Isaiah · chapter 15 · verse 1
Isaiah 15:1 in Kannada
ಮೋವಾಬಿನ ವಿಷಯವಾದ ದೈವೋಕ್ತಿ. ಆ ರಾತ್ರಿಯಲ್ಲಿ ಮೋವಾಬಿನ ಆರ್ ಹಾಳಾಗಿ ನಿಶ್ಯಬ್ದವಾಯಿತು; ಆ ರಾತ್ರಿಯಲ್ಲಿ ಮೋವಾ ಬಿನ ಕಿರ್ ಹಾಳಾಗಿ ನಿಶ್ಯಬ್ಧವಾಯಿತು
Movaabina vishayavaada daivokti. Aa raatriyalli movaabina aar haalaagi nishyabdavaayitu; aa raatriyalli movaa bina kir haalaagi nishyabdhavaayitu
Isaiah 15:1 in English
- King James Version (KJV)
- The burden of Moab. Because in the night Ar of Moab is laid waste, [and] brought to silence; because in the night Kir of Moab is laid waste, [and] brought to silence;
- World English Bible (WEB)
- The burden of Moab. For in a night, Ar of Moab is laid waste, and brought to nothing. For in a night Kir of Moab is laid waste, and brought to nothing.
- American Standard Version (ASV)
- The burden of Moab. For in a night Ar of Moab is laid waste, [and] brought to nought; for in a night Kir of Moab is laid waste, [and] brought to nought.
- Bible in Basic English (BBE)
- The word about Moab. For in a night Ar of Moab has become waste, and is seen no longer; for in a night Kir of Moab has become waste, and is seen no longer.
- Darby Translation (DBY)
- The burden of Moab: For in the night of being laid waste, Ar of Moab is destroyed; for in the night of being laid waste, Kir of Moab is destroyed!
- Webster's Bible (WBS)
- The burden of Moab. Because in the night Ar of Moab is laid waste, [and] brought to silence; because in the night Kir of Moab is laid waste, [and] brought to silence;
- Young's Literal Translation (YLT)
- The burden of Moab. Because in a night destroyed was Ar of Moab — It hath been cut off, Because in a night destroyed was Kir of Moab — It hath been cut off.
Read in context
- 1ಮೋವಾಬಿನ ವಿಷಯವಾದ ದೈವೋಕ್ತಿ. ಆ ರಾತ್ರಿಯಲ್ಲಿ ಮೋವಾಬಿನ ಆರ್ ಹಾಳಾಗಿ ನಿಶ್ಯಬ್ದವಾಯಿತು; ಆ ರಾತ್ರಿಯಲ್ಲಿ ಮೋವಾ ಬಿನ ಕಿರ್ ಹಾಳಾಗಿ ನಿಶ್ಯಬ್ಧವಾಯಿತು
- 2ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
- 3ಅವರು ತಮ್ಮ ಬೀದಿಗಳಲ್ಲಿ ಗೋಣೀತಟ್ಟನ್ನು ತಾವೇ ಸುತ್ತಿ ಕೊಳ್ಳುವರು; ಪ್ರತಿಯೊಬ್ಬನು ತಮ್ಮ ಮನೆಗಳ ಮೇಲೆ ಯೂ ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕ ದಿಂದ ಗೋಳಾಡುವನು.
Cross references
- Amos 2:1–3 ಆಮೋಸ 2:1–3ಕರ್ತನು ಹೀಗೆ ಹೇಳುತ್ತಾನೆ--ಮೋವಾಬಿನ ಮೂರು ಮತ್ತು ನಾಲ್ಕರ ಅಪರಾಧ ಗಳ ನಿಮಿತ್ತವಾಗಿ ನಾನು ಅದಕ್ಕಾಗುವ ದಂಡನೆಯಿಂದ ತಪ್ಪಿಸುವದಿಲ್ಲ; ಅವನು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣ ಮಾಡಿದ್ದಾನೆ. ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ಅದು ಕೆರೀಯೋತಿನ ಅರಮನೆಗಳನ್ನು ನುಂಗಿಬಿಡು ವದು. ಮೋವಾಬು ಆರ್ಭಟದ ಸಂಗಡವೂ ತುತೂ ರಿಯ ಧ್ವನಿಯ ಸಂಗಡವೂ ಗಲಿಬಿಲಿಯಲ್ಲಿ ಸಾಯು ವದು. ನಾನು ಅದರ ಮಧ್ಯದಿಂದ ನ್ಯಾಯಾಧಿಪತಿ ಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರುಗಳನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನೆಂದು ಕರ್ತನು ಹೇಳುತ್ತಾನೆ.
- Jeremiah 48:1–47 ಯೆರೆಮೀಯ 48:1–47ಮೋವಾಬಿಗೆ ವಿರೋಧವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅಯ್ಯೋ ನೆಬೋ ಸೂರೆಯಾಯಿತು; ಕಿರ್ಯಾತಯಿಮು ನಾಚಿಕೆಹೊಂದಿ ಹಿಡಿಯಲ್ಪಟ್ಟಿತು; ಮಿಸ್ಗಾಬ್ ನಾಚಿಕೆಹೊಂದಿ ಹೆದರಿಕೊಂಡಿತು. ಮೋವಾಬಿನ ಕೀರ್ತಿ ಇನ್ನು ಮೇಲೆ ಇರುವದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ಜನಾಂಗವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ, ಮದ್ಮೆನೇ, ನೀನು ಸಹ ಕಡಿಯಲ್ಪಡುವಿ; ಕತ್ತಿಯು ನಿನ್ನನ್ನು ಹಿಂದಟ್ಟುವದು. ಹೊರೊನಯಿಮಿನಿಂದ ಕೂಗುವ ಸ್ವರವು, ಸೂರೆಯು, ದೊಡ್ಡ ನಾಶನವು, ಹೊರಡುವದು. ಮೋವಾಬು ನಾಶವಾಯಿತು; ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು. ಲೂಹೀತ್ ದಿಣ್ಣೆಯನ್ನು ಅಳುತ್ತಲೇ ಹತ್ತುವರು; ಹೊರೊನಯಿಮಿನ ಇಳಿಜಾರಿನಲ್ಲಿ ಶತ್ರುಗಳು ನಾಶನದ ಶಬ್ದವನ್ನು ಕೇಳಿದ್ದಾರೆ. ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ತಪ್ಪಿಸಿಕೊಳ್ಳಿರಿ; ಅರಣ್ಯದಲ್ಲಿರುವ ಒಣಗಿಡದ ಹಾಗಿರ್ರಿ. ನಿನ್ನ ಕ್ರಿಯೆಗಳಲ್ಲಿಯೂ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟದ್ದ ರಿಂದ ನೀನು ಸಹ ಹಿಡಿಯಲ್ಪಡುವಿ; ಕೆಮೋಷನು, ಅವನ ಯಾಜಕರು, ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು. ಒಂದೊಂದು ಪಟ್ಟಣದ ಮೇಲೆ ಸೂರೆಗೊಳ್ಳುವವನು ಬರುವನು; ಕರ್ತನು ಹೇಳಿದ ಹಾಗೆಯೇ ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳ ಲಾರದು, ತಗ್ಗೂ ನಾಶವಾಗುವದು; ಬೈಲು ಹಾಳಾಗುವದು. ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಅದರ ಪಟ್ಟಣಗಳು ಹಾಳಾಗು ವವು; ಅವುಗಳಲ್ಲಿ ನಿವಾಸಿಗಳಿರುವದಿಲ್ಲ. ಕರ್ತನ ಕೆಲಸವನ್ನು ಮೋಸವಾಗಿ ನಡಿಸುವವನು ಶಾಪಗ್ರಸ್ತ ನಾಗಲಿ; ರಕ್ತದಿಂದ ತನ್ನ ಕತ್ತಿಯನ್ನು ಹಿಂತೆಗೆಯುವವನಿಗೆ ಶಾಪವಾಗಲಿ. ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯ ಲ್ಪಡಲಿಲ್ಲ; ಸೆರೆಗೆ ಹೋಗಲಿಲ್ಲ; ಆದದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ. ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು, ಅದರ ಪಾತ್ರೆಗಳನ್ನು ಬರಿದುಮಾಡಿ ತಮ್ಮ ಬುದ್ದಲಿಗಳನ್ನು ಒಡೆಯುವರು. ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು. ನಾವು ಪರಾಕ್ರಮ ಶಾಲಿಗಳೂ ಯುದ್ಧಕ್ಕೆ ಬಲಿಷ್ಠರೂ ಎಂದು ನೀವು ಹೇಳುವದು ಹೇಗೆ? ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ. ಮೋವಾಬಿನ ಆಪತ್ತು ಬರುವದಕ್ಕೆ ಸವಿಾಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ. ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ-- ಬಲವಾದ ಕೋಲೂ ಸೌಂದರ್ಯವಾದ ಬೆತ್ತವೂ ಹೇಗೆ ಮುರಿದು ಹೋಯಿತು! ಎಂದು ಹೇಳಿರಿ. ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ದಾಹವಾಗಿ ಕೂತುಕೋ, ಮೋವಾಬನ್ನು ಸೂರೆ ಮಾಡುವವನು ನಿನ್ನ ಮೇಲೆ ಬರುವನು, ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿ ಬಿಡುವನು. ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿಹೋಗು ವವನನ್ನೂ ತಪ್ಪಿಸಿಕೊಳ್ಳುವವನನ್ನೂ ಕೇಳು, ಏನಾಯಿ ತೆಂದು ಹೇಳು. ಮೋವಾಬು ನಾಚಿಕೆಪಡುತ್ತದೆ; ಮುರಿದು ಹೋಯಿತು; ಗೋಳಾಡಿರಿ, ಕೂಗಿರಿ; ಮೋವಾಬು ಸೂರೆಯಾಯಿತೆಂದು ಅರ್ನೋನಿನಲ್ಲಿ ಅದನ್ನು ತಿಳಿಸಿರಿ. ಇದಲ್ಲದೆ ಬೈಲು ಸೀಮೆಯ ಮೇಲೆ ನ್ಯಾಯತೀರ್ವಿಕೆ ಬಂತು; ಹೋಲೋನಿನ ಮೇಲೆಯೂ ಯಾಚದ ಮೇಲೆಯೂ ಮೆಫಾತ್ನ ಮೇಲೆಯೂ ದೀಬೋನಿನ ಮೇಲೆಯೂ ನೇಬೋನಿನ ಮೇಲೆಯೂ ಬೇತ್ದಿಬ್ಲಾತಯಿಮ್ನ ಮೇಲೆಯೂ ಕಿರ್ಯಾತಯಾಮಿನ ಮೇಲೆಯೂ ಬೇತ್ಗಾಮುಲಿನ ಮೇಲೆಯೂ ಬೇತ್ಮೆಯೋನಿನ ಮೇಲೆಯೂ ಕೆರೀಯೋತ್ನ ಮೇಲೆಯೂ ಬೊಚ್ರದ ಮೇಲೆಯೂ ಸವಿಾಪದಲ್ಲಾಗಲಿ ದೂರ ದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು. ಮೋವಾಬಿನ ಕೊಂಬು ಕಡಿದು ಹಾಕಲ್ಪಟ್ಟಿದೆ; ಅದರ ತೋಳು ಮುರಿಯಲ್ಪಟ್ಟಿದೆ ಎಂದು ಕರ್ತನು ಅನ್ನುತ್ತಾನೆ. ಅದನ್ನು ನೀವು ಅಮಲೇರಿಸಿರಿ; ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ಕಾರಿದ್ದ ರಲ್ಲಿ ಹೊರಳಾಡುವದು; ಅದೇ ಹಾಸ್ಯಕ್ಕಾಗಿರುವದು. ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ನೀನು ಅವರ ವಿಷಯ ಯಾವಾಗ ಮಾತನಾಡಿದಂದಿನಿಂದ ಸಂತೋಷಕ್ಕಾಗಿ ತಲೆ ಅಲ್ಲಾಡಿಸಿದಿಯಲ್ಲಾ. ಮೋವಾಬಿನಲ್ಲಿ ವಾಸ ವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರ್ರಿ; ಸಂದುಗಳ ಬಾಯಿಯ ಪಕ್ಕಗಳಲ್ಲಿ ಗೂಡುಕಟ್ಟುವ ಪಾರಿವಾಳದ ಹಾಗಿರ್ರಿ. ಮೋವಾ ಬಿನ ಹೆಮ್ಮೆಯನ್ನು ಕುರಿತು ಅದರ ಮಹಾಗರ್ವವನ್ನ್ನೂ ಡಂಬವನ್ನೂ ಅಹಂಕಾರವನ್ನೂ ಬಡಾಯಿಯನ್ನೂ ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ. ನಾನು ಅದರ ಕೋಪೋ ದ್ರೇಕವನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಆದರೆ ಅದು ಹಾಗೆ ಆಗುವದಿಲ್ಲ; ಅವನ ಸುಳ್ಳುಗಳು ಸರಿ ಬೀಳುವದಿಲ್ಲ. ಆದದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವದು. ಸಿಬ್ಮದ ದ್ರಾಕ್ಷೇಗಿಡವೇ, ಯಜ್ಜೇರಿನ ಅಳುವಿಕೆ ಯೊಂದಿಗೆ ನಿನ್ನ ನಿಮಿತ್ತ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ ನಿನ್ನ ದ್ರಾಕ್ಷೇ ಸುಗ್ಗಿಯ ಮೇಲೆಯೂ ಸೂರೆ ಮಾಡುವ ವನು ಬಿದ್ದಿದ್ದಾನೆ. ಫಲವುಳ್ಳ ಹೊಲದಿಂದಲೂ ಮೋವಾಬಿನ ದೇಶದಿಂದಲೂ ಸಂತೋಷವೂ ಉಲ್ಲಾ ಸವೂ ತೆಗೆಯಲ್ಪಟ್ಟಿವೆ; ದ್ರಾಕ್ಷೇಯಾಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಅರ್ಭಟದ ಸಂಗಡ ಅವರು ಯಾರೂ ತುಳಿಯುವದಿಲ್ಲ; ಆರ್ಭ ಟವೇ ಆರ್ಭಟವಾಗುವದಿಲ್ಲ. ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಳೆಯ ವರೆಗೂ ಯಹಚಿನ ವರೆಗೂ ಚೋಯರ್ ಮೊದಲ್ಗೊಂಡು ಹೊರೊನಯಿಮಿನ ವರೆಗೂ ಮೂರು ವರುಷದ ಕಡಸಿನಂತೆ ತಮ್ಮ ಶಬ್ದ ವನ್ನೆತ್ತಿದ್ದರು; ಯಾಕಂದರೆ ನಿವಿಾ್ರೇಮ್ನ ನೀರುಗಳು ಸಹ ಹಾಳಾದವು. ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ ತನ್ನ ದೇವರುಗಳಿಗೆ ಧೂಪ ಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡು ವೆನೆಂದು ಕರ್ತನು ಅನ್ನುತ್ತಾನೆ. ಆದದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವದು, ನನ್ನ ಹೃದಯವು ಕೀರ್ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡು ವದು. ಅವನು ಮಾಡಿಕೊಂಡ ದ್ರವ್ಯನಾಶವಾಯಿತು. ಎಲ್ಲಾ ತಲೆಗಳು ಬೋಳಾಗುವವು; ಎಲ್ಲಾ ಗಡ್ಡಗಳು ಕ್ಷೌರವಾಗುವವು; ಎಲ್ಲಾ ಕೈಗಳ ಮೇಲೆ ಗಾಯಗಳೂ ಸೊಂಟಗಳ ಮೇಲೆ ಗೋಣಿತಟ್ಟು ಇರುವವು. ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿರು ವದು. ಮೆಚ್ಚದ ಪಾತ್ರೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆಂದು ಕರ್ತನು ಅನ್ನುತ್ತಾನೆ. ಅದು ಹೇಗೆ ಮುರಿದು ಹೋಯಿತು! ಮೋವಾಬು ಹೇಗೆ ನಾಚಿಕೆಪಟ್ಟು ಬೆನ್ನು ತಿರುಗಿಸಿತು ಎಂದು ಗೋಳಿಡುವರು. ಹೀಗೆ ಮೋವಾಬು ಅದರ ಸುತ್ತಲಿರು ವವರೆಲ್ಲರಿಗೆ ಹಾಸ್ಯಕ್ಕೂ ಹೆದರಿಕೆಗೂ ಆಗುವದು. ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವನು ಹದ್ದಿನ ಹಾಗೆ ಹಾರಿ ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವೆನು. ಕೆರೀಯೋತ್ ವಶ ವಾಯಿತು; ಬಲವಾದ ಕೋಟೆಗಳು ಹಿಡಿಯಲ್ಪಟ್ಟವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೃದಯಗಳು ಹೆರುವ ಸ್ತ್ರೀಯ ಹೃದಯದಂತೆ ಇರುವವು. ಮೋವಾಬು ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ ಜನಾಂಗವಲ್ಲದ ಹಾಗೆ ನಾಶವಾಗುವದು. ಮೋವಾಬಿನ ನಿವಾಸಿಯೇ, ಹೆದರಿಕೆಯೂ ಕುಣಿಯೂ ಬೋನೂ ನಿನ್ನ ಮೇಲೆ ಇರುವವೆಂದು ಕರ್ತನು ಅನ್ನುತ್ತಾನೆ. ಹೆದರಿಕೆಗೆ ಓಡಿ ಹೋಗುವವನು ಕುಣಿಯಲ್ಲಿ ಬೀಳುವನು; ಕುಣಿ ಯೊಳಗಿಂದ ಏರಿಬರುವವನು ಬೋನಿನಲ್ಲಿ ಹಿಡಿಯ ಲ್ಪಡುವನು; ನಾನು ಅದರ ಮೇಲೆ ಅಂದರೆ ಮೋವಾ ಬಿನ ಮೇಲೆಯೇ ಅವರ ವಿಚಾರಣೆಯ ವರುಷವನ್ನು ತರುವೆನೆಂದು ಕರ್ತನು ಅನ್ನುತ್ತಾನೆ. ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ ಸೀಹೋನಿನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವದು. ಮೋವಾಬೇ ನಿನಗೆ ಅಯ್ಯೋ! ಕೆಮೋಷಿನ ಜನರು ನಾಶವಾದರು; ನಿನ್ನ ಕುಮಾರರು ಕುಮಾರ್ತೆಯರು ಸೆರೆಯಾಗಿಯೂ ಹಿಡಿಯಲ್ಪಟ್ಟರು.ಆದಾಗ್ಯೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸೆರೆಯನ್ನು ತಿರುಗಿ ತರುತ್ತೇನೆಂದು ಕರ್ತನು ಅನ್ನುತ್ತಾನೆ. ಈ ವರೆಗೆ ಮೋವಾಬಿನ ನ್ಯಾಯತೀರ್ವಿಕೆಯು ಇರುವದು. ಆದಾಗ್ಯೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸೆರೆಯನ್ನು ತಿರುಗಿ ತರುತ್ತೇನೆಂದು ಕರ್ತನು ಅನ್ನುತ್ತಾನೆ. ಈ ವರೆಗೆ ಮೋವಾಬಿನ ನ್ಯಾಯತೀರ್ವಿಕೆಯು ಇರುವದು.
- Ezekiel 25:8–11 ಯೆಹೆಜ್ಕೇಲನು 25:8–11ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಮೋವಾಬು ಮತ್ತು ಸೇಯಾರು--ಇಗೋ, ಯೆಹೂ ದನ ಮನೆಯು ಸಮಸ್ತ ಅನ್ಯಜನಾಂಗಗಳ ಹಾಗಿದೆ ಎಂದು ಹೇಳುವರು. ಆದದರಿಂದ ಇಗೋ, ನಾನು ಮೋವಾಬಿನ ಗಡಿಯನ್ನು ಪಟ್ಟಣಗಳ ಕಡೆ ಯಿಂದಲೂ ಅದರ ಪ್ರಾಂತ್ಯದಲ್ಲಿರುವಂತ ಮಹತ್ತಾದ ರಮ್ಯ ದೇಶದ ಪಟ್ಟಣಗಳಾದ ಬೇತ್ಯೆಷೀ ಮೋತ್ ಬಾಳ್ಮೆ ಯೋನ್ ಕಿರ್ಯಾಥಯಿಮ್ ಸೀಮೆಗಳನ್ನಲ್ಲದೆ ಅಮ್ಮೋನನಿಗೆ ಮೂಡಣದ ವರೆಗೆ ಸ್ವಾಸ್ತ್ಯವಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವ ರಿಗೆ ಸ್ವಾಸ್ತ್ಯವಾಗಿ ಕೊಡುವೆನು; ಮೋವಾಬ್ಯರಿಗೆ ನಾನು ನ್ಯಾಯಗಳನ್ನು ತೀರಿಸುವೆನು; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Isaiah 11:14 ಯೆಶಾಯ 11:14ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಪಿಯರ ಹೆಗಲಿನ ಮೇಲೆ ಎರಗುವರು; ಅವರು ಜೊತೆಯಾಗಿ ಪೂರ್ವದವರನ್ನು ಹಾಳುಮಾಡುವರು; ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ಹಾಕುವರು; ಅಮ್ಮೋನ್ಯರ ಮಕ್ಕಳು ಅವರಿಗೆ ವಿಧೇಯರಾಗುವರು.
- Numbers 21:28 ಅರಣ್ಯಕಾಂಡ 21:28ಬೆಂಕಿ ಹೆಷ್ಬೋನಿನಿಂದಲೂ ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು ಮೋವಾಬಿನ ಆರ್ ಎಂಬ ಪಟ್ಟಣವನ್ನೂ ಅರ್ನೋನಿನ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
- 1 Thessalonians 5:1–3 1 ಥೆಸಲೊನೀಕದವರಿಗೆ 5:1–3ಸಹೋದರರೇ, ಈ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯು ವದು ಅವಶ್ಯವಿಲ್ಲ. ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
- Isaiah 14:28 ಯೆಶಾಯ 14:28ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದೇವವಾಣಿಯಾಯಿತು.
- Zephaniah 2:8–11 ಚೆಫನ್ಯ 2:8–11ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ. ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು. ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವದು; ಅವರು ಸೈನ್ಯಗಳ ಕರ್ತನ ಜನರಿಗೆ ವಿರೋಧವಾಗಿ ನಿಂದಿಸಿ ತಮ್ಮನ್ನು ಹೆಚ್ಚಿಸಿಕೊಂಡ ದ್ದರಿಂದಲೇ ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು.
- Isaiah 16:7 ಯೆಶಾಯ 16:7ಆದದರಿಂದ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವದು, ಪ್ರತಿಯೊ ಬ್ಬನೂ ಗೋಳಾಡುವನು; ಕೀರ್ ಹರೆಷೆಥಿನ ಅಸ್ತಿವಾರ ಗಳಿಗೋಸ್ಕರ ನೀವು ದುಃಖಿಸುವಿರಿ; ನಿಜವಾಗಿಯೂ ಅವರು ನೊಂದುಹೋಗಿದ್ದಾರೆ.
- Isaiah 25:10 ಯೆಶಾಯ 25:10ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.
- Isaiah 16:11 ಯೆಶಾಯ 16:11ಆದದರಿಂದ ಮೋವಾಬಿನ ನಿಮಿತ್ತ ನನ್ನ ಕರುಳುಗಳು ಮತ್ತು ಕೀರ್ ಹರೇಷೆಥಿನ ನಿಮಿತ್ತ ನನ್ನ ಅಂತರಿಂದ್ರಿಯಗಳು ಕಿನ್ನರಿಯಂತೆ ಸ್ವರಗೈಯುವವು.
- 2 Kings 3:25 2 ಅರಸುಗಳು 3:25ಇದಲ್ಲದೆ ಅವರು ಪಟ್ಟಣ ಗಳನ್ನು ಕೆಡವಿಹಾಕಿ ಉತ್ತಮವಾದ ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಎಲ್ಲಾ ಉತ್ತಮವಾದ ಮರಗಳನ್ನು ಬೀಳಮಾಡಿದರು. ಕೀರ್ಹರೆಷೆತಿನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿ ಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನೂ ಸುತ್ತಿ ಕೊಂಡು ಹೊಡೆದುಬಿಟ್ಟರು.