:23 ಯಾಜಕಕಾಂಡ 24:23ಶಪಿಸಿದವನನ್ನು ಪಾಳೆಯದ ಹೊರಗೆ ತಂದು ಅವನನ್ನು ಕಲ್ಲೆಸೆಯುವಂತೆ ಮೋಶೆಯು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ ಮಕ್ಕಳು ಮಾಡಿದರು.
- Numbers 15:36 ಅರಣ್ಯಕಾಂಡ 15:36ಆಗ ಸಭೆಯೆಲ್ಲಾ ಅವನನ್ನು ಪಾಳೆಯದ ಹೊರಗೆ ತಕ್ಕೊಂಡು ಹೋಗಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಸಾಯುವ ಹಾಗೆ ಅವನಿಗೆ ಕಲ್ಲೆಸೆದರು.
- Hebrews 10:29 ಇಬ್ರಿಯರಿಗೆ 10:29ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
- John 17:19 ಯೋಹಾನನು 17:19ಅವರು ಸತ್ಯದಲ್ಲಿ ಪ್ರತಿಷ್ಠಿಸಲ್ಪಡುವಂತೆ ನಾನು ನನ್ನನ್ನು ಅವರಿ ಗೋಸ್ಕರ ಪ್ರತಿಷ್ಠಿಸಿಕೊಳ್ಳುತ್ತೇನೆ.
- Joshua 7:24 ಯೆಹೋಶುವ 7:24ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು.