Isaiah · chapter 3 · verse 10
Isaiah 3:10 in Kannada
ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
Neetivantanige neevu--avanige olledirali endu heliri; avaru tamma kriyegala phalavannu tinnuvaru.
Isaiah 3:10 in English
- King James Version (KJV)
- Say ye to the righteous, that [it shall be] well [with him:] for they shall eat the fruit of their doings.
- World English Bible (WEB)
- Tell the righteous that it will be well with them, for they will eat the fruit of their deeds.
- American Standard Version (ASV)
- Say ye of the righteous, that [it shall be] well [with him]; for they shall eat the fruit of their doings.
- Bible in Basic English (BBE)
- Happy is the upright man! for he will have joy of the fruit of his ways.
- Darby Translation (DBY)
- Say ye of the righteous that it shall be well [with him], for they shall eat the fruit of their doings.
- Webster's Bible (WBS)
- Say ye to the righteous, that [it shall be] well [with him] : for they shall eat the fruit of their doings.
- Young's Literal Translation (YLT)
- Say ye to the righteous, that [it is] good, Because the fruit of their doings they eat.
Read in context
- 8ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.
- 9ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
- 10ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
- 11ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
- 12ನನ್ನ ಪ್ರಜೆಗಳನ್ನೋ ಹುಡುಗರು ಅವರನ್ನು ಭಾಧಿಸುವರು, ಅವರನ್ನು ಆಳುವವರು ಹೆಂಗಸರು. ಓ ನನ್ನ ಪ್ರಜೆಗಳೇ, ನಿಮ್ಮನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆ ಯುವ ದಾರಿಯನ್ನು ಹಾಳುಮಾಡಿದ್ದಾರೆ.
Cross references
- Psalm 128:1–2 ಕೀರ್ತನೆಗಳು 128:1–2ಕರ್ತನಿಗೆ ಭಯಪಟ್ಟು ಆತನ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು. ಹೀಗಾದರೆ ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಸಂತೋಷ ವುಳ್ಳವನಾಗಿರುವಿ, ನಿನಗೆ ಒಳ್ಳೇಯದಾಗುವದು.
- Hebrews 6:10 ಇಬ್ರಿಯರಿಗೆ 6:10ನೀವು ಪರಿಶುದ್ಧರಿಗೆ ಉಪಚಾರ ಮಾಡಿದಿರಿ, ಇನ್ನು ಮಾಡುತ್ತಾ ಇದ್ದೀರಿ. ಈ ನಿಮ್ಮ ಕೆಲಸವನ್ನೂ ಇದರಲ್ಲಿ ನೀವು ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯ ಪ್ರಯಾಸವನ್ನೂ ಮರೆಯು ವದಕ್ಕೆ ದೇವರು ಅನ್ಯಾಯಸ್ಥನಲ್ಲ.
- Galatians 6:7–8 ಗಲಾತ್ಯದವರಿಗೆ 6:7–8ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರದಿಂದ ಬಿತ್ತುವವನು ಶರೀರದಿಂದ ನಾಶನವನ್ನು ಕೊಯ್ಯುವನು. ಆದರೆ ಆತ್ಮನಿಂದ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.
- Ecclesiastes 8:12 ಪ್ರಸಂಗಿ 8:12ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ ದಿವಸಗಳನ್ನು ಹೆಚ್ಚಿಸಿದರೂ ದೇವರಿಗೆ ಭಯ ಪಟ್ಟು ಆತನಲ್ಲಿ ಭಯಪಡುವವರಿಗೆ ಒಳ್ಳೇದಾಗುವ ದೆಂದು ನಾನು ನಿಶ್ಚಯವಾಗಿಯೂ ಬಲ್ಲೆನು.
- Ezekiel 18:9–19 ಯೆಹೆಜ್ಕೇಲನು 18:9–19ಸತ್ಯವನ್ನು ಮಾಡುವದ ಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಕೊಂಡು ಸತ್ಯಪರನಾಗಿ ನಡೆದರೆ ಅವನು ನೀತಿ ವಂತನು ಮತ್ತು ನಿಶ್ಚಯವಾಗಿ ಬದುಕುವವನು ಎಂದು ದೇವರಾದ ಕರ್ತನು ಹೇಳಿದ್ದಾನೆ. ಆದರೆ ಇಂತಹ ವನು ಪಡೆದ ಮಗನು ದರೋಡೆಕೋರನಾಗಿ ರಕ್ತವನ್ನು ಚೆಲ್ಲುವವನಾದರೆ ಇಂತಹ ಕೆಲಸಗಳನ್ನು ಮಾಡುತ್ತಾನೆ. ಅಂತಹ ಕೆಲಸಗಳನ್ನು ಮಾಡಿದರೂ ಪರ್ವತಗಳ ಮೇಲೆ ತಿಂದು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ, ಬಡವರನ್ನೂ ದರಿದ್ರರನ್ನೂ ಉಪದ್ರಗೊಳಿಸಿ, ಹಿಂಸಿಸಿ, ಸುಲಿಗೆ ಮಾಡಿ ಒತ್ತೆಗಳನ್ನು ಹಿಂದಕ್ಕೆ ಕೊಡದೆ, ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅಸಹ್ಯ ವಾದವುಗಳನ್ನು ಮಾಡಿ; ಬಡ್ಡಿಗೆ ಕೊಟ್ಟು ಲಾಭ ತೆಗೆದುಕೊಂಡು ಅವನು ಬದುಕುವನೋ? ಅವನು ಬದುಕುವದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿ ದ್ದಾನೆ; ಅವನು ನಿಶ್ಚಯವಾಗಿ ಸಾಯುವನು ಅವನ ರಕ್ತವು ಅವನ ಮೇಲೆಯೇ ಇರುವದು. ಆಗ ಇಗೋ, ಅವನು ಮಗನನ್ನು ಪಡೆದ ಮೇಲೆ ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ನೋಡಿ ಆಲೊಚಿಸಿ, ಅವುಗಳಂತೆ ಮಾಡದೆ; ಪರ್ವತಗಳ ಮೇಲೆ ತಿನ್ನದೆ, ಇಸ್ರಾಯೇಲಿನ ಮನೆತನ ದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಇಲ್ಲವೆ ಯಾರಿಗೂ ತೊಂದರೆಪಡಿಸದೆ, ಒತ್ತೆಯನ್ನು ಹಿಡಿಯದೆ, ಇಲ್ಲವೆ ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಬೆತ್ತಲೆಯಾದವನಿಗೆ ವಸ್ತ್ರ ವನ್ನು ಹೊದಿಸಿ, ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನೂ ಲಾಭವನ್ನು ತೆಗೆದುಕೊಳ್ಳದೆ, ನನ್ನ ನ್ಯಾಯ ಗಳನ್ನು ಮಾಡಿ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವದಿಲ್ಲ ನಿಶ್ಚಯವಾಗಿ ಬದುಕುವನು. ಆತನ ತಂದೆಯ ವಿಷಯವಾದರೋ ಅವನು ಬಹಳ ಬಲಾತ್ಕಾರ ಮಾಡಿ ದ್ದರಿಂದಲೂ ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ ತನ್ನ ಜನರ ಮಧ್ಯದಲ್ಲಿ ಕೆಟ್ಟದನ್ನು ಮಾಡಿದ್ದರಿಂದಲೂ ಇಗೋ, ಅವನು ಅಕ್ರಮದಲಿ ಸಾಯುವನು. ಆದಾಗ್ಯೂ ಇನ್ನೂ ನೀವು--ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲವೇ ಎಂದು ಹೇಳುವಿರಿ; ನಿಶ್ಚಯವಾಗಿ ಮಗನು ನ್ಯಾಯವನ್ನೂ ನೀತಿಯನ್ನೂ ಮಾಡಿ ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು.
- Deuteronomy 28:1–14 ಧರ್ಮೋಪದೇಶಕಾಂಡ 28:1–14ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಎಚ್ಚರಿಕೆಯಿಂದ ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಂಡರೆ ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತದಲ್ಲಿರಿಸುವನು. ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳಿದರೆ ಈ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ, ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ. ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ. ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು. ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು. ನೀನು ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕಾಪಾಡಿ ಆತನ ಮಾರ್ಗಗಳಲ್ಲಿ ನಡೆದರೆ ಕರ್ತನು ನಿನಗೆ ಪ್ರಮಾಣಮಾಡಿದ ಹಾಗೆ ನಿನ್ನನ್ನು ತನಗೆ ಪರಿಶುದ್ಧ ಜನವಾಗಿ ಸ್ಥಾಪಿಸುವನು. ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು; ಇದಲ್ಲದೆ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಆಣೆ ಇಟ್ಟ ಕರ್ತನು ಭೂಮಿಯಮೇಲೆ ನಿನ್ನನ್ನು ಸರಕುಗಳಲ್ಲಿಯೂ ಗರ್ಭದ ಫಲದಲ್ಲಿಯೂ ಪಶುಗಳ ಫಲದಲ್ಲಿಯೂ ಭೂಮಿಯ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವನು. ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ. ನಾನು ಈಹೊತ್ತು ನಿನಗೆ ಆಜ್ಞಾಪಿಸುವ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ನೀನು ಕೇಳಿ ಕಾಪಾಡಿ ಕೈಕೊಂಡರೆ ಕರ್ತನು ನಿನ್ನನ್ನು ಬಾಲವನ್ನಲ್ಲ, ತಲೆಯಾಗಿ ಮಾಡುವನು; ನೀನು ಕೆಳಗಲ್ಲ, ಮೇಲೆಯೇ ಇರುವಿ. ಹೀಗಿರುವದರಿಂದ ಬೇರೆ ದೇವರುಗಳನ್ನು ಹಿಂಬಾ ಲಿಸಿ ಸೇವಿಸದಂತೆ ನಾನು ಈಹೊತ್ತು ನಿನಗೆ ಆಜ್ಞಾಪಿ ಸುವ ಮಾತುಗಳನ್ನೆಲ್ಲಾ ಬಿಟ್ಟು ಎಡಕ್ಕಾದರೂ ಬಲ ಕ್ಕಾದರೂ ತೊಲಗಬಾರದು.
- Psalm 18:23–24 ಕೀರ್ತನೆಗಳು 18:23–24ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು. ಆದದ ರಿಂದ ಕರ್ತನು ನನ್ನ ನೀತಿಯ ಪ್ರಕಾರವೂ ಆತನ ಕಣ್ಣೆದುರಿನಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಬದಲು ಕೊಟ್ಟನು.
- Malachi 3:18 ಮಲಾಕಿಯ 3:18ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Isaiah 26:20–21 ಯೆಶಾಯ 26:20–21ನನ್ನ ಜನರೇ, ಬನ್ನಿರಿ, ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಲನ್ನು ಮುಚ್ಚಿಕೊಳ್ಳಿರಿ; ಸ್ವಲ್ಪ ಹೊತ್ತು ಅಡಗಿಕೊಂಡು ರೋಷವು ಹಾದುಹೋಗುವ ತನಕ ಇರ್ರಿ.ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು. ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು.
- Jeremiah 15:11 ಯೆರೆಮೀಯ 15:11ಕರ್ತನು ಹೇಳುವದೇನಂದರೆ --ನಿಶ್ಚಯವಾಗಿ ನಿನ್ನ ಶೇಷಕ್ಕೆ ಅದು ಒಳ್ಳೆಯ ದಾಗಿರುವದು; ಕೇಡಿನ ಕಾಲದಲ್ಲಿಯೂ ಇಕ್ಕಟ್ಟಿನ ಕಾಲದಲ್ಲಿಯೂ ನಿಶ್ಚಯವಾಗಿ ನಿನ್ನ ಶತ್ರುವನ್ನು ನಿನ ಗೋಸ್ಕರ ಬೇಡಿಕೊಳ್ಳುವಂತೆ ಮಾಡಲಿಲ್ಲವೇ?
- Zephaniah 2:3 ಚೆಫನ್ಯ 2:3ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ, ಕರ್ತನನ್ನು ಹುಡುಕಿರಿ, ನೀತಿ ಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ; ಒಂದು ವೇಳೆ ಕರ್ತನ ಕೋಪದ ದಿನದಲ್ಲಿ ಮರೆಯಾಗುವಿರಿ.
- Romans 2:5–11 ರೋಮಾಪುರದವರಿಗೆ 2:5–11ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ. ದೇವರು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿ ಗನುಸಾರವಾಗಿ ಪ್ರತಿಫಲ ಕೊಡುವನು. ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ ಕಲಹಪ್ರಿಯ ರಾಗಿದ್ದು ಸತ್ಯಕ್ಕೆ ವಿಧೇಯರಾಗದೆ ಅನೀತಿಗೆ ವಿಧೇಯ ರಾಗಿ ಕೆಟ್ಟದ್ದನ್ನು ಮಾಡುವ ಪ್ರತಿಯೊಬ್ಬನಿಗೆ ಅಂದರೆ ಮೊದಲು ಯೆಹೂದ್ಯರಿಗೆ ಆಮೇಲೆ ಅನ್ಯರಿಗೆ ಸಹ ರೌದ್ರ, ಕೋಪ, ಸಂಕಟ ಮತ್ತು ಯಾತನೆಯನೂ ಆದರೆ ಒಳ್ಳೆಯದನ್ನು ಮಾಡುವ ಪ್ರತಿ ಮನುಷ್ಯನಿಗೆ ಅಂದರೆ ಮೊದಲು ಯೆಹೂದ್ಯರಿಗೆ ಆಮೇಲೆ ಅನ್ಯರಿಗೆ ಸಹ ಮಹಿಮೆ ಮಾನ ಮತ್ತು ಸಮಾಧಾನವನ್ನೂ ಕೊಡುವನು. ದೇವರಲ್ಲಿ ಪಕ್ಷಪಾತವಿಲ್ಲ.