Jeremiah · chapter 7 · verse 13
Jeremiah 7:13 in Kannada
ಈಗ ಕರ್ತನು ಅನ್ನುವದೇನಂದರೆ--ನೀವು ಈ ಕೆಲಸಗಳ ನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತಾಡಿದರೂ ನೀವು ಕೇಳದೆ ಹೋದಿರಿ. ನಾನು ನಿಮ್ಮನ್ನು ಕರೆದರೂ ನೀವು ಉತ್ತರ ಕೊಡದೆ ಹೋದಿರಿ.
Eega kartanu annuvadenandare--neevu ee kelasagala nnellaa maadiddarinda naanu beligge eddu nimma sangada maataadidaroo neevu kelade hodiri. Naanu nimmannu karedaroo neevu uttara kodade hodiri.
Jeremiah 7:13 in English
- King James Version (KJV)
- And now, because ye have done all these works, saith the LORD, and I spake unto you, rising up early and speaking, but ye heard not; and I called you, but ye answered not;
- World English Bible (WEB)
- Now, because you have done all these works,” says the LORD, “and I spoke to you, rising up early and speaking, but you didn’t hear; and I called you, but you didn’t answer;
- American Standard Version (ASV)
- And now, because ye have done all these works, saith Jehovah, and I spake unto you, rising up early and speaking, but ye heard not; and I called you, but ye answered not:
- Bible in Basic English (BBE)
- And now, because you have done all these works, says the Lord, and I sent my word to you, getting up early and sending, but you did not give ear; and my voice came to you, but you gave no answer:
- Darby Translation (DBY)
- And now, because ye have done all these works, saith Jehovah, and I spoke unto you, rising up early and speaking, and ye heard not, and I called you, and ye answered not;
- Webster's Bible (WBS)
- And now, because ye have done all these works, saith the LORD, and I spoke to you, rising early and speaking, but ye heard not; and I called you, but ye answered not;
- Young's Literal Translation (YLT)
- And now, because of your doing all these works, An affirmation of Jehovah, And I speak unto you, rising early and speaking, And ye have not hearkened, And I call you, and ye have not answered,
Read in context
- 11ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಕರ್ತನು ಅನ್ನುತ್ತಾನೆ.
- 12ಆದರೆ ಈಗ ಶಿಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಅಂದರೆ ನಾನು ಮೊದಲು ನನ್ನ ಹೆಸರನ್ನು ಇಟ್ಟಲ್ಲಿಗೆ ಹೋಗಿರಿ; ಅದಕ್ಕೆ ನಾನು ನನ್ನ ಜನರಾದ ಇಸ್ರಾಯೇಲಿನ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ.
- 13ಈಗ ಕರ್ತನು ಅನ್ನುವದೇನಂದರೆ--ನೀವು ಈ ಕೆಲಸಗಳ ನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತಾಡಿದರೂ ನೀವು ಕೇಳದೆ ಹೋದಿರಿ. ನಾನು ನಿಮ್ಮನ್ನು ಕರೆದರೂ ನೀವು ಉತ್ತರ ಕೊಡದೆ ಹೋದಿರಿ.
- 14ಆದಕಾರಣ ನನ್ನ ಹೆಸರಿನಿಂದ ಕರೆ ಯಲ್ಪಟ್ಟಂಥ ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ ನಿಮ್ಮ ಪಿತೃಗಳಿಗೂ ಕೊಟ್ಟ ಸ್ಥಳಕ್ಕೂ ಶಿಲೋವಿಗೆ ಮಾಡಿದ ಹಾಗೆ ಮಾಡುವೆನು.
- 15ನಿಮ್ಮ ಸಹೋದರರೆಲ್ಲರನ್ನೂ ಎಫ್ರಾಯಾಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.
Cross references
- Isaiah 65:12 ಯೆಶಾಯ 65:12ಆದದರಿಂದ ನಿಮ್ಮನ್ನು ಕತ್ತಿಗೆ ನೇಮಿಸು ವೆನು ನೀವೆಲ್ಲರೂ ಕೊಲೆಗೆ ಬೊಗ್ಗಿಕೊಳ್ಳುವಿರಿ. ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ; ನಾನು ಮಾತನಾಡಲು ನೀವು ಕೇಳಿಸಿಕೊಳ್ಳಲಿಲ್ಲ; ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ, ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.
- 2 Chronicles 36:15–16 2 ಪೂರ್ವಕಾಲವೃತ್ತಾಂತ 36:15–16ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
- Jeremiah 7:25 ಯೆರೆಮೀಯ 7:25ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು.
- Proverbs 1:24 ಜ್ಞಾನೋಕ್ತಿಗಳು 1:24ನಾನು ಕರೆದಾಗ ನೀವು ತಿರಸ್ಕರಿಸಿದ್ದಕ್ಕಾಗಿಯೂ ನಾನು ನನ್ನ ಕೈಚಾಚಿದಾಗ ಯಾವ ಮನುಷ್ಯನು ಗಮನಿಸದೆ ಇದ್ದದ್ದಕ್ಕಾಗಿಯೂ
- Hosea 11:2 ಹೋಶೇಯ 11:2ಅವರು ಅವರನ್ನು ಕರೆದ ಹಾಗೆಯೇ ಅವರಿಂದ ಹೊರಟು ಹೋದರು; ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು; ಕೆತ್ತಲ್ಪಟ್ಟ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.
- Zechariah 7:13 ಜೆಕರ್ಯ 7:13ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.
- Isaiah 50:2 ಯೆಶಾಯ 50:2ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು.
- Matthew 23:37 ಮತ್ತಾಯನು 23:37ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ
- Hosea 11:7 ಹೋಶೇಯ 11:7ನನ್ನ ಜನರು ನನ್ನ ಕಡೆಯಿಂದ ಹಿಂಜರಿಯಬೇಕೆಂದು ತೀರ್ಮಾನಿಸಿದ್ದಾರೆ; ಅವರನ್ನು ಮಹೋನ್ನತನ ಬಳಿಗೆ ಕರೆದರೂ ಒಬ್ಬನಾದರೂ ಆತನನ್ನು ಉನ್ನತ ಪಡಿಸಲಾರನು.
- Jeremiah 44:4 ಯೆರೆಮೀಯ 44:4ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು.
- Nehemiah 9:29–30 ನೆಹೆಮೀಯ 9:29–30ನೀನು ಅವರನ್ನು ನಿನ್ನ ನ್ಯಾಯಪ್ರಮಾಣಕ್ಕೆ ತಿರಿಗಿ ಬರುವ ಹಾಗೆ ಅವರಿಗೆ ವಿರೋಧವಾಗಿ ಸಾಕ್ಷಿ ಹೇಳಿದಿ. ಆದರೆ ಅವರು ಗರ್ವಪಟ್ಟು ನಿನ್ನ ಆಜ್ಞೆಗಳನ್ನು ಕೇಳದೆ ಮನುಷ್ಯರು ಯಾವವುಗಳನ್ನು ಕೈಕೊಳ್ಳುವದರಿಂದ ಬದುಕುವರೋ ಆ ನಿನ್ನ ನ್ಯಾಯಗಳಿಗೆ ವಿರೋಧವಾಗಿ ಪಾಪಮಾಡಿಹೆಗಲುಕೊಡದೆ ಕುತ್ತಿಗೆಯನ್ನು ಕಠಿಣಪಡಿಸಿಕೊಂಡು ಕೇಳದೆಹೋದರು. ನೀನು ಅನೇಕ ವರುಷ ಅವರನ್ನು ತಾಳಿಕೊಂಡಿದ್ದು ನಿನ್ನ ಪ್ರವಾದಿಗಳ ಮುಖಾಂತರ ನಿನ್ನ ಆತ್ಮನಿಂದ ಅವರಿಗೆ ವಿರೋಧವಾಗಿ ಸಾಕ್ಷಿಹೇಳಿದಿ. ಆದರೆ ಅವರು ಕಿವಿಗೊಡದೆ ಇದ್ದದ್ದರಿಂದ ನೀನು ಅವರನ್ನು ದೇಶಗಳ ಜನರ ಕೈಯಲ್ಲಿ ಒಪ್ಪಿಸಿದಿ.
- Isaiah 66:4 ಯೆಶಾಯ 66:4ನಾನು ಸಹ ಅವರ ಮೋಸಗಳನ್ನು ಆದುಕೊಂಡು ಅವರ ಭಯಗಳನ್ನು ಅವರ ಮೇಲೆ ಬರಮಾಡುವೆನು; ಯಾಕಂದರೆ ನಾನು ಕರೆಯಲು ಯಾರೂ ಉತ್ತರ ಕೊಡಲಿಲ್ಲ. ನಾನು ಮಾತನಾಡಲು ಅವರು ಕೇಳಲಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ನಾನು ಮೆಚ್ಚದ್ದನ್ನು ಆದುಕೊಂಡರು.