Hebrews · chapter 10 · verse 4
Hebrews 10:4 in Kannada
ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ.
Horigala mattu hotagala raktavu paapagalannu tegedu haakuvadu asaadhyavaagide.
Hebrews 10:4 in English
- King James Version (KJV)
- For [it is] not possible that the blood of bulls and of goats should take away sins.
- World English Bible (WEB)
- For it is impossible that the blood of bulls and goats should take away sins.
- American Standard Version (ASV)
- For it is impossible that the blood of bulls and goats should take away sins.
- Bible in Basic English (BBE)
- Because it is not possible for the blood of oxen and goats to take away sins.
- Darby Translation (DBY)
- For blood of bulls and goats [is] incapable of taking away sins.
- Webster's Bible (WBS)
- For [it is] not possible that the blood of bulls and of goats should take away sins.
- Young's Literal Translation (YLT)
- for it is impossible for blood of bulls and goats to take away sins.
Read in context
- 2ತಂದಿದ್ದ ಪಕ್ಷದಲ್ಲಿ ಆ ಯಜ್ಞಗಳ ಸಮರ್ಪಣೆಯು ನಿಂತು ಹೋಗುತ್ತಿತ್ತಲ್ಲಾ. ಯಾಕಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ ಅವರಿಗೆ ಎಂದಿಗೂ ಪಾಪಗಳ ಮನಸ್ಸಾಕ್ಷಿ ಇರುತ್ತಿರಲಿಲ್ಲ.
- 3ಆದರೆ ಪ್ರತಿ ವರುಷವು ಆ ಯಜ್ಞಗಳಲ್ಲಿ ತಿರಿಗಿ ಪಾಪಗಳ ಜ್ಞಾಪಕವಾಗುವದುಂಟು.
- 4ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ.
- 5ಆದದರಿಂದ ಆತನು ಭೂಲೋಕದೊಳಗೆ ಬರುವಾಗ--(ದೇವರೇ,) ಯಜ್ಞವೂ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿಕೊಟ್ಟೀ;
- 6ದಹನ ಬಲಿಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ;
Cross references
- Hebrews 10:11 ಇಬ್ರಿಯರಿಗೆ 10:11ಇದಲ್ಲದೆ ಪ್ರತಿ ಯಾಜಕನು ದಿನಾಲು ಸೇವೆ ಮಾಡುತ್ತಾ ಎಂದಿಗೂ ಪಾಪವನ್ನು ತೆಗೆದು ಹಾಕಲಾರ ದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಅರ್ಪಿಸುತ್ತಾ ನಿಂತುಕೊಂಡಿರುವನು.
- Isaiah 1:11–15 ಯೆಶಾಯ 1:11–15ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ. ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು? ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು. ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
- Micah 6:6–8 ಮೀಕ 6:6–8ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ? ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ? ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
- Romans 11:27 ರೋಮಾಪುರದವರಿಗೆ 11:27ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.
- 1 John 3:5 1 ಯೋಹಾನನು 3:5ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಆತನು ಪ್ರತ್ಯಕ್ಷನಾದ ನೆಂಬದು ನಿಮಗೆ ಗೊತ್ತಾಗಿದೆ; ಆತನಲ್ಲಿ ಪಾಪವಿಲ್ಲ.
- Hebrews 10:8 ಇಬ್ರಿಯರಿಗೆ 10:8ಆಮೇಲೆ ಆತನು--ನ್ಯಾಯಪ್ರಮಾಣದಂತೆ ಅರ್ಪಿಸಲ್ಪಡುವಂಥ ಯಜ್ಞವೂ ಅರ್ಪಣೆಯೂ ದಹನ ಬಲಿಗಳೂ ಪಾಪ ಕ್ಕಾಗಿ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ ಇಲ್ಲವೆ ಅವುಗಳಲ್ಲಿ ನಿನಗೆ ಸಂತೋಷವಿರಲಿಲ್ಲ ಎಂದು ಹೇಳಿ ದ್ದಾನೆ.
- Mark 12:33 ಮಾರ್ಕನು 12:33ಆತನನ್ನು ಪೂರ್ಣ ಹೃದಯದಿಂದಲೂ ಪೂರ್ಣಗ್ರಹಿಕೆಯಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಿ ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸು ವದು ಸಕಲ ದಹನ ಬಲಿಗಳಿಗಿಂತಲೂ ಯಜ್ಞಗಳಿಗಿಂತ ಲೂ ಹೆಚ್ಚಿನದಾಗಿದೆ ಅಂದನು.
- Hosea 6:6 ಹೋಶೇಯ 6:6ನಾನು ಬಲಿಯನ್ನಲ್ಲ ಕರುಣೆಯನ್ನೇ ಮತ್ತು ದಹನ ಬಲಿಗಳಿಗಿಂತ ದೇವರ ತಿಳುವಳಿಕೆಯನ್ನೇ ಹೆಚ್ಚಾಗಿ ಅಪೇಕ್ಷಿಸಿದ್ದೇನೆ.
- John 1:29 ಯೋಹಾನನು 1:29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
- Amos 5:21–22 ಆಮೋಸ 5:21–22ನಿಮ್ಮ ನಿಮ್ಮ ಪರಿಶುದ್ಧ ಸಭೆಗಳನ್ನು ನಾನು ಮೂಸುವದಿಲ್ಲ. ನೀವು ನನಗೆ ದಹನಬಲಿಗಳನ್ನೂ ಆಹಾರ ಅರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವುಗಳನ್ನು ಅಂಗೀ ಕರಿಸುವದಿಲ್ಲ, ಇಲ್ಲವೆ ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನು ಲಕ್ಷಿಸುವದಿಲ್ಲ.
- Psalm 51:16 ಕೀರ್ತನೆಗಳು 51:16ಯಜ್ಞ ವನ್ನು ನೀನು ಇಷ್ಟಪಡುದಿಲ್ಲ. ಇಲ್ಲವಾದರೆ ನಾನು ಅದನ್ನು ಕೊಡುತ್ತಿದ್ದೆನು. ದಹನಬಲಿಯಲ್ಲಿ ನೀನು ಸಂತೋಷಪಡುವದಿಲ್ಲ.
- Hebrews 9:9 ಇಬ್ರಿಯರಿಗೆ 9:9ಆ ಕಾಲಕ್ಕೆ ಅದು ಸಾಮ್ಯವಾಗಿದ್ದು ಆಗ ಸೇವೆ ಮಾಡುವವನಿಗಾಗಿ ಮನಸ್ಸಾಕ್ಷಿಯ ವಿಷಯದಲ್ಲಿ ಸಂಪೂರ್ಣ ಮಾಡಲಾರದ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲ್ಪಡುತ್ತಿದ್ದವು.