Isaiah · chapter 17 · verse 3
Isaiah 17:3 in Kannada
ಎಫ್ರಾ ಯಾಮಿನಿಂದ ಕೋಟೆಯೂ ದಮಸ್ಕದ ರಾಜ್ಯವೂ ಸಿರಿಯಾದ ಉಳಿದವುಗಳೂ ನಿಂತು ಹೋಗುವವು; ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರು ವರು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
Ephraa yaamininda koteyoo damaskada raajyavoo siriyaada ulidavugaloo nintu hoguvavu; avaru israayelina makkala vaibhavadante iru varu endu sainyagala kartanu heluttaane.
Isaiah 17:3 in English
- King James Version (KJV)
- The fortress also shall cease from Ephraim, and the kingdom from Damascus, and the remnant of Syria: they shall be as the glory of the children of Israel, saith the LORD of hosts.
- World English Bible (WEB)
- The fortress shall cease from Ephraim, and the kingdom from Damascus, and the remnant of Syria. They will be as the glory of the children of Israel,” says the LORD of Armies.
- American Standard Version (ASV)
- And the fortress shall cease from Ephraim, and the kingdom from Damascus, and the remnant of Syria; they shall be as the glory of the children of Israel, saith Jehovah of hosts.
- Bible in Basic English (BBE)
- The strong tower has gone from Ephraim, and the kingdom from Damascus: the rest of Aram will come to destruction, and be made like the glory of the children of Israel, says the Lord of armies.
- Darby Translation (DBY)
- The fortress also shall cease from Ephraim, and the kingdom from Damascus, and the remnant of Syria: they shall be as the glory of the children of Israel, saith Jehovah of hosts.
- Webster's Bible (WBS)
- The fortress also shall cease from Ephraim, and the kingdom from Damascus, and the remnant of Syria: they shall be as the glory of the children of Israel, saith the LORD of hosts.
- Young's Literal Translation (YLT)
- And ceased hath the fortress from Ephraim, And the kingdom from Damascus, And the remnant of Aram are as the honour of the sons of Israel, The affirmation of Jehovah of Hosts!
Read in context
- 1ದಮಸ್ಕದ ವಿಷಯವಾದ ದೈವೋಕ್ತಿ. ಇಗೋ, ದಮಸ್ಕವು ಇನ್ನು ಪಟ್ಟಣವಾಗಿ ರದೆ ತೆಗೆದುಹಾಕಲ್ಪಟ್ಟಿದೆ ಅದು ಹಾಳು ದಿಬ್ಬವಾಗಿ ರುವದು.
- 2ಆರೋಯೇರಿನ ಪಟ್ಟಣಗಳು ತಳ್ಳಿಹಾಕ ಲ್ಪಟ್ಟಿವೆ; ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ಮಲಗುವ ಮಂದೆಗಳಿಗೆ ಸ್ಥಳವಾಗುವದು.
- 3ಎಫ್ರಾ ಯಾಮಿನಿಂದ ಕೋಟೆಯೂ ದಮಸ್ಕದ ರಾಜ್ಯವೂ ಸಿರಿಯಾದ ಉಳಿದವುಗಳೂ ನಿಂತು ಹೋಗುವವು; ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರು ವರು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 4ಆ ದಿವಸದಲ್ಲಿ ಆಗುವದೇನಂದರೆ--ಯಾಕೋ ಬಿನ ವೈಭವ ತಗ್ಗುವದು; ಅದರ ಮಾಂಸದ ಕೊಬ್ಬು ಕರಗಿಸಲ್ಪಡುವದು.
- 5ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ ರೆಫಾಯಾಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವದು.
Cross references
- Hosea 9:11 ಹೋಶೇಯ 9:11ಎಫ್ರಾಯಾಮ್ಯರ ಘನತೆಯು ಹಾರಿಹೋಗುವ ಪಕ್ಷಿಯ ಹಾಗೆ ಇದೆ. ಜನ್ಮವಾಗಲಿ, ಗರ್ಭಧರಿಸುವದಾಗಲಿ ಉತ್ಪತ್ತಿಯಾಗಲಿ ಅವರಿಗೆ ಇರು ವದಿಲ್ಲ.
- Isaiah 7:16 ಯೆಶಾಯ 7:16ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.
- Isaiah 8:4 ಯೆಶಾಯ 8:4ಆ ಮಗುವು--ಅಪ್ಪಾ, ಅಮ್ಮಾ ಎಂದು ಕೂಗಬಲ್ಲವನಾಗುವದರ ಮುಂಚೆ ಅಶ್ಯೂರದ ಅರಸ ನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆ ಯನ್ನೂ ತೆಗೆದುಕೊಂಡು ಹೋಗುವನು ಅಂದನು.
- Isaiah 7:8 ಯೆಶಾಯ 7:8ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು.
- Micah 1:4–9 ಮೀಕ 1:4–9ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು. ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ? ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು. ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು. ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು. ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ.
- Isaiah 10:9 ಯೆಶಾಯ 10:9ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ?
- Isaiah 16:14 ಯೆಶಾಯ 16:14ಆದರೆ ಕರ್ತನು ಮಾತನಾಡಿ--ಮೂರು ವರುಷ ಗಳಲ್ಲಿ ಕೂಲಿಯಾಳಿನ ವರುಷಗಳಂತೆ ಮೋವಾಬಿನ ಮಹಿಮೆಯು ಆ ಎಲ್ಲಾ ದೊಡ್ಡ ಸಮೂಹದೊಂದಿಗೆ ತಿರಸ್ಕರಿಸಲ್ಪಡುವ ಹಾಗೆ ಉಳಿದವರು ಚಿಕ್ಕ ಗುಂಪಾಗಿ ಬಲಹೀನರಾಗುವರು ಎಂದು ಹೇಳಿದ್ದಾನೆ.
- Hosea 13:7–8 ಹೋಶೇಯ 13:7–8ಆದದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು; ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚಿಹಾಕುವೆನು. ಮರಿಗಳನ್ನು ಕಳೆದುಕೊಂಡ ಕರಡಿಯಂತೆ ನಾನು ಅವರನ್ನು ಎದುರುಗೊಳ್ಳುವೆನು; ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ಅಲ್ಲಿ ನಾನು ಸಿಂಹದ ಹಾಗೆ ಅವರನ್ನು ನುಂಗುವೆನು; ಕಾಡುಮೃಗವು ಅವರನ್ನು ಸೀಳಿಹಾಕುವದು.
- Amos 3:9–15 ಆಮೋಸ 3:9–15ಅಷ್ಡೋದಿನ ಅರಮನೆಗಳಲ್ಲಿ ಐಗುಪ್ತದೇಶದ ಅರಮನೆಗಳಲ್ಲಿ ಹೀಗೆ ಸಾರಿ ಹೇಳಿರಿ--ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ ಅದರ ಮಧ್ಯ ದಲ್ಲಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ. ತಮ್ಮ ಅರಮನೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರು ನ್ಯಾಯವಾದ ದ್ದನ್ನು ಮಾಡುವದಕ್ಕೆ ಅವರಿಗೆ ತಿಳಿಯುವದಿಲ್ಲ ಎಂದು ಕರ್ತನು ಹೇಳುತ್ತಾನೆ. ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ವಿರೋಧಿಯು ದೇಶದ ಸುತ್ತಲೂ ಇರುವನು; ನಿನ್ನಲ್ಲಿರುವ ನಿನ್ನ ಬಲವನ್ನು ತಗ್ಗಿಸುವನು; ನಿನ್ನ ಅರಮನೆಗಳು ಸೂರೆಯಾಗುವವು. ಕರ್ತನು ಹೀಗೆ ಹೇಳುತ್ತಾನೆ--ಕುರುಬರು ಸಿಂಹದ ಬಾಯಲ್ಲಿರುವ ಎರಡು ಕಾಲನ್ನು ಅಥವಾ ಕಿವಿಯ ಒಂದು ತುಂಡನ್ನು ಹೊರ ತೆಗೆಯುವ ಹಾಗೆ ಸಮಾರ್ಯ ದಲ್ಲಿ ಹಾಸಿಗೆಯ ಮೂಲೆಯಲ್ಲಿಯೂ ದಮಸ್ಕದಲ್ಲಿ ಸುಪ್ಪತ್ತಿಗೆಯಲ್ಲಿಯೂ ಇರುವ ಇಸ್ರಾಯೇಲಿನ ಮಕ್ಕಳು ತಪ್ಪಿಸಲ್ಪಡುವರು. ಸೈನ್ಯಗಳ ದೇವರಾದ ಕರ್ತನಾಗಿರುವ ದೇವರು ಹೇಳುವದೇನಂದರೆ--ನೀವು ಕೇಳಿ ಯಾಕೋಬಿನ ಮನೆತನದವರಿಗೆ ಸಾಕ್ಷಿಕೊಡಿರಿ. ಅದು--ನಾನು ಇಸ್ರಾಯೇಲಿನ ಅಪರಾಧಗಳನ್ನು ವಿಚಾರಿಸುವ ದಿನದಲ್ಲಿ ಬೇತೇಲಿನ ಯಜ್ಞವೇದಿಗಳನ್ನು ವಿಚಾರಿಸುವೆನು; ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು ನೆಲಕ್ಕೆ ಉರುಳುವವು.ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತಮಂದಿರಗಳು ನಾಶವಾಗು ವವು ಮತ್ತು ದೊಡ್ಡ ಮನೆಗಳು ಕೊನೆಗಾಣುವವು ಎಂದು ಕರ್ತನು ಹೇಳುತ್ತಾನೆ. ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತಮಂದಿರಗಳು ನಾಶವಾಗು ವವು ಮತ್ತು ದೊಡ್ಡ ಮನೆಗಳು ಕೊನೆಗಾಣುವವು ಎಂದು ಕರ್ತನು ಹೇಳುತ್ತಾನೆ.
- 2 Kings 17:6 2 ಅರಸುಗಳು 17:6ಹೋಶೇ ಯನ ಒಂಭತ್ತನೇ ವರುಷದಲ್ಲಿ ಅಶ್ಶೂರಿನ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು ಇಸ್ರಾಯೇಲನ್ನು ಅಶ್ಶೂರಿಗೆ ಸೆರೆಯಾಗಿ ಒಯ್ದು ಗೋಜಾನು ನದಿಯ ಬಳಿಯಲ್ಲಿರುವ ಹಲಹುನಲ್ಲಿಯೂ ಹಾಬೋರಿನ ಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.
- Hosea 5:13–14 ಹೋಶೇಯ 5:13–14ಎಫ್ರಾಯಾಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ ಎಫ್ರಾಯೀಮ್ ಅಶ್ಯೂರಕ್ಕೆ ಹೋಗಿ ಅರಸನಾದ ಯಾರೇಬನ ಬಳಿಗೆ ಕಳುಹಿಸಿತು; ಆದಾಗ್ಯೂ ಅವನು ನಿಮ್ಮನ್ನು ಸ್ವಸ್ಥಮಾಡ ಲಿಲ್ಲ, ಇಲ್ಲವೆ ನಿಮ್ಮ ಗಾಯವನ್ನು ಗುಣಪಡಿಸಲೂ ಇಲ್ಲ. ನಾನು ಎಫ್ರಾಯಾಮಿಗೆ ಸಿಂಹದ ಹಾಗೆಯೂ ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ಹೌದು, ನಾನು, ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಅವನನ್ನು ಯಾರೂ ಬಿಡಿಸಲಾರರು.ತಾವು ತಮ್ಮ ಅಪರಾಧವನ್ನು ಅರಿಕೆಮಾಡಿ ನನ್ನ ಮುಖವನ್ನು ಹುಡುಕುವ ವರೆಗೂ ನಾನು ತಿರುಗಿ ಕೊಂಡು ನನ್ನ ಸ್ಥಳಕ್ಕೆ ಹೋಗುವೆನು, ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.
Original words (Hebrew)
- fortress · H4013מִבְצָר mibtsâr
- cease · H7673שָׁבַת shâbath
- Ephraim · H669אֶפְרַיִם ʼEphrayim
- kingdom · H4467מַמְלָכָה mamlâkâh
- Damascus · H1834דַּמֶּשֶׂק Dammeseq
- remnant · H7605שְׁאָר shᵉʼâr
- Syria · H758אֲרָם ʼĂrâm
- glory · H3519כָּבוֹד kâbôwd
- children · H1121בֵּן bên
- Israel · H3478יִשְׂרָאֵל Yisrâʼêl
- saith · H5002נְאֻם nᵉʼum
- hosts · H6635צָבָא tsâbâʼ