Hosea · chapter 11 · verse 5
Hosea 11:5 in Kannada
ಅವನು ಐಗುಪ್ತ ದೇಶದೊಳಗೆ ಹಿಂತಿರುಗಿ ಬರಲಾರನು; ಆದರೆ ಅಶ್ಯೂರ್ಯನು ಅವನ ರಾಜನಾಗಿದ್ದಾನೆ. ಅವರು ತಿರುಗಿ ಬರುವದಕ್ಕೆ ನಿರಾಕರಿಸಿದರು.
Avanu aigupta deshadolage hintirugi baralaaranu; aadare ashyooryanu avana raajanaagiddaane. Avaru tirugi baruvadakke niraakarisidaru.
Hosea 11:5 in English
- King James Version (KJV)
- He shall not return into the land of Egypt, but the Assyrian shall be his king, because they refused to return.
- World English Bible (WEB)
- “They won’t return into the land of Egypt; but the Assyrian will be their king, because they refused to repent.
- American Standard Version (ASV)
- They shall not return into the land of Egypt; but the Assyrian shall be their king, because they refused to return [to me].
- Bible in Basic English (BBE)
- He will go back to the land of Egypt and the Assyrian will be his king, because they would not come back to me.
- Darby Translation (DBY)
- He shall not return into the land of Egypt, but the Assyrian shall be his king; for they refused to return [to me];
- Webster's Bible (WBS)
- He shall not return into the land of Egypt, but the Assyrian shall be his king, because they refused to return.
- Young's Literal Translation (YLT)
- He turneth not back unto the land of Egypt, And Asshur — he [is] his king, For they have refused to return.
Read in context
- 3ನಾನು ಅವರ ತೋಳುಗಳನ್ನು ಹಿಡಿದು ಎಫ್ರಾಯಾಮನಿಗೆ ಕಲಿಸಿದೆನು. ಆದರೆ ನಾನು ಅವ ರನ್ನು ಸ್ವಸ್ಥಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ.
- 4ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.
- 5ಅವನು ಐಗುಪ್ತ ದೇಶದೊಳಗೆ ಹಿಂತಿರುಗಿ ಬರಲಾರನು; ಆದರೆ ಅಶ್ಯೂರ್ಯನು ಅವನ ರಾಜನಾಗಿದ್ದಾನೆ. ಅವರು ತಿರುಗಿ ಬರುವದಕ್ಕೆ ನಿರಾಕರಿಸಿದರು.
- 6ಆದದರಿಂದ ಅವರ ಆಲೋಚನೆಗಳ ನಿಮಿತ್ತ ಕತ್ತಿಯು ಅವರ ಪಟ್ಟಣಗಳ ಮೇಲೆ ನೆಲೆಯಾಗಿದ್ದು ಅಲ್ಲಿನ ಕೊಂಬೆ ಗಳನ್ನು ಸುಟ್ಟು ಅವರನ್ನು ನುಂಗಿಬಿಡುತ್ತದೆ.
- 7ನನ್ನ ಜನರು ನನ್ನ ಕಡೆಯಿಂದ ಹಿಂಜರಿಯಬೇಕೆಂದು ತೀರ್ಮಾನಿಸಿದ್ದಾರೆ; ಅವರನ್ನು ಮಹೋನ್ನತನ ಬಳಿಗೆ ಕರೆದರೂ ಒಬ್ಬನಾದರೂ ಆತನನ್ನು ಉನ್ನತ ಪಡಿಸಲಾರನು.
Cross references
- Hosea 7:16 ಹೋಶೇಯ 7:16ಅವರು ಹಿಂತಿರುಗುತ್ತಾರೆ, ಆದರೆ ಮಹೋನ್ನತನಾ ದಾತನ ಕಡೆಗೆ ಅಲ್ಲ. ಅವರು ಮೋಸ ಮಾಡುವ ಬಿಲ್ಲಿನ ಹಾಗೆ ಇದ್ದಾರೆ; ಅವರ ಪ್ರಧಾನರ ನಾಲಿಗೆಯ ಹುಚ್ಚು ಕೂಗಾಟದ ನಿಮಿತ್ತ ಕತ್ತಿಯಿಂದ ಬೀಳುವರು; ಇದೇ ಐಗುಪ್ತದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.
- 2 Kings 17:13–14 2 ಅರಸುಗಳು 17:13–14ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು
- Hosea 10:6 ಹೋಶೇಯ 10:6ಅದು ಸಹ ಅರಸ ನಾದ ಯಾರೇಬನಿಗೆ ಕಾಣಿಕೆಯಾಗಿ ಅಶ್ಯೂರಿಗೆ ಒಯ್ಯ ಲ್ಪಡುವದು; ಎಫ್ರಾಯಾಮು ನಾಚಿಕೆಯನ್ನು ಹೊಂದು ವದು; ಇಸ್ರಾಯೇಲ್ ಸಹ ತನ್ನ ಆಲೋಚನೆಗೆ ಅಸಹ್ಯ ಪಡುವದು.
- Hosea 8:13 ಹೋಶೇಯ 8:13ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ; ಆದರೆ ಕರ್ತನು ಅವುಗಳಿಗೆ ಮೆಚ್ಚುವದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕ ಮಾಡಿಕೊಂಡು ಅವರ ಪಾಪಗಳನ್ನು ವಿಚಾ ರಿಸುವನು; ಅವರು ಐಗುಪ್ತಕ್ಕೆ ಹಿಂದಿರುಗುವರು.ಇಸ್ರಾಯೇಲು ತನ್ನ ನಿರ್ಮಾಣಿಕ ನನ್ನು ಮರೆತುಬಿಟ್ಟು ಆಲಯಗಳನ್ನು ಕಟ್ಟಿಕೊಂಡಿದೆ; ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚು ಮಾಡಿಕೊಂಡಿದೆ; ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವುಗಳ ಅರಮನೆಗಳನ್ನು ನುಂಗಿಬಿಡುವದು.
- Hosea 9:3 ಹೋಶೇಯ 9:3ಅವರು ಕರ್ತನ ದೇಶದಲ್ಲಿ ನೆಲೆಸುವದಿಲ್ಲ; ಆದರೆ ಎಫ್ರಾಯಾಮು ಐಗುಪ್ತಕ್ಕೆ ತಿರುಗುವದು; ಅವರು ಅಶ್ಯೂರಿನಲ್ಲಿ ಅಶುದ್ಧ ವಾದವುಗಳನ್ನು ತಿನ್ನುವರು.
- Amos 4:6 ಆಮೋಸ 4:6ನಾನು ಸಹ ನಿಮಗೆ ಎಲ್ಲಾ ಪಟ್ಟಣಗಳಲ್ಲಿ ಹಲ್ಲಿಗೆ ಏನೂ ಸಿಕ್ಕದಂತೆ ನಿಮ್ಮ ಎಲ್ಲಾ ಸ್ಥಳಗಳಲ್ಲಿ ರೊಟ್ಟಿಯ ಕೊರತೆಯನ್ನು ಕೊಟ್ಟಿದ್ದೇನೆ; ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲ ಎಂದು ಕರ್ತನು ಹೇಳು ತ್ತಾನೆ.
- Zechariah 1:4–6 ಜೆಕರ್ಯ 1:4–6ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ. ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
- Amos 5:27 ಆಮೋಸ 5:27ಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ.
- Jeremiah 8:4–6 ಯೆರೆಮೀಯ 8:4–6ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ ಕರ್ತನು ಹೀಗೆ ಹೇಳುತ್ತಾನೆ--ಅವರು ಬಿದ್ದು ಮತ್ತೆ ಏಳರೋ? ಹಿಂಜರಿದವನು ಮತ್ತೆ ಬರುವದಿ ಲ್ಲವೋ? ಹಾಗಾದರೆ ಈ ಯೆರೂಸಲೇಮಿನ ಜನರು ನಿತ್ಯವಾದ ಹಿಂಜರಿಯುವಿಕೆಯಿಂದ ಯಾಕೆ ಹಿಂತಿರು ಗಿದ್ದಾರೆ? ಮೋಸವನ್ನು ಬಿಗಿಯಾಗಿ ಹಿಡಿಯುತ್ತಾರೆ, ಹಿಂದಿರುಗುವದಕ್ಕೆ ನಿರಾಕರಿಸುತ್ತಾರೆ. ನಾನು ಕಿವಿ ಗೊಟ್ಟು ಕೇಳಿದೆನು, ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ. ಯಾವನಾದರೂ--ನಾನು ಎಂಥಾ ಕೆಲಸ ಮಾಡಿದ್ದೇನೆ ಎಂದು ಅಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ; ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ ಪ್ರತಿಯೊ ಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ.
- 2 Kings 18:11–12 2 ಅರಸುಗಳು 18:11–12ಅಶ್ಶೂರಿನ ಅರಸನು ಅಶ್ಶೂರಕ್ಕೆ ಇಸ್ರಾಯೇಲನ್ನು ಸೆರೆಯಾಗಿ ಒಯ್ದು ಗೋಜಾನ್ ನದಿಯ ಬಳಿಯಲ್ಲಿ ಹಲಹುನಲ್ಲಿಯೂ ಹಾಬೋರಿನಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು. ಅವರು ತಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ ಆತನ ಒಡಂಬಡಿಕೆಯನ್ನೂ ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಎಲ್ಲ ವನ್ನೂ ವಿಾರಿದರು; ಅವುಗಳನ್ನು ಕೇಳದೆಯೂ ಮಾಡ ದೆಯೂ ಹೋದರು.
- 2 Kings 15:19 2 ಅರಸುಗಳು 15:19ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು.
- Hosea 5:13 ಹೋಶೇಯ 5:13ಎಫ್ರಾಯಾಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ ಎಫ್ರಾಯೀಮ್ ಅಶ್ಯೂರಕ್ಕೆ ಹೋಗಿ ಅರಸನಾದ ಯಾರೇಬನ ಬಳಿಗೆ ಕಳುಹಿಸಿತು; ಆದಾಗ್ಯೂ ಅವನು ನಿಮ್ಮನ್ನು ಸ್ವಸ್ಥಮಾಡ ಲಿಲ್ಲ, ಇಲ್ಲವೆ ನಿಮ್ಮ ಗಾಯವನ್ನು ಗುಣಪಡಿಸಲೂ ಇಲ್ಲ.