Psalms · chapter 80 · verse 9
Psalm 80:9 in Kannada
ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು.
Adara munde sthala siddhamaadidi; aaga adu beroori deshavannu tumbitu.
Psalm 80:9 in English
- King James Version (KJV)
- Thou preparedst [room] before it, and didst cause it to take deep root, and it filled the land.
- World English Bible (WEB)
- You cleared the ground for it. It took deep root, and filled the land.
- American Standard Version (ASV)
- Thou preparedst [room] before it, And it took deep root, and filled the land.
- Bible in Basic English (BBE)
- You made ready a place for it, so that it might take deep root, and it sent out its branches over all the land.
- Darby Translation (DBY)
- Thou preparedst space before it, and it took deep root, and filled the land;
- Webster's Bible (WBS)
- Thou preparedst [room] before it, and didst cause it to take deep root, and it filled the land.
- Young's Literal Translation (YLT)
- Thou hast looked before it, and dost root it, And it filleth the land,
Read in context
- 7ಸೈನ್ಯಗಳ ಓ ದೇವರೇ, ನೀನು ನಮ್ಮನ್ನು ಮತ್ತೆ ತಿರಿಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
- 8ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ.
- 9ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು.
- 10ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು.
- 11ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.
Cross references
- Joshua 24:12 ಯೆಹೋಶುವ 24:12ಇದಲ್ಲದೆ ನಾನು ನಿಮ್ಮ ಮುಂದೆ ಕಡಜದ ಹುಳಗಳನ್ನು ಕಳು ಹಿಸಿದೆನು. ಅವು ಅವರನ್ನೂ ಅಮೋರಿಯರ ಇಬ್ಬರು ಅರಸುಗಳನ್ನೂ ಓಡಿಸಿಬಿಟ್ಟವು; ನಿಮ್ಮ ಕತ್ತಿ, ಬಿಲ್ಲುಗ ಳಿಂದಲ್ಲ.
- Exodus 23:28–30 ವಿಮೋಚನಕಾಂಡ 23:28–30ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳುಹಿಸುವೆನು. ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿ ಸಿಕೊಳ್ಳುವ ವರೆಗೆ ಸ್ವಲ್ಪಸ್ವಲ್ಪವಾಗಿ ಹೊರಡಿಸುವೆನು.
- Isaiah 27:6 ಯೆಶಾಯ 27:6ಮುಂದಿನ ಕಾಲದಲ್ಲಿ ಯಾಕೋಬು ಬೇರೂರಿ ಇಸ್ರಾ ಯೇಲು ಹೂ ಅರಳಿ ಚಿಗುರುವದು ಮತ್ತು ಭೂಲೋ ಕದ ಮೇಲ್ಭಾಗವನ್ನು ಫಲದಿಂದ ತುಂಬಿಸುವನು.
- Psalm 105:44 ಕೀರ್ತನೆಗಳು 105:44ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
- 1 Kings 4:20 1 ಅರಸುಗಳು 4:20ಯೆಹೂದ ಮತ್ತು ಇಸ್ರಾಯೇಲ್ಯರು ತಿನ್ನುತ್ತಾ ಕುಡಿಯುತ್ತಾ ಸಂತೋಷಪಡುತ್ತಾ ಸಮುದ್ರದ ಬಳಿಯಲ್ಲಿರುವ ಮರಳಿನ ಹಾಗೆ ಹೆಚ್ಚಾಗಿದ್ದರು.
- Isaiah 37:31 ಯೆಶಾಯ 37:31ಯೆಹೂದನ ಮನೆತನದಿಂದ ತಪ್ಪಿಸಿ ಕೊಂಡು ಉಳಿದವರು ತಿರುಗಿ ಕೆಳಗೆ ಬೇರೂರಿ ಮೇಲಕ್ಕೆ ಫಲಫಲಿಸುವರು.
- 1 Chronicles 27:23–24 1 ಪೂರ್ವಕಾಲವೃತ್ತಾಂತ 27:23–24ಆದರೆ ದಾವೀದನು ಇಪ್ಪತ್ತು ವರುಷಗಳೊಳಗೆ ಇದ್ದವರ ಲೆಕ್ಕತಕ್ಕೊಳ್ಳಲಿಲ್ಲ. ಯಾಕಂದರೆ ಇಸ್ರಾ ಯೇಲ್ಯರನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನೆಂದು ಕರ್ತನು ಹೇಳಿದ್ದನು. ಚೆರೂಯಳ ಮಗನಾದ ಯೋವಾಬನು ಎಣಿಸಲು ಆರಂಭಿ ಸಿದನು; ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ರೌದ್ರವು ಬಂದದ್ದರಿಂದ ಅವನು ಪೂರ್ತಿ ಗೊಳಿಸಲಿಲ್ಲ; ಆ ಲೆಕ್ಕವು ಅರಸನಾದ ದಾವೀದನ ವೃತಾಂತಗಳ ಪುಸ್ತಕದಲ್ಲಿ ಸೇರಲಿಲ್ಲ.
- 1 Kings 4:25 1 ಅರಸುಗಳು 4:25ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೆಲಿನಲ್ಲಿರುವ ಪ್ರತಿ ಮನು ಷ್ಯನು ತನ್ನ ದ್ರಾಕ್ಷೇ ಗಿಡದ ಕೆಳಗೂ ತನ್ನ ಅಂಜೂರ ಗಿಡದ ಕೆಳಗೂ ಭರವಸದಿಂದ ವಾಸವಾಗಿದ್ದನು.
- Joshua 23:13–15 ಯೆಹೋಶುವ 23:13–15ನಿಮ್ಮ ದೇವರಾದ ಕರ್ತನು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿ ಬಿಡುವದಿಲ್ಲ. ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದೊಳಗಿಂದ ನೀವು ನಾಶವಾಗುವ ವರೆಗೂ ಅವರು ನಿಮಗೆ ಉರುಲಾಗಿಯೂ ಬೋನಾ ಗಿಯೂ ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯ ವಾಗಿ ತಿಳಿದುಕೊಳ್ಳುವಿರಿ. ಇಗೋ, ನಾನು ಇಂದು ಭೂಲೋಕದವರೆಲ್ಲರ ಮಾರ್ಗವಾಗಿ ಹೋಗುತ್ತೇನೆ. ನಿಮ್ಮ ದೇವರಾದ ಕರ್ತನು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೇ ಮಾತುಗಳಲ್ಲಿ ಒಂದು ಮಾತಾದರೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ; ಅವು ಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು. ಈಗ ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಒಳ್ಳೇ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ ಹಾಗೆಯೇ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನು ನೀವು ವಿಾರಿ, ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಕರ್ತನು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವನು.ಕರ್ತನ ಕೋಪವು ನಿಮ್ಮ ಮೇಲೆ ಉರಿಯುವದು; ಆತನು ನಿಮಗೆ ಕೊಟ್ಟ ಒಳ್ಳೇ ದೇಶದಿಂದ ನೀವು ಬೇಗನೆ ನಾಶವಾಗಿ ಹೋಗುವಿರಿ ಅಂದನು.
- Nehemiah 9:22–25 ನೆಹೆಮೀಯ 9:22–25ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು. ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿ ಅವರು ಸ್ವಾಧೀನಮಾಡಿಕೊಳ್ಳಲು ಹೋಗುವರೆಂದು ನೀನು ಅವರ ಪಿತೃಗ ಳಿಗೆ ವಾಗ್ದಾನಮಾಡಿದ ದೇಶದಲ್ಲಿ ಅವರನ್ನು ಬರಮಾಡಿದಿ; ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ. ಅವರು ಬಲವಾದ ಪಟ್ಟಣ ಗಳನ್ನೂ ರಸವತ್ತಾದ ಭೂಮಿಯನ್ನೂ ತೆಗೆದುಕೊಂಡು ಸಮಸ್ತ ಉತ್ತಮವಾದವುಗಳಿಂದ ತುಂಬಿದ ಮನೆ ಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇ ತೋಟ ಗಳನ್ನೂ ಇಪ್ಪೇತೋಪುಗಳನ್ನೂ ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಬಹಳವಾಗಿ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು ಪುಷ್ಟಿಯಾಗಿ ನಿನ್ನ ದೊಡ್ಡ ಉಪಕಾರದಲ್ಲಿ ಆನಂದಪಟ್ಟರು.
- 1 Chronicles 21:5 1 ಪೂರ್ವಕಾಲವೃತ್ತಾಂತ 21:5ಕತ್ತಿಯನ್ನು ಹಿಡಿಯುವ ಸಮಸ್ತ ಇಸ್ರಾಯೇಲ್ಯರು ಹನ್ನೊಂದು ಲಕ್ಷಜನರಾಗಿದ್ದರು; ಕತ್ತಿಯನ್ನು ಹಿಡಿಯುವ ಯೆಹೂದದ ಜನರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಜನರಾಗಿದ್ದರು.
- Jeremiah 12:2 ಯೆರೆಮೀಯ 12:2ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.