Hosea · chapter 5 · verse 7
Hosea 5:7 in Kannada
ದ್ರೋಹದಿಂದ ಅವರು ಕರ್ತನಿಗೆ ವಿರುದ್ಧವಾಗಿ ನಡೆಸಿದ್ದಾರೆ. ಯಾಕಂದರೆ ಅವರು ಅನ ್ಯಮಕ್ಕಳನ್ನು ಪಡೆದಿದ್ದಾರೆ. ಈಗ ತಿಂಗಳು ತಮ್ಮ ಪಾಲು ಗಳೊಂದಿಗೆ ಅವರನ್ನು ನುಂಗಿ ಬಿಡುವದು.
Drohadinda avaru kartanige viruddhavaagi nadesiddaare. Yaakandare avaru ana ్yamakkalannu padediddaare. Eega tingalu tamma paalu galondige avarannu nungi biduvadu.
Hosea 5:7 in English
- King James Version (KJV)
- They have dealt treacherously against the LORD: for they have begotten strange children: now shall a month devour them with their portions.
- World English Bible (WEB)
- They are unfaithful to the LORD; for they have borne illegitimate children. Now the new moon will devour them with their fields.
- American Standard Version (ASV)
- They have dealt treacherously against Jehovah; for they have borne strange children: now shall the new moon devour them with their fields.
- Bible in Basic English (BBE)
- They have been false to the Lord; they have given birth to strange children; now the new moon will make them waste with their fields.
- Darby Translation (DBY)
- They have dealt treacherously against Jehovah; for they have begotten strange children: now shall the new moon devour them, with their allotted possessions.
- Webster's Bible (WBS)
- They have dealt treacherously against the LORD: for they have begotten strange children: now shall a month devour them with their portions.
- Young's Literal Translation (YLT)
- Against Jehovah they dealt treacherously, For strange sons they have begotten, Now consume them doth a month [with] their portions.
Read in context
- 5ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ. ಆದದರಿಂದ ಇಸ್ರಾಯೇಲು ಮತ್ತು ಎಫ್ರಾಯಾಮು ತಮ್ಮ ಕೆಟ್ಟ ತನದಲ್ಲಿ ಬೀಳುವವು. ಯೆಹೂದವು ಅವರೊಂದಿಗೆ ಬೀಳುವದು.
- 6ಅವರು ಕರ್ತನನ್ನು ಹುಡುಕುವದಕ್ಕೆ ಅವರ ಮಂದೆಗಳೊಂದಿಗೂ ಹಿಂಡುಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡ ಕಾರಣ ಅವರು ಆತನನ್ನು ಕಾಣುವದೇ ಇಲ್ಲ.
- 7ದ್ರೋಹದಿಂದ ಅವರು ಕರ್ತನಿಗೆ ವಿರುದ್ಧವಾಗಿ ನಡೆಸಿದ್ದಾರೆ. ಯಾಕಂದರೆ ಅವರು ಅನ ್ಯಮಕ್ಕಳನ್ನು ಪಡೆದಿದ್ದಾರೆ. ಈಗ ತಿಂಗಳು ತಮ್ಮ ಪಾಲು ಗಳೊಂದಿಗೆ ಅವರನ್ನು ನುಂಗಿ ಬಿಡುವದು.
- 8ಗಿಬ್ಯದಲ್ಲಿ ಕೊಂಬನ್ನೂ ರಾಮದಲ್ಲಿ ತುತೂರಿ ಯನ್ನೂದಿರಿ; ಓ ಬೆನ್ಯಾವಿಾನೇ ನಿನ್ನ ಹಿಂದೆ ಬೆತಾ ವೇನಿನಲ್ಲಿ ಗಟ್ಟಿಯಾಗಿ ಕೂಗು;
- 9ಎಫ್ರಾಯಾಮು ಗದರಿಸುವ ದಿನದಲ್ಲೇ ಹಾಳಾಗುವದು. ಇಸ್ರಾಯೇ ಲಿನ ಗೋತ್ರಗಳಲ್ಲಿ ನಾನು ನಿಜವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
Cross references
- Hosea 6:7 ಹೋಶೇಯ 6:7ಆದರೆ ಅವರು ಒಡಂಬಡಿಕೆಯನ್ನು ವಿಾರಿದ ಮನುಷ್ಯರ ಹಾಗೆ ಇದ್ದಾರೆ; ಅಲ್ಲಿ ಅವರು ನನಗೆ ವಿರುದ್ಧವಾಗಿ ದ್ರೋಹದಿಂದ ನಡೆದುಕೊಂಡಿದ್ದಾರೆ.
- Isaiah 48:8 ಯೆಶಾಯ 48:8ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.
- Jeremiah 3:20 ಯೆರೆಮೀಯ 3:20ನಿಶ್ಚಯವಾಗಿ ಹೆಂಡತಿಯು ತನ್ನ ಗಂಡನನ್ನು ವಂಚಿಸಿ ಬಿಡುವ ಪ್ರಕಾರ ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ ಎಂದು ಕರ್ತನು ಅನ್ನುತ್ತಾನೆ.
- Ezekiel 12:28 ಯೆಹೆಜ್ಕೇಲನು 12:28ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.
- Hosea 2:4 ಹೋಶೇಯ 2:4ಅವಳ ಮಕ್ಕಳನ್ನು ಸಹ ಕರುಣಿಸುವದಿಲ್ಲ; ಅವರು ಸೂಳೆತನದಿಂದಾದ ಮಕ್ಕಳೇ,
- Psalm 144:11 ಕೀರ್ತನೆಗಳು 144:11ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ.
- Psalm 144:7 ಕೀರ್ತನೆಗಳು 144:7ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು.
- Malachi 2:11–15 ಮಲಾಕಿಯ 2:11–15ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ. ಇದನ್ನು ಮಾಡುವ ಮನುಷ್ಯನನ್ನು ಅಂದರೆ, ಯಜಮಾನನನ್ನು ಜ್ಞಾನಿಯನ್ನು ಸೈನ್ಯಗಳ ಕರ್ತನಿಗೆ ಕಾಣಿಕೆ ಅರ್ಪಿಸುವ ವನನ್ನು ಕರ್ತನು ಯಾಕೋಬಿನ ಗುಡಾರಗಳೊಳಗಿಂದ ತೆಗೆದುಬಿಡುವನು. ನೀವು ತಿರಿಗಿ ಇದನ್ನು ಮಾಡಿ ದ್ದೀರಿ, ಕರ್ತನ ಬಲಿಪೀಠಗಳನ್ನು ಕಣ್ಣೀರುಗಳಿಂದಲೂ ಅಳುವಿಕೆಯಿಂದಲೂ ಕೂಗುವಿಕೆಯಿಂದಲೂ ಮುಚ್ಚಿ ದ್ದೀರಿ; ಆದದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷ್ಯ ಮಾಡದೆ ಅದನ್ನು ಮೆಚ್ಚಿಕೆಯಾದದ್ದೆಂದು ನಿಮ್ಮ ಕೈಯಿಂದ ಅಂಗೀಕರಿಸುವದಿಲ್ಲ. ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ. ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ,
- Isaiah 59:13 ಯೆಶಾಯ 59:13ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ.
- Zechariah 11:8 ಜೆಕರ್ಯ 11:8ಇದಲ್ಲದೆ ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು; ನನ್ನ ಆತ್ಮವು ಅವರನ್ನು ಹೇಸಿಕೊಂಡಿತು; ಅವರ ಆತ್ಮವು ಸಹ ನನ್ನನ್ನು ಹೇಸಿ ಕೊಂಡಿತು.
- Jeremiah 5:11 ಯೆರೆಮೀಯ 5:11ಇಸ್ರಾಯೇಲ್ಯನ ಮನೆತನದವರೂ ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾ ರೆಂದು ಕರ್ತನು ಅನ್ನುತ್ತಾನೆ.
- Hosea 2:11 ಹೋಶೇಯ 2:11ನಾನು ಅವಳ ಉಲ್ಲಾಸವನ್ನೆಲ್ಲಾ ಅಂದರೆ ಅವಳ ಹಬ್ಬ ಅವಳ ಅಮಾವಾಸ್ಯೆ ಅವಳ ಸಬ್ಬತ್ತು ಅವಳ ಪರಿಶುದ್ಧ ಹಬ್ಬಗಳನ್ನೆಲ್ಲಾ ನಿಲ್ಲಿಸಿಬಿಡುವೆನು.