Isaiah 18:6 in Kannada
ಅವೆಲ್ಲ ಬೆಟ್ಟಗಳ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಬಿಡಲ್ಪಡುವವು; ಪಕ್ಷಿಗಳು ಅವುಗಳ ಮೇಲೆ ಬೇಸಿಗೆಯನ್ನು ಭೂಮಿಯ ಎಲ್ಲಾ ಮೃಗಗಳು ಅವುಗಳ ಮೇಲೆ ಚಳಿಗಾಲವನ್ನು ಕಳೆಯುವವು.ಚದರಿಸಲ್ಪಟ್ಟು ಸೂರೆಯಾಗಿರುವ ಜನರೂ ಅವರು ಹುಟ್ಟಿದಂದಿನಿಂದ ಇಲ್ಲಿಯ ವರೆಗೂ ಭಯಂಕರವಾದ ಜನರೂ ಮಹಾಬಲದಿಂದ ತುಳಿಯಲ್ಪಡುವರು. ನದಿ ಗಳಿಂದ ಹಾಳಾಗಿರುವ ದೇಶದವರು ಸೈನ್ಯಗಳ ಕರ್ತನ ಹೆಸರಿನ ಸ್ಥಳವಾದ ಚೀಯೋನ್ ಪರ್ವತಕ್ಕೆ ಆತನಿ ಗೊಸ್ಕರ ಕಾಣಿಕೆಯನ್ನು ತರುವರು.
Avella bettagala pakshigaligoo bhoomiya mrugagaligoo bidalpaduvavu; pakshigalu avugala mele besigeyannu bhoomiya ellaa mrugagalu avugala mele chaligaalavannu kaleyuvavu.chadarisalpattu sooreyaagiruva janaroo avaru huttidandininda illiya varegoo bhayankaravaada janaroo mahaabaladinda tuliyalpaduvaru. Nadi galinda haalaagiruva deshadavaru sainyagala kartana hesarina sthalavaada cheeyon parvatakke aatani goskara kaanikeyannu taruvaru.
Isaiah 18:6 in English
- King James Version (KJV)
- They shall be left together unto the fowls of the mountains, and to the beasts of the earth: and the fowls shall summer upon them, and all the beasts of the earth shall winter upon them.
- World English Bible (WEB)
- They will be left together for the ravenous birds of the mountains, and for the animals of the earth. The ravenous birds will eat them in the summer, and all the animals of the earth will eat them in the winter.
- American Standard Version (ASV)
- They shall be left together unto the ravenous birds of the mountains, and to the beasts of the earth; and the ravenous birds shall summer upon them, and all the beasts of the earth shall winter upon them.
- Bible in Basic English (BBE)
- They will be for the birds of the mountains, and for the beasts of the earth: the birds will come down on them in the summer, and the beasts of the earth in the winter.
- Darby Translation (DBY)
- They shall be left together unto the mountain birds of prey, and to the beasts of the earth; and the birds of prey shall summer upon them, and all the beasts of the earth shall winter upon them.
- Webster's Bible (WBS)
- They shall be left together to the fowls of the mountains, and to the beasts of the earth: and the fowls shall summer upon them, and all the beasts of the earth shall winter upon them.
- Young's Literal Translation (YLT)
- They are left together to the ravenous fowl of the mountains, And to the beast of the earth, And summered on them hath the ravenous fowl, And every beast of the earth wintereth on them.
Read in context
- 4ಕರ್ತನು ನನಗೆ--ನಾನು ವಿಶ್ರಾಂತಿ ಯನ್ನು ತೆಗೆದುಕೊಳ್ಳುವೆನು. ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂದು ಹೇಳಿದನು.
- 5ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷೇ ಕಾಯಿಯಾಗುವಾಗ ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕು ವನು.
- 6ಅವೆಲ್ಲ ಬೆಟ್ಟಗಳ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಬಿಡಲ್ಪಡುವವು; ಪಕ್ಷಿಗಳು ಅವುಗಳ ಮೇಲೆ ಬೇಸಿಗೆಯನ್ನು ಭೂಮಿಯ ಎಲ್ಲಾ ಮೃಗಗಳು ಅವುಗಳ ಮೇಲೆ ಚಳಿಗಾಲವನ್ನು ಕಳೆಯುವವು.ಚದರಿಸಲ್ಪಟ್ಟು ಸೂರೆಯಾಗಿರುವ ಜನರೂ ಅವರು ಹುಟ್ಟಿದಂದಿನಿಂದ ಇಲ್ಲಿಯ ವರೆಗೂ ಭಯಂಕರವಾದ ಜನರೂ ಮಹಾಬಲದಿಂದ ತುಳಿಯಲ್ಪಡುವರು. ನದಿ ಗಳಿಂದ ಹಾಳಾಗಿರುವ ದೇಶದವರು ಸೈನ್ಯಗಳ ಕರ್ತನ ಹೆಸರಿನ ಸ್ಥಳವಾದ ಚೀಯೋನ್ ಪರ್ವತಕ್ಕೆ ಆತನಿ ಗೊಸ್ಕರ ಕಾಣಿಕೆಯನ್ನು ತರುವರು.
- 7ಚದರಿಸಲ್ಪಟ್ಟು ಸೂರೆಯಾಗಿರುವ ಜನರೂ ಅವರು ಹುಟ್ಟಿದಂದಿನಿಂದ ಇಲ್ಲಿಯ ವರೆಗೂ ಭಯಂಕರವಾದ ಜನರೂ ಮಹಾಬಲದಿಂದ ತುಳಿಯಲ್ಪಡುವರು. ನದಿ ಗಳಿಂದ ಹಾಳಾಗಿರುವ ದೇಶದವರು ಸೈನ್ಯಗಳ ಕರ್ತನ ಹೆಸರಿನ ಸ್ಥಳವಾದ ಚೀಯೋನ್ ಪರ್ವತಕ್ಕೆ ಆತನಿ ಗೊಸ್ಕರ ಕಾಣಿಕೆಯನ್ನು ತರುವರು.
Cross references
- Jeremiah 7:33 ಯೆರೆಮೀಯ 7:33ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗ ಗಳಿಗೂ ಆಹಾರವಾಗುವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ.ಆಗ ನಾನು ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉಲ್ಲಾಸ ಸಂತೋಷದ ಧ್ವನಿಯನ್ನೂ ಮದಲಿಂಗನ ಮದಲಗಿತ್ತಿಯ ಸ್ವರವನ್ನೂ ನಿಲ್ಲಿಸುವೆನು; ಯಾಕಂದರೆ ದೇಶವು ಹಾಳಾಗುವದು.
- Ezekiel 39:17–20 ಯೆಹೆಜ್ಕೇಲನು 39:17–20ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಬಯಲಿನ ಪ್ರತಿಯೊಂದು ಪ್ರಾಣಿ ಗಳಿಗೂ ಮಾತನಾಡಿ--ಒಟ್ಟಾಗಿ ಬನ್ನಿರಿ. ನಾನು ನಿಮ ಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ; ಇದು ಇಸ್ರಾಯೇಲ್ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ನೀವು ಮಾಂಸವನ್ನು ತಿಂದು ರಕ್ತವನ್ನು ಕುಡಿಯ ಬಹುದು. ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ಪ್ರಭುಗಳ ಟಗರು ಕುರಿಮರಿ ಹೋತ ಮತ್ತು ಹೋರಿಗಳ ಬಾಷಾನಿನ ಕೊಬ್ಬಿದ ಪಶು ಇವೆಲ್ಲವುಗಳ ರಕ್ತವನ್ನು ಕುಡಿಯುವಿರಿ. ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವ ವರೆಗೂ ಕೊಬ್ಬನ್ನು ತಿಂದು ಮತ್ತೇರುವ ವರೆಗೂ ರಕ್ತವನ್ನು ಕುಡಿಯಬಹುದು. ಹೀಗೆ ನೀವು ನನ್ನ ಮೇಜಿನಲ್ಲಿ ಕುದುರೆಗಳಿಂದಲೂ ರಥಗಳಿಂದಲೂ ಶೂರರಿಂದಲೂ ಯುದ್ಧದ ಎಲ್ಲಾ ಮನುಷ್ಯರಿಂದಲೂ ತುಂಬುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 32:4–6 ಯೆಹೆಜ್ಕೇಲನು 32:4–6ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು. ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ನಿನ್ನ ರಾಶಿ ಯಿಂದ ಕಣಿವೆಗಳನ್ನು ತುಂಬಿಸುವೆನು. ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸು ವೆನು; ನದಿಗಳು ನಿನ್ನಿಂದ ತುಂಬುವವು.
- Revelation 19:17–18 ಪ್ರಕಟನೆ 19:17–18ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ, ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು.
- Isaiah 14:19 ಯೆಶಾಯ 14:19ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.
- Jeremiah 15:3 ಯೆರೆಮೀಯ 15:3ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ.
- Isaiah 56:9 ಯೆಶಾಯ 56:9ಅರಣ್ಯದ ಸಕಲ ಮೃಗಗಳೇ, ಹೌದು, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವದಕ್ಕೆ ಬನ್ನಿರಿ.
- Isaiah 34:1–7 ಯೆಶಾಯ 34:1–7ಜನಾಂಗಗಳೇ, ಕೇಳುವದಕ್ಕೆ ಹತ್ತಿರ ಬನ್ನಿರಿ; ಜನಗಳೇ ಕಿವಿಗೊಡಿರಿ, ಭೂಮಿ ಯೂ ಅದರಲ್ಲಿನ ಸಮಸ್ತವೂ ಲೋಕವೂ ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ. ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ. ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು. ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು. ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು. ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ. ಕಾಡು ಕೋಣಗಳು ಅವುಗಳ ಸಂಗಡಲೂ ಎತ್ತುಗಳು ಹೋರಿ ಗಳ ಸಂಗಡಲೂ ಬೀಳುವವು; ಅವರ ದೇಶವು ರಕ್ತ ದಿಂದ ನೆನೆಯುವದು, ಅವರ ಧೂಳು ಕೊಬ್ಬಿನಿಂದ ಪುಷ್ಟಿಯಾಗುವದು--