Isaiah · chapter 32 · verse 16
Isaiah 32:16 in Kannada
ನ್ಯಾಯವು ಅರಣ್ಯದಲ್ಲಿಯೂ ನೆಲೆಗೊ ಳ್ಳುವದು. ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವದು.
Nyaayavu aranyadalliyoo nelego lluvadu. Pairina holadalli neetiyu neleyaagiruvadu.
Isaiah 32:16 in English
- King James Version (KJV)
- Then judgment shall dwell in the wilderness, and righteousness remain in the fruitful field.
- World English Bible (WEB)
- Then justice will dwell in the wilderness; and righteousness will remain in the fruitful field.
- American Standard Version (ASV)
- Then justice shall dwell in the wilderness; and righteousness shall abide in the fruitful field.
- Bible in Basic English (BBE)
- Then in the waste land there will be an upright rule, and righteousness will have its place in the fertile field.
- Darby Translation (DBY)
- And judgment shall inhabit the wilderness, and righteousness dwell in the fruitful field.
- Webster's Bible (WBS)
- Then judgment shall dwell in the wilderness, and righteousness remain in the fruitful field.
- Young's Literal Translation (YLT)
- And dwelt in the wilderness hath judgment, And righteousness in the fruitful field remaineth.
Read in context
- 14ಅರಮನೆಗಳು ಕೈಬಿಡಲ್ಪಡುವವು. (ವಿಸರ್ಜಿಸು ವವು) ಸಮೂಹಗಳಿಂದ ತುಂಬಿದ್ದ ಪಟ್ಟಣವು ನಿರ್ಜನ ವಾಗುವದು. ದುರ್ಗಗಳೂ ಕೋಟೆಗಳೂ ಯಾವಾ ಗಲೂ ಗುಹೆ (ಗವಿ)ಗಳಾಗಿಯೂ ಕಾಡುಕತ್ತೆಗಳಿಗೆ ಸಂತೋಷವಾಗಿಯೂ ಮಂದೆಗಳಿಗೆ ಮೇಯುವ ಸ್ಥಳವಾಗಿಯೂ ಇರುವವು.
- 15ಬಳಿಕ ಉನ್ನತದಿಂದ ಆತ್ಮ ನಮ್ಮ ಮೇಲೆ ಸುರಿ ಸಲ್ಪಡುವಾಗ, ಆಗ ಅರಣ್ಯಗಳು ಪೈರಿನ ಹೊಲ ವಾಗುವದು. ಪೈರಿನ ಹೊಲವು ಅರಣ್ಯವೆಂದೆಣಿಸಲ್ಪ ಡುವದು.
- 16ನ್ಯಾಯವು ಅರಣ್ಯದಲ್ಲಿಯೂ ನೆಲೆಗೊ ಳ್ಳುವದು. ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವದು.
- 17ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು.
- 18ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
Cross references
- 1 Corinthians 6:9–11 1 ಕೊರಿಂಥದವರಿಗೆ 6:9–11ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ; ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
- Isaiah 56:6–8 ಯೆಶಾಯ 56:6–8ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ ನನ್ನ ಪರಿಶುದ್ಧ ಪರ್ವತಕ್ಕೆ ತರುತ್ತೇನೆ; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವ ನ್ನುಂಟು ಮಾಡುವೆನು; ನನ್ನ ಯಜ್ಞವೇದಿಯ ಮೇಲೆ ಅವರು ಅರ್ಪಿಸುವ ದಹನಬಲಿಗಳೂ, ಯಜ್ಞಗಳೂ ನನಗೆ ಒಪ್ಪಿಗೆಯಾಗುವವು; ಯಾಕಂದರೆ ನನ್ನ ಆಲ ಯವು ಸಮಸ್ತ ಜನಗಳಿಗೆ ಪ್ರಾರ್ಥನಾಲಯವು ಎಂದು ಕರೆಯಲ್ಪಡುವದು. ಇಸ್ರಾಯೇಲಿನ ತಳ್ಳಲ್ಪ ಟ್ಟವರನ್ನು ಕೂಡಿಸುವಂಥ ಕರ್ತನಾದ ದೇವರು ಹೇಳುವದೇನಂದರೆ--ನಾನು ಕೂಡಿಸಿದ ಇಸ್ರಾ ಯೇಲ್ಯರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು ಎಂದು ಹೇಳುತ್ತಾನೆ.
- Isaiah 60:21 ಯೆಶಾಯ 60:21ನಿನ್ನ ಜನರೆಲ್ಲರು ನೀತಿವಂತರಾಗಿರುವರು, ದೇಶವನ್ನು ಸದಾ ಕಾಲಕ್ಕೆ ಸ್ವಾಧೀನ ಮಾಡಿಕೊಳ್ಳುವರು; ನಾನು ಮಹಿಮೆ ಹೊಂದುವದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ ನನ್ನ ಕೈ ಸೃಷ್ಟಿಯೂ ದೇಶವನ್ನು ಸದಾ ಅನುಭವಿಸುವರು.ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.
- 1 Peter 2:9–12 1 ಪೇತ್ರನು 2:9–12ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ. ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆ ಯಾಗಿದ್ದೀರಿ; ಮೊದಲು ಕರುಣೆ ಹೊಂದಿರಲಿಲ್ಲ, ಈಗ ಕರುಣೆ ಹೊಂದಿದವರಾಗಿದ್ದೀರಿ. ಅತಿ ಪ್ರಿಯರೇ, ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿ ರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ಸತ್ಕ್ರಿಯೆಗಳನ್ನು ಕಣ್ಣಾರೆಕಂಡು ದರ್ಶಿಸುವ ದಿನದಲ್ಲಿ ದೇವರನ್ನು ಕೊಂಡಾಡುವರು.
- Hosea 3:5 ಹೋಶೇಯ 3:5ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Isaiah 42:4 ಯೆಶಾಯ 42:4ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
- Titus 2:11–12 ತೀತನಿಗೆ 2:11–12ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು. ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.
- Isaiah 35:8 ಯೆಶಾಯ 35:8ಅಲ್ಲಿ ರಾಜ ಮಾರ್ಗವಿರುವದು, ಅದು ಪರಿಶುದ್ಧ ಮಾರ್ಗವೆನಿಸಿಕೊಳ್ಳುವದು; ಯಾವ ಅಶು ದ್ಧನು ಅದರ ಮೇಲೆ ಹಾದುಹೋಗನು; ಅವರಿಗೋ ಸ್ಕರವೇ ಇರುವದು; ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.
- 1 Peter 4:1–4 1 ಪೇತ್ರನು 4:1–4ಕ್ರಿಸ್ತನು ಶರೀರದಲ್ಲಿ ನಮಗೋಸ್ಕರ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಮನಸ್ಸನ್ನು ಧರಿಸಿಕೊಳ್ಳಿರಿ. ಯಾಕಂದರೆ ಶರೀರ ದಲ್ಲಿ ಬಾಧೆಪಟ್ಟವನು ಪಾಪಮಾಡುವದನ್ನು ನಿಲ್ಲಿಸಿ ಬಿಟ್ಟಿದ್ದಾನೆ. ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು. ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು. ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಅವರೊಂದಿಗೆ ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯ ಪಟ್ಟು ನಿಮ್ಮನ್ನು ದೂಷಿಸುತ್ತಾರೆ.
- Psalm 94:14–15 ಕೀರ್ತನೆಗಳು 94:14–15ಕರ್ತನು ತನ್ನ ಜನರನ್ನು ತೊರೆಯನು; ಇಲ್ಲವೆ ತನ್ನ ಸ್ವಾಸ್ಥ್ಯವನ್ನು ಬಿಟ್ಟುಬಿಡನು. ನ್ಯಾಯವು ನೀತಿಗೆ ತಿರುಗಿಕೊಳ್ಳುವದು; ಯಥಾರ್ಥ ಹೃದಯದವರೆಲ್ಲರು ಅದನ್ನು ಹಿಂಬಾಲಿಸುವರು.