Hosea · chapter 10 · verse 4
Hosea 10:4 in Kannada
ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡು ವದಕ್ಕೆ ಸುಳ್ಳು ಪ್ರಮಾಣ ವನ್ನು ಮಾಡುತ್ತಾರೆ. ಆದದ ರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.
Avaru maatugalannaadi odambadikeyannu maadu vadakke sullu pramaana vannu maaduttaare. Aadada rinda nyaayateerpu vishada kaleya haage holada saalugalalli moleyuttade.
Hosea 10:4 in English
- King James Version (KJV)
- They have spoken words, swearing falsely in making a covenant: thus judgment springeth up as hemlock in the furrows of the field.
- World English Bible (WEB)
- They make promises, swearing falsely in making covenants. Therefore judgment springs up like poisonous weeds in the furrows of the field.
- American Standard Version (ASV)
- They speak [vain] words, swearing falsely in making covenants: therefore judgment springeth up as hemlock in the furrows of the field.
- Bible in Basic English (BBE)
- Their words are foolish; they make agreements with false oaths, so punishment will come up like a poison-plant in a ploughed field.
- Darby Translation (DBY)
- They speak [mere] words, swearing falsely in making a covenant; therefore shall judgment spring up as hemlock in the furrows of the fields.
- Webster's Bible (WBS)
- They have spoken words, swearing falsely in making a covenant: thus judgment springeth up as hemlock in the furrows of the field.
- Young's Literal Translation (YLT)
- They have spoken words, To swear falsehood in making a covenant, And flourished as a poisonous herb hath judgment, on the furrows of a field.
Read in context
- 2ಅವರ ಹೃದಯವು ಭೇದವಾಯಿತು, ಈಗ ಅವರು ಅಪರಾಧಿಗಳೆಂದು ಕಾಣಿಸಲ್ಪಡುವರು; ಆತನು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವನು.
- 3ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು.
- 4ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡು ವದಕ್ಕೆ ಸುಳ್ಳು ಪ್ರಮಾಣ ವನ್ನು ಮಾಡುತ್ತಾರೆ. ಆದದ ರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.
- 5ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು.
- 6ಅದು ಸಹ ಅರಸ ನಾದ ಯಾರೇಬನಿಗೆ ಕಾಣಿಕೆಯಾಗಿ ಅಶ್ಯೂರಿಗೆ ಒಯ್ಯ ಲ್ಪಡುವದು; ಎಫ್ರಾಯಾಮು ನಾಚಿಕೆಯನ್ನು ಹೊಂದು ವದು; ಇಸ್ರಾಯೇಲ್ ಸಹ ತನ್ನ ಆಲೋಚನೆಗೆ ಅಸಹ್ಯ ಪಡುವದು.
Cross references
- Hosea 4:2 ಹೋಶೇಯ 4:2ಆಣೆಯಿಡುವದೂ ಸುಳ್ಳು ಹೇಳು ವದೂ ಕೊಲ್ಲುವದೂ ಕದಿಯುವದೂ ವ್ಯಭಿಚಾರ ಮಾಡುವದೂ ಹೆಚ್ಚಾಗಿಬಿಟ್ಟಿವೆ; ರಕ್ತಕ್ಕೆ ರಕ್ತ ಸೇರುತ್ತದೆ;
- Amos 6:12 ಆಮೋಸ 6:12ಕುದುರೆಗಳು ಬಂಡೆಯ ಮೇಲೆ ಓಡುವದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷಕ್ಕೂ ನೀತಿ ಫಲವನ್ನು ಮಾಚಿಪತ್ರೆಗೂ ಬದಲಾಯಿ ಸಿದ್ದೀರಿ.
- Amos 5:7 ಆಮೋಸ 5:7ನ್ಯಾಯವನ್ನು ಮಾಚಿಪತ್ರೆಗೆ ತಿರಿಗಿಸುವವರೇ, ನೀತಿಯನ್ನು ಭೂಮಿಯಲ್ಲಿ ಬಿಡುವವರೇ,
- Deuteronomy 29:18 ಧರ್ಮೋಪದೇಶಕಾಂಡ 29:18ಈಹೊತ್ತು ನಮ್ಮ ದೇವರಾದ ಕರ್ತನನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆಮಾಡುವದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ವಿಷವನ್ನೂ ಮಾಚಿಪತ್ರೆಯನ್ನೂ ಬೆಳೆ ಸುವ ಬೇರು ನಿಮ್ಮಲ್ಲಿ ಇರಬಾರದು.
- 2 Kings 17:3–4 2 ಅರಸುಗಳು 17:3–4ಅಶ್ಶೂರಿನ ಅರಸನಾದ ಶಲ್ಮನೆಸೆರನು ಅವನ ಮೇಲೆ ಬಂದದ್ದರಿಂದ ಹೋಶೇಯನು ಅವನಿಗೆ ಸೇವಕ ನಾಗಿ ಕಪ್ಪವನ್ನು ಕೊಟ್ಟನು. ಆದರೆ ಅಶ್ಶೂರಿನ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನಂದರೆ, ಹೋಶೇಯನು ಅಶ್ಶೂರಿನ ಅರಸನಿಗೆ ಪ್ರತಿ ವರುಷಕ್ಕೂ ಕೊಡುವ ಕಪ್ಪವನ್ನು ಕೊಡದೆ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ಸೇವ ಕರನ್ನು ಕಳುಹಿಸಿದ್ದನು. ಆದದರಿಂದ ಅಶ್ಶೂರಿನ ಅರ ಸನು ಅವನನ್ನು ಕಟ್ಟಿ ಸೆರೆಮನೆಯಲ್ಲಿ ಬಂಧಿಸಿದನು.
- Ezekiel 17:13–19 ಯೆಹೆಜ್ಕೇಲನು 17:13–19ಅರಸನ ಸಂತಾನ ದವರನ್ನು ಕರೆದುಕೊಂಡು ಅವನ ಸಂಗಡ ಒಡಂಬಡಿಕೆ ಮಾಡಿ ಅವನಿಂದ ಪ್ರಮಾಣಮಾಡಿಸಿ ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ. ಆ ರಾಜ್ಯವು ತಗ್ಗಾಗಿ ಮೇಲೇಳದ ಹಾಗಿದ್ದರೂ ಅವನು ಒಡಂಬಡಿಕೆಯನ್ನು ಕೈಕೊಳ್ಳುವದರಿಂದ ಅದು ನಿಲ್ಲುವದು. ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿ ಯಾಗುವನೋ? ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ? ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ? ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ. ಇಲ್ಲವೆ ಫರೋಹನೂ ಅವನ ಮಹಾ ಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹಳ ಜನ ರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಕೋಟೆಗಳನ್ನೂ ಕಟ್ಟುವಾಗಲೂ ಅವನಿಗೆ ಯುದ್ಧದಲ್ಲಿ ಸಹಾಯ ಮಾಡುವದಿಲ್ಲ. ಅವನು ಪ್ರಮಾಣವನ್ನು ತಿರಸ್ಕರಿಸಿ ಕೈಕೊಟ್ಟಾಗ್ಯೂ; ಇಗೋ, ಒಡಂಬಡಿಕೆಯನ್ನು ವಿಾರಿ ಇವುಗಳನ್ನೆಲ್ಲಾ ಮಾಡಿದ್ದ ರಿಂದ ತಪ್ಪಿಸಿಕೊಳ್ಳುವದಿಲ್ಲ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ ಅವನು ವಿಾರಿದ ಒಡಂಬಡಿಕೆಯನ್ನೂ ನನ್ನ ಜೀವ ದಾಣೆ ನಿಶ್ಚಯವಾಗಿ ಅವನ ತಲೆಯ ಮೇಲೆಯೇ ಮುಯ್ಯಿ ತೀರಿಸುವೆನು.
- Hebrews 12:15 ಇಬ್ರಿಯರಿಗೆ 12:15ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ
- Isaiah 5:7 ಯೆಶಾಯ 5:7ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
- 2 Timothy 3:3 2 ತಿಮೊಥೆಯನಿಗೆ 3:3ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ
- Hosea 6:7 ಹೋಶೇಯ 6:7ಆದರೆ ಅವರು ಒಡಂಬಡಿಕೆಯನ್ನು ವಿಾರಿದ ಮನುಷ್ಯರ ಹಾಗೆ ಇದ್ದಾರೆ; ಅಲ್ಲಿ ಅವರು ನನಗೆ ವಿರುದ್ಧವಾಗಿ ದ್ರೋಹದಿಂದ ನಡೆದುಕೊಂಡಿದ್ದಾರೆ.
- Isaiah 59:13–15 ಯೆಶಾಯ 59:13–15ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ. ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ. ಹೌದು, ಸತ್ಯವು ಇಲ್ಲದೇ ಹೋಯಿತು; ಕೆಟ್ಟದ್ದನ್ನು ಬಿಟ್ಟುಬಿಡುವವನು ಸುಲಿಗೆ ಯಾಗುತ್ತಾನೆ; ಕರ್ತನು ಅದನ್ನು ನೋಡಿದನು, ಅದ ರಲ್ಲಿ ನ್ಯಾಯವಿಲ್ಲದ್ದರಿಂದ ಆತನಿಗೆ ಮೆಚ್ಚಿಕೆಯಾಗಲಿಲ್ಲ.
- Revelation 8:10–11 ಪ್ರಕಟನೆ 8:10–11ಮೂರನೆಯ ದೂತನು ಊದಿದಾಗ ದೀಪ ದಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶ ದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು. ಆ ನಕ್ಷತ್ರಕ್ಕೆ ಮಾಚಿಪತ್ರೆ ಎಂದು ಹೆಸರು. ನೀರಿನಲ್ಲಿ ಮೂರರೊಳಗೆ ಒಂದು ಭಾಗ ಮಾಚಿಪತ್ರೆ ಯಾಯಿತು. ಆ ನೀರು ವಿಷವಾದದ್ದರಿಂದ ಮನುಷ್ಯರಲ್ಲಿ ಬಹಳ ಮಂದಿ ಸತ್ತರು.