Isaiah · chapter 14 · verse 10
Isaiah 14:10 in Kannada
ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು.
Avarellaru ninage--namma haage neenu saha balaheenanaagiddee, neenu namma samaananaagiddee endu maataadi heluvaru.
Isaiah 14:10 in English
- King James Version (KJV)
- All they shall speak and say unto thee, Art thou also become weak as we? art thou become like unto us?
- World English Bible (WEB)
- They all will answer and ask you, “Have you also become as weak as we are? Have you become like us?”
- American Standard Version (ASV)
- All they shall answer and say unto thee, Art thou also become weak as we? art thou become like unto us?
- Bible in Basic English (BBE)
- They all make answer and say to you, Have you become feeble like us? have you been made even as we are?
- Darby Translation (DBY)
- All of them shall answer and say unto thee, Art thou also become powerless as we; art thou become like unto us!
- Webster's Bible (WBS)
- All they shall speak and say to thee, Art thou also become weak as we? Art thou become like us?
- Young's Literal Translation (YLT)
- All of them answer and say unto thee, Even thou hast become weak like us! Unto us thou hast become like!
Read in context
- 8ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
- 9ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
- 10ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು.
- 11ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ;
- 12ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ?
Cross references
- Psalm 49:6–14 ಕೀರ್ತನೆಗಳು 49:6–14ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು. ಆದರೆ ಸದಾ ಕಾಲಕ್ಕೂ ಬದುಕಿರುವಂತೆ ಮಾಡಿ ಕೊಳೆಯುವಿಕೆಯನ್ನು ನೋಡದ ಹಾಗೆ ತನ್ನ ಸಹೋದರನನ್ನು ಯಾವ ಮನುಷ್ಯನೂ ಅವನು ದೇವರಿಗೆ ಹಣವನ್ನು (ಈಡು) ಕೊಟ್ಟು ಅದರಿಂದ ವಿಮೋಚಿಸಲಾರನು. ಅವರ ಪ್ರಾಣದ ವಿಮೋಚನೆಯು ಅಮೂಲ್ಯ ವಾಗಿದೆ; ಅದು ಯುಗಯುಗಕ್ಕೂ ನಿಲ್ಲುವದು. ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ. ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ. ಮನುಷ್ಯನು ಘನವುಳ್ಳವನಾದರೂ ಸ್ಥಿರವಿಲ್ಲ; ಅವನು ನಾಶವಾಗುವ ಪಶುಗಳ ಹಾಗೆ ಇದ್ದಾನೆ. ಅವರ ಈ ಮಾರ್ಗವು ಅವರ ಹುಚ್ಚುತನ ವಾಗಿದೆ; ಆದರೆ ಅವರ ಸಂತಾನದವರು ಅವರ ಮಾತುಗಳನ್ನು ಮೆಚ್ಚುತ್ತಾರೆ. ಸೆಲಾ. ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು.
- Psalm 82:6–7 ಕೀರ್ತನೆಗಳು 82:6–7ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು. ಆದಾಗ್ಯೂ ಮನುಷ್ಯರ ಹಾಗೆ ನೀವು ಸಾಯುವಿರಿ; ಪ್ರಧಾನರಲ್ಲಿ ಒಬ್ಬನ ಹಾಗೆ ಬೀಳುವಿರಿ.ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ.
- Ecclesiastes 2:16 ಪ್ರಸಂಗಿ 2:16ಮೂಢನಿಗಿಂತ ಜ್ಞಾನವಂತನ ಜ್ಞಾಪ ಕವು ಎಂದಿಗೂ ಇರುವದಿಲ್ಲ; ಈಗ ಇರುವದು ಬರುವ ದಿವಸಗಳಲ್ಲಿ ಮರೆಯಲ್ಪಡುತ್ತದೆ. ಮೂಢನಂತೆ ಜ್ಞಾನಿಯೂ ಸಾಯುವದು ಹೇಗೆ?
- Psalm 49:20 ಕೀರ್ತನೆಗಳು 49:20ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ.
- Ezekiel 32:21 ಯೆಹೆಜ್ಕೇಲನು 32:21ಶೂರರಲ್ಲಿ ಬಲಿಷ್ಠರೂ ಅವನಿಗೆ ಸಹಾಯ ಮಾಡಿದವರ ಸಂಗಡ ಪಾತಾಳದೊಳಗಿಂದ ಅವನ ಸಂಗಡ ಮಾತನಾಡುವರು; ಅವರು ಇಳಿದುಹೋಗಿ ಸುನ್ನತಿ ಯಿಲ್ಲದವರಾಗಿಯೂ ಕತ್ತಿಯಿಂದ ಹತರಾದವರಾ ಗಿಯೂ ಮಲಗಿದ್ದಾರೆ.
- Luke 16:20–23 ಲೂಕನು 16:20–23ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು. ಐಶ್ವರ್ಯವಂತನ ಮೇಜಿ ನಿಂದ ಬೀಳುವ (ರೊಟ್ಟಿ) ತುಂಡುಗಳನ್ನು ತಿನ್ನುವದಕ್ಕೆ ಅವನು ಆಶೆಪಡುತ್ತಿದ್ದನು; ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು. ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು.