Isaiah · chapter 25 · verse 10
Isaiah 25:10 in Kannada
ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.
Ee parvatadalli kartana kai vishra misikolluvadu; (neleyaagiruvadu) ona hulla nnu tippegundiyalli tuliyuvante movaabu aatana kelage tuliyalpaduvadu.
Isaiah 25:10 in English
- King James Version (KJV)
- For in this mountain shall the hand of the LORD rest, and Moab shall be trodden down under him, even as straw is trodden down for the dunghill.
- World English Bible (WEB)
- For the LORD’s hand will rest in this mountain. Moab will be trodden down in his place, even like straw is trodden down in the water of the dunghill.
- American Standard Version (ASV)
- For in this mountain will the hand of Jehovah rest; and Moab shall be trodden down in his place, even as straw is trodden down in the water of the dunghill.
- Bible in Basic English (BBE)
- For in this mountain will the hand of the Lord come to rest, and Moab will be crushed down in his place, even as the dry stems of the grain are crushed under foot in the waste place.
- Darby Translation (DBY)
- For in this mountain shall the hand of Jehovah rest, and Moab shall be trodden down under him, as straw is trodden down in the dunghill;
- Webster's Bible (WBS)
- For on this mountain shall the hand of the LORD rest, and Moab shall be trodden down under him, even as straw is trodden down for the dunghill.
- Young's Literal Translation (YLT)
- For rest doth the hand of Jehovah on this mountain, And trodden down is Moab under Him, As trodden down is straw on a dunghill.
Read in context
- 8ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
- 9ಆ ದಿನದಲ್ಲಿ (ಜನರು) ಹೇಳುವದೇನಂದರೆ--ಇಗೋ, ಈತನೇ ನಮ್ಮ ದೇವರು, ನಾವು ಈತನಿ ಗೋಸ್ಕರ ಕಾದಿದ್ದೇವೆ; ಈತನು ನಮ್ಮನ್ನು ರಕ್ಷಿಸುವನು. ಈತನೇ ಕರ್ತನು, ನಾವು ಈತನಿಗೋಸ್ಕರ ಕಾದಿ ದ್ದೇವೆ; ನಾವು ಈತನ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷ ಪಡುವೆವು.
- 10ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.
- 11ಈಜುವವನು ಈಜುವದಕ್ಕೆ ತನ್ನ ಕೈಗಳನ್ನು ಹರಡಿಕೊಂಡ ಹಾಗೆ, ಆತನು ಅದರ ಮಧ್ಯೆ ತನ್ನ ಕೈಗಳನ್ನು ಚಾಚುವನು. ಅದರ ಗರ್ವವನ್ನು ಅವರ ಕೊಳ್ಳೆಯೊಂದಿಗೆ ತಗ್ಗಿಸಿ ಬಿಡುವನು.ದುರ್ಗಮವಾಗಿಯೂ ಎತ್ತರವಾಗಿ ಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲಸಮಮಾಡಿ ದೂಳಿಗೆ ತರುವನು.
- 12ದುರ್ಗಮವಾಗಿಯೂ ಎತ್ತರವಾಗಿ ಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲಸಮಮಾಡಿ ದೂಳಿಗೆ ತರುವನು.
Cross references
- Isaiah 25:6 ಯೆಶಾಯ 25:6ಸೈನ್ಯಗಳ ಕರ್ತನು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ (ಕೊಬ್ಬಿದ) ಔತಣವನ್ನೂ ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ ಮೂಳೆ ಕೊಬ್ಬನ್ನೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾ ರಸವನ್ನು ಸಿದ್ದಮಾಡುವನು.
- Isaiah 26:6 ಯೆಶಾಯ 26:6ಕಾಲು ತುಳಿ ತಕ್ಕೆ ಈಡಾಗಿದೆ, ಬಡವರ ಕಾಲುಗಳೂ ದೀನರ ಪಾದಗಳೂ ಅದನ್ನು ತುಳಿಯುವವು;
- Zephaniah 3:15–17 ಚೆಫನ್ಯ 3:15–17ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Isaiah 18:4 ಯೆಶಾಯ 18:4ಕರ್ತನು ನನಗೆ--ನಾನು ವಿಶ್ರಾಂತಿ ಯನ್ನು ತೆಗೆದುಕೊಳ್ಳುವೆನು. ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂದು ಹೇಳಿದನು.
- Amos 2:1–3 ಆಮೋಸ 2:1–3ಕರ್ತನು ಹೀಗೆ ಹೇಳುತ್ತಾನೆ--ಮೋವಾಬಿನ ಮೂರು ಮತ್ತು ನಾಲ್ಕರ ಅಪರಾಧ ಗಳ ನಿಮಿತ್ತವಾಗಿ ನಾನು ಅದಕ್ಕಾಗುವ ದಂಡನೆಯಿಂದ ತಪ್ಪಿಸುವದಿಲ್ಲ; ಅವನು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣ ಮಾಡಿದ್ದಾನೆ. ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ಅದು ಕೆರೀಯೋತಿನ ಅರಮನೆಗಳನ್ನು ನುಂಗಿಬಿಡು ವದು. ಮೋವಾಬು ಆರ್ಭಟದ ಸಂಗಡವೂ ತುತೂ ರಿಯ ಧ್ವನಿಯ ಸಂಗಡವೂ ಗಲಿಬಿಲಿಯಲ್ಲಿ ಸಾಯು ವದು. ನಾನು ಅದರ ಮಧ್ಯದಿಂದ ನ್ಯಾಯಾಧಿಪತಿ ಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರುಗಳನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನೆಂದು ಕರ್ತನು ಹೇಳುತ್ತಾನೆ.
- Zephaniah 2:9 ಚೆಫನ್ಯ 2:9ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು.
- Jeremiah 48:2 ಯೆರೆಮೀಯ 48:2ಮೋವಾಬಿನ ಕೀರ್ತಿ ಇನ್ನು ಮೇಲೆ ಇರುವದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ಜನಾಂಗವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ, ಮದ್ಮೆನೇ, ನೀನು ಸಹ ಕಡಿಯಲ್ಪಡುವಿ; ಕತ್ತಿಯು ನಿನ್ನನ್ನು ಹಿಂದಟ್ಟುವದು.
- Isaiah 10:6 ಯೆಶಾಯ 10:6ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
- Isaiah 5:25 ಯೆಶಾಯ 5:25ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.
- Isaiah 11:10 ಯೆಶಾಯ 11:10ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.
- Numbers 24:17 ಅರಣ್ಯಕಾಂಡ 24:17ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು.
- Isaiah 11:14 ಯೆಶಾಯ 11:14ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಪಿಯರ ಹೆಗಲಿನ ಮೇಲೆ ಎರಗುವರು; ಅವರು ಜೊತೆಯಾಗಿ ಪೂರ್ವದವರನ್ನು ಹಾಳುಮಾಡುವರು; ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ಹಾಕುವರು; ಅಮ್ಮೋನ್ಯರ ಮಕ್ಕಳು ಅವರಿಗೆ ವಿಧೇಯರಾಗುವರು.