Hosea · chapter 14 · verse 2
Hosea 14:2 in Kannada
ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.
Maatugalannu nimma sangada tegedukondu kartana kadege tirigikondu aatanige--ellaa dushkatyavannu tegedu haaki nammannu krupeyinda sveekarisu; aaga namma tutigala yajnyagalannu ninage arpisuvevu.
Hosea 14:2 in English
- King James Version (KJV)
- Take with you words, and turn to the LORD: say unto him, Take away all iniquity, and receive [us] graciously: so will we render the calves of our lips.
- World English Bible (WEB)
- Take words with you, and return to the LORD. Tell him, “Forgive all our sins, and accept that which is good; so we offer bulls as we vowed of our lips.
- American Standard Version (ASV)
- Take with you words, and return unto Jehovah: say unto him, Take away all iniquity, and accept that which is good: so will we render [as] bullocks [the offering of] our lips.
- Bible in Basic English (BBE)
- Take with you words, and come back to the Lord; say to him, Let there be forgiveness for all wrongdoing, so that we may take what is good, and give in payment the fruit of our lips.
- Darby Translation (DBY)
- Take with you words, and turn to Jehovah; say unto him, Forgive all iniquity, and receive [us] graciously; so will we render the calves of our lips.
- Webster's Bible (WBS)
- Take with you words, and turn to the LORD: say to him, Take away all iniquity, and receive [us] graciously: so will we render the calves of our lips.
- Young's Literal Translation (YLT)
- Take with you words, and turn to Jehovah, Say ye unto Him: 'Take away all iniquity, and give good, And we do render the fruit of our lips.
Read in context
- 1ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ;
- 2ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.
- 3ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ.
- 4ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ.
Cross references
- Hebrews 13:15 ಇಬ್ರಿಯರಿಗೆ 13:15ಆದದರಿಂದ ಆತನ ಮೂಲಕ ವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆ ಬಿಡದೆ ಸಮರ್ಪಿಸೋಣ, ಅಂದರೆ ನಮ್ಮ ತುಟಿಗಳಿಂದ ಆತನ ನಾಮಕ್ಕೆ ಸಲ್ಲಿಸುವ ಸ್ತೋತ್ರಗಳ ಫಲವೇ ಆದಾಗಿದೆ.
- Psalm 51:2–10 ಕೀರ್ತನೆಗಳು 51:2–10ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು. ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ. ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು. ಇಗೋ, ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನು ತಿಳಿಯಮಾಡು. ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು. ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು. ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು. ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು.
- Job 34:31–32 ಯೋಬನು 34:31–32ನಿಶ್ಚಯವಾಗಿ ದೇವರಿಗೆ ಹೇಳತಕ್ಕದ್ದೇನಂದರೆ--ನಾನು ಶಿಕ್ಷೆಯನ್ನು ತಾಳಿದ್ದೇನೆ, ಇನ್ನು ಮೇಲೆ ಕೆಟ್ಟತನ ಮಾಡುವದಿಲ್ಲ. ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
- Job 7:21 ಯೋಬನು 7:21ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ.
- Micah 7:18–19 ಮೀಕ 7:18–19ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- 1 John 3:5 1 ಯೋಹಾನನು 3:5ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಆತನು ಪ್ರತ್ಯಕ್ಷನಾದ ನೆಂಬದು ನಿಮಗೆ ಗೊತ್ತಾಗಿದೆ; ಆತನಲ್ಲಿ ಪಾಪವಿಲ್ಲ.
- Psalm 69:30–31 ಕೀರ್ತನೆಗಳು 69:30–31ದೇವರ ಹೆಸರನ್ನು ಹಾಡುತ್ತಾ ಸ್ತುತಿಸುವೆನು; ಸ್ತೋತ್ರದಿಂದ ಆತನನ್ನು ಘನಪಡಿ ಸುವೆನು. ಅದು ಕರ್ತನಿಗೆ ಕೊಂಬುಗಳೂ ಗೊರಸೆ ಗಳೂ ಉಳ್ಳ ಎಳೇ ಹೋರಿಗಳಿಗಿಂತ ಮೆಚ್ಚಿಕೆಯಾಗಿರು ವದು.
- 2 Samuel 12:13 2 ಸಮುವೇಲನು 12:13ಆಗ ದಾವೀದನು ನಾತಾನನಿಗೆ--ನಾನು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆನು ಅಂದನು. ನಾತಾನನು ದಾವೀದನಿಗೆ--ನೀನು ಸಾಯದಹಾಗೆ ಕರ್ತನು ನಿನ್ನ ಪಾಪವನ್ನು ಪರಿಹರಿಸಿದನು.
- Joel 2:17 ಯೋವೇಲ 2:17ಕರ್ತನ ಸೇವಕರಾದ ಯಾಜಕರು ಅಂಗಳಕ್ಕೂ ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ--ಓ ಕರ್ತನೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ಅವರ ಮೇಲೆ ಆಳುವ ಹಾಗೆ ನಿನ್ನ ಬಾಧ್ಯತೆಯನ್ನು ನಿಂದೆಗೆ ಒಪ್ಪಿಸಬೇಡ; ಅವರ ದೇವರು ಎಲ್ಲಿ ಎಂದು ಅವರು ಜನಗಳಲ್ಲಿ ಯಾಕೆ ಹೇಳಬೇಕು?
- Ezekiel 36:25–26 ಯೆಹೆಜ್ಕೇಲನು 36:25–26ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು. ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
- Luke 18:13 ಲೂಕನು 18:13ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು.
- Hebrews 10:4 ಇಬ್ರಿಯರಿಗೆ 10:4ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ.