Malachi · chapter 1 · verse 2
Malachi 1:2 in Kannada
ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು.
Nimmannu preetimaadiddenendu kartanu heluttaane; aadaagyoo neevu--yaavadaralli neenu nammannu preetimaadiddee endu helutteeri. Kartanu anu ్nattaane--esaavanu yaakobanige annanallavo? Aadaagyoo naanu yaakobanannu preeti maadi denu.
Malachi 1:2 in English
- King James Version (KJV)
- I have loved you, saith the LORD. Yet ye say, Wherein hast thou loved us? [Was] not Esau Jacob’s brother? saith the LORD: yet I loved Jacob,
- World English Bible (WEB)
- “I have loved you,” says the LORD. Yet you say, “How have you loved us?” “Wasn’t Esau Jacob’s brother?” says the LORD, “Yet I loved Jacob;
- American Standard Version (ASV)
- I have loved you, saith Jehovah. Yet ye say, Wherein hast thou loved us? Was not Esau Jacob’s brother? saith Jehovah: yet I loved Jacob;
- Bible in Basic English (BBE)
- You have been loved by me, says the Lord. But you say, Where was your love for us? Was not Esau Jacob's brother? says the Lord: but Jacob was loved by me,
- Darby Translation (DBY)
- I have loved you, saith Jehovah; but ye say, Wherein hast thou loved us? Was not Esau Jacob's brother? saith Jehovah, and I loved Jacob,
- Webster's Bible (WBS)
- I have loved you, saith the LORD. Yet ye say, In what hast thou loved us? [Was] not Esau Jacob's brother? saith the LORD: yet I loved Jacob,
- Young's Literal Translation (YLT)
- I have loved you, said Jehovah, And ye have said, 'In what hast Thou loved us?'
Read in context
- 1ಇಸ್ರಾಯೇಲಿಗೆ ಮಲಾಕಿಯಿಂದ ಉಂಟಾದ ಕರ್ತನ ವಾಕ್ಯದ ದೈವೋಕ್ತಿ.
- 2ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು.
- 3ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು.
- 4ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.
Cross references
- Jeremiah 31:3 ಯೆರೆಮೀಯ 31:3ಹಿಂದಿನಂತೆ ಕರ್ತನು ಬಂದು ನನಗೆ ಕಾಣಿಸಿಕೊಂಡು--ಹೌದು, ಶಾಶ್ವತವಾದ ಪ್ರೀತಿ ಯಿಂದ ನಿನ್ನನ್ನು ಪ್ರೀತಿ ಮಾಡಿದ್ದೇನೆ; ಆದದರಿಂದ ಪ್ರೀತಿ ದಯೆಗಳಿಂದ ನಿನ್ನನ್ನು ಎಳೆದಿದ್ದೇನೆ.
- Isaiah 41:8–9 ಯೆಶಾಯ 41:8–9ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ; ನಿನ್ನನ್ನು ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ಕೊನೆಯಿಂದ ಕರೆದು--ನೀನು ನನ್ನ ಸೇವಕನು, ನಿನ್ನನ್ನು ನಾನು ಆದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವದಿಲ್ಲ.
- Deuteronomy 10:15 ಧರ್ಮೋಪದೇಶಕಾಂಡ 10:15ಆದರೂ ನಿನ್ನ ಪಿತೃಗಳ ಮೇಲೆ ಕರ್ತನು ತಾನೇ ಮನಸ್ಸಿಟ್ಟು ಅವರನ್ನು ಪ್ರೀತಿಮಾಡಿ ಅವರ ಸಂತಾನವಾಗಿರುವ ನಿಮ್ಮನ್ನು ಈಹೊತ್ತು ಇರುವ ಪ್ರಕಾರ ಎಲ್ಲಾ ಜನಗಳೊಳಗಿಂದ ಆದುಕೊಂಡನು.
- Romans 9:10–13 ರೋಮಾಪುರದವರಿಗೆ 9:10–13ಇದು ಮಾತ್ರವಲ್ಲದೆ ರೆಬೆಕ್ಕಳು ಸಹ ಒಬ್ಬನಿಂದ ಅಂದರೆ ನಮ್ಮ ಪಿತೃವಾದ ಇಸಾಕನಿಂದ ಗರ್ಭಿಣಿಯಾದಾಗ (ಮಕ್ಕಳಿನ್ನೂ ಹುಟ್ಟದಿರುವಾಗ ಮತ್ತು ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದಿರು ವಾಗ ಆಯ್ಕೆಯ ಪ್ರಕಾರ ದೇವರ ಸಂಕಲ್ಪವು ಸ್ಥಿರಗೊಳ್ಳು ವಂತೆ ಕ್ರಿಯೆಗಳಿಂದಲ್ಲ, ಆದರೆ ಕರೆದಾತನಿಂದಲೇ) ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು ಎಂದು ಆಕೆಗೆ ಹೇಳಲ್ಪಟ್ಟಿದೆ. ಇದಕ್ಕನುಸಾರ-- ನಾನು ಯಾಕೋಬನನ್ನು ಪ್ರೀತಿಸಿದೆನು ಮತು ಏಸಾವನನ್ನು ಹಗೆಮಾಡಿದೆನು ಎಂದು ಬರೆಯಲ್ಪಟ್ಟಿದೆ.
- Malachi 3:13–14 ಮಲಾಕಿಯ 3:13–14ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ. ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.
- Deuteronomy 4:37 ಧರ್ಮೋಪದೇಶಕಾಂಡ 4:37ಆತನು ನಿನ್ನ ಪಿತೃಗಳನ್ನು ಪ್ರೀತಿಮಾಡಿದ್ದರಿಂದ ಅವರ ತರುವಾಯ ಅವರ ಸಂತತಿಯನ್ನು ಆದು ಕೊಂಡು ನಿನ್ನನ್ನು ತನ್ನ ದೃಷ್ಟಿಯಲ್ಲಿ ತನ್ನ ಮಹಾ ಬಲ ದೊಂದಿಗೆ ಐಗುಪ್ತದೊಳಗಿಂದ ಹೊರಗೆ ಬರಮಾಡಿ ದನು.
- Isaiah 43:4 ಯೆಶಾಯ 43:4ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
- Malachi 3:7–8 ಮಲಾಕಿಯ 3:7–8ನಿಮ್ಮ ತಂದೆಗಳ ದಿವಸಗಳಿಂದಲೇ ನನ್ನ ನಿಯಮ ಗಳನ್ನು ಬಿಟ್ಟುಹೋಗಿದ್ದೀರಿ. ಅವುಗಳನ್ನು ಕೈಕೊಳ್ಳಲಿಲ್ಲ; ನನ್ನ ಬಳಿಗೆ ತಿರುಗಿಕೊಳ್ಳಿರಿ; ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ; ಆದರೆ ನೀವು--ಯಾವದರಲ್ಲಿ ತಿರುಗಿಕೊಳ್ಳೋಣ ಎಂದು ಹೇಳುತ್ತೀರಿ. ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ.
- Deuteronomy 32:8–14 ಧರ್ಮೋಪದೇಶಕಾಂಡ 32:8–14ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು. ಕರ್ತನ ಪಾಲು ಆತನ ಜನವೇ; ಯಾಕೋಬು ಆತನ ಸ್ವಾಸ್ತ್ಯದ ಪಾಲು. ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು. ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ ಅವುಗಳ ಮೇಲೆ ರೆಕ್ಕೆಯನ್ನಾಡಿಸಿ ತನ್ನ ರೆಕ್ಕೆಗಳನ್ನು ಚಾಚಿ, ತಕ್ಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ ಕರ್ತನು ಒಬ್ಬನೇ ಅವನನ್ನು ನಡಿಸಿದನು. ಅನ್ಯ ದೇವರು ಒಬ್ಬನೂ ಅವನ ಸಂಗಡ ಇದ್ದಿಲ್ಲ. ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು. ಹಸುಗಳ ಬೆಣ್ಣೆಯನ್ನೂ ಕುರಿಗಳ ಹಾಲನ್ನೂ ಕುರಿಮರಿಗಳ ಕೊಬ್ಬಿನೊಂದಿಗೆ ಬಾಷಾನಿನ ಟಗರು ಗಳನ್ನೂ ಹೋತಗಳನ್ನೂ ಉತ್ತಮ ಗೋಧಿಯ ಸಂಗಡ ಕೊಟ್ಟನು. ನೀನು ಶುದ್ಧ ದ್ರಾಕ್ಷಾರಸವನ್ನು ಕುಡಿದಿ.
- Deuteronomy 7:6–8 ಧರ್ಮೋಪದೇಶಕಾಂಡ 7:6–8ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ. ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ. ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು.
- Malachi 1:6–7 ಮಲಾಕಿಯ 1:6–7ಮಗನು ತಂದೆಯನ್ನು ದಾಸನು ಯಜಮಾನನನ್ನು ಸನ್ಮಾನಿಸುತ್ತಾನೆ; ನಾನು ತಂದೆಯಾಗಿದ್ದರೆ ನನ್ನ ಸನ್ಮಾನ ವೆಲ್ಲಿ? ನಾನು ಯಜಮಾನನಾಗಿದ್ದರೆ ನನ್ನ ಭಯವು ಎಲ್ಲಿ ಎಂದು ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರಾದ ನಿಮಗೆ ಸೈನ್ಯಗಳ ಕರ್ತನು ಹೇಳುತ್ತಾನೆ. ಆದರೆ ನೀವು--ನಿನ್ನ ಹೆಸರನ್ನು ಯಾವದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆಂದು ಹೇಳುತ್ತೀರಿ. ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸಿ--ಯಾವದರಲ್ಲಿ ನಿನ್ನನ್ನು ನಾವು ಅಪವಿತ್ರ ಮಾಡಿದ್ದೇವೆಂದು ಹೇಳುತ್ತೀರಿ. ಕರ್ತನ ಮೇಜು ಹೀನವಾದದ್ದೆಂದು ನೀವು ಹೇಳುವದರಿಂದಲೇ.
- Romans 11:28–29 ರೋಮಾಪುರದವರಿಗೆ 11:28–29ಸುವಾರ್ತೆಯ ವಿಷಯದಲ್ಲಿ ಅವರು ನಿಮ್ಮ ನಿಮಿತ್ತವಾಗಿ ವೈರಿಗಳಾ ಗಿದ್ದಾರೆ; ಆದರೆ ಆಯ್ಕೆಯ ವಿಷಯದಲ್ಲಿ ಅವರು ಪಿತೃಗಳ ನಿಮಿತ್ತವಾಗಿ ಪ್ರಿಯರಾಗಿದ್ದಾರೆ. ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ.