Isaiah · chapter 30 · verse 9
Isaiah 30:9 in Kannada
ಏನಂದರೆ, ಇವರು ತಿರುಗಿ ಬೀಳುವ ಜನರು. ಸುಳ್ಳಾಡುವ ಮಕ್ಕಳು, ಕರ್ತನ ನ್ಯಾಯಪ್ರಮಾಣವನ್ನು ಕೇಳಲೊಲ್ಲದ ಮಕ್ಕಳು.
Enandare, ivaru tirugi beeluva janaru. Sullaaduva makkalu, kartana nyaayapramaanavannu kelalollada makkalu.
Isaiah 30:9 in English
- King James Version (KJV)
- That this [is] a rebellious people, lying children, children [that] will not hear the law of the LORD:
- World English Bible (WEB)
- For it is a rebellious people, lying children, children who will not hear the LORD’s law;
- American Standard Version (ASV)
- For it is a rebellious people, lying children, children that will not hear the law of Jehovah;
- Bible in Basic English (BBE)
- For they are an uncontrolled people, false-hearted, who will not give ear to the teaching of the Lord:
- Darby Translation (DBY)
- that this is a rebellious people, lying children, children that will not hear the law of Jehovah;
- Webster's Bible (WBS)
- That this [is] a rebellious people, lying children, children [that] will not hear the law of the LORD:
- Young's Literal Translation (YLT)
- That a rebellious people [is] this, sons — liars, Sons not willing to hear the law of Jehovah.
Read in context
- 7ಐಗುಪ್ತ್ಯರ ಸಹಾಯವು ವ್ಯರ್ಥವೇ ವ್ಯರ್ಥ. ಆದದರಿಂದ ಇದನ್ನು ಕುರಿತು ಅವರ ಬಲವು ನಿಂತುಹೋಗಿದೆ ಎಂದು ನಾನು ಕೂಗಿದ್ದೇನೆ.
- 8ಈಗ ಹೋಗಿ ಇದನ್ನು ಅವರ ಮುಂದೆ ಹಲಗೆ ಯಲ್ಲಿ ಬರೆ. ಮುಂದೆ ಬರುವ ನಿತ್ಯಕಾಲಕ್ಕಾಗಿ ಪುಸ್ತಕ ದಲ್ಲಿ ಇದನ್ನು ರಚಿಸು.
- 9ಏನಂದರೆ, ಇವರು ತಿರುಗಿ ಬೀಳುವ ಜನರು. ಸುಳ್ಳಾಡುವ ಮಕ್ಕಳು, ಕರ್ತನ ನ್ಯಾಯಪ್ರಮಾಣವನ್ನು ಕೇಳಲೊಲ್ಲದ ಮಕ್ಕಳು.
- 10ಅವರು ನೋಡುವವರಿಗೆ--ನೋಡಬೇಡಿರೆಂದು, ದಿವ್ಯದರ್ಶಿಗಳಿಗೆ ನಿಮಗೆ ದರ್ಶನವಾಗದಿರಲೆನ್ನು ತ್ತಾರೆ. ಪ್ರವಾದಿಗಳಿಗೆ--ನಮಗೆ ನ್ಯಾಯವಾದವು ಗಳನ್ನು ಪ್ರವಾದಿಸಬೇಡಿರಿ ನಯವಾದವುಗಳನ್ನೇ ನುಡಿ ಯಿರಿ, ಮೋಸವಾದವುಗಳನ್ನೆ ಪ್ರವಾದಿಸಿರಿ ಅನ್ನು ತ್ತಾರೆ.
- 11ನಿಮ್ಮ ದಾರಿಗೆ ಓರೆಯಾಗಿರಿ, ಮಾರ್ಗ ದಿಂದ ತೊಲಗಿರಿ; ಇಸ್ರಾಯೇಲ್ಯರ ಪರಿಶುದ್ಧನನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ ಎಂದು ಹೇಳುತ್ತಾರೆ.
Cross references
- Isaiah 30:1 ಯೆಶಾಯ 30:1ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
- Acts 7:51 ಅಪೊಸ್ತಲರ ಕೃತ್ಯಗಳು 7:51ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.
- Zephaniah 3:2 ಚೆಫನ್ಯ 3:2ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ.
- Zechariah 1:4–6 ಜೆಕರ್ಯ 1:4–6ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ. ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
- Zechariah 7:11–12 ಜೆಕರ್ಯ 7:11–12ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು. ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು.
- Proverbs 28:9 ಜ್ಞಾನೋಕ್ತಿಗಳು 28:9ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
- Isaiah 1:4 ಯೆಶಾಯ 1:4ಹಾ, ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಸಂತ ತಿಯೇ, ಭ್ರಷ್ಟರಾದ ಮಕ್ಕಳೇ, ಕರ್ತನನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧನಾ ದಾತನಿಗೆ ಕೋಪವನ್ನೆಬ್ಬಿಸುವಂತೆ ಅವರು ಹಿಂದಕ್ಕೆ ಹೋಗಿದ್ದಾರೆ.
- Revelation 21:8 ಪ್ರಕಟನೆ 21:8ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- Jeremiah 7:13 ಯೆರೆಮೀಯ 7:13ಈಗ ಕರ್ತನು ಅನ್ನುವದೇನಂದರೆ--ನೀವು ಈ ಕೆಲಸಗಳ ನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತಾಡಿದರೂ ನೀವು ಕೇಳದೆ ಹೋದಿರಿ. ನಾನು ನಿಮ್ಮನ್ನು ಕರೆದರೂ ನೀವು ಉತ್ತರ ಕೊಡದೆ ಹೋದಿರಿ.
- 2 Chronicles 33:10 2 ಪೂರ್ವಕಾಲವೃತ್ತಾಂತ 33:10ಕರ್ತನು ಮನಸ್ಸೆಯೊಂದಿಗೂ ಅವನ ಜನ ರೊಂದಿಗೂ ಮಾತನಾಡಿದನು; ಆದರೆ ಅವರು ಆಲೈ ಸದೆ ಹೋದರು.
- Isaiah 59:3–4 ಯೆಶಾಯ 59:3–4ನಿಮ್ಮ ಕೈಗಳು ರಕ್ತದಿಂದಲೂ ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ; ನಿಮ್ಮ ತುಟಿಗಳು ಸುಳ್ಳನ್ನು ಮಾತಾಡುತ್ತವೆ; ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ. ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
- 2 Chronicles 36:15–16 2 ಪೂರ್ವಕಾಲವೃತ್ತಾಂತ 36:15–16ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.