Hosea · chapter 7 · verse 7
Hosea 7:7 in Kannada
ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ; ತಮ್ಮ ನ್ಯಾಯಾ ಧಿಪತಿಗಳನ್ನು ನುಂಗಿಬಿಟ್ಟಿದ್ದಾರೆ; ಅವರ ಅರಸುಗಳೆಲ್ಲಾ ಬಿದ್ದು ಹೋಗಿದ್ದಾರೆ; ಅವರಲ್ಲಿ ಒಬ್ಬನಾದರೂ ನನ್ನನ್ನು ಪ್ರಾರ್ಥಿಸುವದೇ ಇಲ್ಲ.
Avarellaroo oleya haage bisiyaagiddaare; tamma nyaayaa dhipatigalannu nungibittiddaare; avara arasugalellaa biddu hogiddaare; avaralli obbanaadaroo nannannu praarthisuvade illa.
Hosea 7:7 in English
- King James Version (KJV)
- They are all hot as an oven, and have devoured their judges; all their kings are fallen: [there is] none among them that calleth unto me.
- World English Bible (WEB)
- They are all hot as an oven, and devour their judges. All their kings have fallen. There is no one among them who calls to me.
- American Standard Version (ASV)
- They are all hot as an oven, and devour their judges; all their kings are fallen: there is none among them that calleth unto me.
- Bible in Basic English (BBE)
- They are all heated like an oven, and they put an end to their judges; all their kings have been made low; not one among them makes prayer to me.
- Darby Translation (DBY)
- They are all hot as an oven, and devour their judges; all their kings are fallen: there is none among them that calleth unto me.
- Webster's Bible (WBS)
- They are all hot as an oven, and have devoured their judges; all their kings are fallen: [there is] none among them that calleth to me.
- Young's Literal Translation (YLT)
- All of them are warm as an oven, And they have devoured their judges, All their kings have fallen, There is none calling unto Me among them.
Read in context
- 5ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
- 6ಅವರು ಹೊಂಚು ಹಾಕಿಕೊಂಡಿ ರುವಾಗ ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ; ಅವರ ರೊಟ್ಟಿಗಾರನು ರಾತ್ರಿ ಯೆಲ್ಲಾ ನಿದ್ರೆ ಮಾಡುತ್ತಾನೆ, ಬೆಳಿಗ್ಗೆ ಅದು ಪ್ರಜ್ವಲಿ ಸುವ ಬೆಂಕಿಯ ಹಾಗೆ ಉರಿಯುತ್ತದೆ.
- 7ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ; ತಮ್ಮ ನ್ಯಾಯಾ ಧಿಪತಿಗಳನ್ನು ನುಂಗಿಬಿಟ್ಟಿದ್ದಾರೆ; ಅವರ ಅರಸುಗಳೆಲ್ಲಾ ಬಿದ್ದು ಹೋಗಿದ್ದಾರೆ; ಅವರಲ್ಲಿ ಒಬ್ಬನಾದರೂ ನನ್ನನ್ನು ಪ್ರಾರ್ಥಿಸುವದೇ ಇಲ್ಲ.
- 8ಎಫ್ರಾಯಾಮು ಜನರೊಂದಿಗೆ ತನ್ನನ್ನು ಬೆರೆಸಿ ಕೊಂಡಿದ್ದಾನೆ; ಎಫ್ರಾಯಾಮು ತಿರುವಿ ಹಾಕದ ರೊಟ್ಟಿ ಯಾಗಿದ್ದಾನೆ.
- 9ಪರಕೀಯರು ಅವನ ಶಕ್ತಿಯನ್ನು ನುಂಗಿಬಿಟ್ಟಿದ್ದಾರೆ; ಅದು ಅವನಿಗೆ ಗೊತ್ತಿಲ್ಲ; ಹೌದು, ನರೆ ಕೂದಲು ಅಲ್ಲಲ್ಲಿ ಅವನ ಮೇಲೆ ಅದೆ. ಆದಾಗ್ಯೂ ಅವನು ತಿಳಿಯದೇ ಇದ್ದಾನೆ.
Cross references
- 2 Kings 15:25 2 ಅರಸುಗಳು 15:25ಆದರೆ ಅವನ ಅಧಿಪತಿಯಾದಂಥ, ರೆಮಲ್ಯನ ಮಗನಾದ ಪೆಕಹನು ಅವನ ಮೇಲೆ ಒಳಸಂಚು ಮಾಡಿ ಅರ್ಗೋಬನ್ನೂ ಅರ್ಯೇಯನ್ನೂ ಗಿಲ್ಯಾದಿನ ಜನರಲ್ಲಿ ಐವತ್ತು ಮಂದಿಯನ್ನೂ ತನ್ನ ಸಂಗಡ ಕೂಡಿಸಿ ಕೊಂಡು ಸಮಾರ್ಯದಲ್ಲಿ ಅರಸನಿಗಿದ್ದ ಅರಮನೆ ಯೊಳಗೆ ಅವನನ್ನು ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.
- 2 Kings 15:10 2 ಅರಸುಗಳು 15:10ಆಗ ಯಾಬೇಷನ ಮಗನಾದ ಶಲ್ಲೂಮನು ಅವನ ಮೇಲೆ ಒಳಸಂಚು ಮಾಡಿ ಜನರ ಮುಂದೆ ಅವನನ್ನು ಹೊಡೆದು ಕೊಂದು ಹಾಕಿ ಅವನಿಗೆ ಬದಲಾಗಿ ಅರಸನಾದನು.
- 2 Kings 15:30 2 ಅರಸುಗಳು 15:30ಇದಲ್ಲದೆ ಉಜ್ಜೀಯನ ಮಗ ನಾದ ಯೋತಾಮನ ಇಪ್ಪತ್ತನೇ ವರುಷದಲ್ಲಿ ಏಲನ ಮಗನಾದ ಹೋಶೆಯನು ರೆಮಲ್ಯನ ಮಗನಾದ ಪೆಕಹನ ಮೇಲೆ ಒಳಸಂಚು ಮಾಡಿ ಅವನನ್ನು ಸಂಹರಿಸಿ ಅವನಿಗೆ ಬದಲಾಗಿ ಅರಸನಾದನು.
- 2 Kings 15:14 2 ಅರಸುಗಳು 15:14ಯಾಕಂದರೆ ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಹೊರಟು ಹೋಗಿ ಸಮಾರ್ಯಕ್ಕೆ ಬಂದು ಸಮಾರ್ಯ ದಲ್ಲಿ ಯಾಬೇಷನ ಮಗನಾದ ಶಲ್ಲೂಮನನ್ನು ಹೊಡೆದು ಕೊಂದುಹಾಕಿ ಅವನಿಗೆ ಬದಲಾಗಿ ಅರಸ ನಾದನು.
- Hosea 8:4 ಹೋಶೇಯ 8:4ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
- Isaiah 64:7 ಯೆಶಾಯ 64:7ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ.
- Isaiah 9:13 ಯೆಶಾಯ 9:13ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
- Hosea 7:10 ಹೋಶೇಯ 7:10ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ; ಆದರೆ ಅವರು ತಮ್ಮ ಕರ್ತನಾದ ದೇವರ ಕಡೆಗೆ ತಿರುಗದೆ ಇದ್ದಾರೆ, ಇಲ್ಲವೆ ಆತನನ್ನು ಇದಕ್ಕೆಲ್ಲಾ ಹುಡು ಕುವದಿಲ್ಲ.
- Job 36:13 ಯೋಬನು 36:13ಹೃದಯದಲ್ಲಿ ಕಪಟ ಇರು ವವರು ಕೋಪವನ್ನು ಕೂಡಿಸುತ್ತಾರೆ. ಆತನು ಅವರನ್ನು ಬಂಧಿಸಿದರೆ ಅವರು ಮೊರೆಯಿಡುವದಿಲ್ಲ.
- Isaiah 43:22 ಯೆಶಾಯ 43:22ಆದರೂ ಓ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ; ಓ ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
- 2 Kings 10:14 2 ಅರಸುಗಳು 10:14ಆಗ ಅವನು ಅವರನ್ನು ಜೀವದಿಂದ ಹಿಡಿಯಿರಿ ಎಂದು ಅವನು ಹೇಳಿದ್ದರಿಂದ ಅವರು ಇವರನ್ನು ಜೀವದಿಂದ ಹಿಡಿದು ಉಣ್ಣೆ ಕತ್ತರಿಸುವ ಮನೆಯ ಕುಣಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನೂ ಉಳಿಸಲಿಲ್ಲ.
- Hosea 7:14 ಹೋಶೇಯ 7:14ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ.