Hosea · chapter 11 · verse 4
Hosea 11:4 in Kannada
ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.
Naanu avarannu manushyana snehabandanavemba haggagalindaloo preetiya bandhanagalindaloo ele denu. Avara davadeya melininda noga ettu vavara haage naanu avarige iddenu. Naanu avarige tinnuvadakke kottenu.
Hosea 11:4 in English
- King James Version (KJV)
- I drew them with cords of a man, with bands of love: and I was to them as they that take off the yoke on their jaws, and I laid meat unto them.
- World English Bible (WEB)
- I drew them with cords of a man, with ties of love; and I was to them like those who lift up the yoke on their necks; and I bent down to him and I fed him.
- American Standard Version (ASV)
- I drew them with cords of a man, with bands of love; and I was to them as they that lift up the yoke on their jaws; and I laid food before them.
- Bible in Basic English (BBE)
- I made them come after me with the cords of a man, with the bands of love; I was to them as one who took the yoke from off their mouths, putting meat before them.
- Darby Translation (DBY)
- I drew them with bands of a man, with cords of love; and I was to them as they that take off the yoke on their jaws, and I gently caused them to eat.
- Webster's Bible (WBS)
- I drew them with cords of a man, with bands of love: and I was to them as they that take off the yoke on their jaws, and I laid food for them.
- Young's Literal Translation (YLT)
- With cords of man I do draw them, With thick cords of love, And I am to them as a raiser up of a yoke on their jaws, And I incline unto him — I feed [him].
Read in context
- 2ಅವರು ಅವರನ್ನು ಕರೆದ ಹಾಗೆಯೇ ಅವರಿಂದ ಹೊರಟು ಹೋದರು; ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು; ಕೆತ್ತಲ್ಪಟ್ಟ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.
- 3ನಾನು ಅವರ ತೋಳುಗಳನ್ನು ಹಿಡಿದು ಎಫ್ರಾಯಾಮನಿಗೆ ಕಲಿಸಿದೆನು. ಆದರೆ ನಾನು ಅವ ರನ್ನು ಸ್ವಸ್ಥಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ.
- 4ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.
- 5ಅವನು ಐಗುಪ್ತ ದೇಶದೊಳಗೆ ಹಿಂತಿರುಗಿ ಬರಲಾರನು; ಆದರೆ ಅಶ್ಯೂರ್ಯನು ಅವನ ರಾಜನಾಗಿದ್ದಾನೆ. ಅವರು ತಿರುಗಿ ಬರುವದಕ್ಕೆ ನಿರಾಕರಿಸಿದರು.
- 6ಆದದರಿಂದ ಅವರ ಆಲೋಚನೆಗಳ ನಿಮಿತ್ತ ಕತ್ತಿಯು ಅವರ ಪಟ್ಟಣಗಳ ಮೇಲೆ ನೆಲೆಯಾಗಿದ್ದು ಅಲ್ಲಿನ ಕೊಂಬೆ ಗಳನ್ನು ಸುಟ್ಟು ಅವರನ್ನು ನುಂಗಿಬಿಡುತ್ತದೆ.
Cross references
- John 12:32 ಯೋಹಾನನು 12:32ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಅಂದನು.
- Leviticus 26:13 ಯಾಜಕಕಾಂಡ 26:13ಐಗುಪ್ತ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ ನಿಮ್ಮ ನೊಗದ ಕಟ್ಟುಗಳನ್ನು ಮುರಿದು ನಿಮ್ಮನ್ನು ನೆಟ್ಟಗೆ ನಡೆಯಮಾಡಿದ ನಿಮ್ಮ ದೇವರಾದ ಕರ್ತನು ನಾನೇ.
- 2 Corinthians 5:14 2 ಕೊರಿಂಥದವರಿಗೆ 5:14ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಹೀಗೆ ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಾವು ಹೀಗೆ ನಿಶ್ಚಯಿಸಿಕೊಳ್ಳುತ್ತೇವೆ.
- Jeremiah 31:2–3 ಯೆರೆಮೀಯ 31:2–3ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿಶ್ರಾಂತಿ ಕೊಡುವದಕ್ಕೆ ಹೋಗಲಾಗಿ ಕತ್ತಿಗೆ ತಪ್ಪಿಸಿಕೊಂಡ ಇಸ್ರಾಯೇಲಿನ ಜನರಿಗೆ ಅರಣ್ಯ ದಲ್ಲಿ ದಯೆ ದೊರಕಿತು. ಹಿಂದಿನಂತೆ ಕರ್ತನು ಬಂದು ನನಗೆ ಕಾಣಿಸಿಕೊಂಡು--ಹೌದು, ಶಾಶ್ವತವಾದ ಪ್ರೀತಿ ಯಿಂದ ನಿನ್ನನ್ನು ಪ್ರೀತಿ ಮಾಡಿದ್ದೇನೆ; ಆದದರಿಂದ ಪ್ರೀತಿ ದಯೆಗಳಿಂದ ನಿನ್ನನ್ನು ಎಳೆದಿದ್ದೇನೆ.
- Isaiah 63:9 ಯೆಶಾಯ 63:9ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
- Psalm 78:23–25 ಕೀರ್ತನೆಗಳು 78:23–25ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು. ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.
- 2 Samuel 7:14 2 ಸಮುವೇಲನು 7:14ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು.
- Hosea 2:8 ಹೋಶೇಯ 2:8ಅವರು ಬಾಳನಿಗಾಗಿ ಸಿದ್ಧಮಾಡಿದ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ನಾನು ಕೊಟ್ಟು ಅವ ಳಿಗೆ ಬೆಳ್ಳಿ ಬಂಗಾರವನ್ನು ನಾನೇ ಹೆಚ್ಚಿಸಿದ್ದೇನೆಂದು ಅವಳಿಗೆ ತಿಳಿಯಲಿಲ್ಲ.
- John 6:32–58 ಯೋಹಾನನು 6:32–58ಆಗ ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಡಲಿಲ್ಲ; ಆದರೆ ನನ್ನ ತಂದೆಯು ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದ ಕೊಡು ತ್ತಾನೆ. ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು. ಅದಕ್ಕವರು ಆತನಿಗೆ--ಕರ್ತನೇ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ ಮತ್ತು ನನ್ನ ಮೇಲೆ ನಂಬಿಕೆ ಇಡುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. ಆದರೆ--ನೀವು ನನ್ನನ್ನು ನೋಡಿಯೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳಿದೆನು. ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ. ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು. ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಆತನು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ-- ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು. ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಿಮ್ಮ ನಿಮ್ಮೊಳಗೆ ಗುಣುಗುಟ್ಟ ಬೇಡಿರಿ. ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ. ದೇವರಿಗೆ ಸಂಬಂಧಪಟ್ಟ ವನೇ ತಂದೆಯನ್ನು ನೋಡಿದ್ದಾನೆ ಹೊರತು ಬೇರೆ ಯಾವನೂ ತಂದೆಯನ್ನು ನೋಡಲಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನ ಮೇಲೆ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ. ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.
- Song of Solomon 1:4 ಪರಮಗೀತೆ 1:4ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ.
- Psalm 105:40 ಕೀರ್ತನೆಗಳು 105:40ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು.
- Exodus 16:32 ವಿಮೋಚನಕಾಂಡ 16:32ಮೋಶೆಯು ಅವರಿಗೆ--ಕರ್ತನು ಆಜ್ಞಾಪಿಸಿದ್ದು ಇದೇ--ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಡಿಸಿದಾಗ ಅರಣ್ಯದಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ (ಮನ್ನವನ್ನು) ತುಂಬಿಸಿ ಇಟ್ಟಿರಬೇಕು ಎಂಬದು ಅಂದನು.