Isaiah · chapter 27 · verse 6
Isaiah 27:6 in Kannada
ಮುಂದಿನ ಕಾಲದಲ್ಲಿ ಯಾಕೋಬು ಬೇರೂರಿ ಇಸ್ರಾ ಯೇಲು ಹೂ ಅರಳಿ ಚಿಗುರುವದು ಮತ್ತು ಭೂಲೋ ಕದ ಮೇಲ್ಭಾಗವನ್ನು ಫಲದಿಂದ ತುಂಬಿಸುವನು.
Mundina kaaladalli yaakobu beroori israa yelu hoo arali chiguruvadu mattu bhoolo kada melbhaagavannu phaladinda tumbisuvanu.
Isaiah 27:6 in English
- King James Version (KJV)
- He shall cause them that come of Jacob to take root: Israel shall blossom and bud, and fill the face of the world with fruit.
- World English Bible (WEB)
- In days to come, Jacob will take root. Israel will blossom and bud. They will fill the surface of the world with fruit.
- American Standard Version (ASV)
- In days to come shall Jacob take root; Israel shall blossom and bud; and they shall fill the face of the world with fruit.
- Bible in Basic English (BBE)
- In days to come Jacob will take root: Israel will put out buds and flowers; and the face of the world will be full of fruit.
- Darby Translation (DBY)
- In the future Jacob shall take root; Israel shall blossom and bud, and they shall fill the face of the world with fruit.
- Webster's Bible (WBS)
- He shall cause them that descend from Jacob to take root: Israel shall blossom and bud, and fill the face of the world with fruit.
- Young's Literal Translation (YLT)
- Those coming in He causeth to take root, Jacob doth blossom, and flourished hath Israel, And they have filled the face of the world [with] increase.
Read in context
- 4ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.
- 5ಇಲ್ಲದಿದ್ದರೆ ಅವನು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನ ಬಲವನ್ನು ಹಿಡುಕೊ ಳ್ಳಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.
- 6ಮುಂದಿನ ಕಾಲದಲ್ಲಿ ಯಾಕೋಬು ಬೇರೂರಿ ಇಸ್ರಾ ಯೇಲು ಹೂ ಅರಳಿ ಚಿಗುರುವದು ಮತ್ತು ಭೂಲೋ ಕದ ಮೇಲ್ಭಾಗವನ್ನು ಫಲದಿಂದ ತುಂಬಿಸುವನು.
- 7ಆತನನ್ನು ಹೊಡೆದವನನ್ನು ಹೊಡೆದ ಪ್ರಕಾರ ಅವನನ್ನು ಹೊಡೆದನೋ? ಇಲ್ಲವೆ ಆತನಿಂದ ಕೊಲ್ಲಲ್ಪಟ್ಟವರು ಕೊಲ್ಲಲ್ಪಟ್ಟ ಪ್ರಕಾರ ಅವನನ್ನು ಕೊಂದನೋ?
- 8ಮಿತಿಯಾಗಿ ಕಳುಹಿಸಿ ಬಿಡುವದರ ಮೂಲಕ ಅದರೊಡನೆ ವಿವಾದ ಮಾಡಿದಿ. ಮೂಡಣ ಗಾಳಿಯು ಬೀಸುವ ದಿನದಲ್ಲಿ ತನ್ನ ಬಲವಾದ ವಾಯು ವಿನಿಂದ ಆತನು ಅದನ್ನು ತೊಲಗಿಸಿದನು.
Cross references
- Isaiah 37:31 ಯೆಶಾಯ 37:31ಯೆಹೂದನ ಮನೆತನದಿಂದ ತಪ್ಪಿಸಿ ಕೊಂಡು ಉಳಿದವರು ತಿರುಗಿ ಕೆಳಗೆ ಬೇರೂರಿ ಮೇಲಕ್ಕೆ ಫಲಫಲಿಸುವರು.
- Hosea 14:5–6 ಹೋಶೇಯ 14:5–6ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು. ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು.
- Romans 11:16–26 ರೋಮಾಪುರದವರಿಗೆ 11:16–26ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ. ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ. ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ. ಈ ಮಾತಿಗೆ--ನಾನು ಕಸಿಕಟ್ಟಿಸಿ ಕೊಳ್ಳುವಂತೆ ಕೊಂಬೆಗಳು ಮುರಿದು ಹಾಕಲ್ಪಟ್ಟವಲ್ಲಾ ಎಂದು ನೀನು ಹೇಳುವಿ. ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು; ದೇವರು ಹುಟ್ಟು ಕೊಂಬೆಗಳನ್ನು ಉಳಿಸದೆಯಿದ್ದ ಮೇಲೆ ನಿನ್ನನ್ನೂ ಉಳಿಸು ವದಿಲ್ಲ. ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ. ಅವರು ಕೂಡ ಇನ್ನು ಅಪ ನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ಯಾಕಂದರೆ ದೇವರು ಅವರನ್ನು ತಿರಿಗಿ ದೇವರು ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ. ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ. ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
- Isaiah 54:1–3 ಯೆಶಾಯ 54:1–3ಓ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದ ಸ್ವರವನ್ನೆತ್ತಿ ಗಟ್ಟಿಯಾಗಿ ಕೂಗು! ಮದುವೆ ಯಾದವಳಿಗಿಂತ ಆಗದವಳಿಗೆ ಮಕ್ಕಳು ಹೆಚ್ಚು ಎಂದು ಕರ್ತನು ಹೇಳುತ್ತಾನೆ. ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ನಿನ್ನ ನಿವಾಸದ ಪರದೆಗಳು ಹರಡಲಿ; ಹಿಂತೆ ಗೆಯಬೇಡ; ನಿನ್ನ ಹಗ್ಗಗಳನ್ನು ಉದ್ದ ಮಾಡಿ ಗೂಟ ಗಳನ್ನು ಬಲಪಡಿಸು. ನೀನು ಬಲಗಡೆಗೂ ಎಡ ಗಡೆಗೂ ಹಬ್ಬಿಕೊಳ್ಳುವಿ; ನಿನ್ನ ಸಂತಾನವು ಅನ್ಯ ಜನಾಂಗಗಳನ್ನು ವಶಪಡಿಸಿಕೊಂಡು ಹಾಳಾದ ಪಟ್ಟಣ ಗಳನ್ನು ನಿವಾಸವಾಗಮಾಡುವದು.
- Psalm 92:13–15 ಕೀರ್ತನೆಗಳು 92:13–15ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು. ಮುದಿ ಪ್ರಾಯದಲ್ಲಿಯೂ ಫಲ ಫಲಿಸುವರು. ಅವರು ಪುಷ್ಟಿಯಾಗಿ ವೃದ್ಧಿಯಾಗುವರು.ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ. ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- Hosea 2:23 ಹೋಶೇಯ 2:23ತರುವಾಯ ಇಜ್ರೇಲನ್ನು ನನಗಾಗಿ ದೇಶದಲ್ಲಿ ಬಿತ್ತುವೆನು; ಕರುಣೆ ಹೊಂದ ದವಳ ಮೇಲೆಯೇ ನಾನು ಕರುಣೆಯನ್ನು ತೋರಿ ಸುವೆನು. ನನ್ನ ಜನವಲ್ಲದ್ದಕ್ಕೆ--ನೀನು ನನ್ನ ಜನ ವೆಂದು ಹೇಳುವೆನು; ಅವರು--ನನ್ನ ದೇವರೇ ಎಂದು ಭಜಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- Zechariah 10:8–9 ಜೆಕರ್ಯ 10:8–9ನಾನು ಅವರಿಗೆ ಸಿಳ್ಳುಹಾಕಿ ಅವರನ್ನು ಕೂಡಿಸುವೆನು; ಅವರನ್ನು ವಿಮೋಚಿ ಸಿದ್ದೇನೆ; ಅವರು ಹಿಂದೆ ಹೆಚ್ಚಿದ ಹಾಗೆ ಹೆಚ್ಚುವರು. ನಾನು ಅವರನ್ನು ಜನಗಳಲ್ಲಿ ಬಿತ್ತುವೆನು; ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡುವರು; ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು.
- Isaiah 60:22 ಯೆಶಾಯ 60:22ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.
- Jeremiah 30:19 ಯೆರೆಮೀಯ 30:19ಅವುಗಳೊಳಗಿಂದ ಕೃತಜ್ಞತಾ ಸ್ತೋತ್ರವೂ ಸಂತೋ ಷಪಡುವವರ ಸ್ವರವೂ ಹೊರಡುವದು; ಅವರನ್ನು ಅಭಿವೃದ್ಧಿಮಾಡುವೆನು; ಅವರು ಕೊಂಚವಾಗಿರರು, ಅವರು ಅಲ್ಪವಾಗದ ಹಾಗೆ ಅವರಿಗೆ ಘನವನ್ನು ಕೊಡುವೆನು.
- Isaiah 6:13 ಯೆಶಾಯ 6:13ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
- Isaiah 49:20–23 ಯೆಶಾಯ 49:20–23ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು. ಆಗ ನೀನು ನನ ಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನೋ, ಮಕ್ಕಳನ್ನು ಕಳೆದುಕೊಂಡವಳು, ಏಕಾಂತ ವಾಗಿ ಸೆರೆಯಲ್ಲಿದ್ದು ಹೊರಗೆ ಹಾಕಲ್ಪಟ್ಟವಳ ಹಾಗೆ ಇದ್ದೆನು. ಇವರನ್ನು ಸಾಕಿದವರು ಯಾರು? ಅವರೆ ಲ್ಲಿದ್ದರು ಎಂದು ಅಂದುಕೊಳ್ಳುವಿ. ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು. ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.