Isaiah · chapter 43 · verse 22
Isaiah 43:22 in Kannada
ಆದರೂ ಓ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ; ಓ ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
Aadaroo o yaakobe, neenu nannannu praarthisalilla; o israayele, nanna vishayadalli neenu besaragondiddee!
Isaiah 43:22 in English
- King James Version (KJV)
- But thou hast not called upon me, O Jacob; but thou hast been weary of me, O Israel.
- World English Bible (WEB)
- Yet you have not called on me, Jacob; but you have been weary of me, Israel.
- American Standard Version (ASV)
- Yet thou hast not called upon me, O Jacob; but thou hast been weary of me, O Israel.
- Bible in Basic English (BBE)
- But you have made no prayer to me, O Jacob: and you have given no thought to me, O Israel.
- Darby Translation (DBY)
- — But thou hast not called upon me, Jacob; for thou hast been weary of me, O Israel:
- Webster's Bible (WBS)
- But thou hast not called upon me, O Jacob; but thou hast been weary of me, O Israel.
- Young's Literal Translation (YLT)
- And Me thou hast not called, O Jacob, For thou hast been wearied of me, O Israel,
Read in context
- 20ಅಡವಿಯ ಮೃಗಗಳು, ಘಟಸರ್ಪಗಳು ಮತ್ತು ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯ ನೀರನ್ನು ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿ ಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವದಕ್ಕೆ ಕೊಟ್ಟೆನು.
- 21ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
- 22ಆದರೂ ಓ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ; ಓ ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
- 23ನಿನ್ನ ದಹನಬಲಿಯ ಎಳೇ ಕರುಗಳನ್ನು ನನಗೆ ತರಲಿಲ್ಲ ಇಲ್ಲವೆ ನಿನ್ನ ಯಜ್ಞ ಗಳಿಂದ ನನ್ನನ್ನು ಸನ್ಮಾನಿಸಲಿಲ್ಲ; ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಾನು ಕಾರಣವಲ್ಲ, ಇಲ್ಲವೆ ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
- 24ನೀನು ನನಗೋಸ್ಕರ ಹಣದಿಂದ ಗಂಧಕಾಷ್ಟವನ್ನು ಕೊಂಡು ಕೊಳ್ಳಲಿಲ್ಲ ಇಲ್ಲವೆ ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ತೊಂದರೆಗೊಳಿಸಿದ್ದೀ, ಅಕ್ರಮಗಳಿಂದ ನನ್ನನು ಬೇಸರಗೊಳಿಸಿದ್ದೀ.
Cross references
- Micah 6:3 ಮೀಕ 6:3ನನ್ನ ಜನರೇ, ನಾನು ನಿನಗೆ ಏನು ಮಾಡಿದ್ದೇನೆ? ಯಾವದರಿಂದ ನಿನಗೆ ಬೇಸರ ಮಾಡಿದ್ದೇನೆ? ನನಗೆ ವಿರೋಧವಾಗಿ ಸಾಕ್ಷಿಕೊಡು.
- Malachi 3:14 ಮಲಾಕಿಯ 3:14ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.
- Malachi 1:13 ಮಲಾಕಿಯ 1:13ಇದಲ್ಲದೆ ನೀವು--ಇಗೋ, ಎಂಥಾ ಪ್ರಯಾಸ ಎಂದು ಹೇಳಿ ಅದರ ಮೇಲೆ ಊದಿಬಿಟ್ಟಿರಿ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಹರಿಯಲ್ಪಟ್ಟದ್ದನ್ನೂ ಕುಂಟಾದದ್ದನ್ನೂ ರೋಗವುಳ್ಳದ್ದನ್ನೂ ಕಾಣಿಕೆಯಾಗಿ ತಂದಿರಿ; ಇಂಥದ್ದನ್ನು ನಾನು ನಿಮ್ಮ ಕೈಯಿಂದ ಅಂಗೀ ಕರಿಸಬಹುದೋ ಎಂದು ಕರ್ತನು ಹೇಳುತ್ತಾನೆ.ಆದರೆ ತನ್ನ ಮಂದೆಯಲ್ಲಿ ಗಂಡು ಇರಲಾಗಿ ಪ್ರಮಾಣ ಮಾಡಿ ಕರ್ತನಿಗೆ ಕೆಟ್ಟು ಹೋದದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ; ನಾನು ಮಹಾ ಅರಸನು, ನನ್ನ ಹೆಸರು ಅನ್ಯಜನಾಂಗಗಳಲ್ಲಿ ಭಯಂಕರ ವಾದದ್ದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- James 4:2–3 ಯಾಕೋಬನು 4:2–3ನೀವು ಆಶಿಸಿದರೂ ಹೊಂದದೆ ಇದ್ದೀರಿ. ನೀವು ಕೊಲ್ಲುತ್ತೀರಿ, ಹೊಂದಲು ಅಪೇಕ್ಷಿಸುತ್ತೀರಿ, ಆದರೆ ಪಡೆಯಲಾರಿರಿ. ನೀವು ಕಾದಾಡುತ್ತೀರಿ, ಯುದ್ಧ ಮಾಡುತ್ತೀರಿ. ಆದಾಗ್ಯೂ ನೀವು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ. ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸ ಬೇಕೆಂದು ತಪ್ಪಾಗಿ ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ.
- Jeremiah 10:25 ಯೆರೆಮೀಯ 10:25ನಿನ್ನನ್ನು ತಿಳಿಯದ ಅನ್ಯರ ಮೇಲೆಯೂ ನಿನ್ನ ಹೆಸರನ್ನು ಕರೆಯದ ಕುಟುಂಬಗಳ ಮೇಲೆಯೂ ನಿನ್ನ ರೌದ್ರವನ್ನು ಹೊಯಿದುಬಿಡು; ಅವರು ಯಾಕೋ ಬ್ಯರನ್ನು ತಿಂದು ಬಿಟ್ಟಿದ್ದಾರೆ; ಅವರನ್ನು ನುಂಗಿ ಇಲ್ಲದಾಗಿ ಮಾಡಿ ಅವರ ನಿವಾಸವನ್ನು ಹಾಳುಮಾಡಿದ್ದಾರೆ.
- Job 27:9–10 ಯೋಬನು 27:9–10ಅವನ ಮೇಲೆ ಇಕ್ಕಟ್ಟು ಬಂದರೆ ಅವನ ಮೊರೆಯನ್ನು ದೇವರು ಕೇಳುವನೋ? ಇಲ್ಲವೆ ಸರ್ವಶಕ್ತನಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿ ದೇವರನ್ನು ಕರೆಯುವನೋ?
- Jeremiah 2:11–13 ಯೆರೆಮೀಯ 2:11–13ಜನಾಂ ಗವು ತಮ್ಮ ದೇವರುಗಳನ್ನು ಅವು ದೇವರುಗಳಲ್ಲದೆ ಇದ್ದಾಗ್ಯೂ ಬದಲು ಮಾಡಿದ್ದುಂಟೋ? ಆದರೆ ನನ್ನ ಜನರು ತಮ್ಮ ವೈಭವವನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ. ಓ ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ ಎಂದು ಕರ್ತನು ಅನ್ನುತ್ತಾನೆ. ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ; ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು ತಮಗೆ ತೊಟ್ಟಿಗಳನ್ನು ನೀರು ಹಿಡಿಯಲಾರದ ಒಡಕು ತೊಟ್ಟಿಗಳನ್ನು ಕೆತ್ತಿಕೊಂಡಿದ್ದಾರೆ.
- Hosea 14:1–2 ಹೋಶೇಯ 14:1–2ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ; ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.
- Daniel 9:13 ದಾನಿಯೇಲನು 9:13ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಈ ಕೇಡು ನಮ್ಮ ಮೇಲೆ ಬಂತು, ಆದಾಗ್ಯೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿನ್ನ ಸತ್ಯವನ್ನು ತಿಳಿದುಕೊಳ್ಳುವ ಹಾಗೆ, ನಮ್ಮ ದೇವರಾದ ಕರ್ತನ ಮುಂದೆ ನಾವು ಪ್ರಾರ್ಥನೆ ಗಳನ್ನು ಮಾಡಲಿಲ್ಲ.
- Job 21:14–15 ಯೋಬನು 21:14–15ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ. ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.
- Isaiah 64:7 ಯೆಶಾಯ 64:7ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ.
- Jeremiah 2:5 ಯೆರೆಮೀಯ 2:5ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ?