Hosea · chapter 13 · verse 6
Hosea 13:6 in Kannada
ಅವರ ಆಹಾರದ ಪ್ರಕಾರ ತೃಪ್ತರಾದರು, ಅದರಿಂದ ಅವರ ಹೃದಯಗಳು ಉಬ್ಬಿಕೊಂಡಿತು; ಆದಕಾರಣ ಅವರು ನನ್ನನ್ನು ಮರೆತುಬಿಟ್ಟರು.
Avara aahaarada prakaara truptaraadaru, adarinda avara hrudayagalu ubbikonditu; aadakaarana avaru nannannu maretubittaru.
Hosea 13:6 in English
- King James Version (KJV)
- According to their pasture, so were they filled; they were filled, and their heart was exalted; therefore have they forgotten me.
- World English Bible (WEB)
- According to their pasture, so were they filled; they were filled, and their heart was exalted. Therefore they have forgotten me.
- American Standard Version (ASV)
- According to their pasture, so were they filled; they were filled, and their heart was exalted: therefore have they forgotten me.
- Bible in Basic English (BBE)
- When I gave them food they were full, and their hearts were full of pride, and they did not keep me in mind.
- Darby Translation (DBY)
- According to their pasture, they became full; they became full, and their heart was exalted: therefore have they forgotten me.
- Webster's Bible (WBS)
- According to their pasture, so were they filled; they were filled, and their heart was exalted; therefore have they forgotten me.
- Young's Literal Translation (YLT)
- According to their feedings they are satiated, They have been satiated, And their heart is lifted up, Therefore they have forgotten Me,
Read in context
- 4ಆದಾಗ್ಯೂ ನಾನು ಐಗುಪ್ತದಿಂದ ನಿನ್ನ ದೇವರಾಗಿರುವ ಕರ್ತನಾಗಿದ್ದೇನೆ, ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು; ಯಾಕಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
- 5ನಾನು ನಿನ್ನನ್ನು ಅರಣ್ಯದಲ್ಲಿಯೂ ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
- 6ಅವರ ಆಹಾರದ ಪ್ರಕಾರ ತೃಪ್ತರಾದರು, ಅದರಿಂದ ಅವರ ಹೃದಯಗಳು ಉಬ್ಬಿಕೊಂಡಿತು; ಆದಕಾರಣ ಅವರು ನನ್ನನ್ನು ಮರೆತುಬಿಟ್ಟರು.
- 7ಆದದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು; ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚಿಹಾಕುವೆನು.
- 8ಮರಿಗಳನ್ನು ಕಳೆದುಕೊಂಡ ಕರಡಿಯಂತೆ ನಾನು ಅವರನ್ನು ಎದುರುಗೊಳ್ಳುವೆನು; ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ಅಲ್ಲಿ ನಾನು ಸಿಂಹದ ಹಾಗೆ ಅವರನ್ನು ನುಂಗುವೆನು; ಕಾಡುಮೃಗವು ಅವರನ್ನು ಸೀಳಿಹಾಕುವದು.
Cross references
- Deuteronomy 32:13–15 ಧರ್ಮೋಪದೇಶಕಾಂಡ 32:13–15ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು. ಹಸುಗಳ ಬೆಣ್ಣೆಯನ್ನೂ ಕುರಿಗಳ ಹಾಲನ್ನೂ ಕುರಿಮರಿಗಳ ಕೊಬ್ಬಿನೊಂದಿಗೆ ಬಾಷಾನಿನ ಟಗರು ಗಳನ್ನೂ ಹೋತಗಳನ್ನೂ ಉತ್ತಮ ಗೋಧಿಯ ಸಂಗಡ ಕೊಟ್ಟನು. ನೀನು ಶುದ್ಧ ದ್ರಾಕ್ಷಾರಸವನ್ನು ಕುಡಿದಿ. ಆದರೆ ಯೆಶುರೂನು ಕೊಬ್ಬಿ ಒದ್ದನು, ನೀನು ಕೊಬ್ಬಿದವನಾಗಿ ಉಬ್ಬಿದಿ, ನೀನು ಕೊಬ್ಬಿನಿಂದ ಮುಚ್ಚ ಲ್ಪಟ್ಟಿ. ಅವನು ತನ್ನನ್ನು ಉಂಟುಮಾಡಿದ ದೇವರನ್ನು ತೊರೆದು ತನ್ನ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದನು.
- Deuteronomy 8:12–14 ಧರ್ಮೋಪದೇಶಕಾಂಡ 8:12–14ನೀನು ತಿಂದು ತೃಪ್ತಿಹೊಂದಿದಾಗಲೂ ಒಳ್ಳೇ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ ನಿನ್ನ ಪಶು ಕುರಿಗಳು ಹೆಚ್ಚಿದಾಗಲೂ ಬೆಳ್ಳಿ ಬಂಗಾರ ನಿನಗೆ ಹೆಚ್ಚಿದಾಗಲೂ ನಿನಗಿರುವಂಥದ್ದೆಲ್ಲಾ ಹೆಚ್ಚಿದಾ ಗಲೂ ನಿನ್ನ ಹೃದಯವು ಉಬ್ಬಿಕೊಳ್ಳದ ಹಾಗೆಯೂ ನಿನ್ನನ್ನು ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ,
- Deuteronomy 6:10–12 ಧರ್ಮೋಪದೇಶಕಾಂಡ 6:10–12ಇದಲ್ಲದೆ ನಿನ್ನ ದೇವರಾದ ಕರ್ತನು ನಿನ್ನ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನನ್ನು ಸೇರಿಸಿ ನೀನು ಕಟ್ಟದ ದೊಡ್ಡದಾದ ಒಳ್ಳೇ ಪಟ್ಟಣಗಳನ್ನೂ ನೀನು ತುಂಬದಿದ್ದ ಎಲ್ಲಾ ಒಳ್ಳೆಯವುಗಳು ತುಂಬಿರುವ ಮನೆ ಗಳನ್ನೂ ಅಗೆಯದಿರುವ ಬಾವಿಗಳನ್ನೂ ನೆಡದ ದ್ರಾಕ್ಷೇ ತೋಟಗಳನ್ನೂ ಇಪ್ಪೇತೋಟಗಳನ್ನೂ ನಿನಗೆ ಕೊಡ ಲಾಗಿ ನೀನು ತಿಂದು ತೃಪ್ತಿಯಾದಾಗ ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ನಿನ್ನನ್ನು ಹೊರಗೆ ಬರ ಮಾಡಿದ ಕರ್ತನನ್ನು ಮರೆಯದ ಹಾಗೆ ನೋಡಿ ಕೋ.
- Deuteronomy 32:18 ಧರ್ಮೋಪದೇಶಕಾಂಡ 32:18ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ.
- Psalm 10:4 ಕೀರ್ತನೆಗಳು 10:4ದುಷ್ಟನು ತನ್ನ ಗರ್ವದ ಮುಖದಿಂದ ದೇವರನ್ನು ಹುಡುಕುವದಿಲ್ಲ; ಅವನ ಯೋಚನೆಗಳೆಲ್ಲಾ ದೇವ ರಿಲ್ಲದವುಗಳು.
- Nehemiah 9:35 ನೆಹೆಮೀಯ 9:35ಅವರು ತಮ್ಮ ರಾಜ್ಯದಲ್ಲಿಯೂ ನೀನು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀನು ಅವರಿಗೆ ಕೊಟ್ಟ ವಿಸ್ತಾರ ವಾದ, ರಸವತ್ತಾದ ದೇಶದಲ್ಲಿಯೂ ನಿನ್ನನ್ನು ಸೇವಿಸ ಲಿಲ್ಲ; ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ.
- Hosea 8:4 ಹೋಶೇಯ 8:4ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
- Jeremiah 2:31–32 ಯೆರೆಮೀಯ 2:31–32ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ. ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
- Nehemiah 9:25–26 ನೆಹೆಮೀಯ 9:25–26ಅವರು ಬಲವಾದ ಪಟ್ಟಣ ಗಳನ್ನೂ ರಸವತ್ತಾದ ಭೂಮಿಯನ್ನೂ ತೆಗೆದುಕೊಂಡು ಸಮಸ್ತ ಉತ್ತಮವಾದವುಗಳಿಂದ ತುಂಬಿದ ಮನೆ ಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇ ತೋಟ ಗಳನ್ನೂ ಇಪ್ಪೇತೋಪುಗಳನ್ನೂ ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಬಹಳವಾಗಿ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು ಪುಷ್ಟಿಯಾಗಿ ನಿನ್ನ ದೊಡ್ಡ ಉಪಕಾರದಲ್ಲಿ ಆನಂದಪಟ್ಟರು. ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು.
- Isaiah 17:10 ಯೆಶಾಯ 17:10ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು ನಿನ್ನ ಬಲದ ಬಂಡೆ ಯನ್ನು ನೆನಸದೆ ಇದ್ದದರಿಂದ ನೀನು ರಮ್ಯವಾದ ಗಿಡಗಳನ್ನು ಸಸಿಯನ್ನು ನೆಡುವಿ, ಅಪರೂಪವಾದ ಸಸಿಗಳನ್ನು ಹಾಕುವಿ.
- Hosea 10:1 ಹೋಶೇಯ 10:1ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿ ಸುತ್ತಾನೆ; ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ.
- Hosea 2:13 ಹೋಶೇಯ 2:13ತರುವಾಯ ಅವಳು ನನ್ನನ್ನು ಮರೆತು ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, ಮಿಂಡರ ಹಿಂದೆ ಹೋಗಿ ಬಾಳ್ ದೇವತೆಗಳ ದಿವಸಗಳಲ್ಲಿ ಧೂಪ ಸುಟ್ಟಿದ್ದಕ್ಕೆ ನಾನು ಅವಳನ್ನು ದಂಡಿಸುವೆನು ಎಂದು ಕರ್ತನು ಹೇಳುತ್ತಾನೆ.