Isaiah · chapter 25 · verse 5
Isaiah 25:5 in Kannada
ಒಣಗಿದ ಸ್ಥಳದಲ್ಲಿನ ಬಿಸಿಲಿನ ಹಾಗೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಅವರ ಭೀಕರತೆಯನ್ನು ಕೀಳು ಸ್ಥಿತಿಗೆ ತರುವಿ.
Onagida sthaladallina bisilina haage neenu anyara gaddalavannu taggisuvi; modada neralininda bisilu hego haageye ninninda avara bheekarateyannu keelu sthitige taruvi.
Isaiah 25:5 in English
- King James Version (KJV)
- Thou shalt bring down the noise of strangers, as the heat in a dry place; [even] the heat with the shadow of a cloud: the branch of the terrible ones shall be brought low.
- World English Bible (WEB)
- As the heat in a dry place you will bring down the noise of strangers; as the heat by the shade of a cloud, the song of the dreaded ones will be brought low.
- American Standard Version (ASV)
- As the heat in a dry place wilt thou bring down the noise of strangers; as the heat by the shade of a cloud, the song of the terrible ones shall be brought low.
- Bible in Basic English (BBE)
- As heat by the shade of a cloud, the noise of the men of pride has been made quiet by you; as heat by the shade of a cloud, the song of the cruel ones has been stopped.
- Darby Translation (DBY)
- Thou hast subdued the tumult of strangers, as the heat in a dry place; [as] the heat, by the shadow of a cloud, [so] the song of the terrible ones is brought low.
- Webster's Bible (WBS)
- Thou wilt bring down the noise of strangers, as the heat in a dry place; [even] the heat with the shade of a cloud: the branch of the terrible ones shall be brought low.
- Young's Literal Translation (YLT)
- As heat in a dry place, The noise of strangers Thou humblest, Heat with the shadow of a thick cloud, The singing of the terrible is humbled.
Read in context
- 3ಆದಕಾರಣ ಬಲಿಷ್ಠವಾದ ಜನಾಂಗವು, ನಿನ್ನನ್ನು ಘನಪಡಿಸುವದು ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವದು.
- 4ನೀನು ದೀನರಿಗೆ ಕೋಟೆಯೂ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ ಭೀಕರರ ಶ್ವಾಸವು ಬಿಸಿಲಿಗೋಸ್ಕರ ನೆರಳೂ ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋ ಸ್ಕರ ಆಶ್ರಯವೂ ಆಗಿದ್ದೀ.
- 5ಒಣಗಿದ ಸ್ಥಳದಲ್ಲಿನ ಬಿಸಿಲಿನ ಹಾಗೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಅವರ ಭೀಕರತೆಯನ್ನು ಕೀಳು ಸ್ಥಿತಿಗೆ ತರುವಿ.
- 6ಸೈನ್ಯಗಳ ಕರ್ತನು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ (ಕೊಬ್ಬಿದ) ಔತಣವನ್ನೂ ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ ಮೂಳೆ ಕೊಬ್ಬನ್ನೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾ ರಸವನ್ನು ಸಿದ್ದಮಾಡುವನು.
- 7ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶಿಯರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ (ನಾಶ) ತೆಗೆದುಹಾಕುವನು.
Cross references
- Isaiah 54:15–17 ಯೆಶಾಯ 54:15–17ಇಗೋ, ನಿಶ್ಚಯವಾಗಿ ಅವರು ಒಟ್ಟಾಗಿ ಕೂಡಿ ಕೊಳ್ಳುವರು, ಆದರೆ ನನ್ನಿಂದಲ್ಲ; ನಿನಗೆ ವಿರೋಧವಾಗಿ ಯಾರ್ಯಾರು ಒಟ್ಟಾಗಿ ಕೂಡಿಕೊಳ್ಳುವರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು. ಇಗೋ, ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ ತನ್ನ ಕೆಲಸಕ್ಕೆ ಆಯುಧಗ ಳನ್ನು ತರುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ; ನಾಶಮಾಡುವದಕ್ಕೆ ಕೆಡಿಸುವವನನ್ನು ಸೃಷ್ಟಿಸಿದವನು ನಾನೇ.ನಿನಗೆ ವಿರೋಧವಾಗಿ ರೂಪಿಸಲ್ಪಟ್ಟ ಆಯು ಧಗಳು ಸಫಲವಾಗುವದಿಲ್ಲ; ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯ ತೀರ್ಪಿನಲ್ಲಿ ನೀನು ಖಂಡಿಸುವಿ. ಇದೇ ಕರ್ತನ ಸೇವ ಕರ ಬಾಧ್ಯತೆಯೂ ಮತ್ತು ಅವರ ನೀತಿಯೂ ನನ್ನದೇ ಎಂದು ಕರ್ತನು ಹೇಳುತ್ತಾನೆ. ನಿನಗೆ ವಿರೋಧವಾಗಿ ರೂಪಿಸಲ್ಪಟ್ಟ ಆಯು ಧಗಳು ಸಫಲವಾಗುವದಿಲ್ಲ; ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯ ತೀರ್ಪಿನಲ್ಲಿ ನೀನು ಖಂಡಿಸುವಿ. ಇದೇ ಕರ್ತನ ಸೇವ ಕರ ಬಾಧ್ಯತೆಯೂ ಮತ್ತು ಅವರ ನೀತಿಯೂ ನನ್ನದೇ ಎಂದು ಕರ್ತನು ಹೇಳುತ್ತಾನೆ.
- Isaiah 10:8–15 ಯೆಶಾಯ 10:8–15ಅವನು ಅಂದು ಕೊಳ್ಳುವದೇನಂದರೆ--ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ? ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ? ಯೆರೂಸಲೇಮಿನಲ್ಲಿಯೂ ಸಮಾರ್ಯ ದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ ನಾನು ಸಮಾರ್ಯಕ್ಕೂ ಅದರ ವಿಗ್ರಹಗಳಿಗೂ ಮಾಡಿದಂತೆ ಯೆರೂಸಲೇಮಿಗೂ ಅದರ ವಿಗ್ರಹ ಗಳಿಗೂ ಮಾಡದೆ ಇರುವೆನೋ? ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು. ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ. ಜನಗಳ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ, ಬಿಡಲ್ಪಟ್ಟ ಮೊಟ್ಟೆಗಳನ್ನು ಕೂಡಿಸುವಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾ ಡಿಸಿ ಬಾಯಿತೆರೆದು ಕಿಚುಗುಟ್ಟುವವರು ಯಾರೂ ಇಲ್ಲವೆಂದು ಅಂದುಕೊಂಡನು. ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿ ಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಅಥವಾ ಬೆತ್ತವು ತಾನು ಮರವಲ್ಲ ಎಂಬಂತೆ ತನ್ನನ್ನು ತಾನು ಎತ್ತಿಕೊಂಡ ಹಾಗೆ ಇರುವದು.
- Isaiah 10:32–34 ಯೆಶಾಯ 10:32–34ಆ ದಿನ ದಲ್ಲಿ ಅವನು ನೋಬಿನಲ್ಲಿ ಇಳುಕೊಂಡವನಂತೆ ಇದ್ದಾಗ್ಯೂ ಚೀಯೋನ್ ಕುಮಾರ್ತೆಯ ಪರ್ವತಕ್ಕೂ ಯೆರೂಸಲೇಮಿನ ಗುಡ್ಡಕ್ಕೂ ವಿರೋಧವಾಗಿ ತನ್ನ ಕೈಯನ್ನು ಅಲ್ಲಾಡಿಸುವನು. ಇಗೋ, ಕರ್ತನೂ ಸೈನ್ಯಗಳ ಕರ್ತನು ಭಯಂಕರ ವಾಗಿ ಕೊಂಬೆಯನ್ನು ಕತ್ತರಿಸುವನು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವವು; ಗರ್ವಿಷ್ಠರು ತಗ್ಗಿಸಲ್ಪಡು ವರು.ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು. ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು.
- Isaiah 14:10–16 ಯೆಶಾಯ 14:10–16ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು. ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ; ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ? ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ. ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ
- Daniel 11:36–45 ದಾನಿಯೇಲನು 11:36–45ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು; ತನ್ನನ್ನು ತಾನೇ ಹೆಚ್ಚಿಸಿಕೊಂಡು ತನ್ನನ್ನು ಎಲ್ಲಾ ದೇವರುಗಳಿಗೂ ದೊಡ್ಡವನನ್ನಾಗಿ ಮಾಡಿ ಕೊಂಡು ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ ರೋಷವು ತೀರುವ ವರೆಗೂ ವೃದ್ಧಿಯಾಗಿರುವನು; ಯಾಕಂದರೆ ನಿಶ್ಚಯಿ ಸಲ್ಪಟ್ಟದ್ದು ಮಾಡಲ್ಪಡಲೇ ಬೇಕಾಗುವದು. ಅವನು ತನ್ನ ಪಿತೃಗಳ ದೇವರನ್ನಾಗಲೀ ಸ್ತ್ರೀಯರ ಅಪೇಕ್ಷೆ ಯನ್ನಾಗಲೀ ಲಕ್ಷಿಸುವದಿಲ್ಲ, ಯಾವ ದೇವರನ್ನೂ ಲಕ್ಷಿಸುವದಿಲ್ಲ; ಅವನು ಎಲ್ಲವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ. ಆದರೆ ಅವನು ತನ್ನ ಸ್ಥಾನದಲ್ಲಿ ದೇವರ ಶಕ್ತಿಗಳನ್ನು ಮತ್ತು ತನ್ನ ಪಿತೃಗಳು ಅರಿಯದ ದೇವರುಗಳನ್ನು ಗೌರವಿಸುವನು; ಬಂಗಾರ ದಿಂದಲೂ ಬೆಳ್ಳಿಯಿಂದಲೂ ಅಮೂಲ್ಯ ಕಲ್ಲುಗಳಿಂ ದಲೂ ರಮ್ಯವಾದವುಗಳಿಂದಲೂ ಗೌರವಿಸುವನು. ಹೀಗೆ ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ಯಾರನ್ನು ಕಟಾಕ್ಷಿಸು ವನೋ ಅವರಿಗೆ ಘನತೆ ಹೆಚ್ಚುವದು. ಬಹುಜನರ ಮೇಲೆ ಆಳಿಕೆಯನ್ನು ಕೊಡುವನು; ದೇಶವನ್ನು ಲಾಭಕ್ಕೆ ಹಂಚುವನು. ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂ ದಿಗೂ ಸವಾರರೊಂದಿಗೂ ಅನೇಕ ಹಡಗುಗಳೊಂ ದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದು ಹೋಗುವನು. ಇದಲ್ಲದೆ ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳು ಕೆಡವಲ್ಪಡುವವು; ಆದರೆ ಎದೋಮು, ಮೋವಾಬು ಅಮ್ಮೋನನ ಮಕ್ಕಳಲ್ಲಿ ಮುಖ್ಯಸ್ಥರು ಆತನ ಕೈಯಿಂದ ತಪ್ಪಿಸಿಕೊಳ್ಳುವರು. ಅವನು ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಐಗುಪ್ತ ದೇಶವು ತಪ್ಪಿಸಿ ಕೊಳ್ಳದು. ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ ಐಗುಪ್ತದ ಎಲ್ಲಾ ಅಮೂಲ್ಯವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವದು. ಲೂಬ್ಯರೂ ಐಥೋ ಪ್ಯರೂ ಅವನನ್ನು ಹಿಂಬಾಲಿಸುವರು. ಮೂಡಣ ದಿಂದಲೂ ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವವು. ಆದದರಿಂದ ಅವನು ಮಹಾ ಉಗ್ರನಾಗಿ ಅನೇಕರನ್ನು ಸಂಹರಿಸುವದಕ್ಕೂ ನಿರ್ಮೂಲ ಮಾಡುವದಕ್ಕೂ ಹೊರಡುವನು.ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು. ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
- Psalm 79:10–12 ಕೀರ್ತನೆಗಳು 79:10–12ಅವರ ದೇವರು ಎಲ್ಲಿ ಎಂದು ಅನ್ಯಜನಾಂಗಗಳು ಯಾಕೆ ಹೇಳಬೇಕು? ಚೆಲ್ಲಿರುವ ನಿನ್ನ ಸೇವಕರ ರಕ್ತದ ಪ್ರತಿ ದಂಡನೆಯನ್ನು ನಮ್ಮ ಕಣ್ಣುಗಳ ಮುಂದೆ ಅನ್ಯ ಜನಾಂಗಗಳಲ್ಲಿ ತಿಳಿಯಲ್ಪಡಲಿ. ಸೆರೆಯವನ ನಿಟ್ಟುಸಿರು ನಿನ್ನ ಮುಂದೆ ಬರಲಿ--ನಿನ್ನ ಮಹಾ ಶಕ್ತಿಯಿಂದ ಸಾಯುವದಕ್ಕಿರುವವರನ್ನು ಕಾಪಾಡು. ಓ ಕರ್ತನೇ, ಅವರು ನಿನ್ನನ್ನು ನಿಂದಿಸಿದ ನಿಂದೆ ಯನ್ನು ನಮ್ಮ ನೆರೆಯವರಿಗೆ ಏಳರಷ್ಟು ಅವರ ಉಡಿ ಯಲ್ಲಿ ತಿರಿಗಿ ಹಾಕು.ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.
- Isaiah 17:12–14 ಯೆಶಾಯ 17:12–14ಸಮುದ್ರವು ಭೋರ್ಗರೆಯುವಂತೆ ಭೋರ್ಗರೆ ಯುವ ಬಹು ಜನಗಳ ಸಮೂಹಕ್ಕೆ ಅಯ್ಯೋ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಾಂಗಗಳಿಗೆ ಅಯ್ಯೋ! ಮಹಾ ಜಲಪ್ರವಾಹ ಗಳು ಘೋಷಿಸುವಂತೆ ಜನಾಂಗಗಳು ಘೋಷಿಸು ತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ ಸುಂಟರಗಾಳಿಯಿಂದ ಸುತ್ತಿ ಯಾಡುವ ದೂಳಿನಂತೆಯೂ ಅಟ್ಟಲ್ಪಡುವರು.ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ. ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
- Isaiah 14:19 ಯೆಶಾಯ 14:19ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.
- Isaiah 13:11 ಯೆಶಾಯ 13:11ಅವರ ಕೆಟ್ಟವುಗಳಿಗೋಸ್ಕರವೂ ದುಷ್ಟರ ಅಪ ರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸು ವೆನು; ಗರ್ವಿಷ್ಟರ ಅಹಂಕಾರವನ್ನು ನಿಲ್ಲಿಸಿಬಿಡುವೆನು, ಭಯಂಕರವಾದ ಹೆಮ್ಮೆಯನ್ನು ತಗ್ಗಿಸುವೆನು.
- Revelation 16:1–19 ಪ್ರಕಟನೆ 16:1–19ಆಗ ಆಲಯದಿಂದ ಬಂದ ಮಹಾಶಬ್ದ ವನ್ನು ಕೇಳಿದೆನು. ಅದು ಆ ಏಳು ಮಂದಿ ದೂತರಿಗೆ--ನೀವು ಹೋಗಿ ಆ ಪಾತ್ರೆಗಳ ಲ್ಲಿರುವ ದೇವರ ರೌದ್ರವನ್ನು ಭೂಮಿಯ ಮೇಲೆ ಹೊಯ್ಯಿರಿ ಎಂದು ಹೇಳಿತು. ಆಗ ಮೊದಲನೆಯವನು ಹೊರಟು ತನ್ನ ಪಾತ್ರೆ ಯಲ್ಲಿದ್ದದ್ದನ್ನು ಭೂಮಿಯ ಮೇಲೆ ಹೊಯಿದನು; ಆಗ ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ಆರಾಧನೆ ಮಾಡಿದ ಮನುಷ್ಯರ ಮೇಲೆ ಕೊಳೆಯುವ ಘೋರವಾದ ಹುಣ್ಣು ಎದ್ದಿತು. ಎರಡನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸಮುದ್ರದ ಮೇಲೆ ಹೊಯಿದಾಗ ಅದು ಸತ್ತವನ ರಕ್ತದ ಹಾಗಾಯಿತು; ಸಮುದ್ರದಲ್ಲಿ ಬದುಕುವ ಪ್ರತಿಯೊಂದು ಪ್ರಾಣಿಯು ಸತ್ತಿತು. ಮೂರನೆಯ ದೂತನು ತನ್ನ ಪಾತ್ರೆಯಲ್ಲಿ ದ್ದದ್ದನ್ನು ನದಿಗಳ ಮೇಲೆಯೂ ನೀರಿನ ಬುಗ್ಗೆಗಳ ಮೇಲೆಯೂ ಹೊಯಿದನು; ಅವುಗಳ ನೀರು ರಕ್ತವಾಯಿತು. ಅಮೇಲೆ ಜಲಗಳ ದೂತನು--ಓ ಕರ್ತನೇ, ನೀನು ಇರುವಾತನೂ ಇದ್ದಾತನೂ ಬರುವಾತನೂ ಆಗಿರುವದರಿಂದ ನೀನು ಹೀಗೆ ತೀರ್ಪು ಮಾಡಿದ್ದರಲ್ಲಿ ನೀತಿ ಸ್ವರೂಪನಾಗಿದ್ದೀ. ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು. ಆಮೇಲೆ ಯಜ್ಞವೇದಿಯೊಳಗಿಂದ ಮತ್ತೊಬ್ಬನು--ಹೌದು, ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ ಎಂದು ಹೇಳುವದನ್ನು ನಾನು ಕೇಳಿದೆನು. ನಾಲ್ಕನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ ಮೇಲೆ ಹೊಯಿದನು. ಆಗ ಸೂರ್ಯ ನಿಗೆ ಬೆಂಕಿಯಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು. ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು. ಐದನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಮೃಗದ ಆಸನದ ಮೇಲೆ ಹೊಯ್ಯಲು ಅದರ ರಾಜ್ಯವು ತುಂಬಾ ಕತ್ತಲಾಯಿತು; ಜನರು ತಮಗಾದ ನೋವಿನ ದೆಸೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರ ಮಾಡಿ ಕೊಳ್ಳದೆ ತಮ್ಮ ನೋವಿನ ದೆಸೆಯಿಂದಲೂ ಹುಣ್ಣುಗಳ ದೆಸೆಯಿಂದಲೂ ಪರಲೋಕದೇವರನ್ನು ದೂಷಿಸಿದರು. ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು. ಘಟಸರ್ಪದ ಬಾಯಿಂದಲೂ ಮೃಗದ ಬಾಯಿಂ ದಲೂ ಸುಳ್ಳು ಪ್ರವಾದಿಯ ಬಾಯಿಂದಲೂ ಕಪ್ಪೆಗಳಂ ತಿದ್ದ ಮೂರು ಅಶುದ್ಧಾತ್ಮಗಳು ಹೊರಗೆ ಬರುವದನ್ನು ನಾನು ಕಂಡೆನು. ಅವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳ ಆತ್ಮಗಳೇ; ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಭೂಲೋಕದ ಮತ್ತು ಪ್ರಪಂಚದ ಎಲ್ಲಾ ರಾಜರನ್ನು ಕೂಡಿಸುವದಕ್ಕಾಗಿ ಅವರ ಬಳಿಗೆ ಹೋಗುವವು. ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ನಿರ್ವಾಣನಾಗಿ ತಿರುಗಾಡುವಾಗ ಜನರು ತನ್ನ ನಾಚಿಕೆಯನ್ನು ನೋಡಿಯಾರೆಂದು ಎಚ್ಚರ ವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು. ಅವನು ಅವರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್ ಎಂದು ಕರೆಯಲ್ಪಟ್ಟ ಸ್ಥಳಕ್ಕೆ ಕೂಡಿಸುವನು. ಏಳನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ವಾಯುಮಂಡಲದಲ್ಲಿ ಹೊಯ್ಯಲು ಪರಲೋಕದಲ್ಲಿದ್ದ ಆಲಯದೊಳಗಿಂದಲೂ ಸಿಂಹಾಸನದಿಂದಲೂ ಮಹಾಶಬ್ದವು ಬಂದು--ಮುಗಿಯಿತು ಎಂದು ಹೇಳಿತು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಉಂಟಾದವು; ಇದಲ್ಲದೆ ಮಹಾ ಭೂಕಂಪವುಂಟಾಯಿತು; ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ಬಲವಾದ ಮತ್ತು ದೊಡ್ಡ ದಾದ ಭೂಕಂಪವಾಗಿರಲಿಲ್ಲ. ಆ ಮಹಾಪಟ್ಟಣವು ಮೂರು ಭಾಗಗಳಾಗಿ ವಿಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು; ಇದಲ್ಲದೆ ಮಹಾಬಾಬೆಲಿಗೆ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಕೊಡು ವಂತೆ ದೇವರ ಮುಂದೆ ಅದು ಜ್ಞಾಪಕಕ್ಕೆ ಬಂತು.
- Isaiah 30:30–33 ಯೆಶಾಯ 30:30–33ಆಗ ಕರ್ತನು ತನ್ನ ಗಂಭೀರವಾದ ಸ್ವರವನ್ನು ಕೇಳಮಾಡಿ ತೀವ್ರ ಕೋಪ, ಕಬಳಿಸುವ ಅಗ್ನಿಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿ ಸುವನು. ಕರ್ತನು ದಂಡದಿಂದ ದಂಡಿಸುವಾಗ ಅಶ್ಶೂರ್ಯವು ಆತನ ಸ್ವರದಿಂದಲೇ ಮುರಿದುಹೋಗು ವದು. ಕರ್ತನು ಅದರ ಮೇಲೆ ತರುವದಕ್ಕೆ ನೇಮಿ ಸಿದ ದಂಡವು ಹಾದುಹೋಗುವಲ್ಲೆಲ್ಲಾ ಅದು ದಮ್ಮಡಿ ಕಿನ್ನರಿಗಳ ಸಂಗಡ ಇರುವದು; ಆತನು ಗದ್ದಲವುಳ್ಳ ಯುದ್ಧಗಳಲ್ಲಿ ಅದರ ಸಂಗಡ ಯುದ್ಧಮಾಡುವನು.ಪೂರ್ವದಿಂದ (ಪುರಾತನದಿಂದ) ತೋಫೆತ್ ಸಿದ್ಧ ವಾಗಿದೆ; ಹೌದು, ಯಾಕಂದರೆ ಅದು ಆಳವಾಗಿಯೂ ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಅಗ್ನಿಕುಂಡವು ಬೆಂಕಿಯೂ ಬಹಳ ಕಟ್ಟಿಗೆಯೂ ಉಳ್ಳದ್ದು; ಕರ್ತನ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವದು. ಪೂರ್ವದಿಂದ (ಪುರಾತನದಿಂದ) ತೋಫೆತ್ ಸಿದ್ಧ ವಾಗಿದೆ; ಹೌದು, ಯಾಕಂದರೆ ಅದು ಆಳವಾಗಿಯೂ ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಅಗ್ನಿಕುಂಡವು ಬೆಂಕಿಯೂ ಬಹಳ ಕಟ್ಟಿಗೆಯೂ ಉಳ್ಳದ್ದು; ಕರ್ತನ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವದು.
- Ezekiel 38:9–10 ಯೆಹೆಜ್ಕೇಲನು 38:9–10ನೀನು ಮೇಲೇರಿ ಬಿರುಗಾಳಿಯಂತೆ ಬರುವಿ. ನೀನೂ ನಿನ್ನ ಎಲ್ಲಾ ದಂಡುಗಳೂ ಮತ್ತು ಅನೇಕ ಜನರ ಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದೂ ಸಹ ಆಗುವದು, ಅದೇ ಸಮಯದಲ್ಲಿ ನಿನ್ನ ಮನಸ್ಸಿಗೆ ಕೆಲವು ಸಂಗತಿಗಳು ಬರುವವು ನೀನು ಒಂದು ಕೆಟ್ಟಯೋಚನೆಯನ್ನು ಯೋಚಿಸುವಿ,