Ezekiel · chapter 32 · verse 4
Ezekiel 32:4 in Kannada
ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
Aaga naanu ninnannu nelada mele haakibiduvenu, bayalina mele bisaaduvenu; aakaashada pakshigalannellaa ninna mele koorisi, samasta bhoomiya melina mrugagalannu ninninda truptipadisuvenu.
Ezekiel 32:4 in English
- King James Version (KJV)
- Then will I leave thee upon the land, I will cast thee forth upon the open field, and will cause all the fowls of the heaven to remain upon thee, and I will fill the beasts of the whole earth with thee.
- World English Bible (WEB)
- I will leave you on the land. I will cast you out on the open field, and will cause all the birds of the sky to settle on you. I will satisfy the animals of the whole earth with you.
- American Standard Version (ASV)
- And I will leave thee upon the land, I will cast thee forth upon the open field, and will cause all the birds of the heavens to settle upon thee, and I will satisfy the beasts of the whole earth with thee.
- Bible in Basic English (BBE)
- And I will let you be stretched on the land; I will send you out violently into the open field; I will let all the birds of heaven come to rest on you and will make the beasts of all the earth full of you.
- Darby Translation (DBY)
- And I will leave thee upon the land, I will cast thee forth upon the open field, and will cause all the fowl of the heavens to settle upon thee, and I will fill the beasts of the whole earth with thee.
- Webster's Bible (WBS)
- Then will I leave thee upon the land, and I will cast thee forth upon the open field, and will cause all the fowls of the heaven to remain upon thee, and I will fill the beasts of the whole earth with thee.
- Young's Literal Translation (YLT)
- And I have left thee in the land, On the face of the field I do cast thee out, And have caused to dwell upon thee every fowl of the heavens, And have satisfied out of thee the beasts of the whole earth.
Read in context
- 2ಮನುಷ್ಯ ಪುತ್ರನೇ, ಐಗುಪ್ತ ಅರಸನಾದ ಫರೋಹನ ವಿಷಯ ವಾಗಿ ಗೋಳಾಟವನ್ನೆತ್ತಿ ಅವನಿಗೆ ನೀನು ಹೇಳಬೇಕಾ ದದ್ದೇನಂದರೆ--ನೀನು ಜನಾಂಗಗಳಲ್ಲಿ ಪ್ರಾಯದ ಸಿಂಹಕ್ಕೆ ಸಮನಾಗಿರುವೆ; ಸಮುದ್ರಗಳಲ್ಲಿರುವ ತಿಮಿಂಗಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇಧಿಸಿಕೊಂಡು ಬಂದ ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಗೆ ಮಾಡಿದೆ.
- 3ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಆದುದ ರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
- 4ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
- 5ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ನಿನ್ನ ರಾಶಿ ಯಿಂದ ಕಣಿವೆಗಳನ್ನು ತುಂಬಿಸುವೆನು.
- 6ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸು ವೆನು; ನದಿಗಳು ನಿನ್ನಿಂದ ತುಂಬುವವು.
Cross references
- Isaiah 18:6 ಯೆಶಾಯ 18:6ಅವೆಲ್ಲ ಬೆಟ್ಟಗಳ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಬಿಡಲ್ಪಡುವವು; ಪಕ್ಷಿಗಳು ಅವುಗಳ ಮೇಲೆ ಬೇಸಿಗೆಯನ್ನು ಭೂಮಿಯ ಎಲ್ಲಾ ಮೃಗಗಳು ಅವುಗಳ ಮೇಲೆ ಚಳಿಗಾಲವನ್ನು ಕಳೆಯುವವು.ಚದರಿಸಲ್ಪಟ್ಟು ಸೂರೆಯಾಗಿರುವ ಜನರೂ ಅವರು ಹುಟ್ಟಿದಂದಿನಿಂದ ಇಲ್ಲಿಯ ವರೆಗೂ ಭಯಂಕರವಾದ ಜನರೂ ಮಹಾಬಲದಿಂದ ತುಳಿಯಲ್ಪಡುವರು. ನದಿ ಗಳಿಂದ ಹಾಳಾಗಿರುವ ದೇಶದವರು ಸೈನ್ಯಗಳ ಕರ್ತನ ಹೆಸರಿನ ಸ್ಥಳವಾದ ಚೀಯೋನ್ ಪರ್ವತಕ್ಕೆ ಆತನಿ ಗೊಸ್ಕರ ಕಾಣಿಕೆಯನ್ನು ತರುವರು.
- Ezekiel 29:5 ಯೆಹೆಜ್ಕೇಲನು 29:5ಭೂಮಿಯ ಮೇಲಿರುವ ಮೃಗಗಳಿಗೂ ಆಕಾಶದ ಪಕ್ಷಿಗಳಿಗೂ ನಿನ್ನನ್ನು ಆಹಾರ ವನ್ನಾಗಿ ಕೊಟ್ಟಿದ್ದೇನೆ.
- Ezekiel 31:12–13 ಯೆಹೆಜ್ಕೇಲನು 31:12–13ಜನಾಂಗಗಳಲ್ಲಿ ಭಯಂಕರವಾದ ಅಪರಿಚಿತರು ಅವನನ್ನು ಕಡಿದುಹಾಕು ವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅವನ ಕೊಂಬೆಗಳು ಬೀಳುವವು, ದೇಶದ ಹಳ್ಳಗಳ ಲ್ಲೆಲ್ಲಾ ಅವನ ರೆಂಬೆಗಳು ಮುರಿದುಹೋಗುವವು; ಭೂಮಿಯ ಜನಗಳೆಲ್ಲಾ ಅವನ ನೆರಳಿನಿಂದ ದೂರ ಸರಿದು ಅವನನ್ನು ಬಿಟ್ಟುಬಿಡುವರು. ಅವನ ಬುಡದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವವು; ಬಯಲಿನ ಎಲ್ಲಾ ಪ್ರಾಣಿಗಳು ಅವನ ರೆಂಬೆಗಳ ಬಳಿಯಲ್ಲಿರುವವು;
- Psalm 74:14 ಕೀರ್ತನೆಗಳು 74:14ನೀನು ಲಿವ್ಯಾತಾನದ ತಲೆ ಗಳನ್ನು ಒಡೆದು ತುಂಡು ತುಂಡುಮಾಡಿದಿ. ಅದನ್ನು ಅರಣ್ಯದ ಜನರಿಗೆ ಆಹಾರವಾಗಿ ಕೊಟ್ಟಿ.
- Psalm 110:5–6 ಕೀರ್ತನೆಗಳು 110:5–6ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು. ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
- Psalm 79:2–3 ಕೀರ್ತನೆಗಳು 79:2–3ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ. ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.
- Psalm 83:9–10 ಕೀರ್ತನೆಗಳು 83:9–10ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು. ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.
- 1 Samuel 17:44–46 1 ಸಮುವೇಲನು 17:44–46ದಾವೀದನಿಗೆ--ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು ಅಂದನು. ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ. ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.
- Jeremiah 8:2 ಯೆರೆಮೀಯ 8:2ಅವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಹುಡುಕಿ ಆರಾಧಿಸಿದ ಸೂರ್ಯ ಚಂದ್ರ ಸಮಸ್ತ ಆಕಾಶ ಸೈನ್ಯದ ಮುಂದೆ ಅವುಗಳನ್ನು ಚೆಲ್ಲುವರು; ಅವು ಕೂಡಿಸಲ್ಪಡವು, ಹೂಣಿಡಲ್ಪಡವು, ಅವು ಭೂಮಿಯ ಮೇಲೆ ಗೊಬ್ಬರವಾಗುವವು.
- Joel 3:19 ಯೋವೇಲ 3:19ಐಗುಪ್ತವು ಹಾಳಾಗು ವದು; ಎದೋಮು ಹಾಳಾದ ಅರಣ್ಯವಾಗುವದು; ಅವರು ಯೆಹೂದನ ಮಕ್ಕಳನ್ನು ಬಲಾತ್ಕಾರಮಾಡಿ ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿ ದರು.
- Ezekiel 39:4–5 ಯೆಹೆಜ್ಕೇಲನು 39:4–5ನೀನೂ ನಿನ್ನ ಎಲ್ಲಾ ದಳಗಳೂ ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ; ಎಲ್ಲಾ ತರಹದ ಮಾಂಸ ತಿನ್ನುವ ಪಕ್ಷಿಗಳಿಗೂ ಬಯಲಿನ ಮೃಗಗಳಿಗೂ ತಿನ್ನುವಂತೆ ನಾನು ನಿನ್ನನ್ನು ಕೊಡುವೆನು. ನೀನು ತೆರೆದ ಬಯಲಿನ ಮೇಲೆ ಬೀಳುವಿ; ನಾನೇ ಇದನ್ನು ಹೇಳಿರುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ.
- Psalm 63:10 ಕೀರ್ತನೆಗಳು 63:10ಕತ್ತಿಯಿಂದ ಅವರು ಬೀಳುವರು; ನರಿಗಳ ಪಾಲಾಗುವರು.ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು.