Luke · chapter 20 · verse 9
Luke 20:9 in Kannada
ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು.
Idallade aatanu janarige ee saamyavannu heluvadakke praarambhisi--obbaanobba manushyanu draakshetotavannu nettu adannu okkaligarige vaarakke kottu bahukaalada varege ondu doora deshakke horatuhodanu.
Luke 20:9 in English
- King James Version (KJV)
- Then began he to speak to the people this parable; A certain man planted a vineyard, and let it forth to husbandmen, and went into a far country for a long time.
- World English Bible (WEB)
- He began to tell the people this parable: “A man planted a vineyard and rented it out to some farmers, and went into another country for a long time.
- American Standard Version (ASV)
- And he began to speak unto the people this parable: A man planted a vineyard, and let it out to husbandmen, and went into another country for a long time.
- Bible in Basic English (BBE)
- And he gave the people this story: A man made a vine-garden and gave the use of it to some field-workers and went into another country for a long time.
- Darby Translation (DBY)
- And he began to speak to the people this parable: A man planted a vineyard and let it out to husbandmen, and left the country for a long time.
- Webster's Bible (WBS)
- Then he began to speak to the people this parable; A certain man planted a vineyard, and let it to husbandmen, and went into a far country for a long time.
- Young's Literal Translation (YLT)
- And he began to speak unto the people this simile: 'A certain man planted a vineyard, and gave it out to husbandmen, and went abroad for a long time,
Read in context
- 7ಅವರು--ಅದು ಎಲ್ಲಿಂ ದಲೋ ನಾವು ಅರಿಯೆವು ಎಂದು ಉತ್ತರಕೊಟ್ಟರು.
- 8ಆಗ ಯೇಸು ಅವರಿಗೆ--ಇವುಗಳನ್ನು ನಾನು ಯಾವ ಅಧಿಕಾರದಿಂದ ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಅಂದನು.
- 9ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು.
- 10ಫಲ ಕಾಲದಲ್ಲಿ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷೇ ತೊಟದ ಫಲವನ್ನು ಕೊಡುವಂತೆ ಅವನು ತನ್ನ ಆಳನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು.
- 11ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು.
Cross references
- Matthew 21:33–46 ಮತ್ತಾಯನು 21:33–46ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಮನೇ ಯಜಮಾನನು ದ್ರಾಕ್ಷೇತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿ ಅದರೊಳಗೆ ತೊಟ್ಟಿಯನ್ನು ಅಗೆದು ಗೋಪುರವನ್ನು ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೋದನು. ಫಲದ ಕಾಲವು ಸಮಾಪಿಸಿದಾಗ ತನ್ನ ಫಲಗಳನ್ನು ಪಡಕೊಳ್ಳು ವದಕ್ಕೆ ತನ್ನ ಸೇವಕರನ್ನು ಒಕ್ಕಲಿಗರ ಬಳಿಗೆ ಕಳುಹಿಸಿಕೊಟ್ಟನು. ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು. ಅವನು ತಿರಿಗಿ ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು; ಅವರು ಅದೇ ರೀತಿಯಲ್ಲಿ ಅವರಿಗೂ ಮಾಡಿದರು. ಆದರೆ ಅವನು-- ನನ್ನ ಮಗನನ್ನಾದರೂ ಅವರು ಸನ್ಮಾನಿ ಸಾರು ಎಂದು ಅಂದುಕೊಂಡು ಕಟ್ಟಕಡೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಒಕ್ಕಲಿಗರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನಾಗಿದ್ದಾನೆ, ಬನ್ನಿರಿ; ನಾವು ಇವನನ್ನು ಕೊಂದು ಇವನ ಸ್ವಾಸ್ತ್ಯವನ್ನು ಸ್ವಾಧೀನಮಾಡಿಕೊ ಳ್ಳೋಣ ಎಂದು ಅಂದು ಕೊಂಡರು. ಅವರು ಅವನನ್ನು ಹಿಡಿದು ದ್ರಾಕ್ಷೇ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದು ಹಾಕಿದರು. ಹೀಗಿರುವ ದರಿಂದ ದ್ರಾಕ್ಷೇ ತೋಟದ ಯಜಮಾನನು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡಾನು ಅಂದನು. ಅವರು ಆತನಿಗೆ--ಅವನು ಆ ದುಷ್ಟ ಮನುಷ್ಯರನು ಕ್ರೂರವಾಗಿ ಸಂಹರಿಸುವನು; ಮತ್ತು ತಕ್ಕಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಒಕ್ಕಲಿಗರಿಗೆ ತನ್ನ ದ್ರಾಕ್ಷೇತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು. ಯೇಸು ಅವರಿಗೆ--ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಮತ್ತು ಇದು ಕರ್ತನಿಂದಲೇ ಆಯಿತು. ಅದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾದದ್ದು ಎಂದು ಬರಹಗಳಲ್ಲಿ ಎಂದಾದರೂ ನೀವು ಓದಲಿಲ್ಲವೋ? ಆದದರಿಂದ ನಾನು ನಿಮಗೆ ಹೇಳುವದೇನಂದರೆ--ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವದು. ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದು ಯಾವನ ಮೇಲೆ ಬೀಳುವದೋ ಅವನನ್ನು ಅರೆದು ಪುಡಿಪುಡಿ ಮಾಡುವದು ಅಂದನು. ಪ್ರಧಾನ ಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮ ವಿಷಯದಲ್ಲಿಯೇ ಆತನು ಅದನ್ನು ಹೇಳಿದನೆಂದು ಅವರು ತಿಳುಕೊಂಡರು.ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು. ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು.
- Mark 12:1–12 ಮಾರ್ಕನು 12:1–12ಇದಾದ ಮೇಲೆ ಆತನು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದನು. ಒಬ್ಬಾ ನೊಬ್ಬ ಮನುಷ್ಯನು ಒಂದು ದ್ರಾಕ್ಷೇತೋಟವನ್ನು ಮಾಡಿ ಸುತ್ತಲೂ ಬೇಲಿಹಾಕಿ ದ್ರಾಕ್ಷೆಯ ಅಲೆಗಾಗಿ ಅಗೆದು ಗೋಪುರ ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೊರಟುಹೋದನು. ಫಲದ ಕಾಲ ದಲ್ಲಿ ಅವನು ದ್ರಾಕ್ಷೇ ತೋಟದ ಫಲವನ್ನು ಒಕ್ಕಲಿಗ ರಿಂದ ಪಡೆಯುವದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕ ನನ್ನು ಕಳುಹಿಸಿದನು. ಆದರೆ ಅವರು ಅವನನ್ನು ಹಿಡಿದು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು. ತಿರಿಗಿ ಅವನು ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ಮೇಲೆ ಕಲ್ಲುಗಳನ್ನು ಎಸೆದು ತಲೆಯನ್ನು ಗಾಯಪಡಿಸಿ ಅವಮಾನದಿಂದ ವರ್ತಿಸಿ ಅವನನ್ನು ಕಳುಹಿಸಿಬಿಟ್ಟರು. ಅವನು ಮತ್ತೆ ಇನ್ನೊಬ್ಬನನ್ನು ಕಳುಹಿಸಿದಾಗ ಅವನನ್ನೂ ಕೊಂದರು. ಇನ್ನೂ ಆನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವ ರನ್ನು ಹೊಡೆದರು; ಕೆಲವರನ್ನು ಕೊಂದು ಹಾಕಿದರು. ಕಡೆಯದಾಗಿ ತನಗೆ ಇನ್ನು ಅತಿ ಪ್ರಿಯನಾಗಿದ್ದ ಒಬ್ಬನೇ ಮಗನಿರಲಾಗಿ--ಅವರು ನನ್ನ ಮಗನಿಗಾದರೂ ಗೌರವ ಸಲ್ಲಿಸಾರು ಎಂದು ಅಂದುಕೊಂಡು ಅವನನ್ನು ಸಹ ಅವರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು--ಇವನೇ ಬಾದ್ಯಸ್ಥನು; ಬನ್ನಿರಿ, ಇವನನ್ನು ನಾವು ಕೊಂದುಹಾಕೋಣ; ಆಗ ಸ್ವಾಸ್ಥ್ಯವು ನಮ್ಮದಾ ಗುವದು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು. ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷೇತೋಟದ ಹೊರಗೆ ಬಿಸಾಡಿದರು. ಹಾಗಾದರೆ ದ್ರಾಕ್ಷೇತೋಟದ ದಣಿಯು ಏನು ಮಾಡಿಯಾನು? ಅವನು ಬಂದು ಆ ಒಕ್ಕಲಿಗರನ್ನು ಸಂಹಾರಮಾಡಿ ದ್ರಾಕ್ಷೇತೋಟವನ್ನು ಬೇರೆಯವರಿಗೆ ಕೊಡುವನು. ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಇದು ಕರ್ತನ ಕೆಲಸವೇ ಆಗಿತ್ತು. ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆಯಲ್ಲಾ ಎಂಬ ಈ ಬರಹವನ್ನು ನೀವು ಓದಲಿಲ್ಲವೋ ಎಂದು ಹೇಳಿದನು. ಆಗ ಆತನು ತಮಗೆ ವಿರೋಧವಾಗಿ ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದು ಆತನನ್ನು ಹಿಡಿಯುವದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿದರು. ಅವರು ಆತನನ್ನು ಬಿಟ್ಟು ಹೊರಟು ಹೋದರು.
- Jeremiah 2:21 ಯೆರೆಮೀಯ 2:21ಆದಾಗ್ಯೂ ನಾನು ನಿನ್ನನ್ನು ಉತ್ತಮ ದ್ರಾಕ್ಷೇಬಳ್ಳಿಯಾಗಿಯೂ ಪೂರ್ಣ ವಾಗಿ ನಿಜ ಬೀಜವಾಗಿಯೂ ನೆಟ್ಟಿದ್ದೆನು; ಆದರೆ ನೀನು ಹೀಗೆ ನನಗೆ ಅನ್ಯ ದ್ರಾಕ್ಷೇ ಬಳ್ಳಿಯ ಹಾಗೆ ಕೆಟ್ಟುಹೋಗಿ ಬದಲಾದಿ?
- Isaiah 5:1–7 ಯೆಶಾಯ 5:1–7ನನ್ನ ಪ್ರಿಯನ ದ್ರಾಕ್ಷೇ ತೋಟದ ವಿಷಯವಾದ ಹಾಡನ್ನು ನನ್ನ ಅತಿ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದಲ್ಲಿ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿದೆ. ಅವನು ಅದಕ್ಕೆ ಬೇಲಿ ಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ಒಳ್ಳೇ ದ್ರಾಕ್ಷೆಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷೇ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆ ದ್ರಾಕ್ಷೇ ಹಣ್ಣನ್ನು ಕೊಡುವದೆಂದು ಎದುರು ನೋಡು ತ್ತಿರಲು, ಅದು ಕಾಡುಹಣ್ಣನ್ನು ಬಿಟ್ಟಿತು. ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ? ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು. ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು. ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
- Psalm 80:8–14 ಕೀರ್ತನೆಗಳು 80:8–14ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ. ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು. ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು. ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು. ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ? ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ. ಓ ಸೈನ್ಯಗಳ ದೇವರೇ, ತಿರುಗಿಕೋ ಎಂದು ನಾವು ನಿನ್ನನ್ನು ಬೇಡುತ್ತೇವೆ. ಆಕಾಶದಿಂದ ದೃಷ್ಟಿಸಿ ನೋಡು; ಈ ದ್ರಾಕ್ಷೇಗಿಡವನ್ನೂ
- Deuteronomy 16:18 ಧರ್ಮೋಪದೇಶಕಾಂಡ 16:18ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
- Matthew 25:14 ಮತ್ತಾಯನು 25:14ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
- John 15:1–8 ಯೋಹಾನನು 15:1–8ನಾನೇ ನಿಜವಾದ ದ್ರಾಕ್ಷೇ ಬಳ್ಳಿ ನನ್ನ ತಂದೆ ವ್ಯವಸಾಯಗಾರನು. ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ. ನಾನು ನಿಮಗೆ ಹೇಳಿದ ಮಾತಿನ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ. ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ. ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು. ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು. ನೀವು ಬಹಳ ಫಲವನ್ನು ಕೊಡುವ ದರಿಂದ ನನ್ನ ತಂದೆಗೆ ಮಹಿಮೆ ಉಂಟಾಗುವದು; ಹೀಗೆ ನೀವು ನನ್ನ ಶಿಷ್ಯರಾಗುವಿರಿ.
- Deuteronomy 17:8–15 ಧರ್ಮೋಪದೇಶಕಾಂಡ 17:8–15ನಿನ್ನ ಬಾಗಲುಗಳಲ್ಲಿ ಉಂಟಾದ ವಿವಾದಗಳ ವಿಷ ಯವಾಗಿ ಅಂದರೆ ರಕ್ತರಕ್ತದ ಮಧ್ಯದಲ್ಲಿಯ ವ್ಯಾಜ್ಯ ವಾಗಲಿ, ವಾದಿ ಪ್ರತಿವಾದಿ ವ್ಯಾಜ್ಯವಾಗಲಿ, ಬಡಿದಾ ಟದ ವ್ಯಾಜ್ಯವಾಗಲಿ, ನೀನು ನ್ಯಾಯ ತೀರಿಸ ಕೂಡದ ಕಠಿಣವಾದ ಕಾರ್ಯ ಉಂಟಾದರೆ ನೀನು ಎದ್ದು ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಹೋಗಿ ಯಾಜಕರಾದ ಲೇವಿಯರ ಬಳಿಗೂ ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು; ಅವರು ನಿನಗೆ ಆ ನ್ಯಾಯದ ತೀರ್ಪನ್ನು ತಿಳಿಸುವರು. ಅವರು ನಿನಗೆ ಕರ್ತನು ಆದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀನು ಮಾಡಿ ಬೋಧಿಸುವಂಥದ್ದೆಲ್ಲಾ ಅನುಸ ರಿಸಬೇಕು. ಅವರು ನಿನಗೆ ಬೋಧಿಸುವ ನ್ಯಾಯ ಪ್ರಮಾಣದ ಪ್ರಕಾರವೂ ಅವರು ನಿನಗೆ ಹೇಳುವ ತೀರ್ಪಿನ ಪ್ರಕಾರವೂ ನೀನು ಮಾಡಬೇಕು; ಅವರು ನಿನಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗಬಾರದು. ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು; ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಏನೂ ಮಾಡುವದಿಲ್ಲ. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಪಡಿಸಿ ಕೊಂಡು ಅದರಲ್ಲಿ ವಾಸವಾಗಿರುವಾಗ--ನನ್ನ ಸುತ್ತ ಲಿರುವ ಎಲ್ಲಾ ಜನಾಂಗಗಳ ಹಾಗೆ ನನಗೆ ಅರಸ ನನ್ನು ಇಟ್ಟುಕೊಳ್ಳುತ್ತೇನೆಂದು ಹೇಳಿದರೆ ಹೇಗಾ ದರೂ ನಿನ್ನ ದೇವರಾದ ಕರ್ತನು ಆದುಕೊಳ್ಳು ವವನನ್ನು ನಿನಗೆ ಅರಸನನ್ನಾಗಿ ಇಟ್ಟು ಕೊಳ್ಳಬೇಕು; ನಿನ್ನ ಸಹೋದರರಲ್ಲಿಂದ ಒಬ್ಬನನ್ನು ನಿನಗೆ ಅರಸನ ನ್ನಾಗಿ ಇಟ್ಟುಕೊಳ್ಳಬೇಕು; ನಿನ್ನ ಸಹೋದರನಲ್ಲದ ಅನ್ಯನಾದ ಮನುಷ್ಯನನ್ನು ನಿನ್ನ ಮೇಲೆ ಇಟ್ಟು ಕೊಳ್ಳಬಾರದು.
- 1 Corinthians 3:6–9 1 ಕೊರಿಂಥದವರಿಗೆ 3:6–9ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು. ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
- Deuteronomy 1:15–18 ಧರ್ಮೋಪದೇಶಕಾಂಡ 1:15–18ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ. ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು. ಆ ಸಮಯದಲ್ಲಿ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ನಿಮಗೆ ಆಜ್ಞಾಪಿಸಿದೆನು.
- Song of Solomon 8:11–12 ಪರಮಗೀತೆ 8:11–12ಆಗ, ನಾನು ಅವನ ದೃಷ್ಟಿಯಲ್ಲಿ ದಯ ಹೊಂದಿದವಳ ಹಾಗಿದ್ದೆನು. ಬಾಲ್ಹಾಮೋನಿನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷೇ ತೋಟ ಇತ್ತು. ಅವನು ಆ ದ್ರಾಕ್ಷೇ ತೋಟವನ್ನು ಒಕ್ಕಲಿಗರಿಗೆ ಗುತ್ತಿ ಗೆಗೆ ಕೊಟ್ಟನು. ಒಬ್ಬೊಬ್ಬನು ಅದರ ಫಲಕ್ಕೋಸ್ಕರ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು. ನನ್ನದಾದ ನನ್ನ ದ್ರಾಕ್ಷೇ ತೋಟವು ನನ್ನ ಮುಂದೆ ಅದೆ. ಓ ಸೊಲೊಮೋನನೇ, ನಿನಗೆ ಒಂದು ಸಾವಿರ ಇರತಕ್ಕದ್ದು. ಅದರ ಫಲವನ್ನು ಕಾಪಾಡುವವರಿಗೆ ಇನ್ನೂರು ಆಗಲಿ.