Isaiah · chapter 13 · verse 5
Isaiah 13:5 in Kannada
ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
Kartanoo aatana roshakke aayudhagalaadavaroo doora deshadinda, andare aakaashamandalada kattakadeyinda deshavannellaa haalumaaduvadakkaagi baruttaare.
Isaiah 13:5 in English
- King James Version (KJV)
- They come from a far country, from the end of heaven, [even] the LORD, and the weapons of his indignation, to destroy the whole land.
- World English Bible (WEB)
- They come from a far country, from the uttermost part of heaven, even the LORD, and the weapons of his indignation, to destroy the whole land.
- American Standard Version (ASV)
- They come from a far country, from the uttermost part of heaven, even Jehovah, and the weapons of his indignation, to destroy the whole land.
- Bible in Basic English (BBE)
- They come from a far country, from the farthest part of heaven, even the Lord and the instruments of his wrath, with destruction for all the land.
- Darby Translation (DBY)
- They come from a far country, from the end of the heavens — Jehovah, and the weapons of his indignation — to destroy the whole land.
- Webster's Bible (WBS)
- They come from a far country, from the end of heaven, [even] the LORD, and the weapons of his indignation, to destroy the whole land.
- Young's Literal Translation (YLT)
- They are coming in from a land afar off, From the end of the heavens, Jehovah and the instruments of His indignation, To destroy all the land.
Read in context
- 3ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
- 4ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ.
- 5ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
- 6ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು.
- 7ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು.
Cross references
- Jeremiah 51:20–46 ಯೆರೆಮೀಯ 51:20–46ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ; ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ. ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ. ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ. ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ. ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ. ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ ಮೇದ್ಯರ ಅರಸರನ್ನೂ ಅದರ ಅಧಿಪತಿಗಳನ್ನೂ ಅಧಿಕಾರಿಗಳೆಲ್ಲರನ್ನೂ ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ. ಆಗ ದೇಶವು ಕದಲಿ ವೇದನೆಪಡುವದು; ಬಾಬೆಲಿನ ದೇಶವನ್ನು ನಿವಾಸಿ ಇಲ್ಲದೆ ಹಾಳುಮಾಡುವ ವಿಷಯವಾಗಿ ಬಾಬೆಲಿಗೆ ವಿರೋಧವಾದ ಕರ್ತನ ಆಲೋಚನೆಗಳು ಮಾಡಲ್ಪಡು ವವು. ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ. ಪಟ್ಟಣವು ಒಂದು ಕಡೆಯಲ್ಲಿ ಹಿಡಿಯಲ್ಪಟ್ಟಿದೆ ಎಂದೂ ದಾಟುವ ಸ್ಥಳಗಳು ವಶವಾದವೆಂದೂ ಬಿದಿರುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದೂ ಯುದ್ಧಸ್ಥರು ಗಾಬರಿ ಪಟ್ಟರೆಂದೂ ಬಾಬೆಲಿನ ಅರಸನಿಗೆ ತಿಳಿಸುವದಕ್ಕೆ ಓಡುವವನು ಓಡುವವನನ್ನೂ ತಿಳಿಸುವವನು ತಿಳಿಸುವವನನ್ನೂ ಎದುರುಗೊಳ್ಳುವದಕ್ಕೆ ಓಡುವರು. ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬೆಲಿನ ಮಗಳು ಇದ್ದಾಳೆ; ಇನ್ನು ಸ್ವಲ್ಪ ಹೊತ್ತಾದ ಮೇಲೆ ಅದಕ್ಕೆ ಸುಗ್ಗೀಕಾಲ ಬರುವದು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ. ನನಗೂ ನನ್ನ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬೆಲಿನ ಮೇಲೆ ಇರಲಿ ಎಂದು ಚೀಯೋನಿನ ನಿವಾಸಿ ಹೇಳುವನು; ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ ಎಂದು ಯೆರೂಸಲೇಮು ಹೇಳುವದು. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ; ಬಾಬೆಲ್ ದಿಬ್ಬೆಗಳಾಗುವದು; ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವೂ ಆಶ್ಚರ್ಯವೂ ಹಾಳೂ ಸಿಳ್ಳಿಡುವಿಕೆಯೂ ಆಗುವದು. ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು, ಸಿಂಹದ ಮರಿಗಳ ಹಾಗೆ ಶಬ್ದ ಮಾಡುವರು. ಅವರ ಉರಿಯಲ್ಲಿ ನಾನು ಅವರ ಔತಣವನ್ನು ಸಿದ್ಧಮಾಡುವೆನು; ಅವರು ಉಲ್ಲಾಸಿಸಿ ನಿತ್ಯವಾದ ನಿದ್ರೆಯನ್ನು ಮಾಡಿ ಎಚ್ಚರವಾಗದ ಹಾಗೆ ಅವರಿಗೆ ಅಮಲೇರಿಸುವೆನೆಂದು ಕರ್ತನು ಅನ್ನುತ್ತಾನೆ. ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು. ಶೇಷಕ್ ಹೇಗೆ ಹಿಡಿಯಲ್ಪಟ್ಟಿದೆ, ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; ಬಾಬೆಲ್ ಜನಾಂಗಗಳೊಳಗೆ ಹೀಗೆ ವಿಸ್ಮಯಗೊಳಗಾಯಿತು! ಬಾಬೆಲಿನ ಮೇಲೆ ಸಮುದ್ರವು ಬಂತು; ಅದರ ತೆರೆಗಳ ಸಮೂಹದಿಂದ ಮುಚ್ಚಲ್ಪಟ್ಟಿದೆ. ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ. ನಾನು ಬಾಬೆಲಿನಲ್ಲಿರುವ ಬೇಲ್ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು. ನನ್ನ ಜನರೇ, ಅದರೊಳಗಿಂದ ಹೊರಡಿರಿ; ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣವನ್ನು ಕರ್ತನ ಕೋಪದ ಉರಿಗೆ ತಪ್ಪಿಸಿರಿ. ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
- Matthew 24:31 ಮತ್ತಾಯನು 24:31ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
- Jeremiah 50:9 ಯೆರೆಮೀಯ 50:9ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ; ಬಾಬೆಲಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧ ವಾಗಿ ಯುದ್ಧವನ್ನು ಸಿದ್ಧಮಾಡುವರು; ಅಲ್ಲಿಂದ ಅದು ಹಿಡಿಯಲ್ಪಡುವದು; ಅವರ ಬಾಣಗಳು ಬಲಿಷ್ಠನಾದ ಪ್ರವೀಣಶಾಲಿಯ ಹಾಗಿರುವವು. ಯಾವದೂ ವ್ಯರ್ಥವಾಗಿ ತಿರುಗವು.
- Isaiah 13:17 ಯೆಶಾಯ 13:17ಇಗೋ, ಬೆಳ್ಳಿಯನ್ನು ಲಕ್ಷಿಸದೆ ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧ ವಾಗಿ ನಾನು ಎಬ್ಬಿಸುವೆನು.
- Jeremiah 50:3 ಯೆರೆಮೀಯ 50:3ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳು ಮಾಡಿ ಬಿಡುವದು; ಅವಳಲ್ಲಿ ಯಾರೂ ವಾಸಿಸುವದಿಲ್ಲ; ಮನುಷ್ಯರೂ ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ.
- Isaiah 5:26 ಯೆಶಾಯ 5:26ಆತನು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಅಂಚಿನಿಂದ ಅವರಿಗೆ ಸಿಳ್ಳುಹಾಕುವನು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು;
- Isaiah 24:1 ಯೆಶಾಯ 24:1ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ.
- Jeremiah 51:11 ಯೆರೆಮೀಯ 51:11ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ.