Hebrews · chapter 6 · verse 2
Hebrews 6:2 in Kannada
ಬಾಪ್ತಿಸ್ಮಗಳ ಬೋಧನೆಯೂ ಹಸ್ತಾ ರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಇವುಗಳ ವಿಷಯದಲ್ಲಿ ಅಸ್ತಿವಾರವನ್ನು ತಿರಿಗಿ ಹಾಕದೆ ನಾವು ಪರಿಪೂರ್ಣತೆಗೆ ಹೋಗೋಣ.
Baaptismagala bodhaneyoo hastaa rpaneyoo sattavara punarutthaanavoo nityavaada nyaayateerpoo ivugala vishayadalli astivaaravannu tirigi haakade naavu paripoornatege hogona.
Hebrews 6:2 in English
- King James Version (KJV)
- Of the doctrine of baptisms, and of laying on of hands, and of resurrection of the dead, and of eternal judgment.
- World English Bible (WEB)
- of the teaching of baptisms, of laying on of hands, of resurrection of the dead, and of eternal judgment.
- American Standard Version (ASV)
- of the teaching of baptisms, and of laying on of hands, and of resurrection of the dead, and of eternal judgment.
- Bible in Basic English (BBE)
- The teaching of baptisms, and of the putting on of hands, and of the future life of the dead, and of the judging on the last day.
- Darby Translation (DBY)
- of [the] doctrine of washings, and of imposition of hands, and of resurrection of [the] dead, and of eternal judgment;
- Webster's Bible (WBS)
- Of the doctrine of baptisms, and of laying on of hands, and of the resurrection of the dead, and of eternal judgment.
- Young's Literal Translation (YLT)
- of the teaching of baptisms, of laying on also of hands, of rising again also of the dead, and of judgment age-during,
Read in context
- 1ಆದದರಿಂದ ಕ್ರಿಸ್ತನ ಬೋಧನೆಯ ಮೂಲ ಪಾಠಗಳನ್ನು ಬಿಟ್ಟು ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ ದೇವರ ಮೇಲಣ ನಂಬಿಕೆಯೂ
- 2ಬಾಪ್ತಿಸ್ಮಗಳ ಬೋಧನೆಯೂ ಹಸ್ತಾ ರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಇವುಗಳ ವಿಷಯದಲ್ಲಿ ಅಸ್ತಿವಾರವನ್ನು ತಿರಿಗಿ ಹಾಕದೆ ನಾವು ಪರಿಪೂರ್ಣತೆಗೆ ಹೋಗೋಣ.
- 3ದೇವರ ಚಿತ್ತವಾದರೆ ಹೀಗೆ ಮಾಡುವೆವು.
- 4ಒಂದು ಸಾರಿ ಬೆಳಕನ್ನು ಹೊಂದಿ ಪರಲೋಕ ದಿಂದಾದ ದಾನದ ರುಚಿಯನ್ನು ನೋಡಿ ಪವಿತ್ರಾತ್ಮನಲ್ಲಿ ಪಾಲುಗಾರರಾಗಿ
Cross references
- 1 Corinthians 15:13–57 1 ಕೊರಿಂಥದವರಿಗೆ 15:13–57ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಕ್ರಿಸ್ತನಾದರೂ ಎದ್ದು ಬರಲಿಲ್ಲ. ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವೂ ವ್ಯರ್ಥವಾದದ್ದು, ನಿಮ್ಮ ನಂಬಿಕೆಯೂ ವ್ಯರ್ಥವಾದದ್ದು. ಹೌದು, ಸತ್ತವರು ಏಳಲಿಲ್ಲವಾದರೆ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ, ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯ ವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೇವು. ಸತ್ತವರು ಏಳಲಿಲ್ಲವಾದರೆ ಕ್ರಿಸ್ತನು ಎಬ್ಬಿಸಲ್ಪಡಲಿಲ್ಲ. ಕ್ರಿಸ್ತನು ಎಬ್ಬಿಸಲ್ಪಡಲಿಲ್ಲವಾದರೆ ನಿಮ್ಮ ನಂಬಿಕೆಯು ವ್ಯರ್ಥವಾಗಿದೆ; ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆ ಹೋದವರೂ ನಾಶವಾದರು. ಈ ಜೀವದಲ್ಲಿ ಮಾತ್ರ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡವ ರಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ನಿರ್ಭಾಗ್ಯರೇ ಸರಿ. ಆದರೆ ಈಗ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದು ನಿದ್ರೆಹೋದವರಲ್ಲಿ ಪ್ರಥಮಫಲವಾದನು. ಮನುಷ್ಯನ ಮೂಲಕ ಮರಣವುಂಟಾದ ಕಾರಣ ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನ ವುಂಟಾಗುವದು. ಯಾವ ಪ್ರಕಾರ ಆದಾಮನಲ್ಲಿ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನಲ್ಲಿ ಎಲ್ಲರೂ ಜೀವಿತರಾಗುವರು. ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿ ಇರುವನು; ಕ್ರಿಸ್ತನು ಪ್ರಥಮ ಫಲ, ತರುವಾಯ ಕ್ರಿಸ್ತನ ಬರೋಣದಲ್ಲಿ ಆತನವರು. ಆಮೇಲೆ ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ ಕೊಡುವಾಗ ಸಮಾಪ್ತಿ ಯಾಗುವದು. ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ. ನಾಶವಾಗಲಿರುವ ಕಡೇ ಶತ್ರುವು ಮರಣ. ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿದ್ದಾನೆ. ಸಮಸ್ತವೂ ಆತನಿಗೆ ಅಧೀನ ಮಾಡಲ್ಪಟ್ಟಿದೆ ಎಂದು ಹೇಳುವಾಗ ಸಮಸ್ತವನ್ನು ಅಧೀನ ಮಾಡಿದಾತನು ಅದರಲ್ಲಿ ಸೇರಲಿಲ್ಲವೆಂಬದು ಸ್ಪಷ್ಟವಾಗಿದೆ. ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಹ ಸಮಸ್ತವನ್ನೂ ತನಗೆ ಅಧೀನ ಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿರುವನು. ಸತ್ತವರು ಏಳುವದೇ ಇಲ್ಲವಾದರೆ ಸತ್ತವರಿ ಗೋಸ್ಕರ ಬಾಪ್ತಿಸ್ಮ ಮಾಡಿಸಿಕೊಳ್ಳುವವರು ಏನು ಮಾಡುವರು? ಹಾಗಿದ್ದರೆ ಸತ್ತವರಿಗೊಸ್ಕರ ಅವರು ಬಾಪ್ತಿಸ್ಮ ಮಾಡಿಸಿಕೊಳ್ಳುವದು ಯಾಕೆ? ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿ ದ್ದೇವೆ? ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯವಾಗಿ ನನಗಿರುವ ಸಂತೋಷದ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ. ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧ ಮಾಡಿದ್ದು ಕೇವಲ ಮನುಷ್ಯರೀತಿಯಾಗಿದ್ದು ಸತ್ತವರು ಎದ್ದು ಬರುವದಿಲ್ಲವಾದರೆ ಅದರಿಂದ ನನಗೇನು ಪ್ರಯೋಜನ? ಹಾಗಾದರೆ ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ. ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ. ನೀತಿಗಾಗಿ ಎಚ್ಚರಗೊಳ್ಳಿರಿ, ಪಾಪಮಾಡಬೇಡಿರಿ; ಕೆಲವರಿಗೆ ದೇವರ ವಿಷಯವಾದ ಜ್ಞಾನವೇ ಇಲ್ಲ; ನಾನು ಇದನ್ನು ನಿಮಗೆ ನಾಚಿಕೆ ಪಡಿಸುವದಕ್ಕಾಗಿ ಹೇಳುತ್ತೇನೆ. ಆದರೆ ಒಬ್ಬನು--ಸತ್ತವರು ಹೇಗೆ ಎಬ್ಬಿಸ ಲ್ಪಡುತ್ತಾರೆ? ಎಂಥ ದೇಹದಿಂದ ಅವರು ಬರುತ್ತಾರೆ ಎಂದು ಕೇಳಾನು. ಮೂಢನು ನೀನು; ನೀನು ಬಿತ್ತಿರುವದು ಸಾಯದ ಹೊರತು ಜೀವಿತವಾಗು ವದಿಲ್ಲ. ಒಂದು ವೇಳೆ ಗೋಧಿಯನ್ನಾಗಲಿ ಬೇರೆ ಯಾವದೋ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವದಿಲ್ಲ. ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ. ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯರ ಶರೀರ ಬೇರೆ, ಪಶುಗಳ ಶರೀರ ಬೇರೆ, ವಿಾನುಗಳದು ಬೇರೆ, ಪಕ್ಷಿಗಳದು ಬೇರೆ. ಇದಲ್ಲದೆ ಆಕಾಶದ ದೇಹಗಳು ಮತ್ತು ಭೂಮಂಡಲದ ದೇಹಗಳು ಇವೆ;ಆದರೆ ಆಕಾಶದ ಮಹಿಮೆ ಒಂದು ವಿಧ ಮತ್ತು ಭೂಮಂಡಲದ ಮಹಿಮೆ ಮತ್ತೊಂದು ವಿಧ. ಸೂರ್ಯನ ಮಹಿಮೆ ಒಂದು ವಿಧ, ಚಂದ್ರನ ಮಹಿಮೆ ಮತ್ತೊಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ. ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರ ವಾಗಿರುವದು. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡು ತ್ತದೆ. ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ. ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎಬ್ಬಿಸಲ್ಪಡುತ್ತದೆ; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ. ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎಬ್ಬಿಸಲ್ಪಡುತ್ತದೆ; ಪ್ರಾಕೃತದೇಹವಿರುವದಾದರೆ ಆತ್ಮಿಕ ದೇಹವೂ ಇರುವದು. ಬರೆದಿರುವ ಪ್ರಕಾರ-- ಮೊದಲನೆಯ ಮನುಷ್ಯನಾದ ಆದಾಮನು ಜೀವಾತ್ಮ ನಾದನು; ಕಡೇ ಆದಾಮನು ಬದುಕಿಸುವ ಆತ್ಮ ನಾಗಿದ್ದಾನೆ. ಹೇಗಿದ್ದರೂ ಆತ್ಮಿಕವಾದದ್ದು ಮೊದಲ ನೆಯದಲ್ಲ, ಪ್ರಾಕೃತವಾದದ್ದು ಮೊದಲನೆಯದು; ಆಮೇಲೆ ಆತ್ಮಿಕವಾದದ್ದು. ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು. ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು. ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾ ತನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು. ಸಹೋದರರೇ, ನಾನು ಹೇಳುವದೇನಂದರೆ-- ಮಾಂಸವು ರಕ್ತವು ದೇವರ ರಾಜ್ಯಕ್ಕೆ ಬಾಧ್ಯವಾಗ ಲಾರವು; ಇಲ್ಲವೆ ಲಯವಾಗುವದು ನಿರ್ಲಯತ್ವಕ್ಕೆ ಬಾಧ್ಯವಾಗುವದಿಲ್ಲ. ಇಗೋ, ಮರ್ಮವಾಗಿದ್ದ ಒಂದು ಸಂಗತಿಯನ್ನು ನಿಮಗೆ ತಿಳಿಸುತ್ತೇನೆ-- ನಾವೆಲ್ಲರೂ ನಿದ್ರೆಹೋಗುವದಿಲ್ಲ, ಆದರೆ ನಾವೆ ಲ್ಲರೂ ಮಾರ್ಪಡುವೆವು. ಕಡೇ ತುತೂರಿಯು ಧ್ವನಿಯಾಗುವಾಗ ನಾವು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು. ಲಯ ವಾಗುವಂಥದ್ದು (ಈ ದೇಹವು) ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವಂಥ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ. ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ--ಜಯವು ಮರಣವನ್ನು ನುಂಗಿತು ಎಂಬದೇ. ಓ ಮರಣವೇ, ನಿನ್ನ ಕೊಂಡಿಯೆಲ್ಲಿ? ಓ ಸಮಾಧಿಯೇ ನಿನ್ನ ಜಯವೆಲ್ಲಿ? ಮರಣದ ಕೊಂಡಿ ಪಾಪವೇ; ಪಾಪದ ಬಲವು ನ್ಯಾಯಪ್ರಮಾಣವೇ. ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ.ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
- Romans 6:3–5 ರೋಮಾಪುರದವರಿಗೆ 6:3–5ಯೇಸು ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. ಹೇಗಂದರೆ ಆತನ ಮರಣದ ಹೋಲಿಕೆಯಲ್ಲಿ ನಾವು ಒಟ್ಟಾಗಿ ನೆಲೆಸಿದ್ದರೆ ಆತನ ಪುನರುತ್ಥಾನದ ಹೋಲಿಕೆ ಯಲ್ಲಿಯೂ ಇರುವೆವು.
- Acts 17:31–32 ಅಪೊಸ್ತಲರ ಕೃತ್ಯಗಳು 17:31–32ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು. ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯ ಮಾಡಿದರು; ಬೇರೆ ಕೆಲವರು--ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು.
- Acts 6:6 ಅಪೊಸ್ತಲರ ಕೃತ್ಯಗಳು 6:6ಅವರನ್ನು ಅಪೊಸ್ತಲರ ಮುಂದೆ ನಿಲ್ಲಿಸಲಾಗಿ ಅವರು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟರು.
- Acts 17:18 ಅಪೊಸ್ತಲರ ಕೃತ್ಯಗಳು 17:18ಇದಲ್ಲದೆ ಎಪಿಕೂರಿಯರು, ಸ್ತೋಯಿಕರು ಎಂಬ ತತ್ವ ವಿಚಾರಕರಲ್ಲಿ ಕೆಲವರು ಅವನನ್ನು ಎದುರಿಸಿದರು. ಮತ್ತು ಅವರಲ್ಲಿ ಕೆಲವರು--ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ ಅಂದರು. ಅವನು ಯೇಸುವಿನ ವಿಷಯವಾಗಿಯೂ ಪುನರುತ್ಥಾನದ ವಿಷಯ ವಾಗಿಯೂ ಸಾರುತ್ತಿದ್ದದರಿಂದ--ಇವನು ಅನ್ಯ ದೇವರ
- Acts 16:15 ಅಪೊಸ್ತಲರ ಕೃತ್ಯಗಳು 16:15ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು.
- Acts 8:12–18 ಅಪೊಸ್ತಲರ ಕೃತ್ಯಗಳು 8:12–18ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯ ದಲ್ಲಿಯೂ ಸಾರುತ್ತಾ ಇರಲು ಗಂಡಸರೂ ಹೆಂಗಸರೂ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡರು. ಆಗ ಸೀಮೋ ನನು ಕೂಡ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಉಂಟಾಗುವದನ್ನು ನೋಡಿ ಬೆರಗಾದನು. ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿ ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸಿದರು. ಇವರು ಅಲ್ಲಿಗೆ ಬಂದು ಪವಿತ್ರಾತ್ಮನನ್ನು ಅವರು ಹೊಂದಬೇಕೆಂದು ಅವರಿ ಗೋಸ್ಕರ ಪ್ರಾರ್ಥನೆ ಮಾಡಿದರು. (ಯಾಕಂದರೆ ಪವಿತ್ರಾತ್ಮನು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿ ನಲ್ಲಿ ಬಾಪ್ತಿಸ್ಮವನ್ನು ಮಾತ್ರ ಮಾಡಿಸಿಕೊಂಡಿದ್ದರು). ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮನನ್ನು ಹೊಂದಿದರು. ಅಪೊಸ್ತಲರು ಕೈಗಳನ್ನಿಡುವದರ ಮೂಲಕವಾಗಿ ಪವಿತ್ರಾತ್ಮ ಕೊಡೋ ಣವಾಗುವದನ್ನು ಸೀಮೋನನು ನೋಡಿ ಹಣವನ್ನು ತಂದು--
- Ecclesiastes 12:14 ಪ್ರಸಂಗಿ 12:14ಒಳ್ಳೇದಾಗಲಿ, ಕೆಟ್ಟದ್ದಾಗಲಿ, ಪ್ರತಿಯೊಂದು ರಹಸ್ಯದ ಸಂಗತಿಗೂ ದೇವರು ಪ್ರತಿಯೊಂದು ಕೆಲಸ ವನ್ನು ಕುರಿತು ನ್ಯಾಯವಿಚಾರಣೆಗೆ ತರುವನು.
- 1 Corinthians 10:2 1 ಕೊರಿಂಥದವರಿಗೆ 10:2ಅವರೆಲ್ಲರೂ ಮೋಶೆ ಗಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಬಾಪ್ತಿಸ್ಮ ಹೊಂದಿದರು;
- Acts 2:41 ಅಪೊಸ್ತಲರ ಕೃತ್ಯಗಳು 2:41ಆಗ ಅವನ ಮಾತನ್ನು ಸಂತೋಷವಾಗಿ ಅಂಗೀಕರಿಸಿದವರು ಬಾಪ್ತಿಸ್ಮ ಮಾಡಿಸಿಕೊಂಡರು. ಅದೇ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಸಲ್ಪಟ್ಟರು.
- John 4:1–2 ಯೋಹಾನನು 4:1–2ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಬಾಪ್ತಿಸ್ಮ ಮಾಡಿಸುತ್ತಿದ್ದದ್ದು ಫರಿಸಾಯರು ಕೇಳಿದ್ದಾರೆಂದು ಕರ್ತ ನಿಗೆ ಗೊತ್ತಾಯಿತು. (ಆದಾಗ್ಯೂ ಬಾಪ್ತಿಸ್ಮ ಮಾಡಿಸು ತ್ತಿದ್ದಾತನು ಯೇಸು ತಾನೇ ಅಲ್ಲ, ಆದರೆ ಆತನ ಶಿಷ್ಯರು ಮಾಡಿಸುತ್ತಿದ್ದರು).
- Daniel 12:2 ದಾನಿಯೇಲನು 12:2ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.
Original words (Greek)
- doctrine · G1322διδαχή didachḗ
- baptisms · G909βαπτισμός baptismós
- and · G5037τέ té
- on · G1936ἐπίθεσις epíthesis
- hands · G5495χείρ cheír
- and · G5037τέ té
- resurrection · G386ἀνάστασις anástasis
- dead · G3498νεκρός nekrós
- and · G2532καί kaí
- of · G2917κρίμα kríma
- eternal · G166αἰώνιος aiṓnios
- judgment · G2917κρίμα kríma