Psalms · chapter 18 · verse 23
Psalm 18:23 in Kannada
ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು.
Aatana munde sampoornanaagiddu nanna akramadinda nannannu kaapaadikondenu.
Psalm 18:23 in English
- King James Version (KJV)
- I was also upright before him, and I kept myself from mine iniquity.
- World English Bible (WEB)
- I was also blameless with him. I kept myself from my iniquity.
- American Standard Version (ASV)
- I was also perfect with him, And I kept myself from mine iniquity.
- Bible in Basic English (BBE)
- And I was upright before him, and I kept myself from sin.
- Darby Translation (DBY)
- And I was upright with him, and kept myself from mine iniquity.
- Webster's Bible (WBS)
- I was also upright before him, and I kept myself from my iniquity.
- Young's Literal Translation (YLT)
- And I am perfect with him, And I keep myself from mine iniquity.
Read in context
- 21ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
- 22ಆತನ ತೀರ್ಪುಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನೇಮಗಳನ್ನು ನನ್ನಿಂದ ತೊಲಗಿಸ ಲಿಲ್ಲ.
- 23ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು.
- 24ಆದದ ರಿಂದ ಕರ್ತನು ನನ್ನ ನೀತಿಯ ಪ್ರಕಾರವೂ ಆತನ ಕಣ್ಣೆದುರಿನಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಬದಲು ಕೊಟ್ಟನು.
- 25ನೀನು ಕರುಣೆಯು ಳ್ಳವನಿಗೆ ಕರುಣೆಯನ್ನು ತೋರಿಸುವಿ; ಸಂಪೂರ್ಣ ನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.
Cross references
- Matthew 5:29–30 ಮತ್ತಾಯನು 5:29–30ಆದದರಿಂದ ನಿನ್ನ ಬಲಗಣ್ಣು ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ. ನಿನ್ನ ಬಲಗೈ ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ.
- Matthew 18:8–9 ಮತ್ತಾಯನು 18:8–9ಆದದರಿಂದ ನಿನ್ನ ಕೈಯಾಗಲೀ ಕಾಲಾಗಲೀ ನಿನ್ನನ್ನು ಅಭ್ಯಂತರಪಡಿಸಿದರೆ ಅವುಗಳನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕೈಯುಳ್ಳವನಾಗಿ ಇಲ್ಲವೆ ಎರಡು ಕಾಲುಳ್ಳವನಾಗಿ ನಿತ್ಯವಾದ ಬೆಂಕಿಗೆ ಹಾಕಲ್ಪಡುವದಕ್ಕಿಂತ ಕುಂಟ ನಾಗಿ ಇಲ್ಲವೆ ಊನನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು. ನಿನ್ನ ಕಣ್ಣು ನಿನ್ನನ್ನು ಅಭ್ಯಂತರ ಪಡಿಸಿದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕಣ್ಣುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
- Psalm 37:27 ಕೀರ್ತನೆಗಳು 37:27ಕೇಡಿನಿಂದ ತೊಲಗಿ ಒಳ್ಳೇದನ್ನು ಮಾಡು, ಆಗ ಯುಗಯುಗಕ್ಕೂ ವಾಸಮಾಡುವಿ.
- Psalm 11:7 ಕೀರ್ತನೆಗಳು 11:7ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
- 1 Samuel 26:23 1 ಸಮುವೇಲನು 26:23ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು.
- 1 Chronicles 29:17 1 ಪೂರ್ವಕಾಲವೃತ್ತಾಂತ 29:17ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವು ಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಮನಃಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿ ರುವ ನಿನ್ನ ಜನರು ನಿನಗೆ ಮನಃಪೂರ್ವಕವಾಗಿ ಅರ್ಪಿ ಸುವದನ್ನು ಈಗ ಸಂತೋಷವಾಗಿ ಕಂಡೆನು.
- Psalm 17:3 ಕೀರ್ತನೆಗಳು 17:3ನೀನು ನನ್ನ ಹೃದಯವನ್ನು ಶೋಧಿಸಿದ್ದೀ, ರಾತ್ರಿಯಲ್ಲಿ ನನ್ನನ್ನು ದರ್ಶಿಸಿದ್ದೀ; ನನ್ನನ್ನು ಪುಟಕ್ಕೆ ಹಾಕಿ ಏನೂ ಕಂಡುಕೊಳ್ಳಲಿಲ್ಲ. ನನ್ನ ಬಾಯಿ ಅತಿ ಕ್ರಮಿಸದಂತೆ ನಾನು ನಿಶ್ಚಯ ಮಾಡಿದ್ದೇನೆ.
- Psalm 7:1–8 ಕೀರ್ತನೆಗಳು 7:1–8ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು; ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು. ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ, ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ, ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ. ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ. ಹೀಗೆ ಪ್ರಜೆಗಳ ಸಭೆಯು ನಿನ್ನನ್ನು ಸುತ್ತಿಕೊಳ್ಳುವದು. ಆದದರಿಂದ ಅವರ ನಿಮಿತ್ತ ನೀನು ಉನ್ನತಕ್ಕೆ ತಿರುಗಿಕೋ. ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು.