Hosea · chapter 14 · verse 6
Hosea 14:6 in Kannada
ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು.
Avana kombegalu haradikondu avana saundaryavu enneya maragala haageyoo avana parimalavu lebanonina haageyoo iruvadu.
Hosea 14:6 in English
- King James Version (KJV)
- His branches shall spread, and his beauty shall be as the olive tree, and his smell as Lebanon.
- World English Bible (WEB)
- His branches will spread, and his beauty will be like the olive tree, and his fragrance like Lebanon.
- American Standard Version (ASV)
- His branches shall spread, and his beauty shall be as the olive-tree, and his smell as Lebanon.
- Bible in Basic English (BBE)
- His branches will be stretched out, he will be beautiful as the olive-tree and sweet-smelling as Lebanon.
- Darby Translation (DBY)
- His shoots shall spread, and his beauty shall be as the olive-tree, and his smell as Lebanon.
- Webster's Bible (WBS)
- His branches shall spread, and his beauty shall be as the olive-tree, and his smell as Lebanon.
- Young's Literal Translation (YLT)
- Go on do his sucklings, And his beauty is as an olive, And he hath fragrance as Lebanon.
Read in context
- 4ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ.
- 5ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು.
- 6ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು.
- 7ಆತನ ನೆರಳಿನಲ್ಲಿ ವಾಸಿಸುವವರು ಹಿಂತಿರುಗುವರು; ಧಾನ್ಯದ ಹಾಗೆ ಉಜ್ಜೀವಿಸುವರು; ದ್ರಾಕ್ಷೆಯ ಬಳ್ಳಿಯ ಹಾಗೆ ಬೆಳೆಯು ವರು. ಅವನ ಸುವಾಸನೆಯು ಲೆಬನೋನಿನ ದ್ರಾಕ್ಷಾ ರಸದ ಹಾಗೆ ಇರುವದು.
- 8ಎಫ್ರಾಯಾಮೇ--ನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ. ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದು.ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
Cross references
- Psalm 52:8 ಕೀರ್ತನೆಗಳು 52:8ಆದರೆ ನಾನು ದೇವರ ಆಲಯದಲ್ಲಿರುವ ಹಸು ರಾದ ಇಪ್ಪೇ ಮರದಹಾಗೆ ಇದ್ದೇನೆ. ದೇವರ ಕರು ಣೆಯಲ್ಲಿ ಯುಗಯುಗಾಂತರಗಳಲ್ಲಿಯೂ ನಾನು ಭರವಸವಿಟ್ಟಿದ್ದೇನೆ.ನಾನು ಎಂದೆಂದಿಗೂ ನಿನ್ನನ್ನು ಕೊಂಡಾಡುವೆನು; ನೀನು ಅದನ್ನು ಮಾಡಿದಿ; ನಿನ್ನ ಹೆಸರನ್ನು ನಿರೀಕ್ಷಿಸುವೆನು; ನಿನ್ನ ಪರಿಶುದ್ಧರ ಮುಂದೆ ಅದು ಒಳ್ಳೇದಾಗಿದೆ.
- Psalm 128:3 ಕೀರ್ತನೆಗಳು 128:3ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು.
- Romans 11:16–24 ರೋಮಾಪುರದವರಿಗೆ 11:16–24ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ. ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ. ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ. ಈ ಮಾತಿಗೆ--ನಾನು ಕಸಿಕಟ್ಟಿಸಿ ಕೊಳ್ಳುವಂತೆ ಕೊಂಬೆಗಳು ಮುರಿದು ಹಾಕಲ್ಪಟ್ಟವಲ್ಲಾ ಎಂದು ನೀನು ಹೇಳುವಿ. ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು; ದೇವರು ಹುಟ್ಟು ಕೊಂಬೆಗಳನ್ನು ಉಳಿಸದೆಯಿದ್ದ ಮೇಲೆ ನಿನ್ನನ್ನೂ ಉಳಿಸು ವದಿಲ್ಲ. ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ. ಅವರು ಕೂಡ ಇನ್ನು ಅಪ ನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ಯಾಕಂದರೆ ದೇವರು ಅವರನ್ನು ತಿರಿಗಿ ದೇವರು ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ. ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ.
- Philippians 4:18 ಫಿಲಿಪ್ಪಿಯವರಿಗೆ 4:18ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ
- Ezekiel 31:3–10 ಯೆಹೆಜ್ಕೇಲನು 31:3–10ಇಗೋ, ಅಶ್ಶೂರ್ಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವ ದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಎತ್ತರವು ನೀಳವಾಗಿದೆ; ಅದರ ತುದಿಯು ದಟ್ಟವಾದ ಕೊಂಬೆಗಳ ಮಧ್ಯದಲ್ಲಿತ್ತು. ನೀರು ಅದನ್ನು ಬೆಳೆಸಿತು, ಅಗಾಧವು ತನ್ನ ನದಿಗಳನ್ನು ಅದರ ಸುತ್ತಲೂ ಹರಿಸಿ ತನ್ನ ಕಾಲುವೆಗಳನ್ನು ಬಯಲಿನ ಮರಗಳಿಗೆಲ್ಲಾ ಕಳುಹಿಸಿ, ಅದನ್ನು ಎತ್ತರವಾಗಿ ಬೆಳೆಯುವಂತೆ ಮಾಡಿತು. ಆದ ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರ ಗಳಿಗಿಂತ ಎತ್ತರವಾಗಿತ್ತು; ಅದು ಹಬ್ಬಿದ್ದದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು. ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು; ಅದರ ರೆಂಬೆ ಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮಕೊಟ್ಟವು; ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು. ಹೀಗೆ ಅವನು ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ಕೊಂಬೆಗಳ ಉದ್ದದಲ್ಲಿ ಸುಂದರವಾಗಿದ್ದನು; ಯಾಕಂದರೆ ಅವನ ಬೇರು ಮಹಾ ನೀರಿನಿಂದಾಗಿತ್ತು. ದೇವರ ತೋಟದ ದೇವದಾರುಗಳು ಅವನನ್ನು ಮರೆಮಾಡಲಿಲ್ಲ; ತುರಾಯಿ ಮರಗಳು ಅವನ ಕೊಂಬೆಗಳಿಗೆ ಸಮ ವಾಗಲಿಲ್ಲ; ಆಲದ ಮರಗಳು ಅವನ ರೆಂಬೆಗಳಷ್ಟೂ ಇಲ್ಲ; ಆ ದೇವರ ತೋಟದ ಯಾವುದೇ ಮರವು ಇವನ ಸೌಂದರ್ಯಕ್ಕೆ ಸಮವಾಗಲಿಲ್ಲ. ನಾನು ಅವನನ್ನು ಅವನ ಕೊಂಬೆಗಳ ಸಮೂಹದಿಂದ ಸೌಂದರ್ಯಪಡಿಸಿದೆನು; ಅದರಿಂದ ದೇವರ ತೋಟ ದಲ್ಲಿನ ಏದೆನಿನ ಮರಗಳೆಲ್ಲಾ ಅವನ ಮೇಲೆ ಹೊಟ್ಟೇ ಕಿಚ್ಚುಪಟ್ಟವು. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಯಾಕಂದರೆ ನೀನು ನೀಳದಲ್ಲಿ ಎತ್ತರವಾಗಿ ಅವನು ತನ್ನ ತಲೆಯನ್ನು ಒತ್ತಿಕೊಂಡಿರುವ ಕೊಂಬೆಗಳ ಕಡೆಗೆ ಚಾಚಿದ ಕಾರಣದಿಂದ ಅವನ ಹೃದಯವು ತನ್ನ ಎತ್ತರದಲ್ಲಿ ಹೆಚ್ಚಿಸಲ್ಪಟ್ಟಿದೆ.
- Daniel 4:10–15 ದಾನಿಯೇಲನು 4:10–15ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು. ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು. ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು. ನನ್ನ ಹಾಸಿಗೆಯ ಮೇಲೆ ನನ್ನ ಮನಸ್ಸಿನ ದರ್ಶನ ಗಳನ್ನು ನಾನು ನೋಡಲಾಗಿ; ಇಗೋ, ಒಬ್ಬ ಪಾಲಕನು ಮತ್ತು ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು. ಅವನು ಗಟ್ಟಿಯಾಗಿ ಕೂಗಿ--ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ. ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ.
- Genesis 27:27 ಆದಿಕಾಂಡ 27:27ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ--ಇಗೋ, ನನ್ನ ಮಗನ ವಾಸನೆಯು ಯೆಹೋವನು ಆಶೀರ್ವದಿಸಿದ ಹೊಲದ ವಾಸನೆಯಂತಿದೆ.
- Matthew 13:31 ಮತ್ತಾಯನು 13:31ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ.
- Jeremiah 11:16 ಯೆರೆಮೀಯ 11:16ಸೌಂದರ್ಯವಾದ ಒಳ್ಳೇ ಹಣ್ಣುಗಳುಳ್ಳ ಹಸುರಾದ ಇಪ್ಪೇ ಗಿಡವೆಂದು ಕರ್ತನು ನಿನಗೆ ಹೆಸ ರಿಟ್ಟನು; ದೊಡ್ಡ ಗದ್ದಲದಿಂದ ಅದರ ಮೇಲೆ ಬೆಂಕಿ ಹತ್ತಿಸಿದ್ದಾನೆ ಅದರ ಕೊಂಬೆಗಳು ಮುರಿದು ಹೋಗಿವೆ.
- 2 Corinthians 2:14–15 2 ಕೊರಿಂಥದವರಿಗೆ 2:14–15ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವ ದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನ ವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ; ರಕ್ಷಣೆ ಹೊಂದಿದವರಲ್ಲಿಯೂ ನಾಶವಾಗುವವರಲ್ಲಿಯೂ ನಾವು ದೇವರಿಗಾಗಿ ಕ್ರಿಸ್ತನ ಪರಿಮಳವಾಗಿದ್ದೇವೆ.
- Song of Solomon 4:11–15 ಪರಮಗೀತೆ 4:11–15ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ. ನನ್ನ ಸಹೋದರಿಯು, ಪತ್ನಿಯು, ಮುಚ್ಚಲ್ಪಟ್ಟ ತೋಟವೂ ಮುಚ್ಚಲ್ಪಟ್ಟ ಒರತೆಯೂ ಮುದ್ರೆ ಹಾಕಲ್ಪಟ್ಟ ಬುಗ್ಗೆಯೂ ಆಗಿದ್ದಾಳೆ. ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ. ಜಟಾಮಾಂಸಿಯೂ-- ಕೇಸರಿಯೂ ಬಜೆಯೂ ಲವಂಗವೂ ಎಲ್ಲಾ ಸಾಂಬ್ರಾಣಿ ಗಿಡಗಳೂ ರಕ್ತಬೋಳವೂ ಅಗರೂ ಸಮಸ್ತ ಮುಖ್ಯವಾದ ಸುಗಂಧದ್ರವ್ಯ ಗಳೂ ತೋಟಗಳ ಬುಗ್ಗೆಯೂ ಜೀವಜಲಗಳ ಬಾವಿಯೂ ಲೆಬನೋನಿನಿಂದ ಹರಿಯುವ ಕಾಲುವೆ ಗಳೂ ನಿನ್ನಲ್ಲಿ ಇವೆ.ಓ ಉತ್ತರ ಗಾಳಿಯೇ, ಎಚ್ಚರವಾಗು! ದಕ್ಷಿಣ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು; ಅದರ ಸುಗಂಧಗಳು ಹರಿಯಲಿ. ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ರಮ್ಯವಾದ ಫಲಗ ಳನ್ನು ತಿನ್ನಲಿ.
- Psalm 80:9–11 ಕೀರ್ತನೆಗಳು 80:9–11ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು. ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು. ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.