Isaiah · chapter 10 · verse 33
Isaiah 10:33 in Kannada
ಇಗೋ, ಕರ್ತನೂ ಸೈನ್ಯಗಳ ಕರ್ತನು ಭಯಂಕರ ವಾಗಿ ಕೊಂಬೆಯನ್ನು ಕತ್ತರಿಸುವನು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವವು; ಗರ್ವಿಷ್ಠರು ತಗ್ಗಿಸಲ್ಪಡು ವರು.ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು.
Igo, kartanoo sainyagala kartanu bhayankara vaagi kombeyannu kattarisuvanu. Unnata vrukshagalu kadidu kelage beeluvavu; garvishtharu taggisalpadu varu.aatanu adaviya podegalannu kabbina dinda kadidubiduvanu; lebanonu obba balishtha ninda bidduhoguvadu.
Isaiah 10:33 in English
- King James Version (KJV)
- Behold, the Lord, the LORD of hosts, shall lop the bough with terror: and the high ones of stature [shall be] hewn down, and the haughty shall be humbled.
- World English Bible (WEB)
- Behold, the Lord, GOD of Armies, will lop the boughs with terror. The tall will be cut down, and the lofty will be brought low.
- American Standard Version (ASV)
- Behold, the Lord, Jehovah of hosts, will lop the boughs with terror: and the high of stature shall be hewn down, and the lofty shall be brought low.
- Bible in Basic English (BBE)
- See, the Lord, the Lord of armies, is cutting off his branches with a great noise, and his strong ones are falling and his high ones are coming down.
- Darby Translation (DBY)
- Behold the Lord, Jehovah of hosts, shall lop the boughs with violence; and the high ones of stature shall be hewn down, and the haughty shall be brought low;
- Webster's Bible (WBS)
- Behold, the LORD, the LORD of hosts will lop the bough with terror: and the high ones of stature [shall be] hewn down, and the haughty shall be humbled.
- Young's Literal Translation (YLT)
- Lo, the Lord, Jehovah of Hosts, Is lopping a branch with violence, And the high of stature are cut down, And the lofty are become low,
Read in context
- 31ಮದ್ಮೇನ ದಿಕ್ಕಾಪಾಲಾಯಿತು; ಗೇಬೀಮಿನ ನಿವಾಸಿ ಗಳು ಓಡಿಹೋಗಲು ಕೂಡಿಕೊಂಡರು.
- 32ಆ ದಿನ ದಲ್ಲಿ ಅವನು ನೋಬಿನಲ್ಲಿ ಇಳುಕೊಂಡವನಂತೆ ಇದ್ದಾಗ್ಯೂ ಚೀಯೋನ್ ಕುಮಾರ್ತೆಯ ಪರ್ವತಕ್ಕೂ ಯೆರೂಸಲೇಮಿನ ಗುಡ್ಡಕ್ಕೂ ವಿರೋಧವಾಗಿ ತನ್ನ ಕೈಯನ್ನು ಅಲ್ಲಾಡಿಸುವನು.
- 33ಇಗೋ, ಕರ್ತನೂ ಸೈನ್ಯಗಳ ಕರ್ತನು ಭಯಂಕರ ವಾಗಿ ಕೊಂಬೆಯನ್ನು ಕತ್ತರಿಸುವನು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವವು; ಗರ್ವಿಷ್ಠರು ತಗ್ಗಿಸಲ್ಪಡು ವರು.ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು.
- 34ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು.
Cross references
- Amos 2:9 ಆಮೋಸ 2:9ಆದಾಗ್ಯೂ ನಾನು ಅಮೋರಿಯನನ್ನು ಅವರ ಮುಂದೆ ನಾಶಮಾಡಿದೆನು; ಅವನ ಎತ್ತರವು ದೇವದಾರುಗಳ ಎತ್ತರದಷ್ಟಿತ್ತು. ಅವನು ಓಕ್ ಮರದ ಹಾಗೆ ಬಲವಾಗಿದ್ದನು. ಆದರೂ ನಾನು ಅವನ ಮೇಲೆ ಫಲವನ್ನೂ ಕೆಳಗಿನ ಬೇರುಗಳನ್ನೂ ನಾಶ ಮಾಡಿದೆನು.
- Isaiah 37:38 ಯೆಶಾಯ 37:38ತರುವಾಯ ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಪೂಜಿಸುತ್ತಿದ್ದಾಗ ಅದ್ರಮ್ಮೆ ಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವ ನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿ ಕೊಂಡು ಹೋದರು; ಅವನಿಗೆ ಬದಲಾಗಿ ಅವನ ಮಗನಾದ ಏಸರ್ಹದ್ದೋನನು ಆಳಿದನು.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Luke 14:11 ಲೂಕನು 14:11ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
- 2 Kings 19:21–37 2 ಅರಸುಗಳು 19:21–37ಚೀಯೋನಿನ ಮಗಳಾದ ಕನ್ಯಾಸ್ತ್ರೀ ನಿನ್ನನ್ನು ಉದಾಸೀನ ಮಾಡಿ ನಿನಗೆ ಅಪಹಾಸ್ಯ ಮಾಡು ತ್ತಾಳೆ; ಯೆರೂಸಲೇಮಿನ ಕುಮಾರ್ತೆ ನಿನ್ನ ಹಿಂದೆ ತಲೆ ಅಲ್ಲಾಡಿಸುತ್ತಾಳೆ. ಯಾರನ್ನು ನಿಂದಿಸಿ ದೂಷಿ ಸಿದಿ? ಯಾರಿಗೆ ವಿರೋಧವಾಗಿ ಸ್ವರವನ್ನು ಎತ್ತಿ ನಿನ್ನ ಕಣ್ಣುಗಳನ್ನು ಮೇಲಕ್ಕೆ ಎತ್ತಿದಿ? ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೇ. ನಿನ್ನ ಸೇವಕರ ಮುಖಾಂತರ ಕರ್ತನನ್ನು ನಿಂದಿಸಿ ಹೇಳಿದ್ದು--ನಾನು ನನ್ನ ಹೆಚ್ಚಾದ ರಥಗಳಿಂದ ಪರ್ವತಗಳ ಶಿಖರಕ್ಕೂ ಲೆಬನೋನಿನ ಪಾರ್ಶ್ವಗಳಿಗೂ ಹೋಗಿ ಅದರ ಉನ್ನತ ವಾದ ದೇವದಾರುಗಳನ್ನೂ ಅದರ ಮುಖ್ಯವಾದ ತುರಾಯಿ ಮರಗಳನ್ನೂ ಕಡಿದು ಅದರ ಅಂಚಿನ ಗಡಿ ಸ್ಥಳಗಳಲ್ಲಿಯೂ ಅದರ ಫಲವುಳ್ಳ ಅಡವಿಯ ಲ್ಲಿಯೂ ಸೇರುತ್ತೇನೆ. ನಾನು ಅಗೆದು ಅನ್ಯರ ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲುಗಳಿಂದ ಕೋಟೆ ಸ್ಥಳಗಳ ಪ್ರವಾಹಗಳನ್ನು ಬತ್ತಿಹೋಗುವಂತೆ ಮಾಡಿ ದ್ದೇನೆ. ನಾನು ಅದನ್ನು ಮಾಡಿದೆನೆಂದು ನೀನು ಬಹುಕಾಲದಿಂದಲೂ ನಾನು ಅದನ್ನು ನಿರೂಪಿಸಿದ್ದೇ ನೆಂದು ನೀನು ಪೂರ್ವದ ದಿವಸಗಳಿಂದಲೂ ಕೇಳ ಲಿಲ್ಲವೋ? ಈಗ ಅದನ್ನು ನಾನು ಅನುಭವಿಸುವಂತೆ ಮಾಡಿದ್ದೇನೆ, ನೀನು ಬಲವಾದ ಪಟ್ಟಣಗಳನ್ನು ಹಾಳಾದ ದಿಬ್ಬೆಗಳಾಗಿ ಮಾಡಿಬಿಡುವ ಹಾಗೆ ಇರು ವದೇ. ಆದದರಿಂದ ಅವುಗಳ ನಿವಾಸಿಗಳು ಬಲ ಹೀನರಾಗಿ ಹೆದರಿ ನಾಚಿಕೆಪಟ್ಟರು. ಹೊಲದ ಹುಲ್ಲಿನ ಹಾಗೆಯೂ ಹಸುರು ಪಲ್ಯದ ಹಾಗೆಯೂ ಮಾಳಿಗೆಗೆಳ ಮೇಲಿರುವ ಹುಲ್ಲಿನ ಹಾಗೆಯೂ ಬೆಳೆಯುವದಕ್ಕಿಂತ ಮುಂಚೆ ಬಾಡುವ ಪೈರಿನ ಹಾಗೆಯೂ ಇದ್ದರು. ನಿನ್ನ ಕೂತಿರುವಿಕೆಯನ್ನೂ ಹೊರಡುವಿಕೆಯನ್ನೂ ನಿನ್ನ ಬರುವಿಕೆಯನ್ನೂ ನೀನು ನನಗೆ ವಿರೋಧವಾಗಿ ಮಾಡುವ ರೌದ್ರವನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ ನಿನ್ನ ಅಹಂಕಾರವೂ ನನ್ನ ಕಿವಿಗಳಲ್ಲಿ ಬಂದದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ ನೀನು ಬಂದ ಮಾರ್ಗದಲ್ಲಿ ನಿನ್ನನ್ನು ಹಿಂತಿರುಗಿಸುವೆನು. ನಿನಗೆ ಗುರುತು ಇದೇ--ಈ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೇ ವರುಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ; ಆದರೆ ಮೂರನೇ ವರುಷ ದಲ್ಲಿ ನೀವು ಬಿತ್ತಿ ಕೊಯ್ಯಿರಿ; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ಫಲಗಳನ್ನು ತಿನ್ನಿರಿ. ಯೆಹೂದದ ಮನೆತನದಲ್ಲಿ ಉಳಿದು ತಪ್ಪಿಸಿಕೊಂಡವರು ತಿರಿಗಿ ಕೆಳಗೆ ಬೇರೂರಿ ಮೇಲಕ್ಕೆ ಫಲ ಬಿಡುವರು. ಯೆರೂ ಸಲೇಮಿನಿಂದ ಉಳಿದವರೂ ಚಿಯೋನ್ ಪರ್ವತ ದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ಮಾಡುವದು. ಆದ ದರಿಂದ ಕರ್ತನು ಅಶ್ಶೂರಿನ ಅರಸನನ್ನು ಕುರಿತು ಹೇಳುವದೇನಂದರೆ--ಅವನು ಈ ಪಟ್ಟಣದಲ್ಲಿ ಬರು ವದಿಲ್ಲ; ಅಲ್ಲಿ ಬಾಣವನ್ನು ಎಸೆಯುವದಿಲ್ಲ; ಗುರಾಣಿ ಹಿಡಿದುಕೊಂಡು ಅದರ ಮುಂದೆ ಸೇರುವದಿಲ್ಲ; ಅದಕ್ಕೆ ವಿರೋಧವಾಗಿ ದಿನ್ನೆಯನ್ನು ಹಾಕುವದಿಲ್ಲ. ಅವನು ಬಂದ ಮಾರ್ಗವಾಗಿಯೇ ತಿರಿಗಿ ಹೋಗುವನು; ಆದರೆ ಅವನು ಈ ಪಟ್ಟಣದಲ್ಲಿ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ. ನನ್ನ ನಿಮಿತ್ತವೂ ನನ್ನ ಸೇವಕನಾದ ದಾವೀದನ ನಿಮಿತ್ತವೂ ನಾನು ಈ ಪಟ್ಟಣವನ್ನು ಕಾಪಾಡಿ ಅದನ್ನು ರಕ್ಷಿಸುವೆನು ಎಂಬದೇ. ಅದೇ ರಾತ್ರಿಯಲ್ಲಿ ಏನಾಯಿತಂದರೆ, ಕರ್ತನ ದೂತನು ಹೊರಟು ಅಶ್ಶೂರಿನ ದಂಡಿನಲ್ಲಿ ಒಂದು ಲಕ್ಷ ಎಂಭತ್ತೈದು ಸಾವಿರ ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ ಇಗೋ, ಅವರೆಲ್ಲರೂ ಸತ್ತು ಹೆಣಗಳಾಗಿದ್ದರು. ಅಶ್ಶೂರಿನ ಅರಸನಾದ ಸನ್ಹೇರೀಬನು ಹಿಂತಿರುಗಿಹೋಗಿ ನಿನೆವೆಯಲ್ಲಿ ವಾಸ ವಾಗಿದ್ದನು.ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್ಹದ್ದೋನನು ಅವನಿಗೆ ಬದಲಾಗಿ ಅರಸನಾದನು. ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್ಹದ್ದೋನನು ಅವನಿಗೆ ಬದಲಾಗಿ ಅರಸನಾದನು.
- Isaiah 10:16–19 ಯೆಶಾಯ 10:16–19ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು. ಇಸ್ರಾಯೇಲಿನ ಬೆಳಕು ಬೆಂಕಿಯಾಗುವದು, ಅದರ ಪರಿಶುದ್ಧನು ಜ್ವಾಲೆ ಯಂತಿರುವನು; ಅದು ಒಂದೇ ದಿನದಲ್ಲಿ ಅವನ ಮುಳ್ಳು ದತ್ತೂರಿಗಳನ್ನು ದಹಿಸಿನುಂಗಿಬಿಡುವದು; ಅದು ದೇಹ ಮತ್ತು ಆತ್ಮಗಳನ್ನೂ ಅವನವನ ಹಾಗೂ ಫಲವತ್ತಾದ ಹೊಲವು ಹೊಂದಿರುವ ಘನತೆಯನ್ನೂ ದಹಿಸಿಬಿಡುವದು; ಅದು ಮೂರ್ಛೆ ಹೋಗುವ ರೋಗಿಯಂತಿರುವದು. ಅವನ ಉಳಿ ದವನ ವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆ ಯಾಗಿರುವದು.
- 2 Chronicles 32:21 2 ಪೂರ್ವಕಾಲವೃತ್ತಾಂತ 32:21ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು.
- Isaiah 2:11–17 ಯೆಶಾಯ 2:11–17ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು. ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು. ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ ಮತ್ತು ಬಾಷಾನಿನ ಎಲ್ಲಾ ಏಲಾಮರಗಳ ಮೇಲೆಯೂ ಎಲ್ಲಾ ಎತ್ತರವಾದ ಪರ್ವತಗಳ ಮತ್ತು ಎತ್ತರವಾಗಿ ರುವ ಗುಡ್ಡಗಳ ಮೇಲೆಯೂ ಎಲ್ಲಾ ಎತ್ತರವಾದ ಗೋಪುರಗಳ ಭದ್ರವಾದ ಎಲ್ಲಾ ಗೋಡೆಗಳ ಮೇಲೆ ಯೂ ಎಲ್ಲಾ ತಾರ್ಷೀಷ್ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಎಲ್ಲಾ ಚಿತ್ರಗಳ ಮೇಲೆಯೂ ಆ ದಿನವು ಬರುವದು. ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು.
- Isaiah 37:24–36 ಯೆಶಾಯ 37:24–36ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ--ನನ್ನ ರಥಸಮೂಹದೊಡನೆ ಪರ್ವತ ಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ಭಾಗಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು, ಶ್ರೇಷ್ಠವಾದ ತುರಾಯಿ ಮರಗಳನ್ನು ಕಡಿದುಬಿಟ್ಟಿದ್ದೇನೆ; ಅಂಚಿನ ಉನ್ನತವಾದ ಸ್ಥಳವನ್ನೂ ಮತ್ತು ಅದರ ಕರ್ಮೇಲಿನ ಅಡವಿಯನ್ನೂ ಪ್ರವೇಶಿಸಿದ್ದೇನೆ; ನಾನೇ ಅಗೆದು ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲಿನಿಂದ ಐಗು ಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ ಎಂಬದಾಗಿ ನೀನು ಹೇಳಿದ್ದೀ. ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದ್ದನ್ನು ನೀನು ಕೇಳಿಲ್ಲವೋ? ಈಗ ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ನೆರವೇರಿ ಸಿದ್ದೇನೆ. ಆದದರಿಂದಲೇ ಕೋಟೆಗಳುಳ್ಳ ಪಟ್ಟಣ ಗಳನ್ನು ಹಾಳು ದಿಬ್ಬಗಳನ್ನಾಗಿ ಮಾಡುವದು ನಿನಗೆ ಸಾಧ್ಯವಾಯಿತು; ಆದದರಿಂದ ಅವುಗಳ ನಿವಾಸಿ ಗಳು ಬಲವಿಲ್ಲದವರಾಗಿ ಆಶಾಭಂಗ ಪಟ್ಟು ಕಳವಳ ಗೊಂಡರು; ಅವರು ಹೊಲದ ಹುಲ್ಲಿನಂತೆಯೂ ಹಸಿರು ಎಲೆಯಂತೆಯೂ ಮಾಳಿಗೆಯ ಮೇಲಿನ ಹುಲ್ಲಿನಂತೆಯೂ ಹೊಡೆಯುವದಕ್ಕಿಂತ ಮೊದಲೇ ಬಾಡಿಹೋಗುವ ಪೈರಿನಂತೆಯೂ ಇದ್ದರು. ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ. ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನು ಎರಡನೇ ವರ್ಷದಲ್ಲಿ ಆದರಿಂದ ಮೊಳೆತದ್ದನ್ನು ತಿನ್ನುವಿರಿ. ಮೂರನೇ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ; ದ್ರಾಕ್ಷೇ ತೋಟವನ್ನು ನೆಟ್ಟು ಅವುಗಳ ಫಲವನ್ನು ತಿನ್ನುವದೇ ನಿಮಗೆ ಗುರುತಾಗಿ ರುವದು. ಯೆಹೂದನ ಮನೆತನದಿಂದ ತಪ್ಪಿಸಿ ಕೊಂಡು ಉಳಿದವರು ತಿರುಗಿ ಕೆಳಗೆ ಬೇರೂರಿ ಮೇಲಕ್ಕೆ ಫಲಫಲಿಸುವರು. ಯೆರೂಸಲೇಮಿನಿಂದ ಉಳಿದ ವರು ಮತ್ತು ಚೀಯೋನ್ ಪರ್ವತದಿಂದ ತಪ್ಪಿಸಿ ಕೊಂಡವರು; ಹೊರಡುವರು ಇದನ್ನು ಸೈನ್ಯಗಳ ಕರ್ತನ ಆಸಕ್ತಿಯು ಮಾಡುವದು. ಆದದರಿಂದ ಕರ್ತನು ಅಶ್ಶೂರದ ಅರಸನ ವಿಷಯವಾಗಿ ಹೇಳುವ ದೇನಂದರೆ ಅವನು ಈ ಪಟ್ಟಣಕ್ಕೆ ಬರಲಾರನು ಬಾಣವನ್ನು ಎಸೆಯನು, ಇಲ್ಲವೇ ಅದರ ಮುಂದೆ ಗುರಾಣಿಯೊಂದಿಗೆ ಬರಲಾರನು ಇಲ್ಲವೆ ಅದಕ್ಕೆ ವಿರೋಧವಾಗಿ ಮಣ್ಣಿನ ದಿಬ್ಬವನ್ನು ಹಾಕುವದಿಲ್ಲ. ಅವನು ಬಂದ ದಾರಿಯಿಂದಲೇ ಹಿಂತಿರುಗಿ ಹೋಗುವನು ಈ ಪಟ್ಟಣಕ್ಕೆ ಬರುವದೇ ಇಲ್ಲ. ಈ ಪಟ್ಟಣವನ್ನು ನನಗಾಗಿಯೂ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಕಾಪಾಡು ವೆನು ಎಂದು ಕರ್ತನು ಹೇಳುತ್ತಾನೆ. ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.
- Job 40:11–12 ಯೋಬನು 40:11–12ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.