Matthew · chapter 25 · verse 40
Matthew 25:40 in Kannada
ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
Adakke arasanu pratyuttaravaagi avarige--naanu nimage nijavaagi heluttene--neevu ee nanna sahodara ralli atyalpanaadavanobbanige maadiddu nanagoo maadidantaayitu andanu.
Matthew 25:40 in English
- King James Version (KJV)
- And the King shall answer and say unto them, Verily I say unto you, Inasmuch as ye have done [it] unto one of the least of these my brethren, ye have done [it] unto me.
- World English Bible (WEB)
- “The King will answer them, ‘Most certainly I tell you, because you did it to one of the least of these my brothers, you did it to me.’
- American Standard Version (ASV)
- And the King shall answer and say unto them, Verily I say unto you, Inasmuch as ye did it unto one of these my brethren, [even] these least, ye did it unto me.
- Bible in Basic English (BBE)
- And the King will make answer and say to them, Truly I say to you, Because you did it to the least of these my brothers, you did it to me.
- Darby Translation (DBY)
- And the King answering shall say to them, Verily, I say to you, Inasmuch as ye have done it to one of the least of these my brethren, ye have done it to me.
- Webster's Bible (WBS)
- And the king will answer and say to them, Verily I say to you, Inasmuch as ye have done [it] to one of the least of these my brethren, ye have done [it] to me.
- Young's Literal Translation (YLT)
- 'And the king answering, shall say to them, Verily I say to you, Inasmuch as ye did [it] to one of these my brethren — the least — to me ye did [it].
Read in context
- 38ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
- 39ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು.
- 40ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
- 41ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
- 42ನಾನು ಹಸಿದವನಾಗಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿ ಯುವದಕ್ಕೆ ಕೊಡಲಿಲ್ಲ.
Cross references
- Proverbs 19:17 ಜ್ಞಾನೋಕ್ತಿಗಳು 19:17ಬಡವರಿಗೆ ದಯೆತೋರಿಸು ವವನು. ಕರ್ತನಿಗೆ ಸಾಲ ಕೊಡುತ್ತಾನೆ; ಅವನು ಕೊಟ್ಟದ್ದನ್ನು ಆತನು ತಿರುಗಿ ಅವನಿಗೆ ಕೊಡುತ್ತಾನೆ.
- Proverbs 14:31 ಜ್ಞಾನೋಕ್ತಿಗಳು 14:31ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ.
- Matthew 10:42 ಮತ್ತಾಯನು 10:42ಯಾವನಾದರೂ ಶಿಷ್ಯನ ಹೆಸರಿನಲ್ಲಿ ಈ ಚಿಕ್ಕವರಾದ ಒಬ್ಬನಿಗೆ ಕೇವಲ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಅವನು ತನ್ನ ಪ್ರತಿಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Mark 9:41 ಮಾರ್ಕನು 9:41ಇದಲ್ಲದೆ ನೀವು ಕ್ರಿಸ್ತನಿಗೆ ಸೇರಿದವ ರಾದದರಿಂದ ಯಾವನಾದರೂ ನನ್ನ ಹೆಸರಿನಲ್ಲಿ ನಿಮಗೆ ಒಂದು ತಂಬಿಗೆ ನೀರನ್ನು ಕೊಟ್ಟರೆ ಅವನು ತನ್ನ ಪ್ರತಿ ಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- 1 Peter 1:22 1 ಪೇತ್ರನು 1:22ನೀವು ಆತ್ಮನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟ ವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರ ಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.
- Matthew 18:5–6 ಮತ್ತಾಯನು 18:5–6ಮತ್ತು ಯಾವನಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿ ಕೊಂಡರೆ ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ. ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು.
- Galatians 5:6 ಗಲಾತ್ಯದವರಿಗೆ 5:6ಯಾಕಂದರೆ ಯೇಸು ಕ್ರಿಸ್ತನಲ್ಲಿರುವವರಿಗೆ ಸುನ್ನತಿ ಯಾದರೂ ಪ್ರಯೋಜನವಿಲ್ಲ, ಆಗದಿದ್ದರೂ ಪ್ರಯೋ ಜನವಿಲ್ಲ. ಪ್ರೀತಿಯಿಂದ ಕೆಲಸನಡಿಸುವ ನಂಬಿಕೆ ಯಿಂದಲೇ ಪ್ರಯೋಜನವಾಗುತ್ತದೆ.
- Matthew 10:40 ಮತ್ತಾಯನು 10:40ನಿಮ್ಮನ್ನು ಅಂಗೀಕರಿಸಿಕೊಳ್ಳುವವನು ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ; ಮತ್ತು ನನ್ನನ್ನು ಅಂಗೀಕರಿಸಿ ಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನು ಅಂಗೀಕರಿಸಿ ಕೊಳ್ಳುತ್ತಾನೆ.
- 1 John 3:14–19 1 ಯೋಹಾನನು 3:14–19ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ಯಾರಾದರೂ ತನ್ನ ಸಹೋದರನನ್ನು ದ್ವೇಷಿಸುವ ವನು ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರ ನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ. ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ? ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು. ಸತ್ಯಕ್ಕೆ ಸಂಬಂಧಪಟ್ಟವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ; ಆತನ ಸಮಕ್ಷಮದಲ್ಲಿ ನಮ್ಮ ಹೃದಯಗಳನ್ನು ನಿಶ್ಚಯಪಡಿಸಿಕೊಳ್ಳುತ್ತೇವೆ.
- 1 John 4:7–12 1 ಯೋಹಾನನು 4:7–12ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಯಾಕಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. ಪ್ರೀತಿಯಿಲ್ಲದ ವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಯಾಗಿದ್ದಾನೆ. ನಾವು ಆತನ ಮೂಲಕ ಜೀವಿಸು ವದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮ ಕಡೆಗೆ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿ ದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿಯೇ ಆತನ ಪ್ರೀತಿಯು ಇರುತ್ತದೆ. ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.
- Galatians 5:22 ಗಲಾತ್ಯದವರಿಗೆ 5:22ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ
- Matthew 18:10 ಮತ್ತಾಯನು 18:10ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.