Malachi · chapter 2 · verse 11
Malachi 2:11 in Kannada
ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ.
Yehoodavu vanchaneyaagi nadedukondide; israayelina lliyoo yeroosaleminalliyoo asahyavaadaddannu maadide. Kartanu preeti maadida parishuddhavaa daddannu yehoodavu apavitramaadi anya devara magalannu maduve maadikondide.
Malachi 2:11 in English
- King James Version (KJV)
- Judah hath dealt treacherously, and an abomination is committed in Israel and in Jerusalem; for Judah hath profaned the holiness of the LORD which he loved, and hath married the daughter of a strange god.
- World English Bible (WEB)
- Judah has dealt treacherously, and an abomination is committed in Israel and in Jerusalem; for Judah has profaned the holiness of the LORD which he loves, and has married the daughter of a foreign god.
- American Standard Version (ASV)
- Judah hath dealt treacherously, and an abomination is committed in Israel and in Jerusalem; for Judah hath profaned the holiness of Jehovah which he loveth, and hath married the daughter of a foreign god.
- Bible in Basic English (BBE)
- Judah has been acting falsely, and a disgusting thing has been done in Jerusalem; for Judah has made unclean the holy place of the Lord which is dear to him, and has taken as his wife the daughter of a strange god.
- Darby Translation (DBY)
- Judah hath dealt unfaithfully, and an abomination is committed in Israel and in Jerusalem; for Judah hath profaned the sanctuary of Jehovah which he loved, and hath married the daughter of a strange god.
- Webster's Bible (WBS)
- Judah hath dealt treacherously, and an abomination is committed in Israel and in Jerusalem; for Judah hath profaned the holiness of the LORD whom he loved, and hath married the daughter of a strange god.
- Young's Literal Translation (YLT)
- Dealt treacherously hath Judah, And abomination hath been done in Israel, and in Jerusalem, For polluted hath Judah the holy thing of Jehovah, That He hath loved, and hath married the daughter of a strange god.
Read in context
- 9ಆದದರಿಂದ ನೀವು ನನ್ನ ಮಾರ್ಗಗಳನ್ನು ಕೈಕೊಳ್ಳದೆ, ನನ್ನ ನ್ಯಾಯ ಪ್ರಮಾಣದ ವಿಷಯವಾಗಿ ಮುಖದಾಕ್ಷಿಣ್ಯ ತೋರಿಸಿದ ಪ್ರಕಾರವೇ ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆ ಮಾಡಲ್ಪಟ್ಟ ವರನ್ನಾಗಿಯೂ ನೀಚರನ್ನಾಗಿಯೂ ಮಾಡಿದ್ದೇನೆ.
- 10ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ?
- 11ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ.
- 12ಇದನ್ನು ಮಾಡುವ ಮನುಷ್ಯನನ್ನು ಅಂದರೆ, ಯಜಮಾನನನ್ನು ಜ್ಞಾನಿಯನ್ನು ಸೈನ್ಯಗಳ ಕರ್ತನಿಗೆ ಕಾಣಿಕೆ ಅರ್ಪಿಸುವ ವನನ್ನು ಕರ್ತನು ಯಾಕೋಬಿನ ಗುಡಾರಗಳೊಳಗಿಂದ ತೆಗೆದುಬಿಡುವನು.
- 13ನೀವು ತಿರಿಗಿ ಇದನ್ನು ಮಾಡಿ ದ್ದೀರಿ, ಕರ್ತನ ಬಲಿಪೀಠಗಳನ್ನು ಕಣ್ಣೀರುಗಳಿಂದಲೂ ಅಳುವಿಕೆಯಿಂದಲೂ ಕೂಗುವಿಕೆಯಿಂದಲೂ ಮುಚ್ಚಿ ದ್ದೀರಿ; ಆದದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷ್ಯ ಮಾಡದೆ ಅದನ್ನು ಮೆಚ್ಚಿಕೆಯಾದದ್ದೆಂದು ನಿಮ್ಮ ಕೈಯಿಂದ ಅಂಗೀಕರಿಸುವದಿಲ್ಲ.
Cross references
- 2 Corinthians 6:14–18 2 ಕೊರಿಂಥದವರಿಗೆ 6:14–18ನೀವು ಅವಿಶ್ವಾಸಿಗಳೊಂದಿಗೆ ಸೇರಿ ಸಮವಲ್ಲದ ನೊಗವನ್ನು ಹೊರಬೇಡಿರಿ; ಯಾಕಂದರೆ ಅನೀತಿಯ ಕೂಡ ನೀತಿಗೆ ಅನ್ಯೋನ್ಯತೆ ಏನು? ಕತ್ತಲೆಯ ಕೂಡ ಬೆಳಕಿಗೆ ಐಕ್ಯವೇನು? ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು? ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ. ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
- Ezra 9:1–2 ಎಜ್ರನು 9:1–2ಇವುಗಳಾದ ತರುವಾಯ ಪ್ರಧಾನರು ನನ್ನ ಬಳಿಗೆ ಬಂದು--ಇಸ್ರಾಯೇಲ್ ಜನರೂ ಯಾಜಕರೂ ಲೇವಿಯರೂ ದೇಶಗಳ ಜನ ಗಳೊಳಗಿಂದ ತಮ್ಮನ್ನು ಪ್ರತ್ಯೇಕಿಸದೆ ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸ್ಯರು, ಅಮ್ಮೋ ನ್ಯರು, ಮೋವಾಬ್ಯರು, ಐಗುಪ್ತ್ಯರು, ಅಮೋರಿಯರು ಇವರ ಅಸಹ್ಯಗಳ ಪ್ರಕಾರ ಮಾಡುತ್ತಾ ಇದ್ದಾರೆ. ಏನಂದರೆ, ಅವರು ತಮಗೂ ತಮ್ಮ ಕುಮಾರರಿಗೂ ಅವರ ಕುಮಾರ್ತೆಯರನ್ನು ತಕ್ಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ; ನಿಶ್ಚಯವಾಗಿ ಪ್ರಧಾನರ, ಅಧಿಕಾರಸ್ಥರ ಕೈ ಈ ಅಕೃತ್ಯದಲ್ಲಿ ಮುಖ್ಯವಾಗಿದೆ ಎಂದು ಹೇಳಿದರು.
- Deuteronomy 7:3–6 ಧರ್ಮೋಪದೇಶಕಾಂಡ 7:3–6ಇಲ್ಲವೆ ಅವರ ಸಂಗಡ ಮದುವೆಮಾಡಿ ಕೊಳ್ಳಬಾರದು; ನಿನ್ನ ಕುಮಾರ್ತೆಯನ್ನು ಅವನ ಮಗ ನಿಗೆ ಕೊಡಬಾರದು. ನಿನ್ನ ಕುಮಾರನಿಗೆ ಅವನ ಕುಮಾರ್ತೆಯನ್ನು ತಕ್ಕೊಳ್ಳಬಾರದು. ಯಾಕಂದರೆ ಅವರು ಬೇರೆ ದೇವರುಗಳನ್ನು ನಿನ್ನ ಕುಮಾರರು ಸೇವಿಸುವ ಹಾಗೆ ನನ್ನಿಂದ ತೊಲಗಿಸಾರು. ಆಗ ಕರ್ತನ ಕೋಪವು ನಿಮ್ಮ ಮೇಲೆ ಉರಿಯಲು ಆತನು ನಿನ್ನನ್ನು ಬೇಗ ನಾಶಮಾಡಿಯಾನು. ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ.
- Revelation 21:8 ಪ್ರಕಟನೆ 21:8ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- Leviticus 20:26 ಯಾಜಕಕಾಂಡ 20:26ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ್ದ ಕರ್ತನಾದ ನಾನು ಪರಿಶುದ್ಧನಾಗಿರುವದರಿಂದ ನೀವು ನನಗೆ ಪರಿಶುದ್ಧ ರಾಗಿರಬೇಕು.ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.
- Exodus 19:5–6 ವಿಮೋಚನಕಾಂಡ 19:5–6ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- Nehemiah 13:23–29 ನೆಹೆಮೀಯ 13:23–29ಆ ದಿವಸಗಳಲ್ಲಿ ಅಮ್ಮೋನು ಮೋವಾಬು ಅಷ್ಡೋದು ಎಂಬ ದೇಶಗಳ ಸ್ತ್ರೀಯರನ್ನು ಮದುವೆ ಮಾಡಿಕೊಂಡ ಯೆಹೂದ್ಯರನ್ನು ಕಂಡೆನು. ಇವರ ಮಕ್ಕಳು ಅರ್ಧ ಅಷ್ಡೋದಿನ ಮಾತು ಆಡಿದರು; ಅವರು ಯೆಹೂದ್ಯರ ಮಾತು ಆಡಲಾರದೆ ಈ ಜನರು ಅನ್ಯರ ಮಾತನ್ನು ಆಡಿದರು. ಆಗ ನಾನು ಅವರನ್ನು ಗದರಿಸಿ ಶಪಿಸಿ ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲನ್ನು ಕಿತ್ತು--ನೀವು ನಿಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೂ ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೂ ನಿಮಗೂ ತಕ್ಕೊಳ್ಳದೆ ಮತ್ತು ಕೊಡದೆ ಇರ್ರಿ ಎಂದು ದೇವರ ಹೆಸರಿನಲ್ಲಿ ಅವರಿಗೆ ಆಣೆ ಇಟ್ಟೆನು; ಇಸ್ರಾಯೇಲಿನ ಅರಸನಾದ ಸೊಲೊಮೋನನು ಇವುಗಳಿಂದ ಪಾಪ ಮಾಡಿದ ನಲ್ಲವೇ? ಆದರೆ ಅನೇಕ ಜನಾಂಗಗಳಲ್ಲಿ ಅವನ ಹಾಗೆ ಮತ್ತೊಬ್ಬ ಅರಸನು ಇದ್ದದ್ದಿಲ್ಲ; ಅವನು ತನ್ನ ದೇವರಿಗೆ ಪ್ರಿಯನಾಗಿದ್ದ ಕಾರಣ ದೇವರು ಅವನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಮಾಡಿ ದನು; ಆದರೂ ಅನ್ಯಸ್ತ್ರೀಯರು ಅವನನ್ನು ಸಹ ಪಾಪ ಮಾಡುವ ಹಾಗೆ ಮಾಡಿದರು. ನೀವು ಅನ್ಯ ಸ್ತ್ರೀಯರನ್ನು ಮದುವೆಮಾಡಿಕೊಳ್ಳುವದರಿಂದ ನಮ್ಮ ದೇವರಿಗೆ ಅಪರಾಧ ಮಾಡಿ ಈ ಸಮಸ್ತವಾದ ದೊಡ್ಡ ಕೇಡು ಮಾಡುವ ಹಾಗೆ ನಾವು ನಿಮ್ಮ ಮಾತು ಕೇಳ ಬಹುದೋ ಅಂದೆನು. ಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲಿ ಒಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾದ ಕಾರಣ ನಾನು ಅವನನ್ನು ನನ್ನ ಬಳಿಯಿಂದ ಓಡಿಸಿಬಿಟ್ಟೆನು. ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕ ಸೇವೆಯ ಒಡಂಬ ಡಿಕೆಯನ್ನೂ ಲೇವಿಯರ ಒಡಂಬಡಿಕೆಯನ್ನೂ ಅಶುದ್ಧ ಮಾಡಿದ್ದರಿಂದ ಅವರನ್ನು ನೆನಸು.
- 1 Kings 11:1–8 1 ಅರಸುಗಳು 11:1–8ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಅನ್ಯ ಜನಾಂಗಗಳ ಸ್ತ್ರೀಯರಾದ--ಮೋವಾಬ್ಯರು ಅಮ್ಮೋನ್ಯರು ಎದೋ ಮ್ಯರು ಚೀದೋನ್ಯರು ಹಿತ್ತಿಯರನ್ನೂ ಮೋಹಿಸಿದನು. ಈ ಜನಾಂಗಗಳನ್ನು ಕುರಿತು ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಿಮಗೂ ಅವರಿಗೂ ಕೊಟ್ಟುಕೊಳ್ಳುವದು ಇರಬಾರದು, ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು ಎಂದು ಹೇಳಿದ್ದನು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು. ಅವನಿಗೆ ಅರಸುಗಳ ಕುಮಾರ್ತೆಯರಾದ ಏಳು ನೂರು ಮಂದಿ ಪತ್ನಿಯರೂ ಮುನ್ನೂರು ಮಂದಿ ಉಪಪತ್ನಿಗಳೂ ಇದ್ದರು. ಅವನ ಪತ್ನಿಯರು ಅವನ ಹೃದಯವನ್ನು ತಿರುಗಿಸಿದರು. ಸೊಲೊಮೋನನು ಮುದುಕನಾದ ಕಾಲದಲ್ಲಿ ಏನಾಯಿತಂದರೆ, ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗ ಮಾಡಿದರು. ಅವನ ಹೃದಯವು ತನ್ನ ತಂದೆಯಾದ ದಾವೀದನ ಹೃದಯದ ಹಾಗೆ ತನ್ನ ದೇವರಾದ ಕರ್ತನ ಸಂಗಡ ಪರಿಪೂರ್ಣವಾಗಿ ಇರಲಿಲ್ಲ. ಸೊಲೊಮೋನನು ಚೀದೋನ್ಯರ ದೇವತೆಯಾದ ಅಷ್ಟೋರೆತನ್ನೂ ಅಮ್ಮೋ ನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾ ಲಿಸಿದನು. ಹೀಗೆಯೇ ಸೊಲೊಮೋನನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸದೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು. ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು ಬಲಿಗಳನ್ನು ಅರ್ಪಿಸುವ ತನ್ನ ಅನ್ಯ ಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು.
- Psalm 106:34–39 ಕೀರ್ತನೆಗಳು 106:34–39ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು. ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು. ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು. ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು. ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು. ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.
- Jeremiah 3:7–9 ಯೆರೆಮೀಯ 3:7–9ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು--ನನ್ನ ಬಳಿಗೆ ತಿರುಗಿಕೋ ಅಂದೆನು; ಆದರೆ ಅವಳು ತಿರುಗಿಕೊಳ್ಳಲಿಲ್ಲ; ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು. ಆಗ ನಾನು ನೋಡಿದ್ದೇ ನಂದರೆ, ಹಿಂದಿರುಗಿದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು ತ್ಯಾಗಪತ್ರವನ್ನು ಕೊಟ್ಟಿದ್ದಾಗ್ಯೂ ವಂಚನೆ ಯುಳ್ಳ ಅವಳ ಸಹೋದರಿಯಾದ ಯೆಹೂದಳು ಭಯಪಡದೆ ತಾನು ಕೂಡ ಹೋಗಿ ಸೂಳೆತನವನ್ನು ಮಾಡಿದಳು. ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ ಕಲ್ಲುಗಳ ಸಂಗ ಡಲೂ ಮರಗಳ ಸಂಗಡಲೂ ವ್ಯಭಿಚಾರ ಮಾಡಿದಳು.
- Jeremiah 2:21–22 ಯೆರೆಮೀಯ 2:21–22ಆದಾಗ್ಯೂ ನಾನು ನಿನ್ನನ್ನು ಉತ್ತಮ ದ್ರಾಕ್ಷೇಬಳ್ಳಿಯಾಗಿಯೂ ಪೂರ್ಣ ವಾಗಿ ನಿಜ ಬೀಜವಾಗಿಯೂ ನೆಟ್ಟಿದ್ದೆನು; ಆದರೆ ನೀನು ಹೀಗೆ ನನಗೆ ಅನ್ಯ ದ್ರಾಕ್ಷೇ ಬಳ್ಳಿಯ ಹಾಗೆ ಕೆಟ್ಟುಹೋಗಿ ಬದಲಾದಿ? ನೀನು ಸೌಳಿನಿಂದ ತೊಳಕೊಂಡರೂ ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ ಎಂದು ಕರ್ತನಾದ ದೇವರು ಅನ್ನುತ್ತಾನೆ.
- Ezra 9:12 ಎಜ್ರನು 9:12ಆದದರಿಂದ ನೀವು ಪ್ರಬಲವಾಗಿ ದೇಶದ ಒಳ್ಳೇ ದನ್ನು ತಿಂದು ಅದನ್ನು ಎಂದಿಗೂ ನಿಮ್ಮ ಮಕ್ಕಳಿಗೆ ಸ್ವಾಸ್ಥ್ಯವಾಗಿ ಕೊಡುವ ಹಾಗೆ ನೀವು ನಿಮ್ಮ ಕುಮಾರ್ತೆ ಯರನ್ನು ಅವರ ಕುಮಾರರಿಗೆ ಕೊಡಬೇಡಿರಿ; ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೆ ತಕ್ಕೊಳ್ಳ ಬೇಡಿರಿ. ಇಲ್ಲವೆ ಅವರ ಸಮಾಧಾನವನ್ನೂ ಅವರ ಮೇಲನ್ನೂ ಎಂದಿಗೂ ಬಯಸಬೇಡಿರಿ ಎಂಬದು.
Original words (Hebrew)
- Judah · H3063יְהוּדָה Yᵉhûwdâh
- treacherously · H898בָּגַד bâgad
- abomination · H8441תּוֹעֵבַה tôwʻêbah
- committed · H6213עָשָׂה ʻâsâh
- Israel · H3478יִשְׂרָאֵל Yisrâʼêl
- Jerusalem · H3389יְרוּשָׁלַ͏ִם Yᵉrûwshâlaim
- Judah · H3063יְהוּדָה Yᵉhûwdâh
- profaned · H2490חָלַל châlal
- holiness · H6944קֹדֶשׁ qôdesh
- loved · H157אָהַב ʼâhab
- married · H1166בָּעַל bâʻal
- daughter · H1323בַּת bath
- strange · H5236נֵכָר nêkâr
- god · H410אֵל ʼêl