Isaiah · chapter 1 · verse 19
Isaiah 1:19 in Kannada
ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
Neevu oppi vidheyaraadare deshada melannu anubhavisuviri;
Isaiah 1:19 in English
- King James Version (KJV)
- If ye be willing and obedient, ye shall eat the good of the land:
- World English Bible (WEB)
- If you are willing and obedient, you will eat the good of the land;
- American Standard Version (ASV)
- If ye be willing and obedient, ye shall eat the good of the land:
- Bible in Basic English (BBE)
- If you will give ear to my word and do it, the good things of the land will be yours;
- Darby Translation (DBY)
- If ye be willing and hearken, ye shall eat the good of the land;
- Webster's Bible (WBS)
- If ye are willing and obedient, ye shall eat the good of the land:
- Young's Literal Translation (YLT)
- If ye are willing, and have hearkened, The good of the land ye consume,
Read in context
- 17ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ.
- 18ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ ಎಂದು ಕರ್ತನು ಹೇಳುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು.
- 19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
- 20ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
- 21ನಂಬಿಗಸ್ತಿಕೆಯ ಪಟ್ಟಣವು ಸೂಳೆಯಂತಾದ ಳಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆ ಯಾಗಿತ್ತು; ಆದರೆ ಈಗ ಕೊಲೆಗಾರರಿಂದ ತುಂಬಿದೆ.
Cross references
- Deuteronomy 30:15–16 ಧರ್ಮೋಪದೇಶಕಾಂಡ 30:15–16ನೋಡು, ನಾನು ಈಹೊತ್ತು ಜೀವವನ್ನೂ ಮರಣವನ್ನೂ, ಒಳ್ಳೇದನ್ನೂ ಕೆಟ್ಟದ್ದನ್ನೂ ನಿನ್ನ ಮುಂದೆ ಇಟ್ಟಿದ್ದೇನೆ. ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನ ಆಜ್ಞೆ, ನಿಯಮ, ನ್ಯಾಯಗಳನ್ನು ಕಾಪಾಡಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ; ಹಾಗೆ ಮಾಡಿದರೆ ನೀನು ಬದುಕಿ ಹೆಚ್ಚುವಿ; ನೀನು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.
- Isaiah 3:10 ಯೆಶಾಯ 3:10ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
- Joel 2:26 ಯೋವೇಲ 2:26ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು ನಿಮ್ಮಲ್ಲಿ ಅದ್ಭುತದಿಂದ ನಡಿಸಿದ ನಿಮ್ಮ ದೇವರಾದ ಕರ್ತನ ಹೆಸರನ್ನು ಸ್ತುತಿಸುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
- Hebrews 5:9 ಇಬ್ರಿಯರಿಗೆ 5:9ಇದಲ್ಲದೆ ಸಿದ್ಧಿಗೆ ಬಂದು ತನಗೆ ವಿಧೇಯ ರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಆತನು ಕರ್ತನಾದನು.
- Isaiah 55:6–7 ಯೆಶಾಯ 55:6–7ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
- Isaiah 55:1–3 ಯೆಶಾಯ 55:1–3ಹಾ, ಬಾಯಾರಿದ ಸಕಲಜನರೇ, ನೀವು ನೀರಿನ ಬಳಿಗೆ ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ; ಹೌದು, ಬನ್ನಿರಿ; ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡು ಕೊಳ್ಳಿರಿ. ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ! ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
- Matthew 21:28–32 ಮತ್ತಾಯನು 21:28–32ನೀವು ನೆನಸುವದೇನು? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು; ಅವನು ಮೊದಲನೆಯವನ ಬಳಿಗೆ ಬಂದು--ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷೇತೋಟದಲ್ಲಿ ಕೆಲಸಮಾಡು ಎಂದು ಹೇಳಿದನು. ಅವನು ಪ್ರತ್ಯುತ್ತರವಾಗಿ--ನಾನು ಹೋಗುವದಿಲ್ಲ ಎಂದು ಹೇಳಿ ತರುವಾಯ ಪಶ್ಚಾ ತ್ತಾಪಪಟ್ಟು ಹೋದನು. ಆಮೇಲೆ ಅವನು ಎರಡ ನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಪ್ರತ್ಯುತ್ತರವಾಗಿ--ಅಯ್ಯಾ, ನಾನು ಹೋಗುತ್ತೇನೆ ಎಂದು ಹೇಳಿ ಹೋಗಲಿಲ್ಲ. ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ಮಾಡಿದನು ಎಂದು ಕೇಳಲು ಅವರು ಆತನಿಗೆ--ಮೊದಲನೆಯವನು ಅಂದರು. ಆಗ ಯೇಸು ಅವರಿಗೆ --ಸುಂಕದವರೂ ಸೂಳೆಯರೂ ನಿಮಗಿಂತ ಮೊದಲು ದೇವರರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ. ಯಾಕಂದರೆ ಯೋಹಾನನು ನೀತಿಯ ಮಾರ್ಗದಲ್ಲಿ ನಿಮ್ಮ ಬಳಿಗೆ ಬಂದನು. ಮತ್ತು ನೀವು ಅವನನ್ನು ನಂಬಲಿಲ್ಲ; ಆದರೆ ಸುಂಕದವರೂ ಸೂಳೆಯರೂ ಅವನನ್ನು ನಂಬಿದರು; ನೀವು ಅದನ್ನು ನೋಡಿದ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.
- Jeremiah 31:18–20 ಯೆರೆಮೀಯ 31:18–20ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ. ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು. ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.
- Jeremiah 3:12–14 ಯೆರೆಮೀಯ 3:12–14ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು; ಯಾವವಂದರೆ--ಹಿಂದಿ ರುಗಿದ ಇಸ್ರಾಯೇಲೇ, ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ. ನಾನು ನನ್ನ ಕೋಪವನ್ನು ನಿನ್ನ ಮೇಲೆ ಬೀಳ ಮಾಡುವದಿಲ್ಲ; ನಾನು ದಯಾಪರನು ಎಂದು ಕರ್ತನು ಅನ್ನುತ್ತಾನೆ, ಎಂದೆಂದಿಗೂ ಕೋಪವಿಟ್ಟು ಕೊಳ್ಳುವದಿಲ್ಲ. ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ. ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.
- Hosea 14:1–4 ಹೋಶೇಯ 14:1–4ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ; ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು. ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ. ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ.