Isaiah · chapter 13 · verse 3
Isaiah 13:3 in Kannada
ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
Naanu nanna parishuddharige aajnyaapisi nanna mahimeyalli ullaasisuvavarannoo shoorarannoo nanna kopakke karediddene.
Isaiah 13:3 in English
- King James Version (KJV)
- I have commanded my sanctified ones, I have also called my mighty ones for mine anger, [even] them that rejoice in my highness.
- World English Bible (WEB)
- I have commanded my consecrated ones; yes, I have called my mighty men for my anger, even my proudly exulting ones.
- American Standard Version (ASV)
- I have commanded my consecrated ones, yea, I have called my mighty men for mine anger, even my proudly exulting ones.
- Bible in Basic English (BBE)
- I have given orders to my holy ones, I have sent out my men of war, those of mine who take pride in their power, to give effect to my wrath.
- Darby Translation (DBY)
- I have commanded my hallowed ones, I have also called my mighty men for mine anger, them that rejoice in my highness.
- Webster's Bible (WBS)
- I have commanded my sanctified ones, I have also called my mighty ones for my anger, [even] them that rejoice in my highness.
- Young's Literal Translation (YLT)
- I have given charge to My sanctified ones, Also I have called My mighty ones for Mine anger, Those rejoicing at Mine excellency.'
Read in context
- 1ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ.
- 2ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
- 3ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
- 4ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ.
- 5ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
Cross references
- Joel 3:11 ಯೋವೇಲ 3:11ಸುತ್ತಲಿನ ಎಲ್ಲಾ ಅನ್ಯಜನಾಂಗ ಗಳೇ, ಕೂಡಿಕೊಳ್ಳಿರಿ; ಓ ಕರ್ತನೇ, ನಿನ್ನ ಶೂರರನ್ನು ಅಲ್ಲಿ ಇಳಿಯ ಮಾಡು.
- Jeremiah 51:20–24 ಯೆರೆಮೀಯ 51:20–24ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ; ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ. ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
- Revelation 17:12–18 ಪ್ರಕಟನೆ 17:12–18ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ. ಅವರು ಒಂದೇ ಮನಸ್ಸುಳ್ಳವರಾಗಿದ್ದು ತಮ್ಮ ಅಧಿಕಾರವನ್ನೂ ಶಕ್ತಿಯನ್ನೂ ಮೃಗಕ್ಕೆ ಕೊಡುತ್ತಾರೆ. ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ. ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ. ಮೃಗದ ಮೇಲೆ ನೀನು ನೋಡಿದ ಹತ್ತು ಕೊಂಬು ಗಳು ಆ ಜಾರ ಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟ ವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವವು. ಯಾಕಂದರೆ ಅವರು ದೇವರ ಚಿತ್ತವನ್ನು ನೆರವೇರಿಸುವದಕ್ಕೆ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ರಾಜ್ಯವನ್ನು ಮೃಗಕ್ಕೆ ಕೊಡುವಂತೆ ದೇವರು ತನ್ನ ವಾಕ್ಯಗಳು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರೇಪಿಸಿದನು.ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು. ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು.
- Jeremiah 50:21–46 ಯೆರೆಮೀಯ 50:21–46ಮೆರಾಥಯಿಮ್ ದೇಶಕ್ಕೂ ಪೆಕೋದಿನ ನಿವಾಸಿ ಗಳಿಗೂ ವಿರೋಧವಾಗಿ ಏರಿಹೋಗು; ಅವರನ್ನು ಹಿಂದಟ್ಟಿ ಕೆಡಿಸಿಬಿಟ್ಟು ಸಂಪೂರ್ಣ ನಾಶಮಾಡು, ನಾನು ನಿನಗೆ ಆಜ್ಞಾಪಿಸಿದ್ದೆಲಾದರ ಪ್ರಕಾರ ಮಾಡು ಎಂದು ಕರ್ತನು ಅನ್ನುತ್ತಾನೆ. ಯುದ್ಧದ ಶಬ್ದವೂ ದೊಡ್ಡ ನಾಶನವೂ ದೇಶದಲ್ಲಿ ಇರುವದು. ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು! ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ; ಕರ್ತನು ತನ್ನ ಆಯುಧ ಶಾಲೆಯನ್ನು ತೆರೆದು, ರೋಷದ ಆಯುಧಗಳನ್ನು ಹೊರಗೆ ತಂದಿದ್ದಾನೆ; ಕಸ್ದೀಯರ ದೇಶದಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ನಿರ್ವಹಿಸ ಬೇಕಾದ ಕಾರ್ಯವುಂಟು. ಕಟ್ಟಕಡೆಯ ಮೇರೆ ಯಿಂದ ಅದಕ್ಕೆ ವಿರೋಧವಾಗಿ ಬನ್ನಿ; ಅದರ ಕಣಜಗಳನ್ನು ತೆರೆಯಿರಿ; ಅದನ್ನು ದಿಬ್ಬಗಳಂತೆ ತುಳಿ ಯಿರಿ; ಸಂಪೂರ್ಣವಾಗಿ ನಾಶಮಾಡಿರಿ; ಅದಕ್ಕೆ ಒಂದೂ ಉಳಿಯದಿರಲಿ. ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು. ಅವರು ಚೀಯೋನಿನಲ್ಲಿ ನಮ್ಮ ದೇವರಾದ ಕರ್ತನ ಪ್ರತಿದಂಡನೆಯನ್ನೂ ಆತನ ಆಲಯದ ಪ್ರತಿ ದಂಡನೆ ಯನ್ನೂ ತಿಳಿಸುತ್ತಾ, ಬಾಬೆಲಿನ ದೇಶದಿಂದ ತಪ್ಪಿಸಿ ಕೊಂಡು ಓಡಿ ಹೋಗುವವರ ಸ್ವರವು! ಬಾಬೆಲಿಗೆ ವಿರೋಧವಾಗಿ ಬಿಲ್ಲಿನವರನ್ನು ಒಟ್ಟಾಗಿ ಕರೆಯಿರಿ; ಬಿಲ್ಲು ಬೊಗ್ಗಿಸುವವರೆಲ್ಲರೇ, ಅದಕ್ಕೆ ವಿರೋಧವಾಗಿ ಸುತ್ತಲು ದಂಡು ಕಟ್ಟಿರಿ; ಅದರಲ್ಲಿ ಯಾವದು ತಪ್ಪಿಸಿ ಕೊಳ್ಳಲಾರದೆ ಇರಲಿ. ಅದರ ಕೃತ್ಯಗಳ ಪ್ರಕಾರ ಅದಕ್ಕೆ ಪ್ರತಿಫಲ ಕೊಡಿರಿ; ಅದು ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿರಿ; ಕರ್ತನಿಗೆ ವಿರೋಧವಾಗಿಯೂ ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೂ ಅದು ಗರ್ವ ತೋರಿಸಿತು. ಆದದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಯುದ್ಧಸ್ಥರೆಲ್ಲರು ಆ ದಿವಸದಲ್ಲಿ ತೆಗೆದುಹಾಕಲ್ಪಡು ವರೆಂದು ಕರ್ತನು ಅನ್ನುತ್ತಾನೆ. ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ; ನಿನ್ನ ದಿವಸವೂ ನಿನ್ನ ವಿಚಾರಣೆಯ ಕಾಲವೂ ಬಂತು. ಆಗ ಅತಿ ಗರ್ವದ (ರಾಜ್ಯವು) ಎಡವಿ ಬೀಳುವದು; ಅದನ್ನು ಎಬ್ಬಿಸುವದಕ್ಕೆ ಯಾರೂ ಇರುವದಿಲ್ಲ; ಅದರ ಪಟ್ಟಣಗಳಲ್ಲಿ ನಾನು ಬೆಂಕಿ ಹಚ್ಚುವೆನು, ಅದು ಅದರ ಸುತ್ತಲಿರುವದನ್ನೆಲ್ಲಾ ನುಂಗಿಬಿಡುವದು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು. ಕಸ್ದೀಯರಿಗೂ ಬಾಬೆಲಿನ ನಿವಾಸಿಗಳಿಗೂ ಅದರ ಪ್ರಧಾನರಿಗೂ ಜ್ಞಾನಿಗಳಿಗೂ ವಿರೋಧವಾಗಿ ಕತ್ತಿ ಉಂಟೆಂದು ಕರ್ತನು ಅನ್ನುತ್ತಾನೆ. ಸುಳ್ಳುಗಾರರಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗು ವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು. ಅವರ ಕುದುರೆಗಳಿಗೂ ರಥಗಳಿಗೂ ಅದರೊಳ ಗಿರುವ ಎಲ್ಲಾ ಜನರಿಗೆ ವಿರೋಧವಾಗಿ ಖಡ್ಗ ಉಂಟು. ಅವರು ಹೆಂಗಸರ ಹಾಗೆ ಬೆದರುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿಯೂ ಖಡ್ಗ ಉಂಟು. ಅವು ಕೊಳ್ಳೆಯಾಗುವವು. ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು. ಆದದರಿಂದ ಅರಣ್ಯದ ಕಾಡು ಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವವು. ಗೂಬೆಗಳೂ ಸಹ ಅದರಲ್ಲಿ ವಾಸಮಾಡುವವು; ಅದು ಇನ್ನು ಮೇಲೆ ಎಂದೆಂದಿಗೂ ನಿವಾಸವಾಗುವದಿಲ್ಲ; ತಲತಲಾಂತರಗಳ ವರೆಗೂ ಯಾರೂ ಅದರಲ್ಲಿ ತಂಗುವದಿಲ್ಲ. ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ. ಇಗೋ, ಒಂದು ಜನಾಂಗ ಉತ್ತರದಿಂದ ಬರುತ್ತದೆ; ಅದು ದೊಡ್ಡ ಜನಾಂಗವು. ಭೂಮಿಯ ಮೇರೆಗಳಿಂದ ಅನೇಕ ಅರಸರು ಎಬ್ಬಿಸಲ್ಪಡುವರು. ಅವರು ಬಿಲ್ಲನ್ನೂ ಭಲ್ಲೆಯನ್ನೂ ಹಿಡಿಯುವರು; ಅವರು ಕ್ರೂರರು; ಅಂತಃಕರುಣೆ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುವದು; ಬಾಬೆಲಿನ ಮಗಳೇ, ನಿನಗೆ ವಿರೋಧವಾಗಿ ಯುದ್ಧಕ್ಕೆ ಸಿದ್ಧವಾಗಿ ರುವ ಪುರುಷರ ಹಾಗೆ ಕುದುರೆಗಳನ್ನು ಹತ್ತಿಕೊಂಡು ಬರುವರು. ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು. ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಕ್ಕುವಿಕೆಯಿಂದ ಬಲವಾದ ನಿವಾಸಕ್ಕೆ ಏರಿ ಬರುವನು; ಆದರೆ ನಾನು ಅವರನ್ನು ಕ್ಷಣಮಾತ್ರ ದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು, ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ಮತ್ತು ನನಗೆ ಕಾಲವನ್ನು ನೇಮಿಸುವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು? ಆದದರಿಂದ ಕರ್ತನು ಬಾಬೆಲಿಗೆ ವಿರೋಧವಾಗಿ ಮಾಡಿದ ಆಲೋ ಚನೆಯನ್ನೂ ಆತನು ಕಸ್ದೀಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಚನೆಗಳನ್ನೂ ಕೇಳಿರಿ; ನಿಶ್ಚಯವಾಗಿ ಮಂದೆಯಲ್ಲಿ ಚಿಕ್ಕವುಗಳು ಅವರನ್ನು ಎಳೆಯುವವು; ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡುವನು.ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು. ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.
- Ezra 6:1–22 ಎಜ್ರನು 6:1–22ಆಗ ಅರಸನಾದ ದಾರ್ಯಾವೆಷನ ಅಪ್ಪ ಣೆಯ ಪ್ರಕಾರ ಅವರು ಪುಸ್ತಕ ಶಾಲೆ ಯಾಗಿದ್ದ ಬಾಬೆಲಿನ ಬೊಕ್ಕಸಗಳಲ್ಲಿ ಹುಡುಕಿದರು. ಮೇದ್ಯರ ದೇಶದಲ್ಲಿರುವ ಅಹ್ಮೆತಾ ಪಟ್ಟಣದಲ್ಲಿ ಬರೆ ಯಲ್ಪಟ್ಟ ಜ್ಞಾಪಕಾರ್ಥದ ಒಂದು ಸುರಳಿಯು ಅದರಲ್ಲಿ ಸಿಕ್ಕಿತು. ಅರಸನಾದ ಕೋರೆಷನ ಮೊದಲನೇ ವರುಷ ದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನಲ್ಲಿ ರುವ ದೇವರ ಆಲಯಕ್ಕೋಸ್ಕರ ಕೊಟ್ಟ ಅಪ್ಪಣೆ ಏನಂದರೆ--ಅವರು ಬಲಿಗಳನ್ನು ಅರ್ಪಿಸಿದ ಸ್ಥಳವಾದ ಆಲಯವು ಕಟ್ಟಲ್ಪಡಲಿ. ಅದರ ಅಸ್ತಿವಾರಗಳು ಬಲ ವಾಗಿ ಹಾಕಲ್ಪಡಲಿ; ಅದರ ಎತ್ತರ ಅರುವತ್ತು ಮೊಳ ಅದರ ಅಗಲ ಅರುವತ್ತು ಮೊಳ ಆಗಿರಲಿ; ದೊಡ್ಡ ಕಲ್ಲುಗಳ ಮೂರು ಸಾಲುಗಳೂ ಹೊಸ ತೊಲೆಗಳ ಒಂದು ಸಾಲೂ ಇರಲಿ. ಅದರ ಖರ್ಚು ಅರಮನೆ ಯಿಂದ ಕೊಡಲ್ಪಡಲಿ. ಇದಲ್ಲದೆ ನೆಬೂಕದ್ನೇಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತೆಗೆದು ಕೊಂಡು ಬಾಬೆಲಿಗೆ ಒಯ್ದು ದೇವರ ಆಲಯದ ಬೆಳ್ಳಿ ಬಂಗಾರದ ಸಾಮಾನುಗಳನ್ನು ತಿರಿಗಿ ಯೆರೂಸಲೇಮಿನಲ್ಲಿರುವ ಮಂದಿರಕ್ಕೆ ತಕ್ಕೊಂಡು ಹೋಗಿ ದೇವರ ಆಲಯದೊಳಗೆ ಅದರದರ ಸ್ಥಳದಲ್ಲಿ ಇರಿಸಲಿ ಎಂಬದೇ. ಆದಕಾರಣ ನದಿಯ ಆಚೆಯಲ್ಲಿರುವ ಅಧಿಪತಿ ಯಾದ ತತ್ತೆನೈಯನೇ, ಶೆತರ್ಬೋಜೆನೈಯೇ, ನದಿಯ ಆಚೆಯಲ್ಲಿರುವ ಅಪರ್ಸತ್ಕಾಯರಾದ ನಿಮ್ಮ ಜೊತೆ ಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರ್ರಿ. ದೇವರ ಆಲಯದ ಗೊಡವೆಯನ್ನು ನೀವು ಬಿಡಿರಿ. ಯೆಹೂದ್ಯರ ಅಧಿಪತಿಯೂ ಯೆಹೂದ್ಯರ ಹಿರಿಯರೂ ಅದರ ಸ್ಥಳದಲ್ಲಿ ದೇವರ ಆಲಯವನ್ನು ಕಟ್ಟಿಸಲಿ. ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನಂದರೆ--ಅವರು ಅಭ್ಯಂತರ ಮಾಡಲ್ಪಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ಕಪ್ಪದಿಂದಲೇ ಈ ಮನುಷ್ಯರಿಗೆ ಖರ್ಚು ಕೊಡಲ್ಪಡಲಿ. ಇದಲ್ಲದೆ ಅವರು ಪರ ಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ ಅರಸನ ಪ್ರಾಣಕ್ಕೋಸ್ಕರವೂ ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡುವ ಹಾಗೆಯೂ ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ ಅವರಿಗೆ ಬೇಕಾದ ಹೋರಿ ಗಳೂ ಟಗರುಗಳೂ ಕುರಿಮರಿಗಳೂ ಗೋಧಿಯೂ ಉಪ್ಪೂ ದ್ರಾಕ್ಷಾರಸವೂ ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಲ್ಪಡಲಿ. ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ. ಇದಲ್ಲದೆ ತನ್ನ ನಾಮವನ್ನು ಇರಿಸಲು ಮಾಡಿದ ದೇವರು ಯೆರೂಸಲೇಮಿನಲ್ಲಿರುವ ದೇವರ ಈ ಆಲಯವನ್ನು ಬದಲು ಮಾಡುವದಕ್ಕೂ ಕೆಡಿಸು ವದಕ್ಕೂ ತಮ್ಮ ಕೈಯನ್ನು ಚಾಚುವ ಎಲ್ಲಾ ಅರಸುಗ ಳನ್ನೂ ಜನರನ್ನೂ ಆತನು ಕೆಡಿಸಲಿ. ದಾರ್ಯಾ ವೆಷನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಅದು ತ್ವರೆ ಯಾಗಿ ಮಾಡಲ್ಪಡಲಿ ಎಂಬದು. ಆಗ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಅವರ ಜೊತೆ ಗಾರರೂ ಅರಸನಾದ ದಾರ್ಯಾವೆಷನು ಕಳುಹಿ ಸಿದ ಆಜ್ಞೆಯ ಪ್ರಕಾರ ತ್ವರೆಯಾಗಿ ಮಾಡಿದರು. ಹಾಗೆಯೇ ಯೆಹೂದ್ಯರ ಹಿರಿಯರು ಕಟ್ಟಿಸಿ, ಪ್ರವಾದಿಗಳಾದ ಹಗ್ಗಾಯನೂ ಇದ್ದೋನನ ಮಗ ನಾದ ಜೆಕರೀಯನೂ ಪ್ರವಾದಿಸಿದ್ದರಿಂದ ಅಭಿವೃದ್ಧಿ ಯನ್ನು ಹೊಂದಿದರು. ಅವರು ಇಸ್ರಾಯೇಲ್ ದೇವರ ಅಪ್ಪಣೆಯ ಪ್ರಕಾರವೂ ಕೋರೆಷನು ದಾರ್ಯಾವೆಷನು ಪಾರಸಿಯ ಅರಸನಾದ ಅರ್ತಷಸ್ತನು ಎಂಬವರ ಅಪ್ಪಣೆಯ ಪ್ರಕಾರವೂ ಕಟ್ಟಿ ತೀರಿಸಿದರು. ಅರಸ ನಾದ ದಾರ್ಯಾವೆಷನ ಆಳಿಕೆಯ ಆರನೇ ವರುಷದ ಅಡಾರ್ ತಿಂಗಳ ಮೂರನೇ ದಿವಸದಲ್ಲಿ ಈ ಆಲಯವು ಕಟ್ಟಿ ತೀರಿಸಲ್ಪಟ್ಟಿತು. ಆಗ ಇಸ್ರಾಯೇಲ್ಯರ ಮಕ್ಕಳೂ ಯಾಜಕರೂ ಲೇವಿಯರೂ ಸೆರೆಯಿಂದ ಬಂದ ಮಿಕ್ಕಾ ದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠೆಮಾಡಿದರು. ದೇವರ ಆಲಯದ ಪ್ರತಿಷ್ಠೆ ಗೋಸ್ಕರ ನೂರು ಹೋರಿಗಳನ್ನೂ ಇನ್ನೂರು ಟಗರು ಗಳನ್ನೂ ನಾನೂರು ಕುರಿಮರಿಗಳನ್ನೂ ಇಸ್ರಾಯೇಲ್ ಕುಲಗೋತ್ರಗಳ ಲೆಕ್ಕದ ಪ್ರಕಾರ ಸಮಸ್ತ ಇಸ್ರಾ ಯೇಲ್ಯರ ಪಾಪವನ್ನು ಕಳೆಯುವದಕ್ಕೋಸ್ಕರ ಹನ್ನೆರಡು ಮೇಕೆಯ ಹೋತಗಳನ್ನೂ ಬಲಿ ಅರ್ಪಿಸಿದರು. ಮೋಶೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಯೆರೂ ಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆ ಗೋಸ್ಕರ ಯಾಜಕರನ್ನು ಅವರ ಸರತಿಯ ಪ್ರಕಾರವೂ ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು. ಇದಲ್ಲದೆ ಸೆರೆಯ ಮಕ್ಕಳು ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ಪಸ್ಕವನ್ನು ಆಚರಿಸಿದರು. ಯಾಜಕರೂ ಲೇವಿಯರ ಕೂಡ ಶುದ್ಧಮಾಡಿ ಕೊಂಡಿದ್ದರು; ಅವರೆಲ್ಲರು ಶುಚಿಯಾಗಿದ್ದು ಸೆರೆಯ ಸಮಸ್ತ ಮಕ್ಕಳಿಗೋಸ್ಕರವೂ ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ ತಮಗೋಸ್ಕರವೂ ಪಸ್ಕ ವನ್ನು ವಧಿಸಿದರು. ಹಾಗೆಯೇ ಸೆರೆಯಿಂದ ತಿರಿಗಿ ಬಂದ ಇಸ್ರಾಯೇಲ್ ಮಕ್ಕಳು ಇಸ್ರಾಯೇಲ್ ದೇವ ರಾಗಿರುವ ಕರ್ತನನ್ನು ಹುಡುಕಲು ದೇಶದ ಜನಾಂಗ ಗಳ ಅಶುಚಿಯಿಂದ ತಮ್ಮನ್ನು ಪ್ರತ್ಯೇಕಿಸಿ ಕೊಂಡು ಅವರ ಕಡೆಗೆ ಸೇರಿದ ಸಮಸ್ತರೂ ಅದನ್ನು ತಿಂದು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಸಂತೋಷದಿಂದ ಏಳು ದಿವಸ ಆಚರಿಸಿದರು.ಇಸ್ರಾಯೇಲ್ ದೇವ ರಾಗಿರುವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವದಕ್ಕೆ ಅಶ್ಶೂರ್ ದೇಶದ ಅರ ಸನ ಹೃದಯವನ್ನು ಅವರ ಕಡೆಗೆ ತಿರುಗಿಸಿದ್ದರಿಂದ ಕರ್ತನು ಅವರನ್ನು ಸಂತೋಷಪಡಿಸಿದನು. ಇಸ್ರಾಯೇಲ್ ದೇವ ರಾಗಿರುವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವದಕ್ಕೆ ಅಶ್ಶೂರ್ ದೇಶದ ಅರ ಸನ ಹೃದಯವನ್ನು ಅವರ ಕಡೆಗೆ ತಿರುಗಿಸಿದ್ದರಿಂದ ಕರ್ತನು ಅವರನ್ನು ಸಂತೋಷಪಡಿಸಿದನು.
- Isaiah 23:11 ಯೆಶಾಯ 23:11ಆತನು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕರ್ತನು ವ್ಯಾಪಾರದ ಪಟ್ಟಣವನ್ನು (ಕಾನಾನ್) ಅದರ ದುರ್ಗ ಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾನೆ.
- Ezra 1:1–11 ಎಜ್ರನು 1:1–11ಯೆರೆವಿಾಯನ ಮುಖಾಂತರ ಕರ್ತನು ಹೇಳಿದ ವಾಕ್ಯವು ಈಡೇರುವ ಹಾಗೆ ಪಾರಸಿಯ ಅರಸನಾದ ಕೋರೆಷನ ಮೊದಲನೇ ವರುಷದಲ್ಲಿ ಕರ್ತನು ಪಾರಸಿಯ ಅರಸನಾದ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇನಂದರೆ-- ಪಾರಸಿಯ ಅರಸನಾದ ಕೋರೆಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾಗಿರುವ ಕರ್ತನು ಭೂಮಿಯ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದಲ್ಲಿರುವ ಯೆರೂಸಲೇಮಿನಲ್ಲಿ ತನಗೆ ಮನೆಯನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮೊಳಗೆ ಯಾರಿದ್ದೀರಿ? ಅವನ ಸಂಗಡ ಅವನ ದೇವರು ಇರಲಿ. ಅವನು ಯೆಹೂದದಲ್ಲಿ ರುವ ಯೆರೂಸಲೇಮಿಗೆ ಹೋಗಲಿ. ಯೆರೂಸಲೇಮಿನಲ್ಲಿರುವ ಇಸ್ರಾಯೇಲಿನ ದೇವರಾದ ಕರ್ತನ ಆಲಯವನ್ನು ಕಟ್ಟಲಿ (ಆತನೇ ದೇವರು). ಇದಲ್ಲದೆ ಯಾವ ಸ್ಥಳದಲ್ಲಾದರೂ ಯಾವನಾದರೂ ಪರದೇಶಸ್ಥ ನಾಗಿ ಉಳಿದಿದ್ದರೆ ಅವನ ಸ್ಥಳದ ಮನುಷ್ಯರು ಯೆರೂ ಸಲೇಮಿನಲ್ಲಿರುವ ದೇವರ ಆಲಯಕ್ಕೆ ಕೊಡುವ ಉಚಿತವಾದ ಕಾಣಿಕೆ ಅಲ್ಲದೆ ಅವನಿಗೆ ಬೆಳ್ಳಿಯಿಂದ ಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗ ಳಿಂದಲೂ ಸಹಾಯಮಾಡಲಿ ಅಂದನು. ಆಗ ಯೆಹೂದ, ಬೆನ್ಯಾವಿಾನ್ ತಂದೆಗಳ ಮುಖ್ಯ ಸ್ಥರೂ ಯಾಜಕರೂ ಲೇವಿಯರೂ ಯೆರೂಸಲೇಮಿನ ಲ್ಲಿರುವ ಕರ್ತನ ಆಲಯವನ್ನು ಕಟ್ಟುವದಕ್ಕೆ ಹೋಗಲು ಕರ್ತನಿಂದ ಪ್ರೇರೇಪಿಸಲ್ಪಟ್ಟವರೆಲ್ಲರೂ ಎದ್ದರು. ಅವರ ಸುತ್ತಲಿರುವವರೆಲ್ಲರೂ ಮನಃ ಪೂರ್ವಕವಾದ ಎಲ್ಲಾ ಕಾಣಿಕೆಗಳ ಹೊರತಾಗಿ ಬೆಳ್ಳಿಯ ಸಾಮಾನು ಗಳಿಂದಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗಳಿಂದಲೂ ಬೆಲೆಯುಳ್ಳವುಗಳಿಂದಲೂ ಅವರಿಗೆ ಸಹಾಯ ಮಾಡಿದರು. ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು ತನ್ನ ದೇವರುಗಳ ಮನೆಯಲ್ಲಿ ಇರಿಸಿದ್ದ ಕರ್ತನ ಆಲಯದ ಸಾಮಾನು ಗಳನ್ನು ಅರಸನಾದ ಕೋರೆಷನು ತರಿಸಿದನು. ಅವು ಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸ ದವನಾದ ಮಿತ್ರದಾತನ ಕೈಯಿಂದ ತರಿಸಿ ಯೆಹೂದದ ಪ್ರಭುವಾದ ಶೆಷ್ಬಚ್ಚರನಿಗೆ ಎಣಿಸಿ ಕೊಟ್ಟನು. ಅವುಗಳ ಲೆಕ್ಕವೇನಂದರೆ--ಮೂವತ್ತು ಬಂಗಾರದ ತಟ್ಟೆಗಳು, ಸಾವಿರ ಬೆಳ್ಳಿಯ ತಟ್ಟೆಗಳು, ಇಪ್ಪತ್ತೊಂಭತ್ತು ಕತ್ತಿಗಳು, ಮೂವತ್ತು ಬಂಗಾರದ ದೊಡ್ಡ ಬಟ್ಟಲುಗಳು, ನಾನೂರ ಹತ್ತು ಬೆಳ್ಳಿಯ ಬಟ್ಟಲುಗಳು, ಸಾವಿರ ಬೇರೆ ಸಾಮಾನುಗಳು. ಬಂಗಾರ ಬೆಳ್ಳಿಯ ಸಾಮಾನುಗಳೆಲ್ಲಾ ಐದು ಸಾವಿರದ ನಾನೂರು ಇದ್ದವು.ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು. ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.
- Ezra 7:12–26 ಎಜ್ರನು 7:12–26ಅರಸರಿಗೆ ಅರಸನಾದ ಅರ್ತಷಸ್ತನು ಪರಲೋಕದ ದೇವರ ನ್ಯಾಯಪ್ರಮಾಣ ವಿಷಯ ಶಾಸ್ತ್ರಿ ಯಾದ ಎಜ್ರನೆಂಬ ಯಾಜಕನಿಗೆ ಪೂರ್ಣ ಸಮಾಧಾನ ವಾಗಲಿ. ಇಂಥ ಸಮಯದಲ್ಲಿ ನನ್ನ ರಾಜ್ಯದಲ್ಲಿ ರುವ ಇಸ್ರಾಯೇಲಿನ ಸಮಸ್ತ ಜನರಲ್ಲಿಯೂ ಅವರ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಯಾರಾದರೂ ನಿನ್ನ ಸಂಗಡ ಯೆರೂಸಲೇಮಿಗೆ ಹೋಗಲು ಮನಸ್ಸಿ ದ್ದರೆ ಅವರು ಹೋಗಬಹುದೆಂದು ಅಪ್ಪಣೆಯನ್ನು ಕೊಟ್ಟಿದ್ದೇನೆ. ನೀನು ನಿನ್ನ ಕೈಯಲ್ಲಿರುವ ನಿನ್ನ ದೇವರ ನ್ಯಾಯಪ್ರಮಾಣದ ಹಾಗೆ ಯೆಹೂದ ಮತ್ತು ಯೆರೂ ಸಲೇಮನ್ನು ಕುರಿತು ವಿಚಾರಿಸುವದಕ್ಕೂ ಅರಸನೂ ಅವನ ಏಳು ಆಲೋಚನಾಕರ್ತರೂ ಯೆರೂಸಲೇಮಿ ನಲ್ಲಿ ನಿವಾಸವಾಗಿರುವ ಇಸ್ರಾಯೇಲ್ ದೇವರಿಗೆ ಮನಃಪೂರ್ವಕವಾಗಿ ಅರ್ಪಿಸಿದ ಬೆಳ್ಳಿ ಬಂಗಾರವನ್ನೂ ನೀನು ಬಾಬೆಲಿನ ಸಮಸ್ತ ಸೀಮೆಯಲ್ಲಿ ಸಂಪಾದಿಸಿದ ಬೆಳ್ಳಿ ಬಂಗಾರವನ್ನೂ ಅದರ ಸಂಗಡ ಯೆರೂಸ ಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕೋಸ್ಕರ ಜನರಿಂದಲೂ ಯಾಜಕರಿಂದಲೂ ಕೊಡಲ್ಪಟ್ಟ ಮನಃ ಪೂರ್ವಕವಾದ ಅರ್ಪಣೆಯನ್ನೂ ತಕ್ಕೊಂಡು ಹೋಗಿ ಆ ಹಣದಿಂದ ನೀನು ತ್ವರೆಯಾಗಿ ಹೋರಿಗಳನ್ನೂ ಟಗರುಗಳನ್ನೂ ಕುರಿಗಳನ್ನೂ ಅವುಗಳಿಗೆ ಕಾಣಿಕೆಗ ಳನ್ನೂ ಪಾನದ ಅರ್ಪಣೆಗಳನ್ನೂ ಕೊಂಡುಕೊಂಡು ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಬಲಿಪೀಠದ ಮೇಲೆ ಅರ್ಪಿಸುವದಕ್ಕೂ ನೀನು ಅರಸನಿಂದಲೂ ಅವನ ಏಳುಮಂದಿ ಸಲಹೆ ಗಾರರಿಂದಲೂ ಕಳುಹಿಸಲ್ಪಟ್ಟಿದ್ದೀ. ಮಿಕ್ಕಾದ ಬೆಳ್ಳಿ ಬಂಗಾರದಿಂದ ನಿನಗೂ ನಿನ್ನ ಸಹೋದರರಿಗೂ ಯಾವ ದನ್ನು ಮಾಡಲು ಯುಕ್ತವಾಗಿ ಕಾಣಿಸುವದೋ ಅದೇ ಪ್ರಕಾರ ನಿಮ್ಮ ದೇವರ ಚಿತ್ತದ ಹಾಗೆಯೇ ಮಾಡಿರಿ. ಇದಲ್ಲದೆ ನಿನ್ನ ದೇವರ ಆಲಯದ ಸೇವೆಯ ನಿಮಿತ್ತವಾಗಿ ನಿನಗೆ ಕೊಡಲ್ಪಟ್ಟ ಪಾತ್ರೆಗಳನ್ನು ನೀನು ಯೆರೂಸಲೇಮಿನ ದೇವರ ಮುಂದೆ ಒಪ್ಪಿಸಿಬಿಡು. ಇನ್ನು ಏನಾದರೂ ನಿನ್ನ ದೇವರ ಆಲಯಕ್ಕೋಸ್ಕರ ಅಗತ್ಯವಿದ್ದು ನೀನು ಕೊಡಬೇಕಾಗಿ ಬಂದರೆ ಅದನ್ನು ಅರಸನ ಬೊಕ್ಕಸದಿಂದ ತಕ್ಕೊಂಡುಕೊಡು. ಇದಲ್ಲದೆ ಅರಸನಾಗಿರುವ ಆರ್ತಷಸ್ತನಾದ ನಾನು ನದಿಯ ಆಚೆಯಲ್ಲಿರುವ ಎಲ್ಲಾ ಬೊಕ್ಕಸದವ ರಿಗೆ ಕೊಡುವ ಅಪ್ಪಣೆ ಏನಂದರೆ-- ಪರಲೋಕದ ದೇವರ ನ್ಯಾಯಪ್ರಮಾಣದ ಶಾಸ್ತ್ರಿಯಾಗಿರುವ ಯಾಜ ಕನಾದ ಎಜ್ರನು ನಿಮ್ಮಿಂದ ಏನಾದರೂ ಕೇಳಿದರೆ ಬೆಳ್ಳಿಯು ನೂರು ತಲಾಂತಿನ ಮಟ್ಟಿಗೂ ಗೋಧಿಯು ನೂರು ಕೊಳಗದ ಮಟ್ಟಿಗೂ ದ್ರಾಕ್ಷಾರಸವು ನೂರು ಬುದ್ದಲಿಯ ವರೆಗೂ ಎಣ್ಣೆಯು ನೂರು ಬುದ್ದಲಿಯ ವರೆಗೂ ಉಪ್ಪು ಬೇಕಾದಷ್ಟು ತ್ವರೆಯಾಗಿ ಕೊಡಲ್ಪಡಲಿ. ಪರಲೋಕದ ದೇವರಿಂದ ಏನಾದರೂ ಆಜ್ಞಾಪಿಸ ಲ್ಪಟ್ಟರೆ ಅದು ಪರಲೋಕದ ದೇವರ ಆಲಯಕ್ಕೋಸ್ಕರ ಜಾಗ್ರತೆಯಾಗಿ ಮಾಡಲ್ಪಡಲಿ. ಯಾಕಂದರೆ ಅರಸನೂ ಅವನ ಕುಮಾರರೂ ಆಳುವ ರಾಜ್ಯದ ಮೇಲೆ ರೌದ್ರ ಯಾಕೆ ಇರಬೇಕು? ಇದಲ್ಲದೆ ಯಾಜಕರೂ ಲೇವಿ ಯರೂ ಹಾಡುಗಾರರೂ ದ್ವಾರಪಾಲಕರೂ ನೆತಿನಿ ಯರೂ ಮೊದಲಾದ ದೇವರ ಆಲಯದ ಸೇವಕರನ್ನು ಕುರಿತು ಏನಂದರೆ--ಅವರ ಮೇಲೆ ತೆರಿಗೆಯನ್ನಾದರೂ ಕಪ್ಪವನ್ನಾದರೂ ಸುಂಕವನ್ನಾದರೂ ಹೊರಿಸಲು ಅಪ್ಪಣೆ ಇಲ್ಲವೆಂದು ನಿಮಗೆ ತಿಳಿಸುತ್ತೇನೆ. ಆದರೆ ಎಜ್ರನೇ, ನೀನು ನಿನ್ನ ದೇವರ ನ್ಯಾಯ ಪ್ರಮಾಣಗಳನ್ನು ತಿಳಿದಿರುವದರಿಂದ ನದಿಯ ಆಚೆಯ ಲ್ಲಿರುವ ಸಮಸ್ತ ಜನರಿಗೆ ನ್ಯಾಯತೀರಿಸುವ ಹಾಗೆಯೂ ಅವುಗಳನ್ನು ಅರಿಯದವರಿಗೆ ಬೋಧಿಸುವ ಹಾಗೆಯೂ ನಿನ್ನ ಕೈಯಲ್ಲಿರುವ ನಿನ್ನ ದೇವರ ಜ್ಞಾನದ ಪ್ರಕಾರ ಯಜಮಾನರನ್ನೂ ನ್ಯಾಯಾಧಿಪತಿಗಳನ್ನೂ ನೇಮಿಸು. ಇದಲ್ಲದೆ ಯಾವನಾದರೂ ನಿನ್ನ ದೇವರ ಕಟ್ಟಳೆ ಯನ್ನೂ ಅರಸನ ಕಟ್ಟಳೆಯನ್ನೂ ಕೈಕೊಳ್ಳದಿದ್ದರೆ ಮರಣಕ್ಕಾದರೂ ಗಡೀಪಾರಿಗಾದರೂ ಆಸ್ತಿ ಹಿಡಿಯು ವದಕ್ಕಾದರೂ ಸೆರೆಗಾದರೂ ಅವನಿಗೆ ಬೇಗ ನ್ಯಾಯ ತೀರಿಸಲ್ಪಡಲಿ ಅಂದನು.
- Isaiah 45:4–5 ಯೆಶಾಯ 45:4–5ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ. ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು.
- Psalm 149:5–9 ಕೀರ್ತನೆಗಳು 149:5–9ಪರಿಶುದ್ಧರು ಘನತೆಯಿಂದ ಉತ್ಸಾಹಪಡಲಿ; ತಮ್ಮ ಹಾಸಿಗೆಗಳ ಮೇಲೆ ಉತ್ಸಾಹಧ್ವನಿಮಾಡಲಿ. ಉನ್ನತ ದೇವರ ಸ್ತೋತ್ರಗಳು ಅವರ ಬಾಯಿಯ ಲ್ಲಿಯೂ ಇಬ್ಬಾಯಿ ಕತ್ತಿಯು ಅವರ ಕೈಯಲ್ಲಿಯೂ ಇರಲಿ. ಜನಾಂಗಗಳಲ್ಲಿ ಮುಯ್ಯಿಗೆಮುಯ್ಯನ್ನೂ ಪ್ರಜೆ ಗಳಲ್ಲಿ ಶಿಕ್ಷೆಗಳನ್ನೂ ಮಾಡಲಿ. ಅವರ ಅರಸುಗಳನ್ನು ಸಂಕೋಲೆಗಳಿಂದಲೂ ಅವರ ಘನವುಳ್ಳವರನ್ನು ಕಬ್ಬಿ ಣದ ಬೇಡಿಗಳಿಂದಲೂ ಬಂಧಿಸಲಿ;ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ. ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ.
- Psalm 149:2 ಕೀರ್ತನೆಗಳು 149:2ಇಸ್ರಾಯೇಲು ತನ್ನನ್ನು ಉಂಟುಮಾಡಿದಾತನಲ್ಲಿ ಸಂತೋಷಿಸಲಿ; ಚೀಯೋನಿನ ಮಕ್ಕಳು ತಮ್ಮ ಅರಸನಲ್ಲಿ ಉಲ್ಲಾಸಿಸಲಿ.