Isaiah · chapter 21 · verse 11
Isaiah 21:11 in Kannada
ದೂಮದ ವಿಷಯವಾದ ದೈವೋಕ್ತಿ, ಆತನು ಸೇಯಾರಿನಿಂದ ನನಗೆ ಕರೆದನು. ಹೇಗಂದರೆ, ಕಾವ ಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲು ಗಾರನೇ ರಾತ್ರಿ ಎಷ್ಟು ಕಳೆಯಿತು?
Doomada vishayavaada daivokti, aatanu seyaarininda nanage karedanu. Hegandare, kaava lugaarane, eega raatri eshtu kaleyitu? Kaavalu gaarane raatri eshtu kaleyitu?
Isaiah 21:11 in English
- King James Version (KJV)
- The burden of Dumah. He calleth to me out of Seir, Watchman, what of the night? Watchman, what of the night?
- World English Bible (WEB)
- The burden of Dumah. One calls to me out of Seir, “Watchman, what of the night? Watchman, what of the night?”
- American Standard Version (ASV)
- The burden of Dumah. One calleth unto me out of Seir, Watchman, what of the night? Watchman, what of the night?
- Bible in Basic English (BBE)
- The word about Edom. A voice comes to me from Seir, Watchman, how far gone is the night? how far gone is the night?
- Darby Translation (DBY)
- The burden of Dumah. He calleth to me out of Seir, Watchman, what of the night? Watchman, what of the night?
- Webster's Bible (WBS)
- The burden of Dumah. He calleth to me out of Seir, Watchman, what of the night? Watchman, what of the night?
- Young's Literal Translation (YLT)
- The burden of Dumah. Unto me is [one] calling from Seir 'Watchman, what of the night? Watchman, what of the night?'
Read in context
- 9ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ ಮತ್ತು ಪ್ರತ್ಯುತ್ತರ ವಾಗಿ--ಬಾಬೆಲ್ ಬಿತ್ತು, ಆದರೆ ಕೆತ್ತಿದ ದೇವತೆಗಳ ವಿಗ್ರಹಗಳನ್ನು ಮುರಿದು ನೆಲಸಮ ಮಾಡಿಬಿಟ್ಟರು ಎಂದು ಹೇಳಿದನು.
- 10ನಾನು ತುಳಿಯುವ ತೆನೆಯೇ, ನನ್ನ ಕಣದ ಧಾನ್ಯವೇ, ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.
- 11ದೂಮದ ವಿಷಯವಾದ ದೈವೋಕ್ತಿ, ಆತನು ಸೇಯಾರಿನಿಂದ ನನಗೆ ಕರೆದನು. ಹೇಗಂದರೆ, ಕಾವ ಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲು ಗಾರನೇ ರಾತ್ರಿ ಎಷ್ಟು ಕಳೆಯಿತು?
- 12ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ, ವಿಚಾರಿಸಬೇಕಾದರೆ ವಿಚಾರಿಸಿರಿ; ತಿರಿಗಿ ಬನ್ನಿರಿ ಎಂದು ಕಾವಲುಗಾರನು ಹೇಳಿದನು.
- 13ಅರಬಿಯದ ವಿಷಯವಾದ ದೈವೋಕ್ತಿ. ಓ ದೇದಾನ್ಯರ ಪ್ರಯಾಣಿಕರೇ, ಅರಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ.
Cross references
- Genesis 25:14 ಆದಿಕಾಂಡ 25:14ಮಿಷ್ಮಾ ದೂಮಾ ಮಸ್ಸಾ
- Obadiah 1:1–16 ಓಬದ್ಯ 1:1–16ಓಬದ್ಯನ ದರ್ಶನವು. ಕರ್ತನಾದ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾನೆ--ಕರ್ತನಿಂದ ಸುದ್ಧಿಯನ್ನು ಕೇಳಿದ್ದೇವೆ; ಅನ್ಯಜನಾಂಗಗಳಲ್ಲಿ ರಾಯ ಭಾರಿಯು ಕಳುಹಿಸಲ್ಪಟ್ಟಿದ್ದಾನೆ; ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಏಳುವ! ಇಗೋ, ನಿನ್ನನ್ನು ಅನ್ಯಜನಾಂಗಗಳಲ್ಲಿ ಹೀನವಾಗಿ ಮಾಡಿದ್ದೇನೆ. ನೀನು ಬಹಳವಾಗಿ ತಿರಸ್ಕರಿಸಲ್ಪಟ್ಟಿದ್ದೀ. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸ ಮಾಡಿಕೊಂಡವನೇ--ಯಾರು ನನ್ನನ್ನು ನೆಲಕ್ಕೆ ಇಳಿಸ ಬಲ್ಲರೆಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ. ಕಳ್ಳರು ನಿನ್ನ ಬಳಿಗೆ ಬಂದಿದ್ದರೆ ಸುಲುಕೊಳ್ಳುವವರು ರಾತ್ರಿಯಲ್ಲಿ ಬಂದಿದ್ದರೆ ಎಷ್ಟೋ ಹಾಳಾಗುತ್ತಿದ್ದಿಯಲ್ಲಾ! ಅವರು ತಮಗೆ ಸಾಕಾಗುವಷ್ಟು ಕದ್ದುಕೊಳ್ಳುವರಲ್ಲವೋ? ದ್ರಾಕ್ಷೇಹಣ್ಣನ್ನು ಕೂಡಿಸುವ ವರು ನಿನ್ನ ಬಳಿಗೆ ಬಂದಿದ್ದರೆ ಅವರು ಕೆಲವು ದ್ರಾಕ್ಷೇ ಹಣ್ಣನ್ನು ಬಿಡುವರಲ್ಲವೋ? ಏಸಾವನು ಎಷ್ಟೋ ಶೋಧಿ ಸಲ್ಪಟ್ಟಿದ್ದಾನೆ, ಅವನ ರಹಸ್ಯ ಸ್ಥಳಗಳು ಹುಡುಕ ಲ್ಪಟ್ಟಿವೆ. ನಿನ್ನ ಸಂಗಡ ಒಟ್ಟುಗೂಡಿದ ಮನುಷ್ಯರೆಲ್ಲರು ನಿನ್ನನ್ನು ಮೇರೆಯ ವರೆಗೂ ತಂದಿದ್ದಾರೆ: ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸ ಮಾಡಿ ನಿನಗೆ ವಿರೋಧವಾಗಿ ಜಯಹೊಂದಿದ್ದಾರೆ; ನಿನ್ನ ರೊಟ್ಟಿಯನ್ನು ತಿನ್ನುವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ; ಅವನಲ್ಲಿ ವಿವೇಕವೇನೂ ಇಲ್ಲ. ಕರ್ತನು ಅನ್ನುವದೇನಂದರೆ--ನಾನು ಆ ದಿನದಲ್ಲಿ ಎದೋಮಿ ನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೋ? ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು. ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ. ನೀನು ಆ ಕಡೆಯಲ್ಲಿ ನಿಂತ ದಿನದಲ್ಲಿ ಪರರು ಅವನ ಸೆರೆಯಾಗಿ ತಕ್ಕೊಂಡುಹೋದ ದಿನದಲ್ಲಿ ಅನ್ಯರು ಅವನ ಬಾಗಲುಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಮೇಲೆ ಚೀಟುಗಳನ್ನು ಹಾಕಿದಾಗ ನೀನು ಸಹ ಅವರಲ್ಲಿ ಒಬ್ಬನ ಹಾಗಿದ್ದಿ. ಆದರೆ ನಿನ್ನ ಸಹೋದರನ ದಿನದಲ್ಲಿ ಅವನು ಅನ್ಯನಾದ ದಿನದಲ್ಲಿ ನೀನು ನೋಡಬಾರ ದಾಗಿತ್ತು; ಯೆಹೂದನ ಮಕ್ಕಳ ಮೇಲೆ ಅವರ ನಾಶನದ ದಿವಸದಲ್ಲಿ ಸಂತೋಷಿಸಬಾರದಾಗಿತ್ತು; ಕಷ್ಟದ ದಿನದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು; ನನ್ನ ಜನರ ಬಾಗಲೊಳಗೆ ಅವರ ಆಪತ್ತಿನ ದಿನದಲ್ಲಿ ಪ್ರವೇಶಿಸಬಾರದಾಗಿತ್ತು; ಹೌದು, ನೀನು ಅವರ ಆಪತ್ತಿನ ದಿನದಲ್ಲಿ ಅವರ ಕೇಡನ್ನು ನೋಡಬಾರ ದಾಗಿತ್ತು; ಅವರ ಆಪತ್ತಿನ ದಿನದಲ್ಲಿ ಅವರ ಆಸ್ತಿಯ ಮೇಲೆ ಕೈಹಾಕಬಾರದಾಗಿತ್ತು; ಅವನಲ್ಲಿ ಓಡಿ ಹೋದವರನ್ನು ಕಡಿದುಬಿಡುವದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು; ಕಷ್ಟದ ದಿನದಲ್ಲಿ ಅವನಲ್ಲಿ ಉಳಿದುಕೊಂಡವರನ್ನು ಒಪ್ಪಿಸಬಾರದಾಗಿತ್ತು. ಕರ್ತನ ದಿನವು ಎಲ್ಲಾ ಜನಾಂಗಗಳ ಮೇಲೆ ಸವಿಾಪವಾಗಿದೆ; ನೀನು ಮಾಡಿದ ಹಾಗೆಯೇ ನಿನಗೆ ಮಾಡಲ್ಪಡುವದು; ನಿನ್ನ ಪ್ರತಿಫಲವು ನಿನ್ನ ತಲೆಯ ಮೇಲೆ ತಿರುಗುವದು. ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವವು; ಹೌದು, ಕುಡಿದು ನುಂಗಿಬಿಡುವವು; ಇಲ್ಲದೆ ಇದ್ದವರ ಹಾಗೆಯೇ ಇರುವವು.
- Amos 1:6 ಆಮೋಸ 1:6ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು.
- Joel 3:19 ಯೋವೇಲ 3:19ಐಗುಪ್ತವು ಹಾಳಾಗು ವದು; ಎದೋಮು ಹಾಳಾದ ಅರಣ್ಯವಾಗುವದು; ಅವರು ಯೆಹೂದನ ಮಕ್ಕಳನ್ನು ಬಲಾತ್ಕಾರಮಾಡಿ ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿ ದರು.
- Jeremiah 49:7–22 ಯೆರೆಮೀಯ 49:7–22ಎದೋಮಿನ ವಿಷಯವಾಗಿ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತೇಮಾನ್ನಲ್ಲಿ ಇನ್ನು ಮೇಲೆ ಜ್ಞಾನವಿರುವದಿಲ್ಲವೋ? ವಿವೇಕಿಗಳಿಂದ ಆಲೋಚ ನೆಯು ನಾಶವಾಯಿತೋ? ಅವರ ಜ್ಞಾನವು ಕಾಣದೆ ಹೋಯಿತೋ? ದೇದಾನಿನ ನಿವಾಸಿಗಳೇ, ಓಡಿ ಹೋಗಿರಿ, ತಿರುಗಿಕೊಳ್ಳಿರಿ, ಆಳವಾದ ಸ್ಥಳದಲ್ಲಿ ವಾಸಮಾಡಿರಿ. ಏಸಾವಿನ ಆಪತ್ತನ್ನೂ ನಾನು ಅವನನ್ನು ವಿಚಾರಿಸುವ ಕಾಲವನ್ನು ಅವನ ಮೇಲೆ ಬರಮಾಡು ತ್ತೇನೆ. ದ್ರಾಕ್ಷೇ ಕೂಡಿಸುವವರು ನಿನ್ನ ಬಳಿಗೆ ಬಂದಿದ್ದರೆ ಹಕ್ಕಲನ್ನಾದರೂ ಉಳಿಸರೇ? ರಾತ್ರಿಯಲ್ಲಿ ಕಳ್ಳರು ಬಂದಿದ್ದರೆ ತಮಗೆ ಸಾಕಾಗುವಷ್ಟು ಕೆಡಿಸುವವರಲ್ಲವೇ? ಆದರೆ ನಾನು ಏಸಾವನನ್ನು ಬರಿದುಮಾಡಿದ್ದೇನೆ; ಅದರ ರಹಸ್ಯ ಸ್ಥಳಗಳನ್ನು ತೆರೆದಿದ್ದೇನೆ; ಅವನು ತನ್ನನ್ನು ತಾನೇ ಅಡಗಿಸಿಕೊಳ್ಳಲಾರನು; ಅವನ ಸಂತಾನವು ಹಾಳಾಯಿತು; ಅವನ ಸಹೋದರರೂ ನೆರೆಯವರೂ ಅವನೂ ಇಲ್ಲವಾದರು. ನಿನ್ನ ದಿಕ್ಕಿಲ್ಲದ ಮಕ್ಕಳನ್ನು ಬಿಡು; ನಾನೇ ರಕ್ಷಿಸುವೆನು; ನಿನ್ನ ವಿಧವೆಯರು ನನ್ನಲ್ಲಿ ನಂಬಿಕೆ ಇಡಲಿ. ಕರ್ತನು ಹೀಗೆ ಹೇಳು ತ್ತಾನೆ--ಇಗೋ ಪಾತ್ರೆಯಲ್ಲಿ ಕುಡಿಯುವದಕ್ಕೆ ಯಾರಿಗೆ ನ್ಯಾಯತೀರ್ವಿಕೆ ಆಗಲಿಲ್ಲವೋ? ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಅಪರಾಧ ವಿಲ್ಲದೆ ಇರುವಿಯೋ? ಅಪರಾಧವಿಲ್ಲದೆ ಇರುವದಿಲ್ಲ ನಿಶ್ಚಯವಾಗಿ ಕುಡಿಯುವಿ. ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವದೆಂದು ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾ ಗುವವೆಂದೂ ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆಂದು ಕರ್ತನು ಅನ್ನುತ್ತಾನೆ. ಕರ್ತನಿಂದ ನಾನು ಸುದ್ದಿಯನ್ನು ಕೇಳಿದ್ದೇನೆ; ಅನ್ಯಜನಾಂಗಗಳೊಳಗೆ ರಾಯಭಾರಿಯು ಕಳುಹಿಸಲ್ಪಟ್ಟಿದ್ದಾನೆ; ನೀವು ಒಟ್ಟು ಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ. ಇಗೋ, ನಿನ್ನನ್ನು ಅನ್ಯಜನಾಂಗ ಗಳಲ್ಲಿ ಹೀನವಾಗಿಯೂ ಮನುಷ್ಯರಲ್ಲಿ ತಿರಸ್ಕರಿಸಲ್ಪಟ್ಟವ ನನ್ನಾಗಿಯೂ ಮಾಡುವೆನು. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ ಗುಡ್ಡದ ಕೊನೆಯನ್ನು ಹಿಡಿಯುವವನೇ, ನಿನ್ನ ಭಯಂಕರತ್ವವೂ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದವು; ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಮಾಡಿದರೂ ಅಲ್ಲಿಂದ ನಿನ್ನನ್ನು ಇಳಿಸುತ್ತೇನೆಂದು ಕರ್ತನು ಅನ್ನುತ್ತಾನೆ. ಎದೋಮು ಸಹ ಹಾಳಾಗುವದು; ಅದರ ಬಳಿಯಲ್ಲಿ ಹಾದು ಹೋಗುವವರೆಲ್ಲರೂ ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು. ಸೊದೋಮ್ ಗೊಮೋರ ಅವುಗಳ ಸವಿಾಪ ದಲ್ಲಿದ್ದ ಪಟ್ಟಣಗಳೂ ಕೆಡವಲ್ಪಟ್ಟಾಗ ಹಾಗೆಯೇ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ, ಅದರಲ್ಲಿ ಯಾವ ಮನುಷ್ಯನ ಪುತ್ರನಾದರೂ ತಂಗುವದಿಲ್ಲವೆಂದು ಕರ್ತನು ಅನ್ನುತ್ತಾನೆ. ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಬ್ಬುವಿಕೆಯಿಂದ ಬಲವಾದ ನಿವಾಸಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಅವನನ್ನು ಕ್ಷಣಮಾತ್ರದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು. ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ನನಗೆ ಕಾಲವನ್ನು ನೇಮಿಸು ವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು? ಆದದರಿಂದ ಕರ್ತನು ಎದೋಮಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ ತೇಮಾನಿನ ನಿವಾಸಿಗಳಿಗೆ ವಿರೋಧವಾಗಿ ಅವನು ಮಾಡಿದ ಯೋಚನೆಗಳನ್ನೂ ಕೇಳಿರಿ. ನಿಶ್ಚಯವಾಗಿ ಮಂದೆಯ ಮರಿಗಳು ಅವರನ್ನು ಎಳೆಯುವವು, ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡು ವನು. ಅವರು ಬೀಳುವ ಶಬ್ದದಿಂದ ಭೂಮಿಯು ಕದಲುವದು ಅವರ ಕೂಗಿನ ಶಬ್ದವು ಕೆಂಪು ಸಮುದ್ರ ದಲ್ಲಿ ಕೇಳಬರುವದು. ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.
- Isaiah 63:1–6 ಯೆಶಾಯ 63:1–6ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ. ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
- Psalm 137:7 ಕೀರ್ತನೆಗಳು 137:7ಹಾಳುಮಾಡಿರಿ, ಅದರ ಅಸ್ತಿವಾರದ ವರೆಗೆ ಹಾಳು ಮಾಡಿರಿ ಎಂದು ಹೇಳಿದ ಎದೋಮಿನ ಮಕ್ಕಳನ್ನು ಯೆರೂಸಲೇಮಿನ ದಿವಸದಲ್ಲಿ ಕರ್ತನೇ, ಜ್ಞಾಪಕ ಮಾಡಿಕೋ.
- Jeremiah 37:17 ಯೆರೆಮೀಯ 37:17ಅವನನ್ನು ಹೊರಗೆ ತನ್ನ ಮನೆಯಲ್ಲಿ ಕರತರಿಸಿ--ರಹಸ್ಯವಾಗಿ ಕರ್ತನಿಂದ ವಾಕ್ಯ ಉಂಟೋ ಎಂದು ಅವನನ್ನು ಕೇಳಿದನು; ಉಂಟು ಎಂದು ಯೆರೆವಿಾಯನು ಹೇಳಿ ರಹಸ್ಯವಾಗಿ ನೀನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವಿ ಅಂದನು.
- Isaiah 21:6 ಯೆಶಾಯ 21:6ಕರ್ತನು ನನಗೆ ಹೇಳಿರುವ ದೇನಂದರೆ--ಹೋಗು, ಕಾವಲುಗಾರನನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.
- Malachi 1:2–4 ಮಲಾಕಿಯ 1:2–4ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು. ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು. ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.
- 1 Chronicles 1:30 1 ಪೂರ್ವಕಾಲವೃತ್ತಾಂತ 1:30ದೂಮನು, ಮಸ್ಸನು, ಹದದನು, ತೇಮನು,
- Deuteronomy 2:5 ಧರ್ಮೋಪದೇಶಕಾಂಡ 2:5ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.