Isaiah · chapter 27 · verse 2
Isaiah 27:2 in Kannada
ಆ ದಿನದಲ್ಲಿ ದ್ರಾಕ್ಷಾ ರಸವುಳ್ಳ ತೋಟದ ವಿಷಯವಾಗಿ ಅವಳಿಗೆ ಹಾಡಿರಿ;
Aa dinadalli draakshaa rasavulla totada vishayavaagi avalige haadiri;
Isaiah 27:2 in English
- King James Version (KJV)
- In that day sing ye unto her, A vineyard of red wine.
- World English Bible (WEB)
- In that day, sing to her, “A pleasant vineyard!
- American Standard Version (ASV)
- In that day: A vineyard of wine, sing ye unto it.
- Bible in Basic English (BBE)
- In that day it will be said, A vine-garden of delight, make a song about it.
- Darby Translation (DBY)
- In that day [there shall be] a vineyard of pure wine; sing concerning it:
- Webster's Bible (WBS)
- In that day sing ye to her, A vineyard of red wine.
- Young's Literal Translation (YLT)
- In that day, 'A desirable vineyard,' respond ye to her,
Read in context
- 1ಆ ದಿನದಲ್ಲಿ ಕರ್ತನು, ತನ್ನ ಉಗ್ರದೊಂದಿಗೆ ದೊಡ್ಡ ಬಲವಾದ ಕತ್ತಿಯಿಂ ದ(ಖಡ್ಗದಿಂದ) ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ ದಂಡಿಸಿ ಸಮುದ್ರದಲ್ಲಿರುವ ಘಟಸರ್ಪ ವನ್ನೂ ಕೊಂದುಹಾಕುವನು.
- 2ಆ ದಿನದಲ್ಲಿ ದ್ರಾಕ್ಷಾ ರಸವುಳ್ಳ ತೋಟದ ವಿಷಯವಾಗಿ ಅವಳಿಗೆ ಹಾಡಿರಿ;
- 3ಕರ್ತನಾದ ನಾನೇ ಅದನ್ನು ಕಾಯುತ್ತೇನೆ, ಕ್ಷಣ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
- 4ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.
Cross references
- Jeremiah 2:21 ಯೆರೆಮೀಯ 2:21ಆದಾಗ್ಯೂ ನಾನು ನಿನ್ನನ್ನು ಉತ್ತಮ ದ್ರಾಕ್ಷೇಬಳ್ಳಿಯಾಗಿಯೂ ಪೂರ್ಣ ವಾಗಿ ನಿಜ ಬೀಜವಾಗಿಯೂ ನೆಟ್ಟಿದ್ದೆನು; ಆದರೆ ನೀನು ಹೀಗೆ ನನಗೆ ಅನ್ಯ ದ್ರಾಕ್ಷೇ ಬಳ್ಳಿಯ ಹಾಗೆ ಕೆಟ್ಟುಹೋಗಿ ಬದಲಾದಿ?
- Luke 20:9–18 ಲೂಕನು 20:9–18ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು. ಫಲ ಕಾಲದಲ್ಲಿ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷೇ ತೊಟದ ಫಲವನ್ನು ಕೊಡುವಂತೆ ಅವನು ತನ್ನ ಆಳನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು. ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು. ಅವನು ತಿರಿಗಿ ಮೂರನೆಯವನನ್ನು ಕಳುಹಿಸಿದನು; ಆಗ ಅವರು ಅವನನ್ನು ಸಹ ಗಾಯಪಡಿಸಿ ಹೊರಗೆ ಹಾಕಿದರು. ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು. ಆದರೆ ಒಕ್ಕಲಿಗರು ಅವನನ್ನು ನೋಡಿದಾಗ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನು; ಬನ್ನಿರಿ, ಇವ ನನ್ನು ಕೊಂದುಹಾಕೋಣ ಬಾಧ್ಯತೆಯು ನಮ್ಮದಾಗು ತ್ತದೆ ಎಂದು ಆಲೋಚನೆ ಮಾಡಿಕೊಂಡರು. ಅವರು ಅವನನ್ನು ದ್ರಾಕ್ಷೇ ತೋಟದ ಹೊರಗೆಹಾಕಿ ಕೊಂದರು. ಹೀಗಿರಲು ದ್ರಾಕ್ಷೇತೋಟದ ಯಜ ಮಾನನು ಅವರಿಗೆ ಏನು ಮಾಡುವನು? ಅವನು ಬಂದು ಈ ಒಕ್ಕಲಿಗರನ್ನು ಸಂಹರಿಸಿ ದ್ರಾಕ್ಷೇತೋಟ ವನ್ನು ಬೇರೆಯವರಿಗೆ ಕೊಡುವನು ಅಂದನು. ಅವರು ಇದನ್ನು ಕೇಳಿ--ಹಾಗೆ ಎಂದಿಗೂ ಆಗಬಾರದು ಅಂದರು. ಆಗ ಆತನು ಅವರನ್ನು ನೋಡಿ--ಹಾಗಾದರೆ ಮನೇ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂದು ಬರೆದಿರು ವದು ಏನು? ಯಾವನಾದರೂ ಆ ಕಲ್ಲಿನ ಮೇಲೆ ಬಿದ್ದರೆ ತುಂಡುತುಂಡಾಗುವನು. ಆದರೆ ಇದು ಯಾರ ಮೇಲೆ ಬೀಳುವದೋ ಅವನನ್ನು ಅದು ಅರೆದು ಪುಡಿಪುಡಿ ಮಾಡುವದು ಅಂದನು.
- Isaiah 5:1–7 ಯೆಶಾಯ 5:1–7ನನ್ನ ಪ್ರಿಯನ ದ್ರಾಕ್ಷೇ ತೋಟದ ವಿಷಯವಾದ ಹಾಡನ್ನು ನನ್ನ ಅತಿ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದಲ್ಲಿ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿದೆ. ಅವನು ಅದಕ್ಕೆ ಬೇಲಿ ಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ಒಳ್ಳೇ ದ್ರಾಕ್ಷೆಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷೇ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆ ದ್ರಾಕ್ಷೇ ಹಣ್ಣನ್ನು ಕೊಡುವದೆಂದು ಎದುರು ನೋಡು ತ್ತಿರಲು, ಅದು ಕಾಡುಹಣ್ಣನ್ನು ಬಿಟ್ಟಿತು. ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ? ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು. ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು. ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
- Psalm 80:8–19 ಕೀರ್ತನೆಗಳು 80:8–19ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ. ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು. ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು. ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು. ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ? ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ. ಓ ಸೈನ್ಯಗಳ ದೇವರೇ, ತಿರುಗಿಕೋ ಎಂದು ನಾವು ನಿನ್ನನ್ನು ಬೇಡುತ್ತೇವೆ. ಆಕಾಶದಿಂದ ದೃಷ್ಟಿಸಿ ನೋಡು; ಈ ದ್ರಾಕ್ಷೇಗಿಡವನ್ನೂ ನಿನ್ನ ಬಲಗೈ ನೆಟ್ಟ ಸಸಿಯನ್ನೂ ನೀನು ನಿನಗೆ ಬಲಪಡಿಸಿ ಕೊಂಡ ಕೊಂಬೆಯನ್ನೂ ಪರಾಮರಿಸು. ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ. ನಿನ್ನ ಬಲಗೈ ಮನುಷ್ಯನ ಮೇಲೆ ಹೌದು, ನೀನು ನಿನಗೆ ಬಲಪಡಿಸಿಕೊಂಡ ಮನುಷ್ಯ ಪುತ್ರನ ಮೇಲೆ ನಿನ್ನ ಕೈ ಇರಲಿ. ಆಗ ನಾವು ನಿನ್ನಿಂದ ಹಿಂದಿರು ಗುವದಿಲ್ಲ; ನಮ್ಮನ್ನು ಬದುಕಿಸು, ಆಗ ನಿನ್ನ ಹೆಸರನ್ನು ಕರೆಯುವೆವು.ಸೈನ್ಯಗಳ ದೇವರಾದ ಓ ಕರ್ತನೇ, ಮತ್ತೆ ನಮ್ಮನ್ನು ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು. ಸೈನ್ಯಗಳ ದೇವರಾದ ಓ ಕರ್ತನೇ, ಮತ್ತೆ ನಮ್ಮನ್ನು ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
- Numbers 21:17 ಅರಣ್ಯಕಾಂಡ 21:17ಆಗ ಇಸ್ರಾಯೇಲ್ಯರು ಈ ಹಾಡನ್ನು ಹಾಡಿದರು; ಏನಂದರೆ--ಓ ಬಾವಿಯೇ, ಉಕ್ಕು; ಅದಕ್ಕೆ ನೀವು ಹಾಡಿರಿ.
- Matthew 21:33–46 ಮತ್ತಾಯನು 21:33–46ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಮನೇ ಯಜಮಾನನು ದ್ರಾಕ್ಷೇತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿ ಅದರೊಳಗೆ ತೊಟ್ಟಿಯನ್ನು ಅಗೆದು ಗೋಪುರವನ್ನು ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೋದನು. ಫಲದ ಕಾಲವು ಸಮಾಪಿಸಿದಾಗ ತನ್ನ ಫಲಗಳನ್ನು ಪಡಕೊಳ್ಳು ವದಕ್ಕೆ ತನ್ನ ಸೇವಕರನ್ನು ಒಕ್ಕಲಿಗರ ಬಳಿಗೆ ಕಳುಹಿಸಿಕೊಟ್ಟನು. ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು. ಅವನು ತಿರಿಗಿ ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು; ಅವರು ಅದೇ ರೀತಿಯಲ್ಲಿ ಅವರಿಗೂ ಮಾಡಿದರು. ಆದರೆ ಅವನು-- ನನ್ನ ಮಗನನ್ನಾದರೂ ಅವರು ಸನ್ಮಾನಿ ಸಾರು ಎಂದು ಅಂದುಕೊಂಡು ಕಟ್ಟಕಡೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಒಕ್ಕಲಿಗರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನಾಗಿದ್ದಾನೆ, ಬನ್ನಿರಿ; ನಾವು ಇವನನ್ನು ಕೊಂದು ಇವನ ಸ್ವಾಸ್ತ್ಯವನ್ನು ಸ್ವಾಧೀನಮಾಡಿಕೊ ಳ್ಳೋಣ ಎಂದು ಅಂದು ಕೊಂಡರು. ಅವರು ಅವನನ್ನು ಹಿಡಿದು ದ್ರಾಕ್ಷೇ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದು ಹಾಕಿದರು. ಹೀಗಿರುವ ದರಿಂದ ದ್ರಾಕ್ಷೇ ತೋಟದ ಯಜಮಾನನು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡಾನು ಅಂದನು. ಅವರು ಆತನಿಗೆ--ಅವನು ಆ ದುಷ್ಟ ಮನುಷ್ಯರನು ಕ್ರೂರವಾಗಿ ಸಂಹರಿಸುವನು; ಮತ್ತು ತಕ್ಕಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಒಕ್ಕಲಿಗರಿಗೆ ತನ್ನ ದ್ರಾಕ್ಷೇತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು. ಯೇಸು ಅವರಿಗೆ--ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಮತ್ತು ಇದು ಕರ್ತನಿಂದಲೇ ಆಯಿತು. ಅದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾದದ್ದು ಎಂದು ಬರಹಗಳಲ್ಲಿ ಎಂದಾದರೂ ನೀವು ಓದಲಿಲ್ಲವೋ? ಆದದರಿಂದ ನಾನು ನಿಮಗೆ ಹೇಳುವದೇನಂದರೆ--ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವದು. ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದು ಯಾವನ ಮೇಲೆ ಬೀಳುವದೋ ಅವನನ್ನು ಅರೆದು ಪುಡಿಪುಡಿ ಮಾಡುವದು ಅಂದನು. ಪ್ರಧಾನ ಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮ ವಿಷಯದಲ್ಲಿಯೇ ಆತನು ಅದನ್ನು ಹೇಳಿದನೆಂದು ಅವರು ತಿಳುಕೊಂಡರು.ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು. ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು.