Isaiah · chapter 34 · verse 2
Isaiah 34:2 in Kannada
ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ.
Kartanu sakala janaangagala mele kopamaadi avugala ellaa sainyagala mele roshagondu avarannu kolege eedumaadi sampoornavaagi naashamaadiddaane.
Isaiah 34:2 in English
- King James Version (KJV)
- For the indignation of the LORD [is] upon all nations, and [his] fury upon all their armies: he hath utterly destroyed them, he hath delivered them to the slaughter.
- World English Bible (WEB)
- For the LORD is enraged against all the nations, and angry with all their armies. He has utterly destroyed them. He has given them over for slaughter.
- American Standard Version (ASV)
- For Jehovah hath indignation against all the nations, and wrath against all their host: he hath utterly destroyed them, he hath delivered them to the slaughter.
- Bible in Basic English (BBE)
- For the Lord is angry with all the nations, and his wrath is burning against all their armies: he has put them to the curse, he has given them to destruction.
- Darby Translation (DBY)
- For the wrath of Jehovah is against all the nations, and [his] fury against all their armies: he hath devoted them to destruction, he hath delivered them to the slaughter.
- Webster's Bible (WBS)
- For the indignation of the LORD [is] upon all nations, and [his] fury upon all their armies: he hath utterly destroyed them, he hath delivered them to the slaughter.
- Young's Literal Translation (YLT)
- For wrath [is] to Jehovah against all the nations, And fury against all their host, He hath devoted them to destruction, He hath given them to slaughter.
Read in context
- 1ಜನಾಂಗಗಳೇ, ಕೇಳುವದಕ್ಕೆ ಹತ್ತಿರ ಬನ್ನಿರಿ; ಜನಗಳೇ ಕಿವಿಗೊಡಿರಿ, ಭೂಮಿ ಯೂ ಅದರಲ್ಲಿನ ಸಮಸ್ತವೂ ಲೋಕವೂ ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ.
- 2ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ.
- 3ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು.
- 4ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.
Cross references
- Zephaniah 3:8 ಚೆಫನ್ಯ 3:8ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು.
- Jeremiah 25:15–29 ಯೆರೆಮೀಯ 25:15–29ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ. ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು. ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು. ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ. ಅವರು ಪಾತ್ರೆಯನ್ನು ನಿನ್ನ ಕೈಯಿಂದ ತಕ್ಕೊಂಡು ಕುಡಿಯಲು ತಿರಸ್ಕರಿಸಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ಕುಡಿಯಬೇಕು. ಇಗೋ, ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವದಕ್ಕೆ ಆರಂಭಮಾಡುತ್ತೇನೆ; ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿ ಕೊಳ್ಳುವದಿಲ್ಲ: ನಾನು ಭೂನಿವಾಸಿಗಳೆಲ್ಲರ ಮೇಲೆ ಕತ್ತಿಯನ್ನು ಕರೆಯುತ್ತೇನೆಂದು ಸೈನ್ಯಗಳ ಕರ್ತನು ಅನ್ನು ತ್ತಾನೆ.
- Zechariah 14:12–16 ಜೆಕರ್ಯ 14:12–16ಯೆರೂಸಲೇಮಿಗೆ ವಿರೋಧವಾಗಿ ದಂಡುಕಟ್ಟಿ ಕೊಂಡಿರುವ ಎಲ್ಲಾ ಜನಗಳನ್ನು ಕರ್ತನು ವ್ಯಾಧಿ ಯಿಂದ ಬಾಧಿಸುವನು; ಹೀಗೆಯೇ ಅವರು ಕಾಲಿನ ಮೇಲೆ ನಿಲ್ಲುವಾಗ ಅವರ ಶರೀರವು ಕ್ಷಯಿಸಿಹೋಗು ವದು; ಅವರ ಕಣ್ಣುಗಳು ಗುಣಿಗಳಲ್ಲಿ ಇಂಗಿಹೋಗು ವವು; ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವದು. ಆ ದಿನದಲ್ಲಿ ಆಗುವದೇನಂದರೆ --ಕರ್ತನಿಂದಾದ ದೊಡ್ಡ ಕೋಲಾಹಲ ಅವರಲ್ಲಿ ಇರುವದು; ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಅವನ ಕೈ ತನ್ನ ನೆರೆಯವನ ಮೇಲೆ ಎತ್ತಲ್ಪಡುವದು. ಯೆಹೂದವು ಸಹ ಯೆರೂಸಲೇಮಿನಲ್ಲಿ ಯುದ್ಧ ಮಾಡುವದು; ಸುತ್ತಲಿರುವ ಎಲ್ಲಾ ಅನ್ಯ ಜನಾಂಗಗಳ ಸಂಪತ್ತಾಗಿ ರುವ, ಚಿನ್ನ, ಬೆಳ್ಳಿ, ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲ್ಪಡುವವು. ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು. ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.
- Isaiah 30:27–30 ಯೆಶಾಯ 30:27–30ಇಗೋ, ಕರ್ತನ ನಾಮವು ದೂರದಿಂದ ಬರು ತ್ತದೆ. ಆತನ ಕೋಪವು ಉರಿಯುತ್ತದೆ. ಅದರಿಂದೇ ಳುವ ಉರಿಯು ದಟ್ಟವಾಗಿದೆ. ಆತನ ತುಟಿಗಳು ರೋಷದಿಂದ ತುಂಬಿವೆ. ನಾಲಿಗೆಯು ದಹಿಸುವ ಅಗ್ನಿ ಯಂತಿದೆ. ಆತನ ಶ್ವಾಸವು ತುಂಬಿ ತುಳುಕಿ ಕಂಠದ ವರೆಗೂ ಏರುವ ತೊರೆಯಂತಿದೆ; ಜನಾಂಗಗಳನ್ನು ಏನೂ ಉಳಿಸದ ಜಲ್ಲಡಿಯಿಂದ ಜಾಲಿಸುವದಕ್ಕೆ ಬರು ತ್ತಾನೆ; ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆ ಗಳಲ್ಲಿರುವದು. ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಹೇಗೋ ಹಾಗೆ ನಿಮಗೆ ಹಾಡುವಿರಿ; ಕರ್ತನ ಪರ್ವತಕ್ಕೆ ಇಸ್ರಾಯೇಲಿನ ಬಂಡೆಯ ಬಳಿಗೆ ಬರುವದಕ್ಕೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವದು. ಆಗ ಕರ್ತನು ತನ್ನ ಗಂಭೀರವಾದ ಸ್ವರವನ್ನು ಕೇಳಮಾಡಿ ತೀವ್ರ ಕೋಪ, ಕಬಳಿಸುವ ಅಗ್ನಿಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿ ಸುವನು.
- Joel 3:9–14 ಯೋವೇಲ 3:9–14ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; ಯುದ್ಧವನ್ನು ಸಿದ್ಧಮಾಡಿರಿ, ಶೂರರನ್ನು ಎಬ್ಬಿಸಿರಿ; ಯುದ್ಧಸ್ಥರೆಲ್ಲರು ಸವಿಾಪಕ್ಕೆ ಬರಲಿ. ನಿಮ್ಮ ನೇಗಿಲುಗಳ ಗುಳಗಳನ್ನು ಕತ್ತಿಗಳಾಗಿಯೂ ನಿಮ್ಮ ಕುಡುಗೋಲುಗಳನ್ನು ಈಟಿಗಳಾ ಗಿಯೂ ಬಡಿಯಿರಿ; ಬಲಹೀನನು--ನಾನು ಶೂರ ನೆಂದು ಹೇಳಲಿ. ಸುತ್ತಲಿನ ಎಲ್ಲಾ ಅನ್ಯಜನಾಂಗ ಗಳೇ, ಕೂಡಿಕೊಳ್ಳಿರಿ; ಓ ಕರ್ತನೇ, ನಿನ್ನ ಶೂರರನ್ನು ಅಲ್ಲಿ ಇಳಿಯ ಮಾಡು. ಜನಾಂಗಗಳು ಎಬ್ಬಿಸಲ್ಪಟ್ಟು ಯೆಹೋಷಾಫಾಟನ ತಗ್ಗಿಗೆ ಬರಲಿ; ಸುತ್ತಲಿನ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವದಕ್ಕೆ ನಾನು ಅಲ್ಲಿ ಕೂತುಕೊಳ್ಳುವೆನು. ಕುಡುಗೋಲನ್ನು ಹಾಕಿರಿ, ಬೆಳೆ ಪಕ್ವವಾಯಿತು; ಬಂದು ಇಳಿಯಿರಿ; ದ್ರಾಕ್ಷೆಯ ಅಲೆ ತುಂಬಿ ಅದೆ; ತೊಟ್ಟಿಗಳು ತುಳುಕುತ್ತವೆ; ಅವರ ಕೆಟ್ಟತನವು ಬಹಳವಾಗಿದೆ. ನಿರ್ಣಯದ ತಗ್ಗಿನಲ್ಲಿ ಗುಂಪುಗಳು, ಗುಂಪುಗಳು; ಕರ್ತನ ದಿನವು ನಿರ್ಣ ಯದ ತಗ್ಗಿನಲ್ಲಿ ಸವಿಾಪವಾಗಿದೆ.
- Amos 1:1–2 ಆಮೋಸ 1:1–2ತೆಕೋವದ ಕುರುಬರಲಿದ್ದ ಆಮೋಸನು ಯೆಹೂದದ ಅರಸನಾದ ಉಜ್ಜೀಯನ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನ ದಿನಗಳ ಲ್ಲಿಯೂ ಭೂಕಂಪಕ್ಕೆ ಎರಡು ವರುಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ನೋಡಿದ ವಾಕ್ಯಗಳು. ಅವನು ಹೇಳಿದ್ದೇನಂದರೆ--ಕರ್ತನು ಚೀಯೋನಿ ನಿಂದ ಘರ್ಜಿಸಿ ಯೆರೂಸಲೇಮಿನಿಂದ ತನ್ನ ಧ್ವನಿಗೈಯು ವನು; ಕುರುಬರ ವಾಸದ ಸ್ಥಳಗಳು ಗೋಳಾಡುತ್ತವೆ ಮತ್ತು ಕರ್ಮೆಲಿನ ತುದಿಯು ಒಣಗಿ ಹೋಗುತ್ತದೆ ಎಂದು ಹೇಳುತ್ತಾನೆ.
- Isaiah 13:5 ಯೆಶಾಯ 13:5ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
- Zechariah 14:3 ಜೆಕರ್ಯ 14:3ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು.
- Isaiah 30:25 ಯೆಶಾಯ 30:25ಮಹಾಸಂಹಾರದ ದಿವಸ ದಲ್ಲಿ ಗೋಪುರಗಳು ಬೀಳುವಾಗ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ ಪ್ರತಿಯೊಂದು ಎತ್ತರವಾದ ಗುಡ್ಡದಲ್ಲಿಯೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುತ್ತಿರುವವು.
- Revelation 20:15 ಪ್ರಕಟನೆ 20:15ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
- Revelation 20:9 ಪ್ರಕಟನೆ 20:9ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ದೇವರ ಬಳಿಯಿಂದ ಬೆಂಕಿಯು ಪರಲೋಕ ದೊಳಗಿಂದ ಇಳಿದು ಬಂದು ಅವರನ್ನು ನುಂಗಿಬಿಟ್ಟಿತು.
- Isaiah 24:1–23 ಯೆಶಾಯ 24:1–23ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ. ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು. ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ. ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವದು. ಲೋಕವು ಸೊರಗಿ ಬಾಡಿಹೋಗುವದು ಭೂಮಿಯ ಗರ್ವಿಷ್ಠರು ಕುಗ್ಗಿಹೋಗುವರು. ಭೂನಿವಾಸಿಗಳು ನ್ಯಾಯಪ್ರಮಾಣಗಳನ್ನು ವಿಾರಿ ನಿಯಮಗಳನ್ನು ಬದ ಲಾಯಿಸಿ ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿ ದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆ ಯಿಂದ ಅಪವಿತ್ರವಾಗುವದು. ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ. ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ. ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು. ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು. ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ. ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ. ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ. ಎಣ್ಣೇ ಮರವನ್ನು ಬಡಿದ ಮೇಲೆಯೂ ದ್ರಾಕ್ಷೇ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವದು. ಅವರು ತಮ್ಮ ಸ್ವರವನ್ನೆತ್ತಿ ಕರ್ತನ ಮಹತ್ತಿನ ನಿಮಿತ್ತ ಹಾಡು ವರು, ಸಮುದ್ರದ ಕಡೆಯಿಂದ ಆರ್ಭಟಿಸುವರು. ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ. ಭೂಮಂಡಲದ ಕಟ್ಟಕಡೆಯಿಂದ ನೀತಿವಂತರ ಘನತೆಗೆ ಬರುವಂತಹ ಗೀತೆಗಳು ನಮಗೆ ಕೇಳಿ ಬರು ತ್ತಿವೆ. ನಾನಾದರೋ--ಕ್ಷಮಿಸೇ ಕ್ಷಮಿಸುತ್ತೇನೆ. ನನಗೆ ಅಯ್ಯೋ! ಬಾಧಕರು ಬಾಧಿಸುವದರಲ್ಲಿಯೇ ನಿರತ ರಾಗಿದ್ದಾರೆ; ಹೌದು, ಬಾಧಕರು, ಬಹಳವಾಗಿ ಬಾಧಿ ಸುವದರಲ್ಲಿ ನಿರತರಾಗಿದ್ದಾರೆ. ಓ, ಭೂಮಿಯ ನಿವಾಸಿಗಳೇ, ಭಯವೂ ಗುಂಡಿಯೂ ಬಲೆಯೂ ನಿಮಗೆ ಕಾದಿವೆ. ಆಗ ಭಯದ ಶಬ್ದಕ್ಕೆ ಓಡಿ ಹೋಗುವವನು, ಕುಣಿಯೊಳಗೆ ಬೀಳುವನು; ಆ ಕುಣಿಯೊಳಗಿಂದ ಏರಿ ಬರುವವನು ಬಲೆಗೆ ಬೀಳು ವನು; ಮೇಲಿನ ಕಿಟಕಿಗಳು (ಆಕಾಶದ ದ್ವಾರಗಳು) ತೆರೆಯಲ್ಪಟ್ಟಿವೆ. ಭೂಮಿಯ ಅಸ್ತಿವಾರಗಳು ನಡುಗು ತ್ತವೆ. (ಕಂಪಿಸುತ್ತವೆ). ಭೂಮಿಯು ಸಂಪೂರ್ಣ ವಾಗಿ ಮುರಿಯಲ್ಪಟ್ಟಿದೆ. ಪೂರ್ತಿಯಾಗಿ ತುಂಡು ತುಂಡಾಗಿ ಹೋಗಿದೆ. ಭೂಮಿಯು ಮಿತಿವಿಾರಿ ಚಲಿಸ ಲ್ಪಟ್ಟಿದೆ. ಭೂಮಿಯು ಕುಡುಕನ ಹಾಗೆ ಓಲಾಡು ತ್ತದೆ ಮತ್ತು ಗುಡಿಸಲಿನ ಹಾಗೆ ತೆಗೆಯಲ್ಪಡುತ್ತದೆ ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ; ಅದು ಬಿದ್ದುಹೋಗುತ್ತದೆ ತಿರಿಗಿ ಏಳುವದೇ ಇಲ್ಲ. ಆ ದಿವಸದಲ್ಲಿ ಆಗುವದೇನಂದರೆ--ಕರ್ತನು ಉನ್ನತದಲ್ಲಿರುವ ಉನ್ನತವಾದವರ ಸೈನ್ಯವನ್ನೂ ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸು ವನು. ಕುಣಿಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಮುಚ್ಚ ಲ್ಪಟ್ಟು ಬಹಳ ದಿವಸಗಳಾದ ಮೇಲೆ ದಂಡನೆಗೆ ಗುರಿ ಯಾಗುವರು.ಆಮೇಲೆ ಚೀಯೋನ್ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು. ಆಮೇಲೆ ಚೀಯೋನ್ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು.