Isaiah · chapter 36 · verse 2
Isaiah 36:2 in Kannada
ಆಗ ಅಶ್ಶೂರದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದ ಸಂಗಡ ರಬ್ಷಾಕನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಮೇಲಿನ ಕೆರೆಯ ಕಾಲುವೆಯ ಸವಿಾಪದಲ್ಲಿ ಅಗಸರ ಹೊಲದ ರಾಜಮಾರ್ಗದಲ್ಲಿ ನಿಂತುಕೊಂಡನು.
Aaga ashshoorada arasanu laakeeshininda dodda sainyada sangada rabshaakanannu yeroosaleminallidda hijkeeyana balige kaluhisidanu. Avanu melina kereya kaaluveya saviాpadalli agasara holada raajamaargadalli nintukondanu.
Isaiah 36:2 in English
- King James Version (KJV)
- And the king of Assyria sent Rabshakeh from Lachish to Jerusalem unto king Hezekiah with a great army. And he stood by the conduit of the upper pool in the highway of the fuller’s field.
- World English Bible (WEB)
- The king of Assyria sent Rabshakeh from Lachish to Jerusalem to King Hezekiah with a large army. He stood by the aqueduct from the upper pool in the fuller’s field highway.
- American Standard Version (ASV)
- And the king of Assyria sent Rabshakeh from Lachish to Jerusalem unto king Hezekiah with a great army. And he stood by the conduit of the upper pool in the highway of the fuller’s field.
- Bible in Basic English (BBE)
- And the king of Assyria sent the Rab-shakeh from Lachish to Jerusalem to King Hezekiah with a strong force, and he took up his position by the stream of the higher pool, by the highway of the washerman's
- Darby Translation (DBY)
- And the king of Assyria sent Rab-shakeh from Lachish to Jerusalem, to king Hezekiah, with a strong force. And he stood by the aqueduct of the upper pool, on the highway of the fuller's field.
- Webster's Bible (WBS)
- And the king of Assyria sent Rabshakeh from Lachish to Jerusalem against king Hezekiah with a great army. And he stood by the conduit of the upper pool in the highway of the fuller's field.
- Young's Literal Translation (YLT)
- And the king of Asshur sendeth Rabshakeh from Lachish to Jerusalem, unto the king Hezekiah, with a heavy force, and he standeth by the conduit of the upper pool, in the highway of the fuller's field,
Read in context
- 1ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರದ ಅರಸ ನಾದ ಸನ್ಹೇರೀಬನು ಬಂದು ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
- 2ಆಗ ಅಶ್ಶೂರದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದ ಸಂಗಡ ರಬ್ಷಾಕನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಮೇಲಿನ ಕೆರೆಯ ಕಾಲುವೆಯ ಸವಿಾಪದಲ್ಲಿ ಅಗಸರ ಹೊಲದ ರಾಜಮಾರ್ಗದಲ್ಲಿ ನಿಂತುಕೊಂಡನು.
- 3ಆಗ ಮನೆಯ ವಿಚಾರಕನಾದ ಹಿಲ್ಕೀಯನ ಮಗನಾದ ಎಲ್ಯಾಕೀ ಮನು, ಲೇಖಕನಾದ ಶೆಬ್ನ, ದಾಖಲೆಗಾರನಾದ ಆಸಾ ಫನ ಮಗನಾಗಿದ್ದ ಯೋವ ಎಂಬವರು ಬಂದರು.
- 4ರಬ್ಷಾಕನು ಅವರಿಗೆ--ನೀವು ಅಶ್ಶೂರಿನ ಅರಸನಾದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿ ಸಿರಿ--ಈ ನಿನ್ನ ಭರವಸಕ್ಕೆ ಯಾವ ಆಧಾರವುಂಟು?
Cross references
- Isaiah 7:3 ಯೆಶಾಯ 7:3ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು--
- 2 Chronicles 32:9–23 2 ಪೂರ್ವಕಾಲವೃತ್ತಾಂತ 32:9–23ಇದರ ತರುವಾಯ ಅಶ್ಶೂರಿನ ಅರಸನಾದ ಸನ್ಹೇ ರೀಬನೂ ಅವನ ಸಂಗಡ ಕೂಡಿರುವ ಅವನ ಸಮಸ್ತ ಬಲವೂ ಲಾಕೀಷನ್ನು ಮುತ್ತಿಗೆ ಹಾಕಿದಾಗ ಅವನು ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಹಿಜ್ಕೀ ಯನ ಬಳಿಗೂ ಯೆರೂಸಲೇಮಿನಲ್ಲಿರುವ ಸಮಸ್ತ ಯೆಹೂದದವರ ಬಳಿಗೂ ತನ್ನ ಸೇವಕರನ್ನು ಕಳು ಹಿಸಿ--ಅಶ್ಶೂರಿನ ಅರಸನಾದ ಸನ್ಹೇರೀಬನು ಹೀಗೆ ಹೇಳುತ್ತಾನೆ-- ನೀವು ಯೆರೂಸಲೇಮಿನ ಮುತ್ತಿಗೆ ಯಲ್ಲಿ ವಾಸವಾಗಿರುವ ಹಾಗೆ ಯಾವದರ ಮೇಲೆ ಭರವಸವುಳ್ಳವರಾಗಿದ್ದೀರಿ? ನಮ್ಮ ದೇವರಾದ ಕರ್ತನು ಅಶ್ಶೂರಿನ ಅರಸನ ಕೈಯಿಂದ ನಮ್ಮನ್ನು ಬಿಡಿಸುವನೆಂದು ಹಿಜ್ಕೀಯನು ಹೇಳಿ ಹಸಿವೆ ಯಿಂದಲೂ ದಾಹದಿಂದಲೂ ಸಾಯುವದಕ್ಕೆ ನಿಮ್ಮನ್ನು ಒಪ್ಪಿಸಿಕೊಡಲು ಪ್ರೇರೇಪಿಸುತ್ತಾನಲ್ಲವೇ? ಈ ಹಿಜ್ಕೀಯನು ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದದವರಿಗೂ ಯೆರೂಸಲೇಮಿ ನವರಿಗೂ--ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು ಅದರ ಮೇಲೆ ಧೂಪವನ್ನರ್ಪಿಸಬೇಕೆಂದು ಹೇಳಿದ್ದಾನಲ್ಲವೇ? ನಾನೂ ನನ್ನ ಪಿತೃಗಳೂ ದೇಶ ಗಳ ಜನರಿಗೆ ಮಾಡಿದ್ದನ್ನು ನೀವು ತಿಳಿಯಲಿಲ್ಲವೋ? ಆ ದೇಶಗಳ ಜನಾಂಗಗಳ ದೇವರುಗಳು ಆ ದೇಶ ಗಳನ್ನು ನನ್ನ ಕೈಯೊಳಗಿಂದ ಹೇಗಾದರೂ ಬಿಡಿಸಲು ಸಾಮರ್ಥ್ಯವುಳ್ಳವುಗಳಾಗಿದ್ದವೋ? ನನ್ನ ಪಿತೃಗಳು ನಿರ್ಮೂಲ ಮಾಡಿದ ಆ ಜನಾಂಗಗಳ ಸಮಸ್ತ ದೇವ ರುಗಳಲ್ಲಿ ನನ್ನ ಕೈಯೊಳಗಿಂದ ತನ್ನ ಜನರನ್ನು ಬಿಡಿಸಲು ಸಾಮರ್ಥ್ಯವುಳ್ಳದ್ದು ಯಾವದು? ಹಾಗಾದರೆ ನಿಮ್ಮ ದೇವರು ನನ್ನ ಕೈಯೊಳಗಿಂದ ನಿಮ್ಮನ್ನು ಹೇಗೆ ಬಿಡಿಸ ಬಹುದು? ಆದದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ಈ ಪ್ರಕಾರ ನಿಮ್ಮನ್ನು ಪ್ರೇರೇಪಿಸದಿರಲಿ; ಅವನ ಮಾತು ನಂಬಬೇಡಿರಿ. ಯಾಕಂದರೆ ನನ್ನ ಕೈಯೊಳಗಿಂದಲೂ ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯೊಳಗಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು ಅನ್ನುತ್ತಾನೆ. ಹೀಗೆ ಅವನ ಸೇವಕರು ಇನ್ನೂ ಕರ್ತನಾದ ದೇವರಿಗೆ ವಿರೋಧ ವಾಗಿಯೂ ಆತನ ಸೇವಕನಾದ ಹೀಜ್ಕೀಯನಿಗೆ ವಿರೋ ಧವಾಗಿಯೂ ಮಾತನಾಡಿದರು. ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಕರ್ತನನ್ನು ನಿಂದಿಸುವ ದಕ್ಕೂ ಆತನಿಗೆ ವಿರೋಧವಾಗಿ ಮಾತನಾಡುವದಕ್ಕೂ ಪತ್ರಗಳನ್ನು ಬರೆದನು. ಏನಂದರೆ--ಇತರ ದೇಶಗಳ ಜನಾಂಗಗಳ ದೇವರುಗಳು ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸಲಾರನು. ಇದಲ್ಲದೆ ಅವರು ಪಟ್ಟಣ ವನ್ನು ಹಿಡಿಯುವ ಹಾಗೆ ಗೋಡೆಯ ಮೇಲೆ ಇರುವ ಯೆರೂಸಲೇಮಿನಲ್ಲಿರುವ ಜನರನ್ನು ಭಯಪಡಿಸುವ ದಕ್ಕೂ ಅವರನ್ನು ಕಳವಳಪಡಿಸುವದಕ್ಕೂ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿ ದರು. ಮನುಷ್ಯರ ಕೈ ಕೆಲಸವಾದ ಭೂಮಿಯ ಜನಗಳ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು. ಇದರ ನಿಮಿತ್ತ ಅರಸನಾದ ಹಿಜ್ಕೀಯನೂ ಆಮೋ ಚನ ಮಗನಾಗಿರುವ ಪ್ರವಾದಿಯಾದ ಯೆಶಾಯನೂ ಪ್ರಾರ್ಥನೆಮಾಡಿ ಪರಲೋಕಕ್ಕೆ ಕೂಗಿದರು. ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು. ಹೀಗೆಯೇ ಕರ್ತನು ಹಿಜ್ಕೀಯ ನನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ಅಶ್ಶೂರಿನ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ ಸಮಸ್ತ ಕಡೆಯಿಂದ ಅವ ರನ್ನು ನಡಿಸಿದನು. ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು.
- 2 Kings 18:17–37 2 ಅರಸುಗಳು 18:17–37ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು. ಆದರೆ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾ ಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ಅವರ ಬಳಿಗೆ ಬಂದರು. ಆಗ ರಬ್ಷಾಕೆಯು ಅವರಿಗೆ--ನೀವು ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ, ಮಹಾ ಅರಸನಾದ ಅಶ್ಶೂರಿನ ಅರಸನು ಹೇಳುವದೇನಂದರೆ, ಭರವಸವಾಗಿರುವ ಈ ನಂಬಿಕೆಯೇನು? ಯುದ್ಧ ಕ್ಕಾಗಿ ಯೋಚನೆಯೂ ಪರಾಕ್ರಮವೂ ಉಂಟೆಂದು ನೀನು ಹೇಳುತ್ತೀ. ಆದರೆ ಅವು ವ್ಯರ್ಥವಾದ ಮಾತು ಗಳು. ನೀನು ನನಗೆ ವಿರೋಧವಾಗಿ ತಿರುಗಿ ಬೀಳು ವದಕ್ಕೆ ಯಾರಲ್ಲಿ ಭರವಸ ಇಟ್ಟಿದ್ದೀ? ಇಗೋ, ನೀನು ಮುರಿದ ಬೆತ್ತದ ಕೋಲಾದ ಐಗುಪ್ತದ ಮೇಲೆ ಭರ ವಸವಾಗಿದ್ದೀ. ಅದರ ಮೇಲೆ ಮನುಷ್ಯನು ಊರಿ ಕೊಂಡರೆ ಅದು ಅವನ ಕೈಯಲ್ಲಿ ಹೊಕ್ಕು ಚುಚ್ಚುವದು. ಐಗುಪ್ತದ ಅರಸನಾದ ಫರೋಹನು ತನ್ನಲ್ಲಿ ಭರವಸ ವಾಗಿರುವ ಎಲ್ಲರಿಗೂ ಹೀಗೆಯೇ ಇದ್ದಾನೆ. ಆದರೆ ನೀವು ನನಗೆ--ನಮ್ಮ ದೇವರಾದ ಕರ್ತನಲ್ಲಿ ಭರವಸ ವುಳ್ಳವರಾಗಿದ್ದೇವೆಂದು ಹೇಳಿದರೆ ಹಿಜ್ಕೀಯನು ಯಾವನ ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ--ಯೆಹೂದದವರಿಗೂ ಯೆರೂಸಲೇಮಿ ನವರಿಗೂ ನೀವು ಯೆರೂಸಲೇಮಿನಲ್ಲಿ ಈ ಬಲಿಪೀಠದ ಮುಂದೆ ಅಡ್ಡಬೀಳಬೇಕೆಂದು ಹೇಳಿದವನು ಅವನೇ ಅಲ್ಲವೋ? ಹಾಗಾದರೆ ಈಗ ನೀನು ದಯಮಾಡಿ ಅಶ್ಶೂರಿನ ಅರಸನಾದ ನನ್ನ ಯಜಮಾನನಿಗೆ ಹೊಣೆ ಗಾರರನ್ನು ಕೊಡು; ಈಗ ನೀನು ಅವುಗಳ ಮೇಲೆ ಏರುವವರನ್ನು ಇಡಲು ನಿನಗೆ ಸಾಮರ್ಥ್ಯವಿದ್ದರೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ. ಹಾಗೆ ಇಲ್ಲದಿದ್ದರೆ ನನ್ನ ಯಜಮಾನನ ಚಿಕ್ಕ ಸೇವಕರಲ್ಲಿ ಒಬ್ಬ ಅಧಿಪತಿಯ ಮುಖವನ್ನು ಹೇಗೆ ತಿರುಗಿಸುವಿ? ಆದರೆ ನೀನು ರಥಗಳಿಗೋಸ್ಕರವೂ ರಾಹುತರಿಗೋ ಸ್ಕರವೂ ಐಗುಪ್ತದ ಮೇಲೆ ಭರವಸ ಇಟ್ಟಿದ್ದೀಯೋ? ಈ ಸ್ಥಳವನ್ನು ನಾಶಮಾಡುವದಕ್ಕೆ ಕರ್ತನ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಕರ್ತನು ನನಗೆ ಹೇಳಿದನು ಅಂದನು. ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಶೆಬ್ನನೂ ಯೋವನೂ ರಬ್ಷಾಕೆಗೆ--ನೀನು ದಯಮಾಡಿ ಅರಾಮ್ಯ ಭಾಷೆಯಲ್ಲಿ ನಿನ್ನ ಸೇವಕರ ಸಂಗಡ ಮಾತ ನಾಡು. ಅದು ನಮಗೆ ತಿಳಿಯುತ್ತದೆ; ಗೋಡೆಯ ಮೇಲಿರುವ ಜನರು ಕೇಳುವ ಹಾಗೆ ಯೆಹೂದ್ಯರ ಭಾಷೆಯಲ್ಲಿ ನಮ್ಮ ಸಂಗಡ ಮಾತನಾಡಬೇಡ ಅಂದರು. ಆದರೆ ರಬ್ಷಾಕೆಯು ಅವರಿಗೆ--ನನ್ನ ಯಜಮಾನನು ನಿನ್ನ ಯಜಮಾನನಿಗೂ ನಿನಗೂ ಈ ಮಾತುಗಳನ್ನು ಹೇಳಲು ನನ್ನನ್ನು ಕಳುಹಿಸಿದನೋ? ಗೋಡೆಯ ಮೇಲೆ ಕುಳಿತ ಜನರು ತಮ್ಮ ಮಲವನ್ನು ತಿಂದು ತಮ್ಮ ಮೂತ್ರವನ್ನು ನಿಮ್ಮ ಸಂಗಡ ಕುಡಿಯುವ ಹಾಗೆ ಅವರ ಬಳಿಗೆ ನನ್ನನ್ನು ಕಳುಹಿಸಲಿಲ್ಲವೋ ಎಂದು ಹೇಳಿದನು. ಆಗ ರಬ್ಷಾಕೆಯು ನಿಂತು ಕೊಂಡು ಯೆಹೂದ್ಯರ ಭಾಷೆಯಲ್ಲಿ ಮಹಾ ಶಬ್ದವಾಗಿ ಕೂಗಿ ಹೇಳಿದ್ದೇನಂದರೆ -- ಮಹಾ ಅರಸನಾದ ಅಶ್ಶೂರಿನ ಅರಸನ ಮಾತನ್ನು ಕೇಳಿರಿ. ಅರಸನು ಹೇಳುವದೇನಂದರೆ--ಹಿಜ್ಕೀಯನು ನಿಮ್ಮನ್ನು ಮೋಸ ಗೊಳಿಸದೆ ಇರಲಿ; ಅವನು ನಿಮ್ಮನ್ನು ಅವನ ಕೈಯೊಳ ಗಿಂದ ತಪ್ಪಿಸಲಾರನು. ಇದಲ್ಲದೆ ಕರ್ತನು ನಮ್ಮನ್ನು ತಪ್ಪಿಸೇ ತಪ್ಪಿಸುವನೆಂದೂ ಈ ಪಟ್ಟಣವು ಅಶ್ಶೂರಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲವೆಂದೂ ಹಿಜ್ಕೀ ಯನು ನಿಮಗೆ ಕರ್ತನಲ್ಲಿ ಭರವಸೆ ಹುಟ್ಟಿಸದೆ ಇರಲಿ. ಹಿಜ್ಕೀಯನ ಮಾತು ಕೇಳಬೇಡಿರಿ. ಅಶ್ಶೂರಿನ ಅರ ಸನು ಹೇಳುವದೇನಂದರೆ--ನೀವು ಸಾಯದೆ ಬದು ಕುವ ಹಾಗೆ ಕಾಣಿಕೆಯಿಂದ ನನ್ನ ಸಂಗಡ ಒಡಂಬಡಿಕೆ ಮಾಡಿ ನನ್ನ ಬಳಿಗೆ ಹೊರಟು ಬನ್ನಿರಿ. ನಾನು ಬಂದು ನಿಮ್ಮ ದೇಶದ ಹಾಗೆ ಧಾನ್ಯವೂ ದ್ರಾಕ್ಷಾರಸವೂ ಇರುವ ದೇಶಕ್ಕೆ, ರೊಟ್ಟಿಯೂ ದ್ರಾಕ್ಷೇ ತೋಟಗಳೂ ಇರುವ ದೇಶಕ್ಕೆ, ಎಣ್ಣೆಯನ್ನು ಕೊಡುವ ಇಪ್ಪೇ ಮರ ಗಳೂ ಜೇನೂ ಇರುವ ದೇಶಕ್ಕೆ, ನಿಮ್ಮನ್ನು ಕರಕೊಂಡು ಹೋಗುವ ವರೆಗೂ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷೇ ಫಲವನ್ನೂ ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯಲಿ. ಆದರೆ--ಕರ್ತನು ನಮ್ಮನ್ನು ತಪ್ಪಿಸುವನೆಂದು ಹಿಜ್ಕೀ ಯನು ನಿಮ್ಮನ್ನು ಪ್ರೇರೇಪಿಸುವಾಗ ಅವನ ಮಾತು ಕೇಳಬೇಡಿರಿ. ಜನಾಂಗಗಳ ದೇವರುಗಳಲ್ಲಿ ಯಾವ ನಾದರೂ ತನ್ನ ದೇಶವನ್ನು ಅಶ್ಶೂರಿನ ಅರಸನ ಕೈಗೆ ತಪ್ಪಿಸಿಬಿಟ್ಟದ್ದು ಉಂಟೋ? ಹಮಾತ್ ಅರ್ಫಾದು ಗಳ ದೇವರುಗಳು ಎಲ್ಲಿ? ಸೆಫರ್ವಯಿಮ್, ಹೇನ. ಇವ್ವಾಗಳ ದೇವರುಗಳು ಎಲ್ಲಿ? ಅವರು ನನ್ನ ಕೈಗೆ ಸಮಾರ್ಯವನ್ನು ತಪ್ಪಿಸಿಬಿಟ್ಟದ್ದು ಉಂಟೋ? ಈ ದೇಶಗಳ ದೇವರುಗಳಲ್ಲಿ ತಮ್ಮ ದೇಶವನ್ನು ನನ್ನ ಕೈಗೆ ತಪ್ಪಿಸಿ ಬಿಟ್ಟ ದೇವರುಗಳು ಯಾರು ಹಾಗಾದರೆ ಕರ್ತನು ಯೆರೂಸಲೇಮನ್ನು ನನ್ನ ಕೈಗೆ ತಪ್ಪಿಸಿ ಬಿಟ್ಟಾನೋ ಅಂದನು. ಆದರೆ ಜನರು ಅವನಿಗೆ ಪ್ರತ್ಯುತ್ತರವನ್ನು ಹೇಳದೆ ಸುಮ್ಮನಿದ್ದರು. ಯಾಕಂದರೆ ಅವನಿಗೆ ಪ್ರತ್ಯುತ್ತರ ಹೇಳಬೇಡಿ ಎಂದು ಅವರಿಗೆ ಅರಸನ ಆಜ್ಞೆ ಇತ್ತು.ಆಗ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ರಬ್ಷಾಕೆಯು ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು. ಆಗ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ರಬ್ಷಾಕೆಯು ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
- Isaiah 22:9–11 ಯೆಶಾಯ 22:9–11ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ; ಕೆಳಗಿನ ಕೊಳಕ್ಕೆ ನೀರನ್ನು ಕೂಡಿಸುತ್ತೀರಿ. ಯೆರೂಸಲೇಮಿನ ಮನೆಗ ಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿ ಸುವದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ. ಎರಡು ಗೋಡೆಗಳ ನಡುವೆ ಹಳೇ ಕೆರೆಯ ನೀರಿ ಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸಲಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಲ್ಲ.
Original words (Hebrew)
- king · H4428מֶלֶךְ melek
- Assyria · H804אַשּׁוּר ʼAshshûwr
- sent · H7971שָׁלַח shâlach
- Rabshakeh · H7262רַבְשָׁקֵה Rabshâqêh
- Lachish · H3923לָכִישׁ Lâkîysh
- Jerusalem · H3389יְרוּשָׁלַ͏ִם Yᵉrûwshâlaim
- king · H4428מֶלֶךְ melek
- Hezekiah · H2396חִזְקִיָּה Chizqîyâh
- great · H3515כָּבֵד kâbêd
- army · H2426חֵיל chêyl
- stood · H5975עָמַד ʻâmad
- conduit · H8585תְּעָלָה tᵉʻâlâh
- upper · H5945עֶלְיוֹן ʻelyôwn
- pool · H1295בְּרֵכָה bᵉrêkâh
- highway · H4546מְסִלָּה mᵉçillâh
- fuller’s · H3526כָּבַס kâbaç
- field · H7704שָׂדֶה sâdeh