Isaiah · chapter 42 · verse 4
Isaiah 42:4 in Kannada
ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
Lokadalli nyaayavannu sthaapisuva tanaka avanu soluvadilla illave mana gunduvadilla; dveepagalu avana nyaayapramaa nakke kaadiruvavu.
Isaiah 42:4 in English
- King James Version (KJV)
- He shall not fail nor be discouraged, till he have set judgment in the earth: and the isles shall wait for his law.
- World English Bible (WEB)
- He will not fail nor be discouraged, until he has set justice on the earth, and the islands wait for his law.”
- American Standard Version (ASV)
- He will not fail nor be discouraged, till he have set justice in the earth; and the isles shall wait for his law.
- Bible in Basic English (BBE)
- His light will not be put out, and he will not be crushed, till he has given the knowledge of the true God to the earth, and the sea-lands will be waiting for his teaching.
- Darby Translation (DBY)
- He shall not faint nor be in haste, till he have set justice in the earth: and the isles shall wait for his law.
- Webster's Bible (WBS)
- He shall not fail nor be discouraged, till he hath set judgment in the earth: and the isles shall wait for his law.
- Young's Literal Translation (YLT)
- He doth not become weak nor bruised, Till he setteth judgment in the earth, And for his law isles wait with hope.
Read in context
- 2ಅವನು ಕೂಗು ವದಿಲ್ಲ, ಶಬ್ದವನ್ನು ಎತ್ತುವದಿಲ್ಲ ಇಲ್ಲವೆ ಬೀದಿಗಳಲ್ಲಿ ತನ್ನ ಸ್ವರವನ್ನು ಕೇಳಗೊಡಿಸುವದಿಲ್ಲ.
- 3ಜಜ್ಜಿದ ದಂಟನ್ನು ಮುರಿದುಹಾಕದೆ, ಕಳೆಗುಂದಿದ ದೀಪ ವನ್ನು ನಂದಿಸದೆ, ಸತ್ಯದಿಂದ ನ್ಯಾಯವನ್ನು ಹೊರ ತರುತ್ತಾನೆ.
- 4ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
- 5ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ--
- 6ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಬಂದಿ ಗಳನ್ನು ಸೆರೆಯಿಂದಲೂ ಕತ್ತಲೆಯಲ್ಲಿ ವಾಸಿಸುವವ ರನ್ನು ಕಾರಾಗೃಹದಿಂದಲೂ ಹೊರಗೆ ತರಬೇಕು ಎಂದು --
Cross references
- Isaiah 53:2–12 ಯೆಶಾಯ 53:2–12ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ. ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ. ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು. ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು. ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ. ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು. ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ. ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು. ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು. ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Genesis 49:10 ಆದಿಕಾಂಡ 49:10ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು.
- Isaiah 55:5 ಯೆಶಾಯ 55:5ಇಗೋ, ನಿನ್ನ ದೇವರಾದ ಕರ್ತನ ನಿಮಿತ್ತವೂ ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆ ಯುವಿ; ಆತನು ನಿನ್ನನ್ನು ಮಹಿಮೆ ಪಡಿಸಿದ್ದರಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವವು.
- Psalm 22:27 ಕೀರ್ತನೆಗಳು 22:27ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
- Isaiah 52:13–15 ಯೆಶಾಯ 52:13–15ಇಗೋ, ನನ್ನ ಸೇವಕನು ವಿವೇಕಿಯಾಗಿಕಾರ್ಯ ವನ್ನು ಸಾಧಿಸಿ ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತನಾಗಿರುವನು. ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು. ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- Isaiah 9:7 ಯೆಶಾಯ 9:7ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Matthew 12:21 ಮತ್ತಾಯನು 12:21ಮತ್ತು ಆತನ ಹೆಸರಿನಲ್ಲಿ ಅನ್ಯಜನರು ನಂಬಿಕೆಯಿಡುವರು ಎಂಬದೇ.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- 1 Corinthians 9:21 1 ಕೊರಿಂಥದವರಿಗೆ 9:21(ನಾನು ದೇವರ ನ್ಯಾಯಪ್ರಮಾಣವಿಲ್ಲದವ ನಂತಲ್ಲ, ಕ್ರಿಸ್ತನ ನ್ಯಾಯಪ್ರಮಾಣಕ್ಕೆ ಒಳಗಾದವನೇ;) ನ್ಯಾಯಪ್ರಮಾಣವಿಲ್ಲದವರನ್ನು ಸಂಪಾದಿಸಿಕೊಳ್ಳು ವದಕ್ಕಾಗಿ ಅವರಿಗೆ ನ್ಯಾಯಪ್ರಮಾಣವಿಲ್ಲದವ ನಂತೆಯೂ ಆದೆನು.
- Isaiah 66:19 ಯೆಶಾಯ 66:19ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು.
- Micah 4:1–3 ಮೀಕ 4:1–3ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು. ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು. ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗ ಗಳಿಗೆ ತೀರ್ಪುಕೊಡುವನು; ಅವರು ತಮ್ಮ ಕತ್ತಿಗಳನ್ನು ನೇಗಲಿನ ಗುಳಗಳಾಗಿಯೂ ತಮ್ಮ ಈಟಿಗಳನ್ನು ಕುಡು ಗೋಲುಗಳಾಗಿಯೂ ಮಾಡುವರು; ಜನಾಂಗವು ಜನಾಂಗದ ಮೇಲೆ ಕತ್ತಿಯನ್ನು ಎತ್ತದು; ಯುದ್ಧಾಭ್ಯಾಸ ಇನ್ನು ಮೇಲೆ ಇರದು.
- Isaiah 42:12 ಯೆಶಾಯ 42:12ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.