Hosea · chapter 9 · verse 11
Hosea 9:11 in Kannada
ಎಫ್ರಾಯಾಮ್ಯರ ಘನತೆಯು ಹಾರಿಹೋಗುವ ಪಕ್ಷಿಯ ಹಾಗೆ ಇದೆ. ಜನ್ಮವಾಗಲಿ, ಗರ್ಭಧರಿಸುವದಾಗಲಿ ಉತ್ಪತ್ತಿಯಾಗಲಿ ಅವರಿಗೆ ಇರು ವದಿಲ್ಲ.
Ephraayaamyara ghanateyu haarihoguva pakshiya haage ide. Janmavaagali, garbhadharisuvadaagali utpattiyaagali avarige iru vadilla.
Hosea 9:11 in English
- King James Version (KJV)
- [As for] Ephraim, their glory shall fly away like a bird, from the birth, and from the womb, and from the conception.
- World English Bible (WEB)
- As for Ephraim, their glory will fly away like a bird. There will be no birth, no one with child, and no conception.
- American Standard Version (ASV)
- As for Ephraim, their glory shall fly away like a bird: there shall be no birth, and none with child, and no conception.
- Bible in Basic English (BBE)
- As for Ephraim, their glory will go in flight like a bird: there will be no birth and no one with child and no giving of life.
- Darby Translation (DBY)
- As for Ephraim, their glory shall fly away as a bird, — no birth, no pregnancy, no conception!
- Webster's Bible (WBS)
- [As for] Ephraim, their glory shall fly away like a bird, from the birth, and from the womb, and from the conception.
- Young's Literal Translation (YLT)
- Ephraim [is] as a fowl, Fly away doth their honour, without birth, And without womb, and without conception.
Read in context
- 9ಗಿಬ್ಯದ ದಿನಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ; ಆದದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕಮಾಡಿಕೊಳ್ಳುವನು, ಅವರ ಪಾಪಗಳನ್ನು ವಿಚಾರಿಸುವನು.
- 10ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.
- 11ಎಫ್ರಾಯಾಮ್ಯರ ಘನತೆಯು ಹಾರಿಹೋಗುವ ಪಕ್ಷಿಯ ಹಾಗೆ ಇದೆ. ಜನ್ಮವಾಗಲಿ, ಗರ್ಭಧರಿಸುವದಾಗಲಿ ಉತ್ಪತ್ತಿಯಾಗಲಿ ಅವರಿಗೆ ಇರು ವದಿಲ್ಲ.
- 12ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
- 13ನಾನು ತೂರನ್ನು ನೊಡಿದಂತೆ ಎಫ್ರಾಯಾಮು ರಮ್ಯ ಸ್ಥಳದಲ್ಲಿ ನೆಡಲ್ಪಟ್ಟಿದೆ; ಆದರೆ ಎಫ್ರಾಯಾಮು ಕೊಲ್ಲುವವನಿಗೆ ತನ್ನ ಮಕ್ಕಳನ್ನು ಹೊರಗೆ ತರುವದು.
Cross references
- Deuteronomy 28:18 ಧರ್ಮೋಪದೇಶಕಾಂಡ 28:18ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ.
- Hosea 4:7 ಹೋಶೇಯ 4:7ಅವರು ಹೆಚ್ಚಿದ ಹಾಗೆಲ್ಲಾ ನನಗೆ ವಿರೋಧವಾಗಿ ಪಾಪಮಾಡಿದರು; ಆದದರಿಂದ ನಾನು ಅವರ ಮಾನವನ್ನು ನಾಚಿಕೆಗೆ ಮಾರ್ಪಡಿಸುವೆನು.
- Genesis 41:52 ಆದಿಕಾಂಡ 41:52ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯಾಮ್ ಎಂದು ಹೆಸರಿಟ್ಟನು: ಯಾಕಂದರೆ ನಾನು ಬಾಧೆಯನ್ನನುಭವಿಸಿದ ದೇಶದಲ್ಲಿ ಫಲಭರಿತ ನಾಗುವಂತೆ ದೇವರು ಮಾಡಿದ್ದಾನೆ ಅಂದನು.
- Hosea 10:5 ಹೋಶೇಯ 10:5ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು.
- Hosea 9:14 ಹೋಶೇಯ 9:14ಓ ಕರ್ತನೇ, ಅವರಿಗೆ ಕೊಡು; ಅವರಿಗೆ ನೀನು ಏನು ಕೊಡುತ್ತೀ? ಗರ್ಭಸ್ರಾವವನ್ನು ಮಾಡು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡು.
- Job 18:5 ಯೋಬನು 18:5ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು.
- Genesis 48:16–20 ಆದಿಕಾಂಡ 48:16–20ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್ ಇಸಾಕ್ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು. ತನ್ನ ತಂದೆಯು ಎಫ್ರಾಯಾಮನ ತಲೆಯ ಮೇಲೆ ಬಲಗೈ ಇಟ್ಟದ್ದನ್ನು ಯೋಸೇಫನು ನೋಡಿದಾಗ ಅದು ಅವನ ದೃಷ್ಟಿಗೆ ಅಯುಕ್ತವಾಗಿತ್ತು. ಆದದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು ಎಫ್ರಾಯಾಮನ ತಲೆಯ ಮೇಲಿಂದ ತೆಗೆದು ಮನಸ್ಸೆಯ ತಲೆಯ ಮೇಲೆ ಇಡುವದಕ್ಕಿದ್ದನು. ಯೋಸೇಫನು ತನ್ನ ತಂದೆಗೆ--ನನ್ನ ಅಪ್ಪಾ, ಹಾಗಲ್ಲ, ಇವನೇ ಚೊಚ್ಚಲ ಮಗನು. ಇವನ ತಲೆಯ ಮೇಲೆ ಬಲಗೈ ಇಡು ಅಂದನು. ಅದಕ್ಕೆ ಅವನ ತಂದೆಯು ಒಪ್ಪದೆ--ನನಗೆ ತಿಳಿಯಿತು, ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವದಲ್ಲದೆ ಅವನು ದೊಡ್ಡವನಾ ಗುವನು. ಆದಾಗ್ಯೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತ ತಿಯು ಜನಾಂಗಗಳ ಸಮೂಹವಾಗುವದು ಅಂದನು. ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
- Deuteronomy 33:17 ಧರ್ಮೋಪದೇಶಕಾಂಡ 33:17ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು.
- Ecclesiastes 6:3 ಪ್ರಸಂಗಿ 6:3ತನ್ನ ವರುಷಗಳ ದಿನಗಳು ಬಹಳವಾಗಿದ್ದು ತನ್ನ ಪ್ರಾಣವು ಸುಖದಿಂದ ತೃಪ್ತಿ ಪಡದೆ ತನಗೆ ಹೂಣಿಡುವಿಕೆಯು ಇಲ್ಲದೇ ಅವನು ನೂರು ಮಕ್ಕಳನ್ನು ಪಡೆದು ಅನೇಕ ವರುಷಗಳು ಬದುಕಿದರೆ ನಾನು ಹೇಳುವದೇನಂದರೆ, ಅವನಿ ಗಿಂತಲೂ ಇನ್ನು ಹುಟ್ಟದಿರುವವನೇ ಉತ್ತಮ.
- Psalm 58:8 ಕೀರ್ತನೆಗಳು 58:8ಬಸವನ ಹುಳವು ಕರಗಿಹೋಗುವಂತೆ ಅವರಲ್ಲಿ ಪ್ರತಿಯೊಬ್ಬನು ಗತಿಸಿಹೋಗಲಿ; ದಿನ ತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ದೃಷ್ಟಿಸರು.
- Job 18:18–19 ಯೋಬನು 18:18–19ಬೆಳಕಿನಿಂದ ಅವನನ್ನು ಕತ್ತ ಲೆಗೆ ದೊಬ್ಬುವರು; ಲೋಕದಿಂದ ಓಡಿಸುವರು. ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ.
- Luke 23:29 ಲೂಕನು 23:29ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ.