Isaiah · chapter 14 · verse 12
Isaiah 14:12 in Kannada
ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ?
O loosiphar udayada magane. Aakaashadinda neenu hege biddee? Janaangagalannu balaheena maadida neenu bhoomige hege kadiyalpattiddee?
Isaiah 14:12 in English
- King James Version (KJV)
- How art thou fallen from heaven, O Lucifer, son of the morning! [how] art thou cut down to the ground, which didst weaken the nations!
- World English Bible (WEB)
- How you have fallen from heaven, shining one, son of the dawn! How you are cut down to the ground, who laid the nations low!
- American Standard Version (ASV)
- How art thou fallen from heaven, O day-star, son of the morning! how art thou cut down to the ground, that didst lay low the nations!
- Bible in Basic English (BBE)
- How great is your fall from heaven, O shining one, son of the morning! How are you cut down to the earth, low among the dead bodies!
- Darby Translation (DBY)
- How art thou fallen from heaven, Lucifer, son of the morning! Thou art cut down to the ground, that didst prostrate the nations!
- Webster's Bible (WBS)
- How art thou fallen from heaven, O Lucifer, son of the morning! [how] art thou cut down to the ground, which didst weaken the nations!
- Young's Literal Translation (YLT)
- How hast thou fallen from the heavens, O shining one, son of the dawn! Thou hast been cut down to earth, O weakener of nations.
Read in context
- 10ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು.
- 11ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ;
- 12ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ?
- 13ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು.
- 14ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ;
Cross references
- Ezekiel 28:13–17 ಯೆಹೆಜ್ಕೇಲನು 28:13–17ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು. ನೀನೇ ಮುಚ್ಚು ವಂತ ಅಭಿಷೇಕಿಸಲ್ಪಟ್ಟ ಕೆರೂಬಿಯು ದೇವರ ಪರಿಶುದ್ಧ ಪರ್ವತದಲ್ಲಿ ನಿನ್ನನ್ನು ಇಟ್ಟೆನು; ಅಲ್ಲೇ ನೀನಿದ್ದಿ, ಬೆಂಕಿಯ ಕಲ್ಲುಗಳ, ಮಧ್ಯದಲ್ಲಿ ನೀನು ಕೆಳಗೂ ಮೇಲಕ್ಕೂ ತಿರುಗಾಡಿದಿ. ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು. ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ; ಆದದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ಬಿಸಾಡುವೆನು. ಓ ಮುಚ್ಚುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು. ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿ ಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಜ್ಞಾನವನ್ನು ಕೆಡಿಸಿಕೊಂಡಿ; ನಾನು ನಿನ್ನನ್ನು ನೆಲಕ್ಕೆ ಹಾಕುವೆನು. ಅರಸನ ಮುಂದೆ ಅವರು ನೋಡುವ ಹಾಗೆ ನಿನ್ನನ್ನು ಇಡುತ್ತೇನೆ;
- Luke 10:18 ಲೂಕನು 10:18ಆಗ ಆತನು ಅವರಿಗೆ--ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವದನ್ನು ನಾನು ನೋಡಿದೆನು.
- Revelation 12:7–10 ಪ್ರಕಟನೆ 12:7–10ಇದಲ್ಲದೆ ಪರಲೋಕದಲ್ಲಿ ಯುದ್ಧ ನಡೆಯಿತು. ವಿಾಕಾಯೇಲನೂ ಅವನ ದೂತರೂ ಘಟಸರ್ಪಕ್ಕೆ ವಿರೋಧವಾಗಿ ಯುದ್ಧಮಾಡಿದರು; ಘಟಸರ್ಪನೂ ಅವನ ದೂತರೂ ಯುದ್ದಮಾಡಿ ಸೋತು ಹೋದರು. ಆಗ ಪರಲೋಕದಲ್ಲಿ ಅವರಿಗೆ ಸ್ಥಾನವು ಇನ್ನೆಂದಿಗೂ ಇಲ್ಲದೆ ಹೋಯಿತು. ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
- Revelation 8:10 ಪ್ರಕಟನೆ 8:10ಮೂರನೆಯ ದೂತನು ಊದಿದಾಗ ದೀಪ ದಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶ ದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು.
- Revelation 22:16 ಪ್ರಕಟನೆ 22:16ಯೇಸುವೆಂಬ ನಾನು ಸಭೆಗಳಲ್ಲಿ ಇವುಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ಬೇರೂ ಸಂತತಿಯೂ ಉದಯದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ.
- 2 Peter 1:19 2 ಪೇತ್ರನು 1:19ನಮಗೂ ಬಹು ದೃಢವಾದ ಪ್ರವಾದನೆಯ ವಾಕ್ಯವು ಇರುತ್ತದೆ; ಆ ದಿನವು ಬೆಳಗುವವರೆಗೆ ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವ ತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪ ವೆಂದೆಣಿಸಿ ಅದಕ್ಕೆ ನೀವು ಲಕ್ಷ್ಯಕೊಡುವದು ಒಳ್ಳೇದು.
- Isaiah 34:4 ಯೆಶಾಯ 34:4ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.
- 2 Peter 2:4 2 ಪೇತ್ರನು 2:4ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು.
- Revelation 2:28 ಪ್ರಕಟನೆ 2:28ನಾನು ಅವನಿಗೆ ಉದಯನಕ್ಷತ್ರ ವನ್ನು ಕೊಡುವೆನು.ಆತ್ಮನು ಸಭೆಗಳಿಗೆ ಹೇಳುವ ದನ್ನು ಕಿವಿಯುಳ್ಳವನು ಕೇಳಲಿ.
- Jeremiah 51:20–24 ಯೆರೆಮೀಯ 51:20–24ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ; ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ. ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
- Jeremiah 50:23 ಯೆರೆಮೀಯ 50:23ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು!
- Isaiah 14:4–6 ಯೆಶಾಯ 14:4–6ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ. ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು.