Jeremiah · chapter 2 · verse 31
Jeremiah 2:31 in Kannada
ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.
O santatiye, neevu kartana vaakyavannu nodiri; naanu israayelina aranyavaa deno? Kattaleya deshavaadeno? Yaatakke nanna janaru--naavu prabhugalu, innu mele ninna balige endoo baruvadilla endu heluttaare.
Jeremiah 2:31 in English
- King James Version (KJV)
- O generation, see ye the word of the LORD. Have I been a wilderness unto Israel? a land of darkness? wherefore say my people, We are lords; we will come no more unto thee?
- World English Bible (WEB)
- Generation, consider the LORD’s word. Have I been a wilderness to Israel? Or a land of thick darkness? Why do my people say, ‘We have broken loose. We will come to you no more’?
- American Standard Version (ASV)
- O generation, see ye the word of Jehovah. Have I been a wilderness unto Israel? or a land of thick darkness? wherefore say my people, We are broken loose; we will come no more unto thee?
- Bible in Basic English (BBE)
- O generation, see the word of the Lord. Have I been a waste land to Israel? or a land of dark night? why do my people say, We have got loose, we will not come to you again?
- Darby Translation (DBY)
- O generation, mark ye the word of Jehovah. Have I been a wilderness unto Israel, or a land of thick darkness? Wherefore say my people, We have dominion; we will come no more unto thee?
- Webster's Bible (WBS)
- O generation, see ye the word of the LORD. Have I been a wilderness to Israel? a land of darkness? why say my people, We are lords; we will come no more to thee?
- Young's Literal Translation (YLT)
- O generation, see ye the word of Jehovah: A wilderness have I been to Israel? A land of thick darkness? Wherefore have My people said, 'We mourned, We come not in again unto Thee.'
Read in context
- 29ಏಕೆ ನನ್ನ ಸಂಗಡ ವಾದಿಸುತ್ತೀರಿ? ನೀವೆಲ್ಲರು ನನಗೆ ವಿರೋಧವಾಗಿ ದ್ರೋಹಮಾಡಿ ದ್ದೀರಿ ಎಂದು ಕರ್ತನು ಅನ್ನುತ್ತಾನೆ.
- 30ನಾನು ನಿಮ್ಮ ಮಕ್ಕಳನ್ನು ಹೊಡೆದದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತಕ್ಕೊಳ್ಳಲಿಲ್ಲ. ನಿಮ್ಮ ಸ್ವಂತ ಕತ್ತಿಯು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
- 31ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.
- 32ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
- 33ಪ್ರೀತಿಯನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಯಾಕೆ ಚಂದ ಮಾಡಿಕೊಳ್ಳುತ್ತೀ? ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
Cross references
- 2 Samuel 12:7–9 2 ಸಮುವೇಲನು 12:7–9ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು. ಇದು ಸಾಲದೆ ಇದ್ದರೆ ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಕರ್ತನ ದೃಷ್ಟಿಗೆ ಈ ಕೆಟ್ಟಕಾರ್ಯವನ್ನು ಮಾಡುವ ಹಾಗೆ ಆತನ ಆಜ್ಞೆ ಯನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿ ಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡಿ; ಇದಲ್ಲದೆ ಅವನನ್ನು ಅಮ್ಮೋನನ ಮಕ್ಕಳ ಕತ್ತಿಯಿಂದ ಕೊಂದು ಹಾಕಿಸಿದಿ.
- Deuteronomy 32:15 ಧರ್ಮೋಪದೇಶಕಾಂಡ 32:15ಆದರೆ ಯೆಶುರೂನು ಕೊಬ್ಬಿ ಒದ್ದನು, ನೀನು ಕೊಬ್ಬಿದವನಾಗಿ ಉಬ್ಬಿದಿ, ನೀನು ಕೊಬ್ಬಿನಿಂದ ಮುಚ್ಚ ಲ್ಪಟ್ಟಿ. ಅವನು ತನ್ನನ್ನು ಉಂಟುಮಾಡಿದ ದೇವರನ್ನು ತೊರೆದು ತನ್ನ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದನು.
- Deuteronomy 31:20 ಧರ್ಮೋಪದೇಶಕಾಂಡ 31:20ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ ಅವರು ತಿಂದು ತೃಪ್ತಿಯಾಗಿ ಕೊಬ್ಬಿದವ ರಾದಾಗ ಅವರು ಅನ್ಯದೇವರುಗಳ ಕಡೆಗೆ ತಿರುಗಿ ಕೊಂಡು ಅವುಗಳನ್ನು ಸೇವಿಸಿ ನನಗೆ ಕೋಪವನ್ನೆಬ್ಬಿಸಿ ನನ್ನ ಒಡಂಬಡಿಕೆಯನ್ನು ವಿಾರುವರು.
- Proverbs 30:9 ಜ್ಞಾನೋಕ್ತಿಗಳು 30:9ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.
- Jeremiah 2:5–6 ಯೆರೆಮೀಯ 2:5–6ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ? ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.
- Deuteronomy 8:12–14 ಧರ್ಮೋಪದೇಶಕಾಂಡ 8:12–14ನೀನು ತಿಂದು ತೃಪ್ತಿಹೊಂದಿದಾಗಲೂ ಒಳ್ಳೇ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ ನಿನ್ನ ಪಶು ಕುರಿಗಳು ಹೆಚ್ಚಿದಾಗಲೂ ಬೆಳ್ಳಿ ಬಂಗಾರ ನಿನಗೆ ಹೆಚ್ಚಿದಾಗಲೂ ನಿನಗಿರುವಂಥದ್ದೆಲ್ಲಾ ಹೆಚ್ಚಿದಾ ಗಲೂ ನಿನ್ನ ಹೃದಯವು ಉಬ್ಬಿಕೊಳ್ಳದ ಹಾಗೆಯೂ ನಿನ್ನನ್ನು ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ,
- Psalm 12:4 ಕೀರ್ತನೆಗಳು 12:4ಅವರು--ನಮ್ಮ ನಾಲಿಗೆಯಿಂದ ನಾವು ಬಲಗೊಳ್ಳುವೆವು; ನಮ್ಮ ತುಟಿಗಳು ನಮ್ಮವೇ; ನಮಗೆ ಪ್ರಭುವು ಯಾರು ಅನ್ನುತ್ತಾರೆ.
- Malachi 3:9–11 ಮಲಾಕಿಯ 3:9–11ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ. ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Hosea 13:6 ಹೋಶೇಯ 13:6ಅವರ ಆಹಾರದ ಪ್ರಕಾರ ತೃಪ್ತರಾದರು, ಅದರಿಂದ ಅವರ ಹೃದಯಗಳು ಉಬ್ಬಿಕೊಂಡಿತು; ಆದಕಾರಣ ಅವರು ನನ್ನನ್ನು ಮರೆತುಬಿಟ್ಟರು.
- Revelation 3:15–17 ಪ್ರಕಟನೆ 3:15–17ನೀನು ತಣ್ಣಗೂ ಬೆಚ್ಚಗೂ ಅಲ್ಲದಿರುವ ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇರಬೇಕೆಂಬದು ನನ್ನ ಇಷ್ಟವಾಗಿತ್ತು. ಆದರೆ ನೀನು ತಣ್ಣಗಾಗಲಿ ಇಲ್ಲವೆ ಬೆಚ್ಚಗಾಗಲಿ ಇಲ್ಲದೆ ಉಗುರು ಬೆಚ್ಚಗಿರುವದರಿಂದ ನಿನ್ನನ್ನು ನಾನು ನನ್ನ ಬಾಯೊಳಗಿಂದ ಕಾರುವೆನು. ನೀನು--ನಾನು ಐಶ್ವರ್ಯವಂತನು, ಧನವೃದ್ಧಿಯುಳ್ಳವನು, ಯಾವದರ ಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ನಿರ್ಗತಿಕನು, ದರಿದ್ರನು, ಬಡವನು, ಕುರುಡನು, ಬೆತ್ತಲೆಯಾದವನು ಆಗಿರುವ ದನ್ನು ತಿಳಿಯದೆ ಇದ್ದೀ.
- Isaiah 45:19 ಯೆಶಾಯ 45:19ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ; ವ್ಯರ್ಥವಾಗಿ ನನ್ನನ್ನು ಹುಡುಕಿರಿ ಎಂದು ಯಾಕೋಬನ ವಂಶ ದವರಿಗೆ ನಾನು ಹೇಳಲಿಲ್ಲ, ಕರ್ತನಾದ ನಾನೇ ನೀತಿ ಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.
- 1 Corinthians 4:8 1 ಕೊರಿಂಥದವರಿಗೆ 4:8ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಾವಿಲ್ಲದೆ ನೀವು ಅರಸರಂತೆ ಆಳಿದಿರಿ; ನೀವು ಆಳುವಂತೆ ದೇವರು ಮಾಡಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೆವು.